ಈ 5 ವಿಷಯ ಯೋಚಿಸದೇ ಕೆಲಸ ಬಿಟ್ರೆ... ಆಮೇಲೆ ದೇವರೇ ಗತಿ!

Posted By:

ಇದೀಗ ಎಲ್ಲೆಡೆ ಮಲ್ಟಿ ನ್ಯಾಷನಲ್ ಕಂಪನಿಗಳದೇ ಹವಾ. ಅಷ್ಟೇ ಅಲ್ಲ ಎಲ್ಲೆಡೆ ಅದೆಷ್ಟೋ ಉದ್ಯೋಗವಕಾಶಗಳಿವೆ. ಹಾಗಾಗಿ ಪ್ರತಿದಿನ ಹೊಸ ಹೊಸ ಜಾಬ್ ನತ್ತ ನಮ್ಮ ಜನತೆಯ ನಿರೀಕ್ಷೆ. ಹಾಗಾಗಿ ಆಗಾಗ ಜಾಬ್ ಚೇಂಜ್ ಮಾಡುವುದು ಯುವಜನತೆಗೆ ಟ್ರೆಂಡ್ ಆಗಿಬಿಟ್ಟಿದೆ. ನೀವು ಕೆಲಸವೇನೂ ಬಿಡುತ್ತಿರಾ.. ಆದ್ರೆ ಕೆಲಸ ಬಿಡುವ ಮುನ್ನ 5 ಪ್ರಶ್ನೆಗಳನ್ನ ನಿಮಗೆ ನೀವೇ ಕೇಳಿಕೊಳ್ಳುವುದು ಬೆಸ್ಟ್.

ಅಭಿವೃದ್ಧಿ ಹಾಗೂ ಉತ್ತಮ ಅವಕಾಶಕ್ಕಾಗಿ ಕೆಲವರು ಕೆಲಸ ಬಿಟ್ಟುಬಿಡುತ್ತಾರೆ. ಕೆಲಸ ಬಿಡುವುದು ಸುಲಭದ ಮಾತಲ್ಲ ನಿಮ್ಮ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಇದು ಕೂಡಾ ಒಂದಾಗಿರುತ್ತದೆ. ಹಾಗಾಗಿ ಈ ನಿರ್ಧಾರ ಕೈಗೊಳ್ಳುವ ಮುನ್ನ ಹಲವಾರು ಬಾರಿ ಯೋಚಿಸಬೇಕು ಹಾಗೂ ಸಾಧ್ಯವಾದರೆ ಇತರರ ಜತೆ ಕೂಡಾ ಚರ್ಚಿಸಬೇಕು. ಜಾಬ್ ಬಿಡುವ ಬಗ್ಗೆ ಕೊನೆಯದಾಗಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೇರ್ ಫುಲ್ ಆಗಿ ಈ 5 ವಿಷಯಗಳ ಬಗ್ಗೆ ಯೋಚಿಸಿ.

ಜಾಬ್ ಬಿಡುವ ಮುನ್ನ ಈ 5 ವಿಷಯಗಳತ್ತ ಗಮನ ಕೊಡಿ:

ಸರಿಯಾದ ಉಳಿತಾಯ ನಿಮ್ಮಲ್ಲಿ ಇದೆಯಾ:

ಬೇರೆ ಕೆಲಸ ಸಿಗದೇ ಸದ್ಯ ಇರುವ ಕೆಲಸ ಬಿಡೋರು ಮೊದಲು ಸರಿಯಾದ ಉಳಿತಾಯ ಇದೆಯೇ ಎಂದು ಚೆಕ್ ಮಾಡಿಕೊಳ್ಳಬೇಕು. ಆದ್ರೆ ನಮ್ಮ ಜನತೆ ಏನು ಮಾಡುತ್ತಾರೆ ಎಂದ್ರೆ ಉಳಿತಾಯದ ಬಗ್ಗೆ ಯೋಚಿಸದೇ ಸೀದಾ ಕೆಲಸ ಬಿಟ್ಟುಬಿಡುತ್ತಾರೆ. ಇದರಿಂದ ಅವರು ಮುಂದೆ ಹಣಕಾಸಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಅಲ್ಲದೇ ಹಣಕ್ಕಾಗಿ ಇತರರ ಮೇಲೆ ಅವಲಂಬನೆಯಾಗ ಬೇಕಾಗುತ್ತದೆ. ನಿಮ್ಮ ಹತ್ರ ಉಳಿತಾಯ ಇಲ್ಲವೆಂದಾದ್ರೆ ನೋ ವರಿ ಕೆಲಸ ಬಿಡುವ ಯೋಚನೆ ಬಿಟ್ಟು ಬಿಡಿ

ಯಾಕೆ ಇದನ್ನೆಲ್ಲಾ ಮಾಡುತ್ತಿದ್ದೀರಾ:

ಈ ಪ್ರಶ್ನೆ ನೀವು ತಪ್ಪದೇ ನಿಮ್ಮಲ್ಲಿ ಕೇಳಿಕೊಳ್ಳಬೇಕು. ಕೆಲಸ ಬಿಡುವ ಮುನ್ನ ನೀವು ಯಾವ ಕಾರಣಕ್ಕೆ ಕೆಲಸ ಬಿಡುತ್ತಿದ್ದೀರಾ ಎಂದು ಕೇರ್ ಫುಲ್ ಆಗಿ ಯೋಚಿಸಿ. ಹಾಗೂ ಆ ಕಾರಣ ಕೂಡಾ ಸರಿಯಾಗಿದೆಯೇ ಎಂದು ಮೂರು, ನಾಲ್ಕು ಬಾರಿ ಯೋಚಿಸಿ. ಹಾಗೂ ಸ್ಟ್ರಾಂಗ್ ಕಾರಣಕ್ಕೆ ನೀವು ಕೆಲಸ ಬಿಡುತ್ತಿದ್ದೀರ ಎಂದಾದ್ರೆ ಓಕೆ. ಕೆಲಸ ಬಿಡೋ ವೇಳೆ ತುಂಬಾ ಮಂದಿ ನಿಮ್ಮ ಜತೆ ಕಾರಣ ಕೇಳಬಹುದು. ಆದ್ರೆ ನೀವು ಹೇಳುವ ಕಾರಣ ಸರಿಯಾದ ಕಾರಣವಾಗಿರಬೇಕು ಕೂಡಾ.

ನಿಮ್ಮ ಜಾಬ್ ನಿಂದ ನಿಮಗೆ ಸಂತೋಷವಿಲ್ಲವೇ:

ತುಂಬಾ ಮಂದಿ ಕೆಲಸ ಬಿಟ್ಟುಬಿಡುವುದು ಒಂದೇ ಕಾರಣ ಏನಂದ್ರೆ ಅದು ಅವರ ಇಂಟ್ರೆಸ್ಟಿಂಗ್ ಫೀಲ್ಡ್ ಅಲ್ಲದೇ ಇದ್ದರೆ. ಆ ಕೆಲಸದಿಂದ ಅವರಿಗೆ ಸಂತೋಷ, ಸಂತೃಪ್ತಿ ಇಲ್ಲದೇ ಇದ್ದರೆ ಅವರು ಆ ಜಾಬ್ ಬಿಟ್ಟು ಬಿಡುತ್ತಾರೆ. ಅಂತಹ ಜನರಲ್ಲಿ ನೀವು ಒಬ್ಬರಾಗಿದ್ದರೆ ನಿಮ್ಮ ಕಾರಣ ಸಮಂಜಸವಾಗಿರುತ್ತದೆ. ಆದ್ರೆ ಪ್ರಸ್ತುತ ಹುದ್ದೆಯು ನಿಮ್ಮ ಆಸಕ್ತಿಕರ ಫೀಲ್ಡ್ ಆಗಿದ್ದರೆ ಕೆಲಸ ಬಿಡುವ ಮುನ್ನ ಹಲವು ಬಾರಿ ಯೋಚಿಸಿ.

ನೀವೇನಾದ್ರೂ ಪ್ಲ್ಯಾನ್ ಬಿ ಮಾಡಿಕೊಂಡಿದ್ದೀರಾ:

ಕೆಲಸ ಬಿಟ್ಟ ಕೂಡಲೇ ಬೇರೆ ಪ್ಲ್ಯಾನ್ ಏನದ್ರೂ ಇದೆಯಾ ಎಂದು ಯೋಚಿಸಿ. ಒಂದು ವೇಳೆ ಇದೆ ಎಂದಾದ್ರೆ ಓಕೆ. ಆದ್ರೆ ಇಲ್ಲ ಎಂದಾದ್ರೆ ಕೆಲಸ ಬಿಡುವ ಮುನ್ನ ಹಲವಾರು ಭಾರಿ ಯೋಚಿಸುವುದು ಉತ್ತಮ.

ಮುಂದೆನು:

ನೀವು ಕೆಲಸ ಬಿಡುವ ಬಗ್ಗೆ ಆಲೋಚಿಸಿದ್ದರೆ, ಮುಂದೇನು ಎನ್ನುವುದರ ಬಗ್ಗೆಯೂ ಆಲೋಚಿಸಬೇಕು. ಮುಂದೇನು ಮಾಡಬಹುದು ಎನ್ನುದರ ಬಗ್ಗೆ ಒಂದು ಪ್ಲ್ಯಾನ್ ತಯಾರಿಸಿಕೊಳ್ಳಬೇಕು. ಯಾವುದೇ ಪ್ಲ್ಯಾನ್ ಮಾಡದೇ ಕೆಲಸ ಬಿಟ್ಟುಬಿಡಬಾರದು. ಯಾಕೆಂದ್ರೆ ಮುಂದೇನು ಮಾಡಬಹುದು ಎಂದು ಯೋಚಿಸದೇ ಕೆಲಸ ಬಿಟ್ಟರೆ ನೀವು ಡಿಪ್ರೇಶನ್ , ಸ್ಟ್ರೆಸ್ ಗೆ ಒಳಗಾಗುವ ಸಾಧ್ಯತೆ ಇರುತ್ತದೆ.

English summary
While you Quitting the job first you need to ask these 5 questions yourself.Some people quit their jobs before think about these 5 questions. here is the list about that 5 things you must think

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia