ಎಸ್‌ಬಿಐ ಪ್ರೊಬೆಷನರಿ ಆಫೀಸರ್ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗೋಕೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2000 ಪ್ರೊಬೆಷನರಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಏಪ್ರಿಲ್ 22,2019 ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳ ನೇಮಕಾತಿಗಾಗಿ ಜುಲೈ 20 ರಂದು ಪ್ರಮುಖ ಪರೀಕ್ಷೆಯು ನಡೆಯುತ್ತಿದೆ. ಈ ಭಾರಿ 25 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಸಾಧ್ಯತೆಯಿದ್ದು ಅಭ್ಯರ್ಥಿಗಳು ಈ ಕಾಂಪಿಟೇಶನ್ ಬಗೆಗೆ ಆಲೋಚಿಸಬೇಕಿದೆ.

ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್‌ ಪರೀಕ್ಷೆಗೆ ಒಂದೇ ತಿಂಗಳಲ್ಲಿ ತಯಾರಿ ನಡೆಸುವುದು ಹೇಗೆ? ಇಲ್ಲಿದೆ ನೋಡಿ

ಕಳೆದ ಭಾರಿಗಿಂತ ಈ ಭಾರಿ ಅಧಿಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದು ಈ ಕಾಂಪಿಟೇಷನ್ ನಡುವೆ ಪಾಸ್‌ ಆಗುವುದು ಒಂದೆಡೆ ಅದೃಷ್ಟವೂ ಹೌದು ಮತ್ತು ಇನ್ನೊಂದೆಡೆ ಶ್ರಮವಹಿಸಿ ಸಿದ್ಧತೆ ನಡೆಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದೇ ಹೇಳಬಹುದು. ಹಾಗಾಗಿ ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳಿಗೆ ಇಲ್ಲಿವೆ ನಮ್ಮ ಕಿವಿಮಾತು.

 ಎಸ್‌ಬಿಐ ನೇಮಕಾತಿ ಪಿಓ ಹುದ್ದೆಗಳ ಪರೀಕ್ಷಾ ತಯಾರಿಗೆ ಸಲಹೆ

 

ಪರೀಕ್ಷಾ ಪ್ಯಾಟ್ರನ್‌:

ಪ್ರೊಬೆಷನರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲು ಪ್ರಿಲಿಮಿನರಿ ಮತ್ತು ಮೈನ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯು 3 ಪ್ಯಾಟ್ರನ್‌ ಅನ್ನು ಒಳಗೊಂಡಿರುತ್ತದೆ ಅವುಗಳೆಂದರೆ ರೀಸನಿಂಗ್ ಎಬಿಲಿಟಿ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಮತ್ತು ಇಂಗ್ಲೀಷ್ ಲಾಂಗ್ವೇಜ್ ಸೆಕ್ಷನ್‌ಗಳು. ರೀಸನಿಂಗ್ ಸೆಕ್ಷನ್ ಅಭ್ಯರ್ಥಿಗಳಿಗೆ ಬಹಳ ಸುಲಭವಾಗಿ ಅಂಕಗಳನ್ನು ಪಡೆಯಲು ಮತ್ತು ತುಂಬಾನೆ ಚಾಲೆಂಜಿಂಗ್ ಹಾಗೂ ಆಸಕ್ತಿದಾಯವಾಗಿರುತ್ತದೆ. ಹಾಗಾಗಿ ಈ ಪ್ಯಾಟ್ರನ್ ಅನುಸಾರ ಅಭ್ಯರ್ಥಿಗಳು ಸಿಲ್ಲಬಸ್ ಬಗೆಗೆ ಹೆಚ್ಚಿನದಾಗಿ ಅಧ್ಯಯನದಲ್ಲಿ ಕೈಗೊಳ್ಳುವುದು ಒಳಿತು.

ಪರೀಕ್ಷಾ ಮಾದರಿಯೊಂದಿಗೆ ಅಧ್ಯಯನ ನಡೆಸಿ:

ಅಭ್ಯರ್ಥಿಗಳು ರೀಸನಿಂಗ್ ನಲ್ಲಿ ಹೆಚ್ಚು ಜ್ಞಾನವುಳ್ಳವರಾಗಿದ್ದಲ್ಲಿ ಇನ್ನಷ್ಟು ಅಧ್ಯಯನ ನಡೆಸಿ ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳುವುದು ಒಳಿತು. ಒಂದುವೇಳೆ ರೀಸನಿಂಗ್ ನಲ್ಲಿ ಹೆಚ್ಚಿನ ಜ್ಞಾನವನ್ನು ಹೊಂದಿರದಿದ್ದಲ್ಲಿ ಅಭ್ಯರ್ಥಿಗಳು ಈ ಬಗೆಗೆ ಹೆಚ್ಚು ತಯಾರಿಯನ್ನು ನಡೆಸಿ. ಸಾಮಾನ್ಯವಾಗಿ ದಿನಕ್ಕೆ 2 ರಿಂದ 3 ಭಾರಿಯಾದರೂ ಮಾದರಿ ಪತ್ರಿಕೆಗಳನ್ನು ಸಾಲ್ವ್ ಮಾಡಿ ಇದರಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಜೊತೆಗೆ ಪರೀಕ್ಷೆಯನ್ನು ಎದುರಿಸುವ ಸುಲಭ ವಿಧಾನವನ್ನು ಅರಿಯಬಹುದು.

ಸ್ಟಡಿ ಮೆಟೀರಿಯಲ್ ಸಂಗ್ರಹಿಸಿ:

ಅಭ್ಯರ್ಥಿಗಳು ದಿನಕ್ಕೆ ಒಂದೆರಡು ಮಾದರಿ ಪತ್ರಿಕೆಯನ್ನು ಸಾಲ್ವ್ ಮಾಡುವುದರ ಜೊತೆಗೆ ಮಾಕ್ ಟೆಸ್ಟ್ ತೆಗೆದುಕೊಳ್ಳುವುದು ಒಳಿತು. ಅಭ್ಯರ್ಥಿಗಳು ಪರೀಕ್ಷಾ ತಯಾರಿಗೆ ಬೇಕಿರುವ ಸ್ಟಡಿ ಮೆಟೀರಿಯಲ್‌ಗಳನ್ನು ಸಂಗ್ರಹಿಸಿಕೊಂಡು ಓದಿ. ನಿಮ್ಮ ಬಳಿ ಈಗಾಗಲೇ ಇರುವ ಪುಸ್ತಕಗಳನ್ನು ಮಾತ್ರ ಓದಿ ಬದಲಿಗೆ ಯಾವುದೇ ಹೊಸ ಪುಸ್ತಕಗಳನ್ನು ಕೊಳ್ಳುವ ಬಗೆಗೆ ಆಲೋಚಿಸಿ ಸಮಯ ವ್ಯರ್ಥ ಮಾಡದಿರಿ.

ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಸಿಸಿ:

ಪರೀಕ್ಷೆಯನ್ನು ತೆಗೆದುಕೊಳ್ಳಲು ಸಿದ್ಧರಿರುವ ಯಾವುದೇ ಅಭ್ಯರ್ಥಿಗಳು ಮೊದಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಕೂಲಂಕುಶವಾಗಿ ಅಭ್ಯಸಿಸಿ ಇದರಿಂದ ಪರೀಕ್ಷಾ ಪ್ಯಾಟ್ರನ್ , ಸಿಲ್ಲಬಸ್ ಮತ್ತು ಪರೀಕ್ಷೆಯಲ್ಲಿ ಕೇಳಲಾಗಿರುವ ಪ್ರಶ್ನೆಯ ಪರಿಯನ್ನು ಅರ್ಥೈಸಿಕೊಂಡು ಪರೀಕ್ಷೆಯನ್ನು ಎದುರಿಸಲು ಸುಲಭವಾಗುವುದು.

 

ಎಸ್‌ಬಿಐ ನೇಮಕಾತಿ 2000 ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಟೈಂ ಟೇಬಲ್ ಹಾಕಿಕೊಳ್ಳಿ:

ಪ್ರೊಬೆಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆಗೆ ಇನ್ನೇನು ಹೆಚ್ಚೆಂದರೆ 2 ತಿಂಗಳು ಬಾಕಿ ಇರಬಹುದು ಹಾಗಾಗಿ ಅಭ್ಯರ್ಥಿಗಳು ಪ್ರಿಲಿಮಿನರಿ ಮತ್ತು ಮೇನ್ ಪರೀಕ್ಷೆಗೆ ಏನೆಲ್ಲಾ ಸಿಲಬಸ್ ಇವೆಯೋ ಅಷ್ಟನ್ನೂ ಈ ಎರಡು ತಿಂಗಳಲ್ಲೇ ಓದಲು ಟೈಂ ಟೇಬಲ್ ಹಾಕಿಕೊಳ್ಳಿ ಮತ್ತು ಸಮಯ ವ್ಯರ್ಥ ಆಗದ ಹಾಗೆ ಪ್ಲಾನ್ ಮಾಡಿಕೊಳ್ಳಿ. ಪರೀಕ್ಷಾ ಸಂಧರ್ಭದಲ್ಲಿ ಸಮಯದ ಪ್ರಾಮುಖ್ಯತೆ ಅತ್ಯಗತ್ಯ.

ಸಬ್ಜೆಕ್ಟ್ ವೈಸ್ ಪ್ರಿಪರೇಶನ್:

ಅಭ್ಯರ್ಥಿಗಳು ಮೇಲೆ ತಿಳಿಸಿರುವಂತೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡ ನಂತರ

ಸಬ್ಜೆಕ್ಟ್ ವೈಸ್ ಅಧ್ಯಯನವನ್ನು ಮಾಡಲು ಪ್ರಾರಂಭಿಸಿ. ಪ್ರಿಲಿಮಿನರಿ ಪರೀಕ್ಷೆಗೆ ಸಂಪೂರ್ಣ ಸಿದ್ಧತೆಯನ್ನು ಮಾಡಿಕೊಳ್ಳಿ ಕಾರಣ ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದಲ್ಲಿ ಮಾತ್ರ ಮುಂದಿನ ಸುತ್ತಿಗೆ ಹೋಗಲು ಅರ್ಹರಾಗುತ್ತೀರಿ. ಹಾಗಾಗಿ ಅಭ್ಯರ್ಥಿಗಳು ಪರೀಕ್ಷೆಗೆ ಬೇಕಿರುವ ಸಂಪೂರ್ಣ ಸಿದ್ಧತೆಯನ್ನು ಮಾಡಿಕೊಳ್ಳಿ.

ಈ ಎಲ್ಲಾ ಸಲಹೆಗಳನ್ನು ಪಾಲಿಸಿ ಉತ್ತಮ ರೀತಿಯಲ್ಲಿ ತಯಾರಿಯನ್ನು ನಡೆಸಿ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಆತಂಕ ಮತ್ತು ದ್ವಂದ್ವಗಳಿಗೆ ಒಳಗಾಗದೆ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಎದುರಿಸಿ ಆಗ ಯಶಸ್ಸು ಖಂಡಿತವಾಗಿ ನಿಮ್ಮದಾಗುವುದು.

For Quick Alerts
ALLOW NOTIFICATIONS  
For Daily Alerts

English summary
Here we sharing the preparation tips for SBI Probationary Officer Posts exam. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X