ಎಕ್ಸಾಂ ಟ್ರಿಕ್ಸ್... ರೈಲ್ವೇ ನೇಮಕಾತಿ ಪರೀಕ್ಷೆಯಲ್ಲಿ ಪಾಸಾಗುವುದು ಹೇಗೆ?

Posted By:

ರೈಲ್ವೇ ಸಚಿವಾಲಯವು ಒಂದು ಲಕ್ಷ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಎಲ್ಲರೂ ಆಶ್ಚರ್ಯಗೊಂಡಿದ್ದಾರೆ. ಇದೀಗ ಎಲ್ಲರ ನೋಟ ರೈಲ್ವೇ ನೇಮಕಾತಿಯತ್ತ. ಒಂದು ಲಕ್ಷ ಹುದ್ದೆಗೆ ಸುಮಾರು ಎರಡು ಕೋಟಿ ಅರ್ಜಿ ಬಂದಿದೆ ಎಂದು ಇತ್ತೀಚೆಗೆ ರೈಲ್ವೇ ಸಚಿವಾಲಯ ತಿಳಿಸಿತ್ತು

ಫೆಬ್ರವರಿ ತಿಂಗಳಿನಲ್ಲಿ ನೇಮಕಾತಿಯ ಪ್ರಕಟಣೆ ಹೊರಡಿಸಿತ್ತು. 26,502 ಅಸಿಸ್ಟೆಂಟ್ ಲೊಕೊ ಪೈಲಟ್ ಮತ್ತು ಟೆಕ್ನಿಷನ್ ಹುದ್ದೆ ಸೇರಿದಂತೆ ಇನ್ನಿತ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. 2 ಕೋಟಿ ಅರ್ಜಿ ಬಂದಿದ್ದು, ತುಂಬಾನೆ ಕಾಂಪಿಟೇಶನ್ ಕೂಡಾ ಇದೆ. ಹಾಗಾಗಿ ನೀವು ತಯಾರಿ ಕೂಡಾ ಚೆನ್ನಾಗಿ ಮಾಡಬೇಕು. ಅಸಿಸ್ಟೆಂಟ್ ಲೊಕೊ ಪೈಲಟ್ ಮತ್ತು ಟೆಕ್ನಿಷನ್ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ ಎಂದು ತಿಳಿಯಲು ಇಲ್ಲಿದೆ ಟಿಪ್ಸ

ಮೊದಲ ಹಂತದ ಸಿಬಿಟಿ ( ಕಾಮನ್ ಫಾರ್ ಎಎಲ್ ಪಿ/ಟೆಕ್ನಿಷನ್)

 • ಇದು ಪರೀಕ್ಷೆಯ ಮೊದಲ ಹಂತ. ಇಲ್ಲಿ ಚೆನ್ನಾಗಿ ಸ್ಕೋರ್ ಮಾಡಿದ್ರೆ ನಿಮ್ಮ ಹೆಸರು ಎರಡನೇ ಹಂತ ಶಾರ್ಟ್ ಲಿಸ್ಟ್ ನಲ್ಲಿ ಖಂಡಿತ ಇರುತ್ತೆ.
 • ಮ್ಯಾಥಮ್ಯಾಟಿಕ್ಸ್, ಜನರಲ್ ಇಂಟಲಿಜೆನ್ಸ್, ರೀಸನಿಂಗ್, ಜನರಲ್ ಸೈನ್ಸ್ ಮತ್ತು ಜನರಲ್ ಅವರನೆಸ್ ಹಾಗೂ ಪ್ರಚಲಿತ ವಿದ್ಯಾಮಾನದ ಬಗ್ಗೆ ಈ ಪರೀಕ್ಷೆಯಲ್ಲಿ ಕೇಳಲಾಗುತ್ತದೆ
 • ಇನ್ನು ಈ ಪರೀಕ್ಷೆಯ ಅವಧಿ 90 ನಿಮಿಷ
 • ಈ ಪ್ರಶ್ನೆಯಲ್ಲಿ ಒಟ್ಟು 75 ಪ್ರಶ್ನೆಗಳನ್ನ ಕೇಳಲಾಗುತ್ತದೆ

ಎರಡನೇ ಹಂತದ ಸಿಬಿಟಿ ( ಪಾರ್ಟ್ ಎ):

 • ಈ ಹಂತದ ಪರೀಕ್ಷೆಯಲ್ಲಿ ಮ್ಯಾಥಮ್ಯಾಟಿಕ್ಸ್, ಜನರಲ್ ಇಂಟಲಿಜೆನ್ಸ್, ರೀಸನಿಂಗ್, ಬೇಸಿಕ್ ಸೈನ್ಸ್, ಇಂಜಿನಿಯರಿಂಗ್ ಮತ್ತು ಪ್ರಚಲಿತ ವಿದ್ಯಾಮಾನಗಳ ಕುರಿತು ಈ ಹಂತದ ಪರೀಕ್ಷೆಯಲ್ಲಿ ಕೇಳಲಾಗುತ್ತದೆ
 • ಇನ್ನು ಈ ಪರೀಕ್ಷೆಯ ಅವಧಿ 90 ನಿಮಿಷ
 • ಈ ಪ್ರಶ್ನೆಯಲ್ಲಿ ಒಟ್ಟು 100 ಪ್ರಶ್ನೆಗಳನ್ನ ಕೇಳಲಾಗುತ್ತದೆ

ಎರಡನೇ ಹಂತದ ಸಿಬಿಟಿ ( ಪಾರ್ಟ್ ಬಿ):

 • ಈ ಹಂತದ ಪರೀಕ್ಷೆಯಲ್ಲಿ ಡೈರಕ್ಟರ್ ಜನರಲ್ ಆಫ್ ಎಂಪ್ಲಾಯ್ ಮೆಂಟ್ ಆಂಡ್ ಟ್ರೈನಿಂಗ್ ನಿಂದ ರಚಿತವಾದ ಸಿಲೇಬಸ್ ನಿಂದ ಈ ಹಂತದ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ
 • ಇನ್ನು ಈ ಪರೀಕ್ಷೆಯ ಅವಧಿ 60 ನಿಮಿಷ
 • ಈ ಪ್ರಶ್ನೆಯಲ್ಲಿ ಒಟ್ಟು 75 ಪ್ರಶ್ನೆಗಳನ್ನ ಕೇಳಲಾಗುತ್ತದೆ

ಕಂಪ್ಯೂಟರ್ ಬೇಸ್‌ಡ್ ಅಪ್ಟಿಟ್ಯುಡ್ ಟೆಸ್ಟ್:

 • ಎಎಲ್ ಪಿ ಆಯ್ಕೆ ಮಾಡಿರುವ ಅಭ್ಯರ್ಥಿಗಳಿಗೆ ಮಾತ್ರ ಈ ಪರೀಕ್ಷೆ ಮಾಡಲಾಗುತ್ತದೆ
 • ಈ ಪರೀಕ್ಷೆಯಲ್ಲಿ ನೆಗಟೀವ್ ಅಂಕಗಳಿಲ್ಲ
 • ಈ ಪರೀಕ್ಷೆಯಿಂದ 30% ಅಂಕ ನೀಡಲಾಗುತ್ತದೆ
 • ಉಳಿದ 70% ಅಂಕಗಳನ್ನ ಎರಡನೇ ಹಂತದ ಸಿಬಿಟಿ ( ಪಾರ್ಟ್ ಎ) ಹಾಗೂ ಎರಡನೇ ಹಂತದ ಸಿಬಿಟಿ ( ಪಾರ್ಟ್ ಬಿ) ಪರೀಕ್ಷೆಯಿಂದ ನೀಡಲಾಗುತ್ತದೆ

ಈ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡಲು ಫಾಲೋ ಮಾಡಬೇಕಾದ ಟಿಪ್ಸ್

 • ಈ ಹುದ್ದೆಯ ನೇಮಕ ಪ್ರಕ್ರಿಯೆ ಬಗ್ಗೆ ಮೊದಲು ಚೆನ್ನಾಗಿ ತಿಳಿದುಕೊಳ್ಳಿ. ಆಗ ನೀವು ಪರೀಕ್ಷೆಯನ್ನ ಚೆನ್ನಾಗಿ ಮಾಡಬಹುದು
 • ಮ್ಯಾಥಮ್ಯಾಟಿಕ್ಸ್ ವಿಷಯಕ್ಕೆ ಸಂಬಂಧಪಟ್ಟಂತೆ ನಿಮ್ಮ ಸ್ಪೀಡ್ ಹೆಚ್ಚು ಮಾಡಿ
 • ಪ್ರಚಲಿತ ವಿದ್ಯಾಮಾನದ ಪ್ರಶ್ನೆಗೆ ಸಂಬಂಧಪಟ್ಟಂತೆ ಪ್ರತೀ ದಿನ ಮ್ಯಾಗಜಿನ್, ಸುದ್ದಿ ಪತ್ರಿಕೆ ತಪ್ಪದೇ ಓದಿ
 • 12ನೇ ತರಗತಿಯ ಎನ್‌ಸಿಇಆರ್ ಟಿ ಪರೀಕ್ಷೆಯ ಪುಸ್ತಕಗಳನ್ನ ಓದಲು ಮರೆಯದಿರಿ.
 • ಕಂಪ್ಯೂಟರ್ ಬೇಸ್ಡ್ ಅಪ್ಟಿಟ್ಯೂಟ್ ಪರೀಕ್ಷೆ ಬಗ್ಗೆ ಪ್ರ್ಯಾಕ್ಟೀಸ್ ಮಾಡಿ

English summary
The Ministry of Railways has surprised everyone in the country with over one lakh vacancies. This mega recruitment drive has attracted every job seeker to drop an application at the Railway Recruitment Board (RRB) website. Recently, the Indian Railways has said that it has received over two crore applications for the one lakh vacancies

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia