Photography Course Details: ಫೊಟೋಗ್ರಫಿಯಲ್ಲಿ ಆಸಕ್ತಿ ಇದೆಯಾ ಹಾಗಿದ್ರೆ ಈ ಕೋರ್ಸ್ ಗಳ ಬಗ್ಗೆ ತಿಳಿಯಿತಿ

ಫೊಟೋಗ್ರಾಫರ್ ಆಗಬೇಕೆಂಬ ಕನಸಿದ್ರೆ ನೀವು ಈ ಮಾಹಿತಿಯನ್ನು ಓದಲೇಬೇಕು...

ಛಾಯಾಗ್ರಹಣ ಅಂದ್ರೆ ಇವತ್ತಿನ ಪುಟ್ಟ ಮಕ್ಕಳು ಕೂಡ ಕೈಯಲ್ಲಿ ಮೊಬೈಲ್ ಹಿಡಿದು ಕ್ಲಿಕ್ಕಿಸುತ್ತಾರೆ. ಅಂತದ್ರಲ್ಲಿ ಛಾಯಾಗ್ರಹಣ ದಿನದಂದು ವಿದ್ಯಾರ್ಥಿಗಳು ಈ ಛಾಯಾಗ್ರಹಣ ಕೋರ್ಸ್ ಗಳ ಬಗ್ಗೆ ಯಾಕೆ ತಿಳಿದುಕೊಳ್ಳಬಾರದು. ನಿಮಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಿಮ್ಮಲ್ಲಿ ಫೊಟೋಗ್ರಫಿಯ ಬಗ್ಗೆ ಆಸಕ್ತಿ ಇರತ್ತೆ ಆದರೆ ಅದನ್ನು ಕರಿಯರ್ ಆಗಿ ರೂಪಿಸಿಕೊಳ್ಳುವ ಬಗ್ಗೆ ಮಾಹಿತಿ ಇರೋದಿಲ್ಲ. ಹಾಗಾದ್ರೆ ಈ ಫೊಟೋಗ್ರಫಿಯಲ್ಲಿ ಯಾವೆಲ್ಲಾ ಕೋರ್ಸ್ ಗಳಿವೆ ? ಪ್ರವೇಶಾತಿ ಹೇಗಿರುತ್ತದೆ? ಕೋರ್ಸ್ ಗಳ ಶುಲ್ಕವೆಷ್ಟು, ಪಠ್ಯಕ್ರಮ ಹೇಗಿರುತ್ತೆ? ಉದ್ಯೋಗಾವಕಾಶ ಹೇಗಿದೆ ಮತ್ತು ಸಂಬಳ ಎಷ್ಟಿದೆ ಎನ್ನವು ಸಂಪೂರ್ಣ ಮಾಹತಿಯನ್ನು ಕರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ.

ಯಾವೆಲ್ಲಾ ರೀತಿಯ ಫೊಟೋಗ್ರಫಿ ಕೋರ್ಸ್ ಗಳಿವೆ:

ಯಾವೆಲ್ಲಾ ರೀತಿಯ ಫೊಟೋಗ್ರಫಿ ಕೋರ್ಸ್ ಗಳಿವೆ:

ಸರ್ಟಿಫಿಕೇಟ್ ಇನ್ ಕ್ಯಾಮೆರಾ ಮತ್ತು ಫೊಟೋಗ್ರಫಿ - ಸರ್ಟಿಫಿಕೇಟ್ ಕೋರ್ಸ್ - 3 ರಿಂದ 6 ತಿಂಗಳು ಅವಧಿ
ಸರ್ಟಿಫಿಕೇಟ್ ಇನ್ ಫೊಟೋಗ್ರಫಿ - ಸರ್ಟಿಫಿಕೇಟ್ ಕೋರ್ಸ್ - 1 ವರ್ಷ ಅವಧಿ
ಸರ್ಟಿಫಿಕೇಟ್ ಇನ್ ಡಿಜಿಟಲ್ ಫೊಟೋಗ್ರಫಿ - ಸರ್ಟಿಫಿಕೇಟ್ ಕೋರ್ಸ್ - 11 ತಿಂಗಳು ಅವಧಿ
ಸರ್ಟಿಫಿಕೇಟ್ ಇನ್ ಪ್ರೊಫೆಷನಲ್ ಫೊಟೋಗ್ರಫಿ - ಸರ್ಟಿಫಿಕೇಟ್ ಕೋರ್ಸ್ - 11 ತಿಂಗಳು ಅವಧಿ
ಸರ್ಟಿಫಿಕೇಟ್ ಇನ್ ಅಡ್ವಾನ್ಸ್ಡ್ ಫೊಟೋಗ್ರಫಿ ಮತ್ತು ಫೊಟೋ ಜರ್ನಲಿಸಂ - ಸರ್ಟಿಫಿಕೇಟ್ ಕೋರ್ಸ್ - 3 ರಿಂದ 6 ತಿಂಗಳು ಅವಧಿ
ಡಿಪ್ಲೋಮಾ ಇನ್ ಫೊಟೋಗ್ರಫಿ - ಡಿಪ್ಲೋಮಾ ಕೋರ್ಸ್ - 1 ವರ್ಷ ಅವಧಿ
ಡಿಪ್ಲೋಮಾ ಇನ್ ಡಿಜಿಟಲ್ ಫೊಟೋಗ್ರಫಿ - ಡಿಪ್ಲೋಮಾ ಕೋರ್ಸ್ - 1 ವರ್ಷ ಅವಧಿ
ಬಿ.ಎ ಇನ್ ವಿಷುಯಲ್ ಆರ್ಟ್ಸ್ ಮತ್ತು ಫೊಟೋಗ್ರಫಿ - ಪದವಿ ಪೂರ್ವ ಕೋರ್ಸ್ - 3 ವರ್ಷ ಅವಧಿ
ಬಿ.ಎ ಕಮ್ಯುನಿಕೇಷನ್ ಡಿಸೈನ್-ಫೊಟೋಗ್ರಫಿ - ಪದವಿ ಪೂರ್ವ ಕೋರ್ಸ್ - 3 ವರ್ಷ ಅವಧಿ

ಫೊಟೋಗ್ರಫಿ ಕೋರ್ಸ್ ಮಾಡಲು ಯಾವೆಲ್ಲಾ ಅರ್ಹತೆಗಳಿರಬೇಕು ಎಂಬ ಮಾಹಿತಿ ಇಲ್ಲಿದೆ:

ಫೊಟೋಗ್ರಫಿ ಕೋರ್ಸ್ ಮಾಡಲು ಯಾವೆಲ್ಲಾ ಅರ್ಹತೆಗಳಿರಬೇಕು ಎಂಬ ಮಾಹಿತಿ ಇಲ್ಲಿದೆ:

ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಹತೆಗಳು:

10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅಭ್ಯರ್ಥಿಗಳು ಫೊಟೋಗ್ರಫಿಯ ಕೆಲವು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು.
ಕೆಲವು ಸಂಸ್ಥೆಗಳಲ್ಲಿ 10 + 2 ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಅಧ್ಯಯನ ಮಾಡಲು ಅವಕಾಶವಿರುತ್ತದೆ.
ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು 10+2 ವಿದ್ಯಾರ್ಹತೆಯನ್ನು ಹೊಂದಿರಬೇಕಿರುತ್ತದೆ.
ಈ ಎಲ್ಲಾ ವಿಷಯಗಳಿಗೆ ಪ್ರವೇಶಾತಿ ಪಡೆಯಲು ಯಾವುದೇ ಪ್ರವೇಶ ಪರೀಕ್ಷೆಗಳು ಇರುವುದಿಲ್ಲ.

ಪದವಿ ಪೂರ್ವ ಕೋರ್ಸ್ ಗಳಿಗೆ:
ಫೊಟೋಗ್ರಫಿಯಲ್ಲಿ ಕರಿಯರ್ ರೂಪಿಸಿಕೊಳ್ಳಲು 10+2 ವಿದ್ಯಾರ್ಹತರೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ಈ ಕೋರ್ಸ್ ಗಳಿಗೆ ಮೊದಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.

ಕೋರ್ಸ್ ಗಳ ಶುಲ್ಕ:

ಕೋರ್ಸ್ ಗಳ ಶುಲ್ಕ:

ಈ ಕೋರ್ಸ್ ಗಳನ್ನು ಆನ್‌ಲೈನ್ ಮೂಲಕವು ಅಧ್ಯಯನ ಮಾಡಬಹುದು ಮತ್ತು ಆಫ್‌ಲೈನ್ ಮೂಲಕವೂ ಅಧ್ಯಯನ ಮಾಡಬಹುದು. ಹಾಗಾಗಿ ಕೋರ್ಸ್ ಶುಲ್ಕಗಳು ಸಂಸ್ಥೆಯ ಮೇಲೆ ಅವಲಂಭಿತವಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸಂಸ್ಥೆಗಳ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಕೋರ್ಸ್ ಗಳ ಶುಲ್ಕದ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ಫೊಟೋಗ್ರಫಿಯಲ್ಲಿ ಪಠ್ಯಕ್ರಮ ಹೇಗಿರತ್ತೆ:

ಫೊಟೋಗ್ರಫಿಯಲ್ಲಿ ಪಠ್ಯಕ್ರಮ ಹೇಗಿರತ್ತೆ:

ಫೋಟೋಗ್ರಫಿ ಇತಿಹಾಸ
ಫೋಟೋಶಾಪ್
ನೈಸರ್ಗಿಕ ಮತ್ತು ಕೃತಕ ಛಾಯಾಗ್ರಹಣದ ಬೆಳಕಿನ ಮೂಲಗಳು
ಫೋಟೋ ತಿದ್ದುಪಡಿಗಳು
ಚಲನಚಿತ್ರ ಕ್ಯಾಮೆರಾಗಳು ಮತ್ತು ಸಂಸ್ಕರಣೆ
ಭಾವಚಿತ್ರ ಛಾಯಾಗ್ರಹಣ
ಸಂವೇದಕಗಳು
ಸ್ಟುಡಿಯೋ ಲೈಟಿಂಗ್
ಛಾಯಾಗ್ರಹಣ ದೃಗ್ವಿಜ್ಞಾನ
ವನ್ಯಜೀವಿ, ಫ್ಯಾಷನ್ ಮತ್ತು ಫೋಟೋ ಪತ್ರಿಕೋದ್ಯಮ
ಕ್ಯಾಮೆರಾದ ವಿವಿಧ ಭಾಗಗಳು
ಕ್ಲೋಸ್-ಅಪ್ ಪರಿಕರಗಳು ಮತ್ತು ತಂತ್ರಗಳು
ಬಣ್ಣ ಫಿಲ್ಟರ್‌ಗಳು
ಸೆಲೆಕ್ಷನ್ ಆಫ್ ಶಾಟ್ಸ್
ಫೋಟೋ ಪರಿಕರಗಳು

ಕರಿಯರ್ ಆಯ್ಕೆಗಳು ಮತ್ತು ಉದ್ಯೋಗಾವಕಾಶಗಳು:

ಕರಿಯರ್ ಆಯ್ಕೆಗಳು ಮತ್ತು ಉದ್ಯೋಗಾವಕಾಶಗಳು:

ಫೊಟೋಗ್ರಫಿಯಲ್ಲಿ ವಿಶಾಲವಾದ ಉದ್ಯಮವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫುಲ ಉದ್ಯೋಗಾವಕಾಶಗಳಿವೆ. ವಿವಿಧ ಮಾಧ್ಯಮ ಸಂಸ್ಥೆಗಳು ಮತ್ತು ಸುದ್ದಿ ಸಂಸ್ಥೆಗಳು, ಸುದ್ದಿ ವಾಹಿನಿಗಳು, ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಪೋಸ್ಟ್ ಮಾಡಲು ಛಾಯಾಗ್ರಾಹಕರನ್ನು ನೇಮಿಸಿಕೊಳ್ಳಲಾಗುತ್ತದೆ. ಇದಲ್ಲದೆ, ಭೂದೃಶ್ಯಗಳು, ವನ್ಯಜೀವಿಗಳು ಮತ್ತು ಇತರೆ ವಿಷಯಗಳ ಚಿತ್ರಗಳನ್ನು ಕ್ಲಿಕ್ ಮಾಡುವ ಛಾಯಾಗ್ರಾಹಕರಿಗೆ ಹೆಚ್ಚುಬೇಡಿಕೆ ಇದೆ.
ಈ ಫೊಟೋಗ್ರಫಿ ಕೋರ್ಸ್ ಗಳನ್ನು ಮಾಡಿದ ಅಭ್ಯರ್ಥಿಗಳು ತಮ್ಮ ಸ್ವಂತ ಫೊಟೋ ಸ್ಟುಡಿಯೋ ಅನ್ನು ಮಾಡಬಹುದು ಅಥವಾ ಇಲ್ಲಿ ತಿಳಿಸಲಾಗಿರುವ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಬಹುದು.

ಯಾವೆಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗಗಳಿವೆ:

ಯಾವೆಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗಗಳಿವೆ:

ಫೋಟೋ ಪತ್ರಕರ್ತರು
ಫ್ಯಾಷನ್ ಮತ್ತು ಜಾಹೀರಾತು ಛಾಯಾಗ್ರಾಹಕ
ವನ್ಯಜೀವಿ ಛಾಯಾಗ್ರಾಹಕ
ಭಾವಚಿತ್ರ ಛಾಯಾಗ್ರಾಹಕ
ಫೀಚರ್ ಛಾಯಾಗ್ರಾಹಕ
ಲಲಿತಕಲೆ ಛಾಯಾಗ್ರಾಹಕ
ವಿಧಿವಿಜ್ಞಾನ ಛಾಯಾಗ್ರಾಹಕ
ಫ್ರೀಲ್ಯಾನ್ಸಿಂಗ್
ವೈಜ್ಞಾನಿಕ ಛಾಯಾಗ್ರಾಹಕ
ಈವೆಂಟ್ ಛಾಯಾಗ್ರಾಹಕ

ವೇತನ ಎಷ್ಟಿದೆ:

ವೇತನ ಎಷ್ಟಿದೆ:

ಆರಂಭ ಹಂತದಲ್ಲಿ ಛಾಯಾಗ್ರಾಹಕರಿಗೆ 1.5 ರಿಂದ 2 ಲಕ್ಷದವರೆಗೂ ವಾರ್ಷಿಕ ಆದಾಯ ಸಿಗುತ್ತದೆ. ವೃತ್ತಿಯಲ್ಲಿ ಅನುಭವ ಪಡೆದ ಅಭ್ಯರ್ಥಿಗಳಿಗೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಇನ್ನೂ ಫ್ಯಾಷನ್ ಇಂಡಸ್ಟ್ರಿಗೆ ಹೆಜ್ಜೆ ಇಟ್ಟರೆ 5 ಲಕ್ಷಕ್ಕೂ ಅಧಿಕ ವಾರ್ಷಿಕ ಆದಾಯ ನಿಮ್ಮದಾಗಿಸಿಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
Today is world photography day so we are giving details of photography course details, admission fees, eligibility, syllabus, jobs and salary, Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X