SBI Clerk Recruitment 2021 : ಎಸ್‌ಬಿಐ ಪರೀಕ್ಷೆ ಹೇಗಿರತ್ತೆ ? ಆಯ್ಕೆ ಪ್ರಕ್ರಿಯೆ ಹೇಗಿರತ್ತೆ ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2021 ರ ಏಪ್ರಿಲ್ 27 ರಿಂದ ಎಸ್‌ಬಿಐ ಕ್ಲರ್ಕ್ ನೇಮಕಾತಿ 2021 ರ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತರೆಲ್ಲರೂ ಎಸ್‌ಬಿಐನ ಅಧಿಕೃತ ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಎಸ್‌ಬಿಐ ಕ್ಲರ್ಕ್ ನೇಮಕಾತಿ: ಪರೀಕ್ಷೆ ಮಾದರಿ ಹೇಗಿದೆ ? ಇಲ್ಲಿದೆ ಮಾಹಿತಿ

ಎಸ್‌ಬಿಐ 5000ಕ್ಕೂ ಅಧಿಕ ಜೂನಿಯರ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಈ ಹುದ್ದೆಗಳಿಗೆ ಪ್ರಾಥಮಿಕ ಪರೀಕ್ಷೆಯನ್ನು ಜೂನ್ 2021 ರಲ್ಲಿ ನಡೆಸಲಾಗುವುದು. ಎಸ್‌ಬಿಐ ನೇಮಕಾತಿಯ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕ್ಲರ್ಕ್ ಪರೀಕ್ಷೆಯ ಮಾದರಿ ಮತ್ತು ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂದು ಇಲ್ಲಿ ತಿಳಿಯಿರಿ.

ಎಸ್‌ಬಿಐ ಕ್ಲರ್ಕ್ ನೇಮಕಾತಿ: ಪರೀಕ್ಷೆ ಮಾದರಿ ಹೇಗಿದೆ ? ಇಲ್ಲಿದೆ ಮಾಹಿತಿ

ಆಯ್ಕೆ ಪ್ರಕ್ರಿಯೆ:

SBI Recruitment 2021: 5237 ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನSBI Recruitment 2021: 5237 ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್‌ಬಿಐ ಕ್ಲರ್ಕ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ (ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆ) ಮತ್ತು ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ಮುಖ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಭಾಷಾ ಪರೀಕ್ಷೆಗೆ ಕರೆಯಲಾಗುತ್ತದೆ.

ಆದಾಗ್ಯೂ ಆಯ್ಕೆಗೆ ಅರ್ಹತೆ ಪಡೆದವರು 10 ಅಥವಾ 12 ನೇ ತರಗತಿಯ ಅಂಕ ಪಟ್ಟಿ / ಪ್ರಮಾಣಪತ್ರವನ್ನು ನಿರ್ಧಿಷ್ಟಪಡಿಸಿದ ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡಿದ ಸಾಕ್ಷ್ಯವನ್ನು ನೀಡಬೇಕಿರುತ್ತದೆ. ಅವರು ಯಾವುದೇ ಭಾಷಾ ಪರೀಕ್ಷೆಗೆ ಒಳಪಡುವುದಿಲ್ಲ. ಇತರೆ ಸಂದರ್ಭದಲ್ಲಿ (ಆಯ್ಕೆಗೆ ಅರ್ಹತೆ), ತಾತ್ಕಾಲಿಕ ಆಯ್ಕೆಯ ನಂತರ ನೇಮಕಾತಿಗೆ ಒಳಪಡುವ ಮೊದಲು ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷಾ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಎಸ್‌ಬಿಐ ಕ್ಲರ್ಕ್ ನೇಮಕಾತಿ: ಪರೀಕ್ಷೆ ಮಾದರಿ ಹೇಗಿದೆ ? ಇಲ್ಲಿದೆ ಮಾಹಿತಿ

ಪರೀಕ್ಷೆಯ ಮಾದರಿ:

ಫೇಸ್ I: ಪ್ರಾಥಮಿಕ ಪರೀಕ್ಷೆ: ಆನ್‌ಲೈನ್‌ನಲ್ಲಿ 100 ಅಂಕಗಳಿಗೆ ಆಬ್ಜೆಕ್ಟಿವ್ ಟೆಸ್ಟ್‌ಗಳನ್ನು ಒಳಗೊಂಡಿರುವ ಆನ್‌ಲೈನ್ ಪ್ರಾಥಮಿಕ ಪರೀಕ್ಷೆಯನ್ನು ನಡೆಸಲಾಗುವುದು. ಈ ಪರೀಕ್ಷೆಯು 3 ವಿಭಾಗಗಳನ್ನು ಒಳಗೊಂಡಿರುವ 1-ಗಂಟೆ ಅವಧಿಯನ್ನು ನೀಡಲಾಗಿರುತ್ತದೆ. ಆಬ್ಜೆಕ್ಟಿವ್ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ ನಕಾರಾತ್ಮಕ ಅಂಕಗಳು ಕೂಡ ಇರುತ್ತವೆ.

ಪರೀಕ್ಷೆಯ ಹೆಸರು ಪ್ರಶ್ನೆಗಳ ಸಂಖ್ಯೆ ಗರಿಷ್ಠ ಅಂಕಗಳು ಅವಧಿ
ಇಂಗ್ಲಿಷ್ ಭಾಷೆ 30 30 20 ನಿಮಿಷಗಳು
ಸಂಖ್ಯಾ ಸಾಮರ್ಥ್ಯ 35 35 20 ನಿಮಿಷಗಳು
ತಾರ್ಕಿಕ ಸಾಮರ್ಥ್ಯ 35 35 20 ನಿಮಿಷಗಳು
ಒಟ್ಟು 100 100 1 ಗಂಟೆ

ಫೇಸ್ - II: ಮುಖ್ಯ ಪರೀಕ್ಷೆ: ಮುಖ್ಯ ಪರೀಕ್ಷೆಯು 2 ಗಂಟೆ 40 ನಿಮಿಷಗಳ ಅವಧಿಯದ್ದಾಗಿರುತ್ತದೆ. ಒಟ್ಟು ಅಂಕಗಳು 200 ಅಂಕಗಳನ್ನು ಒಳಗೊಂಡಿರುವ ಪರೀಕ್ಷೆ ಇದಾಗಿದೆ. 4 ವಿಭಾಗಗಳಲ್ಲಿ ಒಟ್ಟು 190 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಜನರಲ್ ಇಂಗ್ಲಿಷ್ ಪರೀಕ್ಷೆಯನ್ನು ಹೊರತುಪಡಿಸಿ ವಸ್ತುನಿಷ್ಠ ಪರೀಕ್ಷೆಗಳಲ್ಲಿನ ಪ್ರಶ್ನೆಗಳು ದ್ವಿಭಾಷಾ ಅಂದರೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರುತ್ತವೆ. ಆಬ್ಜೆಕ್ಟಿವ್ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ ನಕಾರಾತ್ಮಕ ಅಂಕಗಳು ಇರುತ್ತವೆ.

ಪರೀಕ್ಷೆಯ ಹೆಸರು ಪ್ರಶ್ನೆಗಳ ಸಂಖ್ಯೆ ಗರಿಷ್ಠ ಅಂಕಗಳು ಅವಧಿ
ಸಾಮಾನ್ಯ / ಆರ್ಥಿಕ ಜಾಗೃತಿ 50 50 35
ಸಾಮಾನ್ಯ ಇಂಗ್ಲಿಷ್ 40 40 35
ಪರಿಮಾಣಾತ್ಮಕ ಆಪ್ಟಿಟ್ಯೂಡ್ 50 50 45
ತಾರ್ಕಿಕ ಸಾಮರ್ಥ್ಯ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್ 50 60 45
ಒಟ್ಟು 190 200 2 ಗಂಟೆ 40 ನಿಮಿಷಗಳು

For Quick Alerts
ALLOW NOTIFICATIONS  
For Daily Alerts

English summary
SBI clerk recruitment 2021 notification released. Here is the exam pattern and selection process details.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X