
ಕ್ರಿಕೆಟ್ ಆಟ ಎಂದಾಕ್ಷಣ ಕಣ್ಣ ಮುಂದೆಯೇ ಎದುರಾಗೋ ವ್ಯಕ್ತಿ ಅಂದರೆ ವಿಶ್ವ ಕ್ರಿಕೆಟ್ ಮಾಂತ್ರಿಕ ಸಚಿನ್ ತಂಡೂಲ್ಕರ್. 48ನೇ ವರ್ಷದ ಹುಟ್ಟು ಹಬ್ಬದ ಹೊಸ್ತಿಲಲ್ಲಿ ಇರುವ ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ನಾವು ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಹಾಗಾದ್ರೆ ಅವರ ಬಗ್ಗೆ ನಿಮಗೆಷ್ಟ ಗೊತ್ತು ಎಂದು ತಿಳಿಯೋಣ ಬನ್ನಿ.
1. ಸಚಿನ್ ತೆಂಡೂಲ್ಕರ್ ಅವರು ತಮ್ಮ ಮೊದಲ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಿದ್ದು ಯಾವಾಗ?
ಅ) ಅಕ್ಟೋಬರ್ 10,1988
ಬಿ) ನವೆಂಬರ್ 11,1988
ಸಿ) ಅಕ್ಟೋಬರ್ 20,1989
ಡಿ) ನವೆಂಬರ್ 15,1989
ಉತ್ತರ: ಡಿ
ಸಚಿನ್ ತೆಂಡೂಲ್ಕರ್ ಅವರು ನವೆಂಬರ್ 15, 1989 ರಂದು ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಿದ್ದಾರೆ.
2. ಸಚಿನ್ ತೆಂಡೂಲ್ಕರ್ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದು ?
ಅ) ನವೆಂಬರ್ 22,1989
ಬಿ) ಡಿಸೆಂಬರ್ 5,1989
ಸಿ) ಡಿಸೆಂಬರ್ 18,1989
ಡಿ) ಡಿಸೆಂಬರ್ 28,1989
ಉತ್ತರ: ಸಿ
ಸಚಿನ್ ತೆಂಡೂಲ್ಕರ್ ತಮ್ಮ ಏಕದಿನ ವೃತ್ತಿಜೀವನವನ್ನು ಡಿಸೆಂಬರ್ 18, 1989 ರಂದು ಪಾಕಿಸ್ತಾನದ ವಿರುದ್ಧ ಗುಜ್ರಾನ್ವಾಲಾದಲ್ಲಿ ಪ್ರಾರಂಭಿಸಿದರು.
3. ಸಚಿನ್ ತೆಂಡೂಲ್ಕರ್ ಅವರು ಸತತ ಎಷ್ಟು ಏಕದಿನ ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದಾರೆ?
ಅ) 180
ಬಿ) 183
ಸಿ) 185
ಡಿ) 188
ಉತ್ತರ: ಸಿ
ಸಚಿನ್ ತೆಂಡೂಲ್ಕರ್ ಸತತ 185 ಏಕದಿನ ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದಾರೆ.
4. ಸಚಿನ್ ತೆಂಡೂಲ್ಕರ್ ಅವರು ಅಂಜಲಿಯವರನ್ನು ಮದುವೆಯಾಗಿದ್ದು ಯಾವಾಗ?
ಅ) ಮಾರ್ಚ್ 24,1995
ಬಿ) ಏಪ್ರಿಲ್ 24,1995
ಸಿ) ಮೇ 24,1995
ಡಿ) ಜೂನ್ 24,1995
ಉತ್ತರ: ಸಿ
ಸಚಿನ್ ತೆಂಡೂಲ್ಕರ್ ಅವರು ಮೇ 24, 1995 ರಂದು ಪ್ರಸಿದ್ಧ ಕೈಗಾರಿಕೋದ್ಯಮಿ ಅಶೋಕ್ ಮೆಹ್ತಾ ಅವರ ಪುತ್ರಿ ಅಂಜಲಿಯನ್ನು ವಿವಾಹವಾದರು.
5. ಸಚಿನ್ ತೆಂಡೂಲ್ಕರ್ ಎಷ್ಟು ಏಕದಿನ ಪಂದ್ಯಗಳನ್ನು ಆಡಿದ್ದಾರೆ?
ಅ) 400
ಬಿ) 423
ಸಿ) 452
ಡಿ) 463
ಉತ್ತರ: ಡಿ
ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
6. ಏಕದಿನ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ ತೆಗೆದುಕೊಂಡ ಒಟ್ಟು ವಿಕೆಟ್‌ಗಳ ಸಂಖ್ಯೆ ಎಷ್ಟು ?
ಅ)120
ಬಿ)135
ಸಿ)154
ಡಿ)161
ಉತ್ತರ: ಸಿ
ಕ್ರಿಕೆಟ್ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರು ತೆಗೆದುಕೊಂಡ ಒಟ್ಟು ವಿಕೆಟ್‌ಗಳ ಸಂಖ್ಯೆ 154
7. ಸಚಿನ್ ತೆಂಡೂಲ್ಕರ್ ಅವರ ತರಬೇತುದಾರರ ಹೆಸರೇನು?
ಅ) ರಾಹುಲ್ ಸಿನ್ಹಾ
ಬಿ) ರಮಾಕಾಂತ್ ಅಚ್ರೇಕರ್
ಸಿ) ದಿಲೀಪ್ ಸರ್ದೇಸಾಯ್
ಡಿ) ಯಾವುದೂ ಅಲ್ಲ
ಉತ್ತರ: ಬಿ
ರಮಾಕಾಂತ್ ಅಚ್ರೇಕರ್ ಅವರು ಸಚಿನ್ ತೆಂಡೂಲ್ಕರ್ ಅವರ ತರಬೇತುದಾರರಾಗಿದ್ದರು.
8. ಯಾವ ದೇಶದ ವಿರುದ್ಧ, ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಟೆಸ್ಟ್ ಶತಕವನ್ನು ಗಳಿಸಿದರು?
ಅ) ಇಂಗ್ಲ್ಯಾಂಡ್
ಬಿ) ಪಾಕಿಸ್ತಾನ
ಸಿ) ಆಸ್ಟ್ರೇಲಿಯಾ
ಡಿ) ನ್ಯೂಜಿಲ್ಯಾಂಡ್
ಉತ್ತರ: ಎ
ಸಚಿನ್ ತೆಂಡೂಲ್ಕರ್ ಅವರು ಆಗಸ್ಟ್ 14, 1990 ರಂದು ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ನಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಟೆಸ್ಟ್ ಶತಕವನ್ನು ಗಳಿಸಿದರು.
9. ಸಚಿನ್ ತೆಂಡೂಲ್ಕರ್ ಅವರು ದಕ್ಷಿಣ ಏಷ್ಯಾದ ಯುನಿಸೆಫ್‌ನ ಮೊದಲ ಬ್ರಾಂಡ್ ರಾಯಭಾರಿಯಾಗಿದ್ದು ಯಾವಾಗ?
ಅ) ಜನವರಿ 28,2012
ಬಿ) ನವೆಂಬರ್ 18,2013
ಸಿ) ನವೆಂಬರ್ 28,2013
ಡಿ) ಡಿಸೆಂಬರ್ 16,2013
ಉತ್ತರ: ಸಿ
ನವೆಂಬರ್ 28, 2013 ರಂದು, ಸಚಿನ್ ತೆಂಡೂಲ್ಕರ್ ದಕ್ಷಿಣ ಏಷ್ಯಾದ ಯುನಿಸೆಫ್‌ನ ಮೊದಲ ಬ್ರಾಂಡ್ ರಾಯಭಾರಿಯಾದರು.
10. ಸಚಿನ್ ತೆಂಡೂಲ್ಕರ್ ಅವರು "ಅರ್ಜುನ ಪ್ರಶಸ್ತಿ" ಪಡೆದದ್ದು ಯಾವಾಗ ?
ಅ) 1990
ಬಿ) 1992
ಸಿ) 1994
ಡಿ) 1997
ಉತ್ತರ: ಸಿ
ಸಚಿನ್ ತೆಂಡೂಲ್ಕರ್ ಅವರು 1994 ರಲ್ಲಿ "ಅತ್ಯುತ್ತಮ ಕ್ರೀಡಾ ಸಾಧನೆ" ಗಾಗಿ "ಅರ್ಜುನ ಪ್ರಶಸ್ತಿ" ಪಡೆದರು.