ಆಫೀಸ್‌ನಲ್ಲಿ ಟಾರ್ಚರ್, ಕೊಂಕು ಮಾತು............ ಅಂತಹವರಿಗೆ ನಿಮ್ಮ ರಿಪ್ಲೈ ಹೀಗಿರಲಿ!

ಆಫೀಸ್ ಗಳಲ್ಲಿ ಎಲ್ಲರೂ ಒಂದೇ ತರಹ ಇರಲ್ಲ. ಕೆಲವರು ನಮ್ಮ ಏಳ್ಗೆ ಬಯಸಿದ್ರೆ ಮತ್ತೆ ಕೆಲವರು ನಮ್ಮ ಏಳ್ಗೆ ಸಹಿಸಲ್ಲ. ಹಾಗಾಗಿ ಇಂತಹ ಸಂದರ್ಭದಲ್ಲಿ ಅವರು ಏನು ಮಾಡುತ್ತಾರೆ ಎಂದ್ರೆ ಸುಮ್ ಸುಮ್ನೆ ಟಾರ್ಚರ್ ಕೊಡಲು ಪ್ರಾರಂಭಿಸುತ್ತಾರೆ. ಆ ಟಾರ್ಚರ್ ನಿಂದ ನಿಮಗೆ ಕೆಲಸ ಸಾಕಪ್ಪ ಸಾಕು ಅನ್ನೋ ತರಹ ಮಾಡಿ ಬಿಡುತ್ತಾರೆ.

ಟಾರ್ಚರ್ ನೀಡೋರನ್ನ ಹೀಗೆ ಕೂಲ್ ಆಗಿ ಹ್ಯಾಂಡಲ್ ಮಾಡಿ!

 

ಇನ್ನು ಟಾರ್ಚರ್ ಕೊಡುವ ವ್ಯಕ್ತಿಗಳು ಕೂಡಾ ಹಾಗೆಯೇ ಎಲ್ಲರ ಮುಂದೆ ಒಳ್ಳೆಯವರಂತೆ ವರ್ತಿಸಿ, ಯಾರಿಗೂ ಗೊತ್ತಾಗದ ಹಾಗೆ ನಿಮಗೆ ಟಾರ್ಚರ್ ಕೊಡುತ್ತಾರೆ. ಇನ್ನು ಅವರು ನಿಮ್ಮ ಸ್ನೇಹಿತರಾಗಿರುವುದಿಲ್ಲ, ನಿಮ್ಮ ಜತೆ ಹ್ಯಾಂಗ್ ಔಟ್ ಆಗೋರು ಕೂಡಾ ಆಗಿರುವುದಿಲ್ಲ. ಆದ್ರೂ ನೀವು ಅವರನ್ನ ಎದುರಿಸಲೇ ಬೇಕು ಇಲ್ಲಂದ್ರೆ ಬೇರೆ ಆಪ್ಷನ್ ಕೂಡಾ ಇರುವುದಿಲ್ಲ. ಹಾಗಂತ ನೀವು ಅವರ ಟಾರ್ಚರ್ ಅನುಭವಿಸಬೇಕಾಗಿಲ್ಲ ಬದಲಿಗೆ ಅವರು ನೀಡುವ ಟಾರ್ಚರ್ ಹಾಗೆಯೇ ಅವರಿಗೆ ಮರಳಿಸುವುದನ್ನ ನೀವು ಕಲಿಯಿರಿ.

ಟಾರ್ಚರ್ ನೀಡುವವರ ಮುಂದೆ ಕಾಂಫಿಡೆಂಟ್ ಆಗಿ ಪ್ರತಿಕ್ರಿಯಿಸಿ. ನೀವು ಅವರಿಗೆ ಯಾವ ರೀತಿಯಾಗಿ ಪವರ್‌ಫುಲ್ ಆಗಿ ಪ್ರತಿಕ್ರಿಯಿಸಬೇಕು ಎಂಬ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ

ನಗುತ್ತಾ ಅಲ್ಲಿಂದ ಹೊರಟು ಬಿಡಿ:

ನೀವು ವರ್ಕ್ ಮಾಡುವ ಜಾಗದಲ್ಲಿ ಯಾರಾದ್ರೂ ನಿಮಗೆ ಟಾರ್ಚರ್ ನೀಡುತ್ತಿದ್ದರೆ ನೋ ವರಿ. ಅಲ್ಲಿಂದ ಜಾಗ ಖಾಲಿ ಮಾಡಿ. ಅದೂ ಕೂಡಾ ನಗುತಾ ನಗುತಾ ಅಲ್ಲಿಂದ ಹೊರಟು ಬನ್ನಿ. ನೀವು ಯಾಕೆ ನಗುತ್ತಿದ್ದೀರಿ ಎಂದು ಅವರಿಗೆ ಅರ್ಥವಾಗಬಾರದು. ಇದರಿಂದ ಅವರೂ ಇನ್ನಷ್ಟು ಚಿಂತೆಗೆ ಒಳಗಾಗುತ್ತಾರೆ. ಹಾಗೆಯೇ ಅವರ ಟಾರ್ಚರ್ ಎಲ್ಲಾ ಟೈಂನಲ್ಲೂ ವರ್ಕೌಟ್ ಆಗಲ್ಲ ಎಂದು ಕೂಡಾ ಅವರಿಗೆ ತಿಳಿಯುತ್ತದೆ.

ಅಧಿಕೃತ ದೂರು:

ನೀವು ಅವರ ವಿರುದ್ಧ ಏನೂ ಕ್ರಮ ಕೈಗೊಳ್ಳಿಲ್ಲ ಎಂದಾದ್ರೆ ಖಂಡಿತ ಅವರು ಟಾರ್ಚರ್ ಹಾಗೆಯೇ ಮುಂದುವರೆಸುತ್ತಾರೆ. ಹಾಗಾಗಿ ಫಸ್ಟ್ ಸ್ಟೆಪ್ ನೀವು ಏನು ಮಾಡಬೇಕು ಅಂದ್ರೆ ಅವರ ವಿರುದ್ಧ ದೂರು ದಾಖಲಿಸಿ. ಹೆಚ್ ಆರ್ ಬಳಿ ಹೋಗಿ ಲಿಖಿತ ರೂಪದಲ್ಲಿ ದೂರು ದಾಖಲಿಸಿ. ಈ ದೂರು ನಿಮಗೆ ಭವಿಷ್ಯತ್ ನಲ್ಲಿ ಸಹಾಯಕ್ಕೆ ಬರುವುದು.

ಅವರಿಗೆ ಹಿಂತಿರುಗಿಸಿ:

ಹೌದು ಯಾರಿಂದಲೂ ನೀವು ಬೈಗುಳ ತಿನ್ನುವ ಅವಶ್ಯಕತೆಯಿಲ್ಲ. ಒಂದು ವೇಳೆ ನೀವು ಅವರು ಬೈಯುತ್ತಾ ಇದ್ದಾಗ ಸುಮ್ಮನೆ ಇದ್ರೆ ಅವರು ತಾವು ಪವರ್ ಫುಲ್ ಎಂದು ಭಾವಿಸುತ್ತಾರೆ. ಹಾಗೆಯೇ ನಿಮಗೆ ಟಾರ್ಚರ್ ನೀಡುವುದನ್ನ ಮುಂದುವರೆಸುತ್ತಾರೆ. ಆದ್ರೆ ಇಂತಹದ್ದಕ್ಕೆಲ್ಲಾ ನೀವು ಕೇರ್ ಮಾಡಬೇಡಿ. ಅವರು ಏನೇ ಬೈಗುಳ ನೀಡಿದರೂ ಅದನ್ನ ಹಾಗೆಯೇ ಹಿಂದಕ್ಕೆ ನೀಡಿ. ಯಾರು ಬೇಕು ಬೇಕಂತಲೇ ಹೀಗೆ ಮಾಡ್ತಿರುತ್ತಾರೋ ಅವರಿಗೆ ಮಾತ್ರ ಹೀಗೆ ಮಾಡಿ.

ನಿಮ್ಮ ಸಹಪಾಠಿಗಳಿಗೆ ತಿಳಿಸಿ:

ನೀವು ಈ ವಿಚಾರಗಳನ್ನ ನಿಮ್ಮ ಇತರ ಸಹಪಾಠಿಗಳಿಗೆ ತಿಳಿಸುತ್ತಾ ಇರುವುದು ಉತ್ತಮ. ಯಾಕೆಂದ್ರೆ ಅತೀರೇಕಕ್ಕೆ ಹೋದಾಗ ಅವರು ನಿಮ್ಮ ಬೆಂಬಲಕ್ಕೆ ಬರುತ್ತಾರೆ. ಅವರು ನಿಮ್ಮ ಬೆಂಬಲಕ್ಕೆ ನಿಂತಾಗ ನಿಮಗೆ ಟಾರ್ಚರ್ ನೀಡುವವರಿಗೆ ನೀವು ವೀಕ್ ಎಂದು ಭಾಸವಾಗುತ್ತದೆ.

ದೈಹಿಕ ಜಗಳಕ್ಕೆ ಮುಂದಾಗಬೇಡಿ:

ಹೌದು ಕೆಲವರು ಎಷ್ಟು ಟಾರ್ಚರ್ ನೀಡುತ್ತಾರೆ ಎಂದ್ರೆ ಅವರ ಮೇಲೆ ಕೈ ಮಾಡುವಂತೆ ಅವರ ಮಾತುಗಳು ಉತ್ತೇಜಿಸಬಹುದು. ಆದ್ರೆ ಯಾವುದೇ ಕಾರಣಕ್ಕೂ ಆ ತಪ್ಪು ಮಾಡಬೇಡಿ. ನೀವು ನಿಮ್ಮನ್ನ ಕಂಟ್ರೋಲ್ ಮಾಡಿಕೊಂಡಿರಿ. ಕೋಪದ ಕೈಗೆ ನಿಮ್ಮ ಬುದ್ಧಿ ಕೊಡಬೇಡಿ.

For Quick Alerts
ALLOW NOTIFICATIONS  
For Daily Alerts

  English summary
  The Bully Treats you like shit at work place. Instead of getting offended bad about being bullied what you di this time. don't worry you just smile and walk away. other wise go to HR and writte an official complaint.Instead of this what you can do to avoid bully in work place. here is the list of rplies you can give to the bully who treats you like shit at work
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more