Career In Nursing: ನರ್ಸ್ ಕರಿಯರ್ ಅನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು ಇಲ್ಲಿದೆ ಮಾಹಿತಿ

ನರ್ಸ್ ಕರಿಯರ್ ಅನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು ? ಇಲ್ಲಿದೆ ಕಾರಣಗಳು

ವೈದ್ಯಕೀಯ ಕ್ಷೇತ್ರ ಅಂದ್ರೆ ಎಲ್ಲರಿಗೂ ಅದೇನೋ ಗೌರವ. ಅದರಲ್ಲೂ ಈ ಕೊರೋನಾ ಭಾರತಕ್ಕೆ ಲಗ್ಗೆ ಬಳಿಕ ನಮಗೆ ನಿಮಗೆಲ್ಲರಿಗೂ ವೈದ್ಯಕೀಯ ಕ್ಷೇತ್ರದ ಮಹತ್ವ ಮತ್ತು ಅಲ್ಲಿರುವ ಅವಕಾಶಗಳ ಬಗ್ಗೆ ಅರಿತಿದ್ದೇವೆ. ರಾಷ್ಟ್ರೀಯ ದಾದಿಯರ ದಿನವಾದ ಇಂದು ಈ ನರ್ಸಿಂಗ್ ಕರಿಯರ್ ಅನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

1. ಬೇರೆ ವೃತ್ತಿಗಳಿಗಿಂತ ವಿಭಿನ್ನ ಈ ನರ್ಸ್ ವೃತ್ತಿ:

1. ಬೇರೆ ವೃತ್ತಿಗಳಿಗಿಂತ ವಿಭಿನ್ನ ಈ ನರ್ಸ್ ವೃತ್ತಿ:

ಬೇರೆ ಎಲ್ಲಾ ವೃತ್ತಿಗಳಿಗಿಂತಲೂ ನರ್ಸ್ ವೃತ್ತಿ ವಿಭಿನ್ನವಾಗಿರತ್ತೆ.
ಪ್ರತಿದಿನ ಹಲವಾರು ಜೀವಗಳನ್ನು ಉಳಿಸಿ ಮತ್ತು ರೋಗಿಗಳನ್ನು ಶುಶ್ರೂಷೆ ಮಾಡುತ್ತಾರೆ. ನಿರಂತರವಾಗಿ ರೋಗಿಗೆ ಅಗತ್ಯವಿರುವ ಎಲ್ಲಾ ಆರೈಕೆಯನ್ನು ಅವರು ಮಾಡುತ್ತಾರೆ. ನರ್ಸಿಂಗ್ ಪ್ರಾಕ್ಟೀಸ್ ಜರ್ನಲ್‌ನಲ್ಲಿ ಪ್ರಕಟವಾದ 2017 ರ ಅಧ್ಯಯನದ ಪ್ರಕಾರ ಸಾರ್ವಜನಿಕರ ಆರೋಗ್ಯವನ್ನು ಉತ್ತೇಜಿಸುವ ಸಲುವಾಗಿ ಸಮುದಾಯಗಳಲ್ಲಿ ಬಹುಪಾಲು ಸ್ವಯಂಸೇವಕರೊಂದಿಗೆ ಸೇರಿ ಹೆಚ್ಚಾಗಿ ತೊಡಗಿಕೊಳ್ಳುತ್ತಾರೆ.

2. ನರ್ಸಿಂಗ್ ಪದವಿ ಕಾರ್ಯಕ್ರಮಗಳು ಎಲ್ಲೆಡೆ ಅಸ್ತಿತ್ವದಲ್ಲಿವೆ:

2. ನರ್ಸಿಂಗ್ ಪದವಿ ಕಾರ್ಯಕ್ರಮಗಳು ಎಲ್ಲೆಡೆ ಅಸ್ತಿತ್ವದಲ್ಲಿವೆ:

ಕೆಲವು ಶೈಕ್ಷಣಿಕ ಕಾರ್ಯಕ್ರಮಗಳು ಅಸ್ಪಷ್ಟ ಅಥವಾ ಕಷ್ಟಕರವಾಗಿವೆ. ಆದರೆ ದೇಶಾದ್ಯಂತ ನರ್ಸಿಂಗ್ ಪದವಿಗಳನ್ನು ಹೊಂದಿರುವ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಕಾಣಬಹುದು. ನರ್ಸಿಂಗ್ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಪ್ರತಿ ರಾಜ್ಯದಲ್ಲಿ ಮತ್ತು ಪ್ರತಿ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಕನಿಷ್ಠ ಒಂದು ನರ್ಸಿಂಗ್ ಪದವಿಯುಳ್ಳ ಕಾಲೇಜುಗಳನ್ನು ನೋಡಬಹುದು. ವಾಸ್ತವವಾಗಿ ಆರೋಗ್ಯಕ್ಕೆ ಸಂಬಂಧಿಸಿದ ಶಿಕ್ಷಣವನ್ನು ಉನ್ನತ ಶಿಕ್ಷಣದಲ್ಲಿ ಅಧ್ಯಯನ ಮಾಡುವ ಅತ್ಯಂತ ಜನಪ್ರಿಯ ಕ್ಷೇತ್ರಗಳಲ್ಲಿ ಒಂದಾಗಿದೆ ಎಂದು ಶಿಕ್ಷಣ ಅಂಕಿಅಂಶಗಳ ರಾಷ್ಟ್ರೀಯ ಕೇಂದ್ರ (ಎನ್‌ಸಿಇಎಸ್) ದ ಮಾಹಿತಿಯ ಪ್ರಕಾರ ತಿಳಿದುಬಂದಿದೆ.

3. ನರ್ಸಿಂಗ್ ಕೋರ್ಸ್ ಆನ್‌ಲೈನ್‌ನಲ್ಲಿ ಲಭ್ಯವಿದೆ:

3. ನರ್ಸಿಂಗ್ ಕೋರ್ಸ್ ಆನ್‌ಲೈನ್‌ನಲ್ಲಿ ಲಭ್ಯವಿದೆ:

ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ನಲ್ಲಿ ನರ್ಸಿಂಗ್ ಪದವಿಗಳನ್ನು ನೀಡುತ್ತವೆ. ಸಾಂಪ್ರದಾಯಿಕ ಪದವಿ ಕಾರ್ಯಕ್ರಮಗಳಿಗೆ ಸೇರಲು ಸಾಧ್ಯವಾಗದ ಜನರಿಗೆ ಈ ಕಾರ್ಯಕ್ರಮಗಳು ಉತ್ತಮ ಆಯ್ಕೆಗಳಾಗಿ ಕಾರ್ಯನಿರ್ವಹಿಸುತ್ತವೆ. ಕುಟುಂಬಗಳನ್ನು ನೋಡಿಕೊಳ್ಳುವುದು ಅಥವಾ ಪೂರ್ಣ ಸಮಯ ಕೆಲಸ ಮಾಡುವುದು ಮುಂತಾದ ಇತರ ಬೇಡಿಕೆಯ ಜವಾಬ್ದಾರಿಗಳನ್ನು ಹೊಂದಿರುವ ವಿದ್ಯಾರ್ಥಿಗಳು ದೂರ ಶಿಕ್ಷಣ ಕಾರ್ಯಕ್ರಮಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

4. ಅನೇಕ ನರ್ಸಿಂಗ್ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು:

4. ಅನೇಕ ನರ್ಸಿಂಗ್ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು:

ನರ್ಸಿಂಗ್ ಕೋರ್ಸ್ ಮಾಡಬಯಸುವ ವಿದ್ಯಾರ್ಥಿಗಳು ಅದರ ಖರ್ಚು ವೆಚ್ಚಗಳ ಬಗ್ಗೆ ಆತಂಕಗೊಂಡು ಆರ್ಥಿಕ ನೆರವನ್ನು ಬಯಸುತ್ತಾರೆ. ಆದರೆ ಅಂತಹ ವಿದ್ಯಾರ್ಥಿಗಳು ಕೆಲವುಕಾಲೇಜುಗಳು, ವಿಶ್ವವಿದ್ಯಾಲಯಗಳು, ಎನ್‌ಜಿಓ ಸಂಸ್ಥೆಗಳು, ಕಂಪನಿಗಳು ಮತ್ತು ವೃತ್ತಿಪರ ಸಂಸ್ಥೆಗಳಿಂದ ನೀಡಲಾಗುವ ವಿದ್ಯಾರ್ಥಿವೇತನವನ್ನು ಪಡೆಯಬಹುದು. ಈ ರೀತಿಯಾದ ಆರ್ಥಿಕ ಸಹಾಯದಿಂದ ನರ್ಸಿಂಗ್ ಪದವೀಧರರು ಸಾಲದ ಬಗ್ಗೆ ಚಿಂತಿಸದೆ ನರ್ಸಿಂಗ್ ಕ್ಷೇತ್ರಕ್ಕೆ ಪ್ರವೇಶಿಸಲು ಸಹಾಯವಾಗುತ್ತದೆ.

5. ನರ್ಸಿಂಗ್ ಕ್ಷೇತ್ರಕ್ಕೆ ಪ್ರವೇಶಿಸುವುದು ಸುಲಭ:

5. ನರ್ಸಿಂಗ್ ಕ್ಷೇತ್ರಕ್ಕೆ ಪ್ರವೇಶಿಸುವುದು ಸುಲಭ:

ಕೆಲವು ನರ್ಸಿಂಗ್ ವಿದ್ಯಾರ್ಥಿಗಳು ಸಾಂಪ್ರದಾಯಿಕ ಹಾದಿಯನ್ನು ಹಿಡಿದು ಅವರು ಬಿಎಸ್ಎನ್ ಕೋರ್ಸ್ ಅನ್ನು ನಾಲ್ಕು ವರ್ಷಗಳಲ್ಲಿ ಮುಗಿಸುತ್ತಾರೆ. ಇತರರು ನರ್ಸಿಂಗ್‌ನಲ್ಲಿ ಸಹಾಯಕ ಪದವಿ ಅಥವಾ ಡಿಪ್ಲೊಮಾ ಗಳಿಸಲು ನಿರ್ಧರಿಸುತ್ತಾರೆ. ಈ ಆಯ್ಕೆಗಳು ಸಾಮಾನ್ಯವಾಗಿ ಪೂರ್ಣಗೊಳ್ಳಲು 2 ರಿಂದ 3 ವರ್ಷಗಳು ಬೇಕಾಗುತ್ತದೆ. ವಿದ್ಯಾರ್ಥಿಗಳು ನರ್ಸಿಂಗ್‌ನಲ್ಲಿ ಬಹಳ ಬೇಗ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಕೂಡ ಮಾಡಬಹುದು. ಇದರಿಂದ ಬಹುಬೇಗ ಪದವಿ ಪಡೆದು ಉದ್ಯೋಗಕ್ಕೆ ಪ್ರವೇಶಿಸಲು ಅನುಕೂಲವಾಗುತ್ತದೆ.

6. ನರ್ಸಿಂಗ್ ವೃತ್ತಿಯಿಂದ ತೃಪ್ತಿ ಸಿಗುತ್ತದೆ:

6. ನರ್ಸಿಂಗ್ ವೃತ್ತಿಯಿಂದ ತೃಪ್ತಿ ಸಿಗುತ್ತದೆ:

ಎಎಮ್ಎನ್ ಹೆಲ್ತ್‌ಕೇರ್‌ನ ನೋಂದಾಯಿತ ದಾದಿಯರ ಕುರಿತ 2017 ರ ಸಮೀಕ್ಷೆಯ ಪ್ರಕಾರ ಸುಮಾರು 83% ರಷ್ಟು ದಾದಿಯರು ತಮ್ಮ ಶುಶ್ರೂಷೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿರುವುದರ ಬಗ್ಗೆ ತೃಪ್ತಿ ಹೊಂದಿದ್ದಾರೆ. ಹೆಚ್ಚುವರಿಯಾಗಿ ಸಮೀಕ್ಷೆಗೆ ಪ್ರತಿಕ್ರಿಯಿಸಿದ ಮೂರನೇ ಎರಡರಷ್ಟು ದಾದಿಯರು ನರ್ಸಿಂಗ್ ವೃತ್ತಿಯನ್ನು ಆಯ್ಕೆಮಾಡಿಕೊಳ್ಳಲು ಇತರರನ್ನು ಪ್ರೋತ್ಸಾಹಿಸುತ್ತಾರೆ.

7. ದಾದಿಯರು ಸವಾಲುಗಳನ್ನು ಎದುರಿಸುವ ಛಲಗಾರರು:

7. ದಾದಿಯರು ಸವಾಲುಗಳನ್ನು ಎದುರಿಸುವ ಛಲಗಾರರು:

ನರ್ಸ್ ಗಳಿಗೆ ಎಲ್ಲ ದಿನವೂ ಒಂದೇ ರೀತಿಯಾಗಿ ಕಾಣುವುದಿಲ್ಲ. ಪ್ರತಿ ದಿನವೂ ವಿವಿಧ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ವಿವಿಧ ರೋಗಿಗಳನ್ನು ಭೇಟಿಯಾಗುತ್ತಾರೆ. ಕೆಲಸಕ್ಕೆ ಕಾಲಿಟ್ಟಾಗಲೆಲ್ಲಾ ಎದುರಾಗುವ ಸವಾಲುಗಳನ್ನು ನಿಭಾಯಿಸುತ್ತಾರೆ. ಕೆಲವೊಮ್ಮೆ ದಾದಿಯರಿಗೆ ಈ ವೃತ್ತಿಯು ತುಂಬಾನೆ ಕಸಿವಿಸಿಯನ್ನುಂಟು ಮಾಡುತ್ತದೆ. ಆದರೆ ಎಎಮ್ಎನ್ ಹೆಲ್ತ್‌ಕೇರ್‌ನ ಶುಶ್ರೂಷಾ ಸಮೀಕ್ಷೆಯ ಪ್ರಕಾರ ಹೆಚ್ಚಿನದಾಗಿ ದಾದಿಯರು ವೃತ್ತಿಯೊಂದಿಗೆ ಬರುವ ಸವಾಲುಗಳನ್ನು ಸ್ವೀಕರಿಸಿ ಮುನ್ನಡೆಯುತ್ತಾರೆ.

8. ದಾದಿಯರಿಗೆ ಹೆಚ್ಚಿನ ಗೌರವವಿದೆ:

8. ದಾದಿಯರಿಗೆ ಹೆಚ್ಚಿನ ಗೌರವವಿದೆ:

ದಾದಿಯರು ಎಂದರೆ ಅದೊಂದು ಗೌರವಾನ್ವಿತ ಉದ್ಯೋಗ. ವಾಸ್ತವವಾಗಿ ವರ್ಕಿ ಫೌಂಡೇಶನ್‌ನ 2018 ರ ಸಮೀಕ್ಷೆಯ ಆವಿಷ್ಕಾರಗಳ ಪ್ರಕಾರ ನರ್ಸಿಂಗ್ ವಿಶ್ವದ ಆರನೇ ಅತ್ಯಂತ ಗೌರವಾನ್ವಿತ ಉದ್ಯೋಗವಾಗಿದೆ. ಸಾಮಾನ್ಯವಾಗಿ ರೋಗಿಗಳು ನರ್ಸ್ ಗಳ ಉದ್ಯೋಗದ ಸ್ವರೂಪವನ್ನು ಅರ್ಥಮಾಡಿಕೊಂಡಿದ್ದಾರೆಂದು ತೋರುತ್ತದೆ ಮತ್ತು ದಾದಿಯರು ಮಾಡುವ ಕೆಲಸವನ್ನು ರೋಗಿಗಳು ಮೆಚ್ಚುತ್ತಾರೆ.

9. ದಾದಿಯರು ತಮ್ಮ ಆಸಕ್ತಿಗನುಗುಣವಾಗಿ ಪ್ರದೇಶ ಆಯ್ಕೆಮಾಡಿಕೊಳ್ಳಬಹುದು:

9. ದಾದಿಯರು ತಮ್ಮ ಆಸಕ್ತಿಗನುಗುಣವಾಗಿ ಪ್ರದೇಶ ಆಯ್ಕೆಮಾಡಿಕೊಳ್ಳಬಹುದು:

ವೈದ್ಯಕೀಯ ಕ್ಷೇತ್ರವು ಹಲವಾರು ವಿಭಿನ್ನ ವಿಶೇಷತೆಗಳನ್ನು ಒಳಗೊಂಡಿದೆ ಮತ್ತು ದಾದಿಯರು ಪ್ರತಿ ಪ್ರದೇಶದಲ್ಲಿ ಕೆಲಸ ಮಾಡಬೇಕಾಗುತ್ತದೆ. ಪರಿಣಾಮವಾಗಿ ಶುಶ್ರೂಷಾ ವಿದ್ಯಾರ್ಥಿಗಳು ತಮ್ಮ ಆಸಕ್ತಿಗಳ ಆಧಾರದ ಮೇಲೆ ನಿರ್ಧಿಷ್ಟ ಪ್ರದೇಶದಲ್ಲಿ ಗಮನಹರಿಸಲು ಆಯ್ಕೆ ಮಾಡಿಕೊಳ್ಳಬಹುದು. ಅವರು ಶಿಶುಗಳೊಂದಿಗೆ ಸೂಲಗಿತ್ತಿಗಳು ಅಥವಾ ನವಜಾತ ಶಿಶುವಿನ ದಾದಿಯ ವೈದ್ಯರಾಗಿ ಕೆಲಸ ಮಾಡಲು ಆಯ್ಕೆ ಮಾಡಬಹುದು. ಇತರೆ ಲಭ್ಯವಿರುವ ಹಲವಾರು ಆಯ್ಕೆಗಳಲ್ಲಿ ಜೆರೊಂಟಾಲಜಿ ಅಥವಾ ಅರಿವಳಿಕೆಶಾಸ್ತ್ರದಲ್ಲಿ ಕೂಡ ಕೆಲಸ ಮಾಡಬಹುದು.

10. ಸ್ಥಿರ ಉದ್ಯಮದಲ್ಲಿ ನರ್ಸ್ ಗಳ ಉದ್ಯೋಗ ಆಯ್ಕೆ:

10. ಸ್ಥಿರ ಉದ್ಯಮದಲ್ಲಿ ನರ್ಸ್ ಗಳ ಉದ್ಯೋಗ ಆಯ್ಕೆ:

ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ (ಬಿಎಲ್ಎಸ್) ದ ಅಂಕಿಅಂಶಗಳ ಪ್ರಕಾರ ನರ್ಸಿಂಗ್ ಉದ್ಯಮವು 2016 ರಲ್ಲಿ ಯು.ಎಸ್ ನಲ್ಲಿ ಸುಮಾರು ಮೂರು ಮಿಲಿಯನ್ ನೋಂದಾಯಿತ ದಾದಿಯರು ಮತ್ತು ಮುಕ್ಕಾಲು ಮಿಲಿಯನ್ ಪರವಾನಗಿ ಪಡೆದ ಪ್ರಾಯೋಗಿಕ ಮತ್ತು ಪರವಾನಗಿ ಪಡೆದ ವೃತ್ತಿಪರ ದಾದಿಯರನ್ನು ಒಳಗೊಂಡಿತ್ತು. ಮುಂದಿನ ದಶಕದಲ್ಲಿ ಆರ್‌ಎನ್‌ಗಳ ಸಂಖ್ಯೆ 15% ರಷ್ಟು ಹೆಚ್ಚಾಗುತ್ತದೆ ಎಂದು ಬಿಎಲ್‌ಎಸ್ ಯೋಜಿಸಿದೆ.

For Quick Alerts
ALLOW NOTIFICATIONS  
For Daily Alerts

English summary
International nurses day is celebrated on may 12. Here is the reasons to choose a career in nursing.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X