Preparation Tips For Back To School : ರಾಜ್ಯದೆಲ್ಲೆಡೆ ಶಾಲೆಗಳು ಆರಂಭ; ಶಾಲೆಗೆ ಹೋಗುವ ಮುನ್ನ ಸಿದ್ಧತೆಗೆ ಇಲ್ಲಿದೆ ಸಲಹೆ

ಮತ್ತೆ ಶಾಲೆ ಹೋಗಲು ಸಿದ್ಧವಾಗಿದ್ದೀರಾ ಹಾಗಾದ್ರೆ ಈ ಸಿದ್ಧತೆ ಮಾಡಿಕೊಳ್ಳಿ

ಒಂದೂವರೆ ವರ್ಷದ ವನವಾಸ ಮುಗಿದ ಬಳಿಕ ಮರಳಿ ಬಶಾಲೆಗೆ ಹೆಜ್ಜೆ ಇಡುವ ಸಮಯ ಬಂದಾಯ್ತು. ಇನ್ನೇನಿದ್ದರೂ ಶಾಲೆಗೆ ಹಾಜರ್ ನೋ ಚಕ್ಕರ್ ಎನ್ನುವ ಸಮಯ. ಒಂದೆಡೆ ಖುಷಿ ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಬೇಜಾರು ಮತ್ತು ಪೋಷಕರಿಗೆ ಒಂದು ರೀತಿಯ ಸಮಾಧಾನ ಆದರೆ ಕೊರೋನಾ ವಿಷಯ ನೆನಪಿಸಿಕೊಂಡರೆ ಅಸಮಾಧಾನ. ಇದಿಷ್ಟೂ ಒಂದು ಕತೆಯಾದರೆ ಈಗ ಶಾಲೆಗೆ ಹೋಗುವ ಮುನ್ನ ಒಂದಷ್ಟು ತಯಾರಿ ಪೋಷಕರದ್ದು. ಹಾಗಾದ್ರೆ ಮರಳಿ ಶಾಲೆಗೆ ಹೋಗುವ ಮುನ್ನ ಏನೆಲ್ಲಾ ಸಿದ್ಧತೆಗಳಿರಬೇಕು ಎನ್ನುವ ಸಲಹೆಗಳನ್ನು ನಾವಿಲ್ಲಿ ನೀಡಲಿದ್ದೇವೆ ಇದನ್ನು ಓದಿ ತಿಳಿದು ತಯಾರಿ ನಡೆಸಿ.

ದಿನದ ವೇಳಾಪಟ್ಟಿ ಹಾಕಿ:

ಈ ಲಾಕ್ ಡೌನ್ ಅವಧಿಯು ನಮ್ಮಲ್ಲಿ ಪ್ರಜ್ಞೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ವರ್ಷದ ಬಳಿಕ ಶಾಲೆಗೆ ಹೆಜ್ಜೆ ಇಡುತ್ತಿರುವಾಗ ಮಕ್ಕಳಿಗೆ ದಿನದ ವೇಳಾಪಟ್ಟಿಯನ್ನು ಸಿದ್ಧಪಡಿಸುವುದು ಒಳಿತು. ಬೆಳಿಗ್ಗೆ ಸರಿಯಾದ ಸಮಯಕ್ಕೆ ಏಳುವುದನ್ನು ಅಭ್ಯಾಸ ಮಾಡಿಸಿ ತದನಂತರ ಚಾಚು ತಪ್ಪದೇ ಲಭ್ಯವಿರುವ ಸಮಯದೊಳಗೆ ದಿನನಿತ್ಯದ ಕೆಲಸಗಳನ್ನು ಮುಗಿಸುವಂತೆ ತಿಳಿಸಿ. ಈ ದಿನಚರಿಯಲ್ಲಿ ಆಹಾರ, ನಿದ್ದೆ, ಸುರಕ್ಷತೆ ಮತ್ತು ಸಮಯ ಪ್ರಮುಖವಾದ ಅಂಶಗಳು ಎನ್ನುವುದನ್ನು ನಿಮ್ಮ ಮಕ್ಕಳಿಗೆ ಅರ್ಥೈಸಿ.

ಆರೋಗ್ಯಕರ ಉಪಹಾರ ಶುರುಮಾಡಿ:

ತುಂಬಾ ಸಮಯದಿಂದ ಮಕ್ಕಳು ಮನೆಯಲ್ಲೇ ಇದ್ದು ಈಗ ಮರಳಿ ಶಾಲೆಗೆ ಹೋಗುತ್ತಿದ್ದಾರೆ ಹಾಗಾಗಿ ಅವರ ಆರೋಗ್ಯದ ವಿಚಾರ ಮುಖ್ಯವಾಗಿದೆ. ಮಕ್ಕಳಿಗೆ ಪೌಷ್ಟಿಕ ಉಪಹಾರ ಬೇಕು ಎಂದು ನಮಗೆಲ್ಲರಿಗೂ ತಿಳಿದಿದೆ ಹಾಗಾಗಿ ಅವರಿಗೆ ಉತ್ತಮ ಆಹಾರ ಮತ್ತು ಹಣ್ಣುಗಳನ್ನು ನೀಡಿ ಅವರು ಆರೋಗ್ಯದಿಂದಿರಲು ಸಹಕರಿಸಿ. ಇದರಿಂದ ಅವರು ದಿನವಿಡೀ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಬೇಕಾದ ಶಕ್ತಿಯನ್ನು ನೀಡುತ್ತದೆ.

ಮಗುವಿನ ಸಮವಸ್ತ್ರ ಸಿದ್ಧತೆ:

ಇಷ್ಟೊಂದು ದಿನ ಮನೆಯಲ್ಲೇ ಇರುವ ಕಾರಣ ಉಡುಗೆ ತೊಡುಗೆಗಳ ಬಗ್ಗೆ ಮಕ್ಕಳಲ್ಲಿ ಅಶಿಸ್ತು ಮೂಡಿರುತ್ತದೆ ಹಾಗಾಗಿ ನಿಮ್ಮ ಮಗು ನಾಳೆ ಶಾಲೆಗೆ ಧರಿಸಬೇಕಿರುವ ಸಮವಸ್ತ್ರವನ್ನು ಹಿಂದಿನ ರಾತ್ರಿಯೇ ಸಿದ್ಧತೆ ಮಾಡಿ. ಶಾಲೆ ಪ್ರಾರಂಭವಾಗುವ ಮುನ್ನವೇ ಇದನ್ನು ಅಭ್ಯಾಸ ಮಾಡಿಸಿ ಆಗ ಮಾತ್ರವೇ ನಿಮ್ಮ ಮಗು ಈ ರೂಢಿಯನ್ನು ಮುಂದುವರಿಸುತ್ತದೆ.

ಮಧ್ಯಾಹ್ನಕ್ಕೆ ಶುಚಿಯಾದ ಲಂಚ್:

ಕೊರೋನಾ ದೇಶಕ್ಕೆ ಹೆಜ್ಜೆ ಇಟ್ಟ ಬಳಿಕ ನಿಮಗೆಲ್ಲಾ ಆಹಾರ ಮತ್ತು ಆರೋಗ್ಯದ ಮಹತ್ವ ತಿಳಿದೇ ಇದೆ. ಹಾಗಾಗಿ ಶಾಲೆಗೆ ಹೋಗುವ ಮಕ್ಕಳ ಸುರಕ್ಷತೆ ಜೊತೆಗೆ ಉತ್ತಮ ಆಹಾರವನ್ನು ಲಂಚ್ ಬಾಕ್ಸ್ ಗೆ ಹಾಕುವುದನ್ನು ಮರೆಯದಿರಿ. ಶಾಲೆ ಆರಂಭಕ್ಕೂ ಮುನ್ನವೇ ಈ ಕುರಿತು ಆಲೋಚಿಸಿ ಮತ್ತು ದಿನನಿತ್ಯದ ಉಪಹಾರದ ವೇಳಾಪಟ್ಟಿಯನ್ನು ಪೋಷಕರು ಹಾಕಿಕೊಳ್ಳಿ. ಅದರಂತೆಯೇ ಮಕ್ಕಳ ಲಂಚ್ ಬಾಕ್ಸ್ ಅನ್ನು ಶುಚಿ ಮತ್ತು ರುಚಿಯಾಗಿರಿಸಲು ಪ್ರಯತ್ನಿಸಿ.

ಟಿವಿ-ಮುಕ್ತ ಸಮಯಕ್ಕೆ ಟೈಂಟೇಬಲ್:

ವರ್ಷವೆಲ್ಲಾ ಟಿವಿ, ಮೊಬೈಲ್ ಎಂದು ಮನೆಯೊಳಗೇ ಸಮಯ ಕಳೆದೋಯ್ತು. ಆದರೆ ಇದೀಗ ಎಲ್ಲದಕ್ಕೂ ಬ್ರೇಕ್ ಹಾಕಲೇಬೇಕು. ಶಾಲೆಯು ಆರಂಭವಾಗುವ ಸಮಯ ಬಂದಿದೆ ಈಗ ಟಿವಿ-ಮುಕ್ತ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಿ. ಮಕ್ಕಳು ದಿನನಿತ್ಯ ಓದಲು ಸಹಕರಿಸಿ ಮತ್ತು ಅವರ ಕಲಿಕಾ ಚಟುವಟಿಕೆಗೆ ನಿಮ್ಮ ಸಮಯವನ್ನು ನೀಡಿ.

ಶಾಲೆ ಆರಂಭವಾಗುವ ಮುನ್ನ ಶಾಪಿಂಗ್:

ನಿಮ್ಮ ಮಗುವು ಮರಳಿ ಶಾಲೆಗೆ ಹೋಗಲು ಸಿದ್ಧವಾಗಿದೆ. ಈಗ ಮಗುವಿನ ಅಗತ್ಯ ಸಾಮಾಗ್ರಿಗಳಿಗಾಗಿ ಮೊದಲು ಶಾಪಿಂಗ್ ಮಾಡಿ, ಇದರಿಂದ ಮಗುವಿನ ವರ್ಷದ ಆರಂಭ ಯಶಸ್ವಿಯಾಗಲು ಸಹಾಯವಾಗುತ್ತದೆ. ಬ್ಯಾಕ್‌ಪ್ಯಾಕ್‌ಗಳು, ಬೈಂಡರ್‌ಗಳು, ಪೆನ್ಸಿಲ್ ಮತ್ತು ಪುಸ್ತಕಗಳನ್ನು ಶಾಪಿಂಗ್ ಮಾಡುವುದರಿಂದ ಮಗು ಶಾಲೆಗೆ ಹೋಗಲು ಉತ್ಸುಕತೆಯನ್ನು ತೋರುತ್ತದೆ. ಈ ರೀತಿಯ ಆಕರ್ಷಣೆಯಿಂದಲೂ ಮಗು ಶಾಲೆಗೆ ಹೋಗಲು ಸಿದ್ಧವಾಗುತ್ತದೆ. ಆದಷ್ಟೂ ಮಗುವಿನ ಬೆನ್ನಿನಹೊರೆಯನ್ನು ಕಡಿಮೆ ಮಾಡುವ ರೀತಿಯಲ್ಲಿ ಬ್ಯಾಗ್ ಅನ್ನು ಸಿದ್ಧಪಡಿಸಿ.

ಆರೋಗ್ಯಕರ ನಿದ್ರೆ:

ದಿಢೀರನೆ ಶಾಲೆ ಆರಂಭ ಹಾಗಾಗಿ ಸಮಯ ಹೊಂದಿಕೆ ಕಷ್ಟ ಆದರೂ ನೀವು ಹಾಕಿಕೊಟ್ಟ ವೇಳಾಪಟ್ಟಿಯನ್ನು ಅನುಸರಿಸುವ ಜೊತೆಗೆ ಜೊತೆಗೆ ವಿದ್ಯಾರ್ಥಿಗೆ ಉತ್ತಮ ನಿದ್ರೆಗೆ ಅವಕಾಶ ನೀಡಿ. ಮಕ್ಕಳ ನಿದ್ರೆಗೂ ಕೂಡ ಆರೋಗ್ಯಕರವಾದ ವಾತಾವರಣ ನಿರ್ಮಿಸಿ ಹಾಗೂ ಕನಿಷ್ಟ ಸಮಯಗಳ ನಿದ್ದೆಗೆ ಅನುವು ಮಾಡಿಕೊಡಿ. ಇದರಿಂದ ವಿದ್ಯಾರ್ಥಿಯು ಶಾಲೆಗೆ ಹೋಗಲು ಹೆಚ್ಚು ಉತ್ಸಾಹ ತೋರುತ್ತಾನೆ ಜೊತೆಗೆ ಶಿಕ್ಷಣದ ಬಗ್ಗೆ ಹೆಚ್ಚು ಒಲವು ಮೂಡಲಿದೆ.

For Quick Alerts
ALLOW NOTIFICATIONS  
For Daily Alerts

English summary
schools reopening across the country. Here are the list of preparation tips for students back to school. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X