ಐಐಸಿಡಿ ಎಂಟ್ರೇಂಸ್ ಎಕ್ಸಾಂ... ಯಾವ ಕೋರ್ಸ್ ಗಾಗಿ ಈ ಎಕ್ಸಾಂ ಗೊತ್ತಾ?

Posted By:

ಭಾರತದಲ್ಲಿರುವ ಫೇಮಸ್ ಪ್ರವೇಶಾತಿ ಪರೀಕ್ಷೆಗಳಲ್ಲಿ ದಿ ಇಂಡಿಯನ್ ಇನ್‌ಸ್ಟಿಟ್ಯುಟ್ ಆಫ್ ಕ್ರಾಫ್ಟ್ ಆಂಡ್ ಡಿಸೈನ್ ಪರೀಕ್ಷೆಯೂ ಒಂದು. ಡಿಸೈನ್ ಕೋರ್ಸ್ ಗಳಿಗೆ ಈ ಪರೀಕ್ಷೆ ಆಯೋಜಿಸಲಾಗುತ್ತದೆ. ರಾಜಸ್ತಾನ ಸರ್ಕಾರವು ಈ ಪರೀಕ್ಷೆಯನ್ನ ಆಯೋಜಿಸುತ್ತದೆ. ಕ್ರಾಫ್ಟ್ ಸೆಕ್ಟರ್ ನಲ್ಲಿ ಕೌಶಲ್ಯ ಹೆಚ್ಚಿಸುವ ಉದ್ದೇಶ ಈ ಕೋರ್ಸ್ ಹೊಂದಿದೆ.

ಐಐಸಿಡಿ ಎಂಟ್ರೇಂಸ್ ಎಕ್ಸಾಂ... ಯಾವ ಕೋರ್ಸ್ ಗಾಗಿ ಈ ಎಕ್ಸಾಂ ಗೊತ್ತಾ?

ಸೆಂಟ್ರಲ್ ಯೂನಿವರ್ಸಿಟಿ ಆಫ್ ರಾಜಸ್ತಾನದಿಂದ ಅಧೀಕೃತಗೊಂಡ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಪ್ರತಿವರ್ಷ ಈ ಪರೀಕ್ಷೆಯನ್ನ ನಡೆಸಲಾಗುತ್ತದೆ. ಇದೀಗ ಎಪ್ರಿಲ್ 15ರಂದು ಐಐಸಿಡಿ ಪ್ರವೇಶಾತಿ ಪರೀಕ್ಷೆ ಪಾರ್ಟ್ ಎ ಯನ್ನ ನಿಗದಿಪಡಿಸಲಾಗಿದೆ. ಈ ಎಕ್ಸಾಂ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ಓದಿ.

ಐಐಸಿಡಿ ಕೋರ್ಸ್ ಏನೆಲ್ಲಾ ಆಫರ್ ಮಾಡುತ್ತೆ

  • ಕ್ರಾಫ್ಟ್ ಹಾಗೂ ಡಿಸೈನ್‌ನಲ್ಲಿ ಬಿಡಿಇಸ್ (4 ವರ್ಷ) - ಹಾರ್ಡ್ ಮೆಟೀರಿಯಲ್ ಡಿಸೈನ್, ಫೈರಡ್ ಮೆಟೀರಿಯಲ್ ಡಿಸೈನ್, ಸಾಫ್ಟ್ ಮೆಟೀರಿಯಲ್ ಡಿಸೈನ್ ಮತ್ತು ಫ್ಯಾಶನ್ ಡಿಸೈನ್ ಕ್ರಾಫ್ಟ್ 
  • ಡಿಸೈನ್‌ನಲ್ಲಿ ಎಂಡಿಇಸ್ (2ವರ್ಷ) -ಹಾರ್ಡ್ ಮೆಟೀರಿಯಲ್ ಸ್ಪೇಶಲೈಸೇಶನ್, ಫೈರಡ್ ಮೆಟೀರಿಯಲ್ ಸ್ಪೇಶಲೈಸೇಶನ್ ಹಾಗೂ ಸಾಫ್ಟ್ ಮೆಟೀರಿಯಲ್ ಸ್ಪೇಶಲೈಸೇಶನ್

ಐಐಸಿಡಿ ಪರೀಕ್ಷೆ ಮಾದರಿ ಹೀಗಿದೆ:

ಈ ಕೋರ್ಸ್ ಗೆ ಆಯ್ಕೆ ಹೀಗೆ ಮಾಡಲಾಗುತ್ತದೆ. ಎರಡು ಲಿಖಿತ ಪರೀಕ್ಷೆಯಿದ್ದು, ಒಂದು ವೈಯಕ್ತಿಕ ಸಂದರ್ಶನವಿರುತ್ತದೆ. ಪಾರ್ಟ್ ಎ ಪರೀಕ್ಷೆಯನ್ನ ಯಾವ ಅಭ್ಯರ್ಥಿ ಪಾಸ್ ಮಾಡಿರುತ್ತಾರೋ ಅಂತಹ ಅಭ್ಯರ್ಥಿಗಳಿಗೆ ಪಾರ್ಟ್ ಬಿ ಹಾಗೂ ಸಂದರ್ಶನಕ್ಕೆ ಕರೆಯಲಾಗುತ್ತದೆ.

 ಪಾರ್ಟ್

  ಸಮಯ

ಶೇಕಡಾವಾರು

ಅಂಕ

 ಪಾರ್ಟ್ ಎ - ಜನರಲ್ ಅವಾರೆನೆಸ್. ಕ್ರಿಯೇಟಿವಿಟಿ ಹಾಗೂ ಪರ್ಸೇಪ್ಷನ್ ಟೆಸ್ಟ್  3 ಗಂಟೆ  35 %
 ಪಾರ್ಟ್ ಬಿ- ಮೆಟೀರಿಯಲ್, ಕಲರ್ ಮತ್ತು ಕಂಸೆಪ್ಚುಲ್ ಟೆಸ್ಟ್ 3 ಗಂಟೆ 45%
 ಸಂದರ್ಶನ  20%
 ಒಟ್ಟು  100%

ಪರೀಕ್ಷೆಯಲ್ಲಿ ಏನೆಲ್ಲಾ ಕೇಳಲಾಗುತ್ತೆ:

  • ಪಾರ್ಟ್ ಎ : ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಗ್ರಹಣ ಕೌಶಲ್ಯ, ದೃಶ್ಯ ವ್ಯಾಖ್ಯಾನ ಮತ್ತು ಗಾತ್ರದ ಅಂದಾಜು ಮತ್ತು ವಸ್ತುಗಳ ಪ್ರಮಾಣ ಮುಂತಾದವುಗಳ ಕುರಿತು ಪರೀಕ್ಷೆ ಮಾಡಲಾಗುತ್ತದೆ
  • ಪಾರ್ಟ್ ಬಿ: ಅಭ್ಯರ್ಥಿಗಳ ಸಾಮರ್ಥ್ಯ ಪರೀಕ್ಷಿಸಲಾಗುತ್ತದೆ. ಗ್ರಹಣಾ ಶಕ್ತಿ, ಯೋಚನಾ ಸಾಮರ್ಥ್ಯ, ಐಡಿಯಾಗಳು, ಕ್ರಿಯೇಟಿಂಗ್ ಸೊಲ್ಯುಶನ್ಸ್ ಮುಂತಾದ ಸಾಮರ್ಥ್ಯದ ಕುರಿತು ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ವಿವರಾಣ್ಮತಕವಾಗಿ ನೀವು ಬರೆಯಬೇಕು
  • ಇನ್ನು ಸಂದರ್ಶನ ಸುತ್ತಿನಲ್ಲಿ, ಅಭ್ಯರ್ಥಿಗಳ ಸಂವಹನ ಸಾಮರ್ಥ್ಯ, ಸಾಮಾನ್ಯ ಜ್ಞಾನ, ಡೀಸೈನ್, ಐಕ್ಯೂ, ಸಾಧನೆ ಹಾಗೂ ವೈಯಕ್ತಿಕ ಮಾಹಿತಿಯ ಬಗ್ಗೆ ಕೇಳಲಾಗುವುದು

ಐಐಸಿಡಿ ಎಂಟ್ರೇಂಸ್ ಎಕ್ಸಾಂ... ಯಾವ ಕೋರ್ಸ್ ಗಾಗಿ ಈ ಎಕ್ಸಾಂ ಗೊತ್ತಾ?

ಐಐಸಿಡಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಟಿಪ್ಸ್:

  • ಐಐಸಿಡಿ ಪರೀಕ್ಷೆಯು ನಿಮ್ಮ ಕ್ರಿಯೇಟಿವಿಟಿ ಸಾಮರ್ಥ್ಯದ ಮೇಲೆ ನಡೆಯುತ್ತದೆ
  • ಪ್ರತಿದಿನ ಸುದ್ದಿ ಪತ್ರಿಕೆ ಓದಿ ಹಾಗೂ ಕ್ರಾಫ್ಟ್ ಮತ್ತು ಡಿಸೈನ್ ಬಗ್ಗೆ ಒಂದು ಚಿಕ್ಕ ನೋಟ್ಸ್ ಮಾಡಿಟ್ಟುಕೊಳ್ಳಿ
  • ಸಾಮಾನ್ಯ ಜ್ಞಾನದ ಒಂದು ಪುಸ್ತಕ ಖರೀದಿಸಿ ಓದಿ
  • ಪಾರ್ಟ್ ಎ ಪರೀಕ್ಷೆಯಲ್ಲಿ ಯೂನಿಕ್ ಆಗಿ ಮಾಡಲು ಟ್ರೈ ಮಾಡಿ
  • ಪರ್ಸನಲ್ ಸುತ್ತಿನಲ್ಲಿ ಕಾಂಫಿಡೆಂಟ್ ಆಗಿ ಮಾತನಾಡಿ

English summary
The Indian Institute of Crafts and Design (IICD) exam, one of the popular entrance examinations in India, is conducted for admission to design courses. IICD was set-up by the Government of Rajasthan with the aim to develop skilled human resources for the craft sector

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia