RRB NTPC Exam: ಆರ್‌ಆರ್‌ಬಿ ಎನ್‌ಟಿಪಿಸಿ ಹುದ್ದೆಗಳ ಪರೀಕ್ಷಾ ತಯಾರಿಗೆ ಇಲ್ಲಿದೆ 10 ಪ್ರಮುಖ ಪುಸ್ತಕಗಳು

ರೈಲ್ವೆ ನೇಮಕಾತಿ ಮಂಡಳಿ ಎನ್‌ಟಿಪಿಸಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಇದೀಗ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆಯು ಡಿಸೆಂಬರ್ 28,2020 ರಿಂದ ಜನವರಿ 13,2021ರ ವರೆಗೆ ನಡೆಯಲಿವೆ. ಪ್ರವೇಶ ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ತುಂಬಾನೆ ತಯಾರಿಯನ್ನು ನಡೆಸಬೇಕಿದ್ದು, ಈ ಪರೀಕ್ಷೆಗೆ ತಯಾರಿ ನಡೆಸಲು ಯಾವೆಲ್ಲಾ ಪುಸ್ತಕಗಳು ಪ್ರಮುಖವಾದವು ಎಂಬುದನ್ನ ತಿಳಿಸಲಿದ್ದೇವೆ.

ಪರೀಕ್ಷಾ ತಯಾರಿಗೆ 10  ಪ್ರಮುಖ ಪುಸ್ತಕಗಳು

ಆರ್‌ಆರ್‌ಬಿ ಎನ್‌ಟಿಪಿಟಿ ಪರೀಕ್ಷಾ ಪ್ಯಾಟ್ರನ್ ಹೇಗಿರುತ್ತೆ?

ಈ ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳು ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡಿ ತಯಾರಿ ನಡೆಸುವುದು ಒಳಿತು ಹಾಗೂ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಎರಡು ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಈ ಪರೀಕ್ಷೆಗಳನ್ನು ಅಭ್ಯರ್ಥಿಗಳ ಜನರಲ್ ಅವೇರ್‌ನೆಸ್, ಗಣಿತ ಮತ್ತು ಜನರಲ್ ಇಂಟಲಿಜೆನ್ಸ್ ರೀಸನಿಂಗ್ ಅನ್ನು ಪರೀಕ್ಷಿಸುವ ಉದ್ದೇಶದಿಂದ ಈ ಮೂರು ವಿಭಾಗಗಳನ್ನು ಒಳಗೊಂಡ ಪ್ರಶ್ನೆಗಳನ್ನು ನೀಡಲಾಗಿರುತ್ತದೆ.

ಎನ್‌ಟಿಪಿಸಿ ಹುದ್ದೆಗಳ ಪರೀಕ್ಷಾ ತಯಾರಿ ಪುಸ್ತಕಗಳು:

ಜನರಲ್ ಇಂಟಲಿಜೆನ್ಸ್ ಮತ್ತು ರೀಸನಿಂಗ್ ಪುಸ್ತಕಗಳು
1 ಭೂಪೇಂದ್ರ ಕುಮಾರ್ ಸಿಂಗ್ ರವರ ಲೂಸೆಂಟ್ ರೀಸನಿಂಗ್ ಪುಸ್ತಕ
2 ಆರ್.ಎಸ್. ಅಗರವಾಲ್ ರವರ ಮಾಡರ್ನ್ ಅಪ್ರೋಚ್ ಟು ವರ್ಬಲ್ ಮತ್ತು ನಾನ್-ವರ್ಬಲ್ ರೀಸನಿಂಗ್ ಪುಸ್ತಕ
3 ಎಂ.ಕೆ ಪಾಂಡೆ ರವರ ಅನಾಲಿಟಿಕಲ್ ರೀಸನಿಂಗ್

ಜನರಲ್ ಅವೇರ್‌ನೆಸ್
4 ಲೂಸೆಂಟ್ ಜನರಲ್ ನಾಲೆಡ್ಜ್
5 ಅರಿಹ್ಯಾಂಟ್ ಜನರಲ್ ನಾಲೆಡ್ಜ್
6 ಎಕ್ಸ್‌ಪರ್ಟ್ ಕಂಪಿಲೇಷನ್ಸ್ ರವರ ಅಬ್‌ಜೆಕ್ಟಿವ್ ಜನರಲ್ ಸೈನ್ಸ್
7 ಮನೋರಮ ಅಥವಾ ಇಂಡಿಯಾ ಇಯರ್ ಬುಕ್

<strong>ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ35,277 ಹುದ್ದೆಗಳಿಗೆ ಇಂದೇ ಅರ್ಜಿ ಹಾಕಿ</strong>ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ35,277 ಹುದ್ದೆಗಳಿಗೆ ಇಂದೇ ಅರ್ಜಿ ಹಾಕಿ

ಗಣಿತ
8 ಆರ್‌.ಎಸ್‌ ಅಗರ್‌ವಾಲ್ ರವರ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಫಾರ್ ಕಾಂಪಿಟೇಟಿವ್ ಎಕ್ಸಾಮಿನೇಷನ್ಸ್
9 ರಾಜೇಶ್ ವರ್ಮಾ- ಅರಿಹ್ಯಾಂಟರ್ ಪಬ್ಲಿಕೇಶನ್ಸ್ - ಫಾಸ್ಟ್ ಟ್ರ್ಯಾಕ್ ಅಬ್‌ಜೆಕ್ಟಿವ್ ಅರಿತ್‌ಮೆಟಿಕ್
10 ಎಂ ಥೈರಾ -ಬಿಎಸ್‌ಸಿ ಪಬ್ಲಿಕೇಶನ್ಸ್ -ಮ್ಯಾಜಿಕಲ್ ಬುಕ್ ಆನ್‌ ಕ್ವಿಕರ್ ಮ್ಯಾಥ್ಸ್

ಆರ್‌ಆರ್‌ಬಿ ಎನ್‌ಟಿಪಿಸಿ ಪುಸ್ತಕಗಳ ಆಯ್ಕೆಗೆ ಸಲಹೆಗಳು:

ಈ ಮೇಲೆ ನೀಡಲಾಗಿರುವ ಪುಸ್ತಕಗಳು ಬಹು ಪ್ರಮುಖ ಪುಸ್ತಕಗಳಾಗಿದ್ದು, ಈ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಭ್ಯರ್ಥಿಗಳು ಅಭ್ಯಾಸಕ್ಕಾಗಿ ಈ ಪುಸ್ತಕಗಳನ್ನು ಹೊರತುಪಡಿಸಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ನಿತರೆ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

* ಜನರಲ್ ಅವೇರ್‌ನೆಸ್ ವಿಷಯವು ವಿಸ್ತಾರವಾದ ಪಠ್ಯಕ್ರಮವನ್ನು ಹೊಂದಿದ್ದು, ಆರ್‌ಆರ್‌ಬಿ ಎನ್‌ಟಿಪಿಸಿ ಯ ಪರೀಕ್ಷೆಯಲ್ಲಿ ಯಾವೆಲ್ಲಾ ವಿಷಯಗಳು ಒಳಗೊಂಡಿದೆ ಮತ್ತು ಯಾವೆಲ್ಲಾ ವಿಷಯಗಳು ಒಳಗೊಂಡಿಲ್ಲ ಎನ್ನುವುದನ್ನು ಪರಿಶೀಲಿಸಿಕೊಳ್ಳಿ.

* ಅಭ್ಯರ್ಥಿಗಳು ಪ್ರಚಲಿತ ವಿದ್ಯಮಾನ ಮತ್ತು ಜನರಲ್ ಅವೇರ್‌ನೆಸ್ ಮಿಶ್ರಿತ ವಿಷಯಗಳನ್ನು ಹೊಂದಿರುವ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳದಿರುವುದು ಒಳಿತು.

* ಗಣಿತ ಸಂಬಂಧಪಟ್ಟ ವಿಷಯಗಳಿಗೆ ಪುಸ್ತಕಗಳನ್ನು ಆಯ್ಕೆ ಮಾಡುವಾಗ ಲೆಕ್ಕದ ಪರಿಷ್ಕೃತ ವಿಸ್ತರಣೆಯು ಹೇಗೆ ನೀಡಲಾಗಿದೆ ಮತ್ತು ಶಾರ್ಟ್ ಕಟ್ ಗಳ ಮೂಲಕ ವಿಸ್ತರಣೆ ನೀಡಲಾಗಿದೆಯೇ ಇಲ್ಲವೇ ಎಂದು ಪರಿಶೀಲಿಸಿಕೊಳ್ಳಿ.ಏಕೆಂದರೆ ಸಮಯ ಉಳಿತಾಯದ ಅಗತ್ಯ ಕೂಡ ಹೆಚ್ಚಿರುತ್ತದೆ.

*ಅಭ್ಯರ್ಥಿಗಳು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಮಾಡುವುದರ ಜೊತೆಗೆ ಅಲ್ಲಿ ಕೇಳಲಾಗಿರುವ ಪಠ್ಯಕ್ರಮವನ್ನು ಹೊಂದಿರುವ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.

* ಈ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಹೆಚ್ಚು ಅಭ್ಯಾಸ ಕೈಗೊಂಡಿದ್ದಲ್ಲಿ ಯಶಸ್ಸು ಲಭಿಸುವುದು.ಹಾಗಾಗಿ ಅಭ್ಯರ್ಥಿಗಳು ಗಣಿತ , ಜನರಲ್ ಇಂಟಲಿಜೆನ್ಸ್ ಮತ್ತು ರೀಸನಿಂಗ್ ವಿಷಯಗಳನ್ನು ಒಳಗೊಂಡ ಪುಸ್ತಕಗಳಲ್ಲಿನ ಸ್ಯಾಂಪಲ್ ಮತ್ತು ಪ್ರಾಕ್ಟೀಸ್ ಪೇಪರ್ ಗಳ ಅಧ್ಯಯನದಲ್ಲಿ ಕೈಗೊಂಡಲ್ಲಿ ಹೆಚ್ಚು ಉಪಯುಕ್ತವಾಗುವುದು.

For Quick Alerts
ALLOW NOTIFICATIONS  
For Daily Alerts

English summary
Here we are giving the list of top 10 books for RRB NTPC preparations.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X