ದಿನದ ಕೆಲವೇ ಗಂಟೆ ಮಾತ್ರ ಕೆಲಸ ಜತೆಗೆ ತುಂಬಾ ರಜೆ ಬೇಕು ಎಂದು ನಿಮಗೆ ಅನಿಸುತ್ತಿದೆಯೇ? ನಿಮ್ಮ ಈ ಬಯಕೆಗೆ ತಕ್ಕಂತಹ ಒಂದು ಹುದ್ದೆ ಇದೆ. ಇದು ಡೀಸೆಂಟ್ ಹುದ್ದೆಯಾಗಿದ್ದು, ಈ ಹುದ್ದೆಗೆ ಹಣದ ಜತೆ ನೀವು ಸಮಾಜದಲ್ಲಿ ಗೌರವ ಕೂಡಾ ಪಡೆದುಕೊಳ್ಳುತ್ತೀರಾ. ಈ ಹುದ್ದೆ ನಿಮ್ಮದಾದಲ್ಲಿ ಆರಾಮದ ಕೆಲಸದ ಜತೆ ಲಾಂಗ್ ವೆಕೇಶನ್ ಕೂಡಾ ನಿಮ್ಮದಾಗುವುದು.
ಹೌದು ಟೀಚಿಂಗ್ ಪ್ರೊಫೆಶನ್ ನಿಮಗೆ ಬೆಸ್ಟ್. ನೀವು ಬಯಸುವ ಈ ಮೇಲಿನ ಬಯಕೆಗೆ ತಕ್ಕನಾದ ಹುದ್ದೆ ಎಂದ್ರೆ ಶಿಕ್ಷಕ ವೃತ್ತಿ. ಒಂದು ಮಗುವಿನ ಜೀವನದಲ್ಲಿ ಹೆತ್ತವರ ನಂತರದ ಪ್ರಮುಖ ಸ್ಥಾನ ಈ ಟೀಚರ್ಸ್ ದು. ಇಂದಿನ ಮಕ್ಕಳನ್ನ ಮುಂದಿನ ಗೌರವಾನ್ವಿತ ಪ್ರಜೆಯನ್ನಾಗಿ ರೂಪಿಸುವ ಹೊಣೆ ಶಿಕ್ಷಕರಲ್ಲಿ ಇರುತ್ತದೆ.
ಬನ್ನಿ ಇದೀಗ ಈ ಹುದ್ದೆ ನಿಮಗೆ ಹೇಗೆ ಸ್ಯೂಟ್ ಆಗಬಲ್ಲದು ಎಂದು ನಾವು ತಿಳಿಸುತ್ತೇವೆ ಮುಂದಕ್ಕೆ ಓದಿ. ಈ ಹುದ್ದೆಗೆ ದಿನದ ಬರೀ 6 ರಿಂದ 7 ಗಂಟೆ ಮಾತ್ರ ಸಾಕು. ಸಾಮಾನ್ಯವಾಗಿ ಟೀಚರ್ ಗಳ ವರ್ಕಿಂಗ್ ಟೈಂ ಮುಂಜಾನೆ 7.30 ಇಲ್ಲ 8 ರಿಂದ ಪ್ರಾರಂಭವಾಗಿ ಮಧ್ಯಾಹ್ಯ 1.30 ಯಿಂದ 2 ಗಂಟೆಯೊಳಗೆ ಮುಗಿದು ಹೋಗುತ್ತದೆ.
ವರ್ಕಿಂಟ್ ಟೈಂ ಕಳೆದ ನಂತರ ಮಧ್ಯಾಹ್ನ 3 ಗಂಟೆಗೆ ಮನೆಗೆ ಹಿಂತಿರುಗ ಬಹುದು. ಮತ್ತೆಯ ಸಮಯವನ್ನ ಫ್ಯಾಮಿಲಿ ಹಾಗೂ ಸ್ನೇಹಿತರ ಜತೆ ಬಿಂದಾಸ್ ಆಗಿ ಕಳೆಯಬಹುದು. ಜತೆಗೆ ವರ್ಷಕ್ಕೆ ಎರಡು ಬಾರಿ ಲಾಂಗ್ ರಜೆ ಕೂಡಾ ಇರುತ್ತದೆ. ಬೇಸಿಗೆಯಲ್ಲಿ ಸುಮಾರು ಒಂದೂವರೆ ತಿಂಗಳು ರಜೆ ಇರುತ್ತದೆ ಹಾಗೂ ಚಳಿಗಾಲದಲ್ಲಿ 2 ವಾರ ರಜೆ ಇರುತ್ತದೆ. ಇನ್ನು ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ದಸರಾ ಹಾಗೂ ದೀಪಾವಳಿಗೆಂದು ಎರಡು ವಾರ ರಜೆ ನೀಡುತ್ತಾರೆ. ಇವಿಷ್ಟೇ ಅಲ್ಲದೇ ಸರ್ಕಾರಿ ರಜೆಗಳ ಜತೆಗೆ ಇನ್ನಿತ್ತರ ಕೆಲವುರಜೆಗಳಿದ್ದು, ಈ ಟೈಂನಲ್ಲಿ ನೀವು ಆರಾಮವಾಗಿ ರಿಲಾಕ್ಸ್ ಮಾಡಬಹುದು.
ಇಷ್ಟು ಓದಿದ ಮೇಲೆ ಟೀಚರ್ ವೃತ್ತಿ ಆಯ್ಕೆ ಮಾಡುವುದು ಬೆಸ್ಟ್ ಎಂದು ಅಂದುಕೊಂಡು ಈಗಲೇ ಸಿದ್ಧತೆ ಮಾಡಿಕೊಂಡ್ರಾ.. ಸ್ವಲ್ಪ ತಡಿರಿ ಇನ್ನೂ ಇದೆ. ಇಷ್ಟೇಲ್ಲಾ ಆಫರ್ ಗಳಿದ್ರೂ ಟೀಚರ್ ವೃತ್ತಿ ಅಷ್ಟೊಂದು ಸುಲಭದಾಯಕವಲ್ಲ. ನೀವು ಯಾವುದರಲ್ಲಿ ನಿಸ್ಸೀಮರು ಎಂದು ತಿಳಿದುಕೊಳ್ಳಬೇಕಿದೆ. ಟೀಚರ್ ಆಗಬೇಕಾದ್ರೆ ಬಿಎಡ್ ಡಿಗ್ರಿ ಜತೆ ಇನ್ನೂ ಕೆಲವೊಂದು ಮೂಲಭೂತ ಅಗತ್ಯಗಳನ್ನ ರೂಪಿಸಿಕೊಳ್ಳಬೇಕಿದೆ. ಟೀಚಿಂಗ್ ಜತೆ ಜತೆ ಮಕ್ಕಳನ್ನ ಪ್ರೀತಿಸುವುದು ಕೂಡಾ ಕಲಿತುಕೊಳ್ಳಬೇಕಿದೆ. ಅಷ್ಟೇ ಅಲ್ಲ ಶಿಸ್ತಿನಿಂದಿದ್ದು, ನಿಮ್ಮೆಲ್ಲಾ ಅಶಿಸ್ತಿನ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ರೆ ಮಾತ್ರ ನೀವು ಯಶಸ್ವೀ ಟೀಚರ್ ಎನಿಸಿಕೊಳ್ಳುವಿರಿ.
ALSO READ: ಎಸ್‍ಎಸ್‍ಸಿ ಕಾಂಸ್ಟೇಬಲ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಯಾವುದು ಬೆಸ್ಟ್ ಬುಕ್ಸ್ ಗೊತ್ತಾ?
ಬರೀ ಹಣ ಬೇಕು ಎಂಬ ಉದ್ದೇಶವಿದ್ದರೆ ಈ ವೃತ್ತಿಗೆ ನೀವು ಕಾಲಿಡಬೇಡಿ ಹಾಗೂ ಭಾರತದ ಎಜ್ಯುಕೇಶನ್ ಸಿಸ್ಟಮ್ಗೆ ಏನಾದ್ರೂ ನಿಮ್ಮಿಂದ ಸಹಾಯ ಮಾಡಬೇಕೆಂಬ ಉದ್ದೇಶವಿದ್ರೆ ಈ ವೃತ್ತಿ ನಿಮ್ಮದಾಗಿಸಿಕೊಳ್ಳಲು ಈಗಲೇ ತಯಾರಿ ಮಾಡಿಕೊಳ್ಳಬಹುದು.