ನೀವು ವಿದ್ಯಾವಂತರಾಗಿದ್ದರೂ ಕೆಲಸ ಸಿಗುತ್ತಿಲ್ಲ ಎನ್ನುವುದಕ್ಕೆ ಕಾರಣಗಳೇನು ಗೊತ್ತಾ?

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಲಿ ವಿದ್ಯಾವಂತರಾಗಲಿ, ಒಳ್ಳೆಯ ಹುದ್ದೆಯನ್ನು ಅರಸಲಿ ಎಂಬ ಕನಸ್ಸನ್ನು ಹೊತ್ತಿರುತ್ತಾರೆ. ಅದೇ ರೀತಿಯಾಗಿ ವಿದ್ಯಾರ್ಥಿಗಳೂ ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ವಹಿಸಿ ಶ್ರಮ ಪಡುತ್ತಾರೆ. ಆದರೆ ಕೆಲವರಿಗೆ ವಿದ್ಯಾಭ್ಯಾಸ ಮುಗಿದಿದೆ ಮುಂದೇನು ಎನ್ನುವ ಪ್ರಶ್ನೆಗಳಿಗೆ ಪ್ರತಿನಿತ್ಯ ಒಂದಲ್ಲಾ ಒಂದೆಡೆ ಕೆಲಸಕ್ಕೆ ಸಂದರ್ಶನಕ್ಕೆ ತೆರಳುತ್ತಾರೆ ಆದರೆ ಫಲಿತಾಂಶ ಕೆಲಸ ಸಿಗುವುದಿಲ್ಲ ಎನ್ನುವ ಬೇಜಾರು ಅಥವಾ ತಾವು ಬಯಸಿದ ಕೆಲಸ ಸಿಕ್ಕಿಲ್ಲ ಅನ್ನುವ ಯೋಚನೆಗಳು ನೂರಾರು. ಹಾಗಿದ್ರೆ ಓದಿದ್ದರೂ ಉದ್ಯೋಗ ಯಾಕೆ ಸಿಗುತ್ತಿಲ್ಲ ಅನ್ನುವುದಕ್ಕೆ ಪ್ರಮುಖ ಕಾರಣಗಳೇನು?

ಉದ್ಯೋಗ ಸಿಗಲು ಈ ವಿಷಯಗಳನ್ನು ಗಮನದಲ್ಲಿಡಿ

ಈಗಿನ ತಾಂತ್ರಿಕ ಯುಗದಲ್ಲಿ ಕಾಂಪಿಟೇಶನ್ ಅನ್ನುವುದು ಯಾರನ್ನೂ ಬಿಟ್ಟಿಲ್ಲ. ಒಬ್ಬರಿಗಿಂತ ಒಬ್ಬರ ಅರ್ಹತೆ ವಿಭಿನ್ನ ಇರುತ್ತದೆ ಹಾಗಾಗಿ ಅಭ್ಯರ್ಥಿಗಳು ವಿದ್ಯಾಭ್ಯಾಸದ ನಂತರ ಉದ್ಯೋಗಕ್ಕೆ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುವ ಅಗತ್ಯ ಇದ್ದೇ ಇರುತ್ತದೆ. ಕೆಲವರಿಗೆ ರೆಸ್ಯೂಮೆ ಸಿದ್ದ ಮಾಡಿರುವ ರೀತಿಯಲ್ಲಿ ವಿಫಲ ಹೊಂದಬಹುದು ಇನ್ನೂ ಕೆಲವರು ಸಂದರ್ಶನದಲ್ಲಿ ಸರಿಯಾದ ರೀತಿಯಲ್ಲಿ ಪರ್ಫಾಮ್ ಮಾಡದೇ ವಿಫಲ ಹೊಂದಬಹುದು ಹೀಗೆ ಹಲವಾರು ಕಾರಣಗಳಿಂದ ಉದ್ಯೋಗಾವಕಾಶ ಕೈತಪ್ಪಿರಬಹುದು. ಹೀಗೆ ಹತ್ತು ಹಲವಾರು ಕಾರಣಗಳಿರುತ್ತವೆ.

೧ ಸೂಕ್ತವಾದ ರೆಸ್ಯೂಮೆ ಕಳುಹಿಸುವಲ್ಲಿ ವಿಫಲ:

೧ ಸೂಕ್ತವಾದ ರೆಸ್ಯೂಮೆ ಕಳುಹಿಸುವಲ್ಲಿ ವಿಫಲ:

ನಿಮ್ಮ ರೆಸ್ಯೂಮೆ ಸಂದರ್ಶಕರ ಮನ ಒಪ್ಪುವಂತಿರಬೇಕು. ಅಂದರೆ ನಿಮ್ಮ ರೆಸ್ಯೂಮೆ ನಿಮ್ಮ ವ್ಯಕ್ತಿತ್ವದ ಜೊತೆಗೆ ಅರ್ಹತೆಯನ್ನು ಸೂಚಿಸುತ್ತದೆ. ನೀವು ರೆಸ್ಯೂಮೆಯಲ್ಲಿ ತಿಳಿಸಿರುವ ಪ್ರತಿಯೊಂದು ವಿಷಯಗಳು ಅವರ ಕಣ್ಣಿಗೆ ಆಕರ್ಷಕವಾಗಿರಬೇಕು ಹಾಗಿದ್ದಲ್ಲಿ ನಿಮ್ಮ ಕ್ರಿಯೇಟಿವಿಯು ಸಂದರ್ಶಕರ ಮೆಚ್ಚುಗೆ ಗಳಿಸಲು ಸಾಧ್ಯ. ರೆಸ್ಯೂಮೆಯಲ್ಲಿ ಅನಾವಶ್ಯಕ ವಿವರಗಳ ಬದಲು ಉಪಯುಕ್ತವಾದ ಮತ್ತು ನಿಮ್ಮ ಅರ್ಹತೆಗಳನ್ನು ಸೂಚಿಸುವ ವಿವರಗಳಿದ್ದರೆ ಒಳಿತು.

೨ ನಿಮಗೆ ಸೂಕ್ತವಾಗುವ ಉದ್ಯೋಗವನ್ನು ನೀವು ಆಯ್ಕೆ ಮಾಡದಿರುವುದು:

೨ ನಿಮಗೆ ಸೂಕ್ತವಾಗುವ ಉದ್ಯೋಗವನ್ನು ನೀವು ಆಯ್ಕೆ ಮಾಡದಿರುವುದು:

ನೀವು ನಿಮ್ಮ ವಿದ್ಯಾರ್ಹತೆಯನ್ನು ಅರಿಯದೆ ಉದ್ಯೋಗಕ್ಕೆ ಸೇರಿಕೊಳ್ಳುವ ತರಾತುರಿಯಲ್ಲಿ ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಾಗ, ಆ ಉದ್ಯೋಗಕ್ಕೆ ನಿಮ್ಮ ವಿದ್ಯಾರ್ಹತೆ ಸೂಕ್ತವಾಗದೆ ಕಡೆಗಣಿಸಿರಬಹುದು. ಹಾಗಾಗಿ ನಿಮ್ಮ ಅರ್ಹತೆ ಮತ್ತು ನಿಮಗಿರುವ ಆಸಕ್ತಿ ಇರುವ ವಿಷಯಗಳ ಬಗೆಗೆ ಹೆಚ್ಚು ಗಮನವಹಿಸಿ ಆ ಹುದ್ದೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಮತ್ತು ಅದಕ್ಕೆ ಬೇಕಿರುವ ತಯಾರಿಗಳನ್ನು ಮಾಡಿಕೊಳ್ಳುವುದು ಒಳಿತು.

೩ ನೀವು ನಿಮ್ಮ ನೆಟ್ ವರ್ಕ್ ಅಭಿವೃದ್ದಿ ಪಡಿಸದೇ ಇರುವುದು:

೩ ನೀವು ನಿಮ್ಮ ನೆಟ್ ವರ್ಕ್ ಅಭಿವೃದ್ದಿ ಪಡಿಸದೇ ಇರುವುದು:

ನೀವು ನಿಮ್ಮ ನಿಮ್ಮ ಪ್ರೊಫೈಲ್ ಅನ್ನು ಪ್ರೊಫೆಶನಲ್ ನೆಟ್ ವರ್ಕ್ ಗಳಾದ ಲಿಂಕಡ್ ಇನ್ ನಲ್ಲಿ ಇರಿಸಿ ಕೇವಲ ಇನ್ಬಾಕ್ಸ್ ತುಂಬಿಸಿದರೆ ಸಾಲದು ಅದನ್ನು ಎಫಿಶಿಯನ್ಟ್ ಆಗಿ ಬಳಸಿಕೊಳ್ಳಬೇಕು. ಇನ್ನೊಬ್ಬರನ್ನು ನೇರವಾಗಿ ಸಂಪರ್ಕದಲ್ಲಿರಿಸಿಕೊಳ್ಳುವಂತಿರಬೇಕು. ಅದಲ್ಲದೇ ಉದ್ಯೋಗ ಮೇಳಗಳಲ್ಲಿ ಪಾಲ್ಗೊಳ್ಳಬೇಕು ಮತ್ತು ಇಂಡಸ್ಟ್ರಿಗಳು ನಡೆಸುವ ಈವೆಂಟ್ ಗಳಲ್ಲಿ ಪಾಲ್ಗೊಂಡು ಅಲ್ಲಿ ನೇಮಕಾತಿ ಅಥವಾ ಮಾನವ ಸಂಪನ್ಮೂಲ ಸಿಬ್ಬಂದಿಗಳ ಪರಿಚಯ ಮಾಡಿಕೊಂಡು ನಿಮ್ಮ ಉತ್ತಮ ಸಂವಹನದ ಮೂಲಕ ಅವರಲ್ಲಿನ ಉದ್ಯೋಗ ಮಾಹಿತಿಗಳ ಕಲೆಹಾಕಿ ಉದ್ಯೋಗ ಪಡೆಯುವ ಅವಕಾಶವನ್ನು ಮಾಡಿಕೊಳ್ಳಬೇಕು.

೪ ಸಂದರ್ಶನದಲ್ಲಿ ಅಗತ್ಯಕ್ಕಿಂತ ಹೆಚ್ಚು ಇಂಪ್ರೆಸ್ ಮಾಡುವುದು ವಿಫಲ :

೪ ಸಂದರ್ಶನದಲ್ಲಿ ಅಗತ್ಯಕ್ಕಿಂತ ಹೆಚ್ಚು ಇಂಪ್ರೆಸ್ ಮಾಡುವುದು ವಿಫಲ :

ಸಂದರ್ಶನದಲ್ಲಿ ನೀವು ಸಂದರ್ಶಕರಿಗೆ ಅಗತ್ಯಕ್ಕಿಂತ ಹೆಚ್ಚು ಇಂಪ್ರೆಸ್ ಮಾಡುವ ಪ್ರಯತ್ನ ಮಾಡಿದಾಗಲೂ ಕೆಲವೊಮ್ಮೆ ವಿಫಲವಾಗುತ್ತದೆ. ಸಂದರ್ಶಕರ ಅಗತ್ಯತೆಗಳ ಆಧಾರದ ಮೇಲೆ ನಿಮ್ಮ ಸಂದರ್ಶನವು ಅವಲಂಬಿತವಾಗಿರುತ್ತದೆ. ಸಂಸ್ಥೆಯು ತಮಗೆ ಸೂಕ್ತವಾಗುವ ಅರ್ಹ ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿರುತ್ತದೆ ಹಾಗಾಗಿ ನಿಮ್ಮ ಅನಗತ್ಯ ವಿಷಯಗಳು ಮತ್ತು ನಿಮ್ಮ ವ್ಯಕ್ತಿತ್ವ ಅದಕ್ಕೆ ಸೂಕ್ತವಾಗದಿದ್ದಲ್ಲಿ ಕೂಡ ನಿಮ್ಮನ್ನು ಸಂದರ್ಶನದಿಂದ ತಿರಸ್ಕೃತ ಪಟ್ಟಿಯಲ್ಲಿ ಇರಿಸಬಹುದು.

೫ ನಿಮ್ಮ ಸಂಬಳದ ನಿರೀಕ್ಷೆಯಿಂದಲೂ ನೀವು ವಿಫಲರಾಗಬಹುದು:

೫ ನಿಮ್ಮ ಸಂಬಳದ ನಿರೀಕ್ಷೆಯಿಂದಲೂ ನೀವು ವಿಫಲರಾಗಬಹುದು:

ಮೊದಲ ಕೆಲಸದ ಹುಡುಕಾಟದಲ್ಲಿ ಸಂದರ್ಶಕರಲ್ಲಿ ಹೆಚ್ಚು ಸಂಬಳದ ನಿರೀಕ್ಷೆಯನ್ನು ಒಡ್ಡುವುದರಿಂದಲ್ಲೂ ನೀವು ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಬಹುದು. ನಿಮಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ಹೆಚ್ಚಿನ ಸಂಬಳದ ನಿರೀಕ್ಷೆಯಲ್ಲಿಯೂ ನೀವು ಸಿಗಲಿರುವ ಉತ್ತಮ ಉದ್ಯೋಗದಿಂದಲೂ ಹೊರಗುಳಿಯಬಹುದು.

೬ ನಿಮ್ಮ ವೇಷ ಭೂಷಣ ಕೂಡ ಸಂದರ್ಶಕರ ತಿರಸ್ಕಾರಗಳಿಗೆ ಕಾರಣ:

೬ ನಿಮ್ಮ ವೇಷ ಭೂಷಣ ಕೂಡ ಸಂದರ್ಶಕರ ತಿರಸ್ಕಾರಗಳಿಗೆ ಕಾರಣ:

ನೀವು ಸಂದರ್ಶನಕ್ಕೆ ತೆರಳುವಾಗ ನೀವು ನಿಮ್ಮ ಉಡುಗೆ ತೊಡುಗೆಯನ್ನು ತೊಟ್ಟು ಕನ್ನಡಿ ಮುಂದೆ ನಿಂತು ಕೇವಲ ನಿಮ್ಮಷ್ಟಕ್ಕೆ ನೀವು ಸಂತೃಪ್ತಿ ಪಟ್ಟರೆ ಸಾಲದು. ಬೇರೆಯವರು ನಿಮ್ಮನ್ನು ನೋಡುವಾಗ ಅವರಿಗೆ ನಿಮ್ಮ ವ್ಯಕ್ತಿತ್ವ ಆಕ‍ರ್ಷಕವಾಗುವಂತಿರಬೇಕು. ಆ ರೀತಿ ನೀಡು ಉಡುಗೆ ತೊಡುಗೆಯನ್ನು ಹೊಂದಿರಬೇಕು.

 

 

೭ ನಿಮ್ಮ ಪ್ಯಾಷನ್ ಗೆ ತಕ್ಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸದಿರುವುದು:

೭ ನಿಮ್ಮ ಪ್ಯಾಷನ್ ಗೆ ತಕ್ಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸದಿರುವುದು:

ಯಾವುದೇ ವ್ಯಕ್ತಿಯು ತನ್ನಲ್ಲಿರುವ ಕೌಶಲ್ಯವನ್ನು ವೃದ್ಧಿಸಿಕೊಳ್ಳಬಹುದು ಅಥವಾ ಈಗಿನ ಟೆಕ್ನಾಲಜಿಗಳನ್ನು ಕಲಿಯಬಹುದು ಆದರೆ ಪ್ಯಾಷನ್ ಎನ್ನುವುದು ಹಾಗಲ್ಲ. ಯಾವುದೇ ವ್ಯಕ್ತಿಗೆ ವೃತ್ತಿಯ ಬಗೆಗೆ ಪ್ಯಾಷನ್ ಇಲ್ಲದಿದ್ದಲ್ಲಿ ಆತ ಅವಕಾಶ ವಂಚಿತನಾಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಅವನು/ ಅವಳಿಗೆ ಉದ್ಯೋಗಾವಕಾಶ ದೊರಕಿದರೂ ವಿಫಲರಾಗುವ ಸಾಧ್ಯತೆ ಹೆಚ್ಚಿರುತ್ತದೆ.

೮ ನೀವು ಸೈಬರ್ ನಲ್ಲಿ ದುರ್ವತನೆ ಮಾಡಿದಲ್ಲಿ ಉದ್ಯೋಗಾವಕಾಶದಿಂದ ವಂಚಿತರಾಗುವಿರಿ:

೮ ನೀವು ಸೈಬರ್ ನಲ್ಲಿ ದುರ್ವತನೆ ಮಾಡಿದಲ್ಲಿ ಉದ್ಯೋಗಾವಕಾಶದಿಂದ ವಂಚಿತರಾಗುವಿರಿ:

ಯಾವುದೇ ವ್ಯಕ್ತಿಯು ಸಾಮಾಜಿಕ ತಾಣಗಳಲ್ಲಿ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಕೆಲವು ಸಂಸ್ಥೆಗಳು ಗಮನವಹಿಸುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ನೀವು ಮಾಡುವ ಕಮೆಂಟ್ಸ್, ಲೈಕ್ಸ್ ಮತ್ತು ನೀವು ಶೇರ್ ಮಾಡುವ ಕೋಟ್ಸ್ ಗಳಿಂದಲೂ ನಿಮ್ಮ ವ್ಯಕ್ತಿತ್ವವನ್ನು ಗಮನಿಸುತ್ತಾರೆ. ಹಾಗಾಗಿ ನೀವು ಉದ್ಯೋಗಾಕಾಂಕ್ಷಿಯಾಗಿರುವುದರ ಜೊತೆಗೆ ಸಂಸ್ಥೆಗಳು ನಿಮ್ಮ ವರ್ತನೆಯ ಬಗೆಗೆ ಗಮನ ಹರಿಸುವುದು ಈಗಿನ ದಿನಗಳಲ್ಲಿ ಸಾಮಾನ್ಯ ಹಾಗಾಗಿ ಈ ವಿಷಯಗಳಲ್ಲಿ ನೀವು ಮಾದರಿಯಾಗಿರಬೇಕು ಎನ್ನುವುದಲ್ಲ ಆದರೆ ಪ್ರಾಮಾಣಿಕರಾಗಿರಬೇಕು.

ಈ ಎಲ್ಲಾ ವಿಷಯಗಳನ್ನು ನೀವು ಅರಿತಲ್ಲಿ ಮಾತ್ರ ನಿಮ್ಮ ಅರ್ಹತೆಗನುಗುಣವಾದ ನಿಮ್ಮ ಆಸಕ್ತಿಯುತ ಉದ್ಯೋಗವನ್ನು ಸುಲಭವಾಗಿ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದು.

 

For Quick Alerts
ALLOW NOTIFICATIONS  
For Daily Alerts

English summary
Reasons for not getting hired? read on you will get some important information here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X