ಹರಳುಗಳ ಸ್ಟಡಿಯಲ್ಲಿ ಆಸಕ್ತಿ ಇದೆಯಾ, ಹಾಗಿದ್ರೆ ನೀವ್ಯಾಕೆ ಜೆಮಾಲಾಜಿಸ್ಟ್ ಆಗಬಾರದು?

By Kavya

ಹರಳುಗಳು ಘನತೆ, ಅಧಿಕಾರ, ಸಮೃದ್ಧ ಮತ್ತು ವೈಭವದ ಸಂಕೇತ. ಜಗತ್ತಿನ ಅಮೂಲ್ಯದ ಅಂಶಗಳಲ್ಲಿ ರತ್ನ ಕೂಡಾ ಒಂದು. ಚಿನ್ನ ಹಾಗೂ ಪ್ಲಾಟಿನಂ ಗೆ ಸಮನಾಗಿ ಈ ಹರಳುಗಳು ಇವೆ. ವಜ್ರ, ಎಮರಾಲ್ಡ್, ರೂಬಿಸ್ ಸೇರಿದಂತೆ ಹಲವಾರು ಬೆಲೆಬಾಳುವ ಹರಳುಗಳನ್ನ ನೀವು ಕಾಣಬಹುದು.

ಹರಳುಗಳ ಸ್ಟಡಿಯಲ್ಲಿ ಆಸಕ್ತಿ ಇದೆಯಾ, ಹಾಗಿದ್ರೆ ನೀವ್ಯಾಕೆ ಜೆಮಾಲಾಜಿಸ್ಟ್ ಆಗಬಾರದು?

 

ಇತ್ತೀಚೆಗಿನ ದಿನಗಳಲ್ಲಿ ಜೆಮಾಲಾಜಿ ಎಂಬ ಪದ ಬೆಳಕಿಗೆ ಬಂದಿದ್ದು, ಕ್ರಮೇಣ ಅವು ಜಗತ್ತಿನಾದ್ಯಂತ ಫೇಮಸ್ ಆಗುತ್ತಾ ಬಂತು. ಜಿಮಾಲಾಜಿ ಎಂಬುವುದು ಜೆಮ್ಸ್ ಗಳ ಸ್ಟಡಿಯಾಗಿದೆ. ಇದೊಂದು ಹೊಸ ರೀತಿಯ ಅಧ್ಯಯನ ಆಗಿದೆ. ಈ ಯೂನಿಕ್ ಅಧ್ಯಯನವು ಕೇವಲ ಲಾಬರೋಟರಿಸ್ ಗೆ ಸ್ಥೀಮಿತವಾಗಿರದೇ ಹರಳುಗಳನ್ನ ಗುರುತಿಸುವುದು ಹಾಗೂ ಮೌಲ್ಯಮಾಪನ ಮಾಡುವುದು ಕೂಡಾ ಆಗಿದೆ. ಯಾವ ಅಭ್ಯರ್ಥಿಗಳು ಜೆಮಾಲಾಜಿ ಕೋರ್ಸ್ ಸರ್ಟಿಫಿಕೆಟ್ ಪಡೆದುಕೊಂಡಿರುತ್ತಾರೋ ಅವರಿಗೆ ಜಗತ್ತಿನಾದ್ಯಂತ ಕೆರಿಯರ್ ಅವಕಾಶಗಳು ಇರುತ್ತದೆ. ಜೆಮಾಲಾಜಿ ಕೆರಿಯರ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ

ಜೆಮಾಲಾಜಿಸ್ಟ್ ಆಗುವುದು ಹೇಗೆ

ಜೆಮಾಲಾಜಿಸ್ಟ್ ಆಗುವುದು ಹೇಗೆ

ಜೆಮಾಲಾಜಿಸ್ಟ್ ನೀವಾಗಬೇಕೆಂದಿದ್ದರೆ ಹರಳುಗಳ ಬಗ್ಗೆ ಶಾರ್ಟ್ ಟರ್ಮ್ ಕೋರ್ಸ್ ಮಾಡಿರಬೇಕು ಇಲ್ಲ ಈ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ 12 ನೇ ತರಗತಿ ಪಾಸು ಮಾಡಿರಬೇಕು. ಫಸ್ಟ್ ಲೆವೆಲ್ ಕೋರ್ಸ್ ಗಳು ಹೆಚ್ಚಿನ ಕಡೆ ಲಭ್ಯವಿದೆ. ಈ ಕೋರ್ಸ್ ನಲ್ಲಿ ವಿವಿಧ ಹರಳುಗಳ ಗುರುತಿಸುವಿಕೆ ಸೇರಿದಂತೆ ಹರಳುಗಳ ಬಗ್ಗೆ ಮೂಲಭೂತ ಮಾಹಿತಿಗಳನ್ನ ನೀಡಲಾಗುತ್ತದೆ.

ಈ ಶಾರ್ಟ್ ಟರ್ಮ್ ಕೋರ್ಸ್ ಬಿಟ್ರೆ ಅಭ್ಯರ್ಥಿಗಳು ಜೆಮಾಲಾಜಿ ಸಬ್‌ಜೆಕ್ಟ್ ನಲ್ಲಿ ಡಿಪ್ಲೋಮಾ ಕೋರ್ಸ್ ಕೂಡಾ ಮಾಡಬಹುದು. ಇನ್ನು ಡಿಪ್ಲೋಮಾ ಕೋರ್ಸ್ ಗಳ ಅವಧಿ ಆಯಾಯಾ ಶಿಕ್ಷಣ ಸಂಸ್ಥೆಗೆ ತಕ್ಕಂತೆ ವಿಭಿನ್ನವಾಗಿರುತ್ತದೆ. ಡಿಪ್ಲೋಮಾ ಕೋರ್ಸ್ ನಲ್ಲಿ ಟೆಕ್ನಿಕ್ ಮತ್ತು ಜಿಮಾಲಾಜಿ ಇಂಡಸ್ಟ್ರಿ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಜೆಮಾಲಾಜಿ ಕೋರ್ಸ್ ಗಳು

ಜೆಮಾಲಾಜಿ ಕೋರ್ಸ್ ಗಳು

ಜೆಮಾಲಾಜಿ ಕೋರ್ಸ್ ಗೆ ಸಂಬಂಧಪಟ್ಟಂತೆ ಡಿಪ್ಲೋಮಾ, ಶಾರ್ಟ್ ಟರ್ಮ್ ಹಾಗೂ ಸರ್ಟಿಪಿಕೇಶನ್ ಸೇರಿದಂತೆ ಹಲವಾರು ಕೋರ್ಸ್ ಗಳು ನಮ್ಮಲ್ಲಿ ಇವೆ. ಅವುಗಳಲ್ಲಿ ಕೆಲವು ಫೇಮಸ್ ಕೋರ್ಸ್ ಗಳ ಪಟ್ಟಿ ಹೀಗಿದೆ

  • ಜೆಮ್ ಐಡೆಂಟಿಫಿಕೇಶನ್ ಸರ್ಟಿಫಿಕೇಟ್
  • ಡೈಮಂಡ್ ಗ್ರೇಡಿಂಗ್ ಸರ್ಟಿಫಿಕೇಟ್
  • ಸರ್ಟಿಫಿಕೇಟ್ ಇನ್ ಕಟ್ ಡಿಸೈನ್ ಮತ್ತು ಅನಾಲಿಸಿಸ್
  • ಸರ್ಟಿಫಿಕೇಟ್ ಇನ್ ಪರ್ಲ್ ಗ್ರೇಡಿಂಗ್
  • ಸರ್ಟಿಫಿಕೇಟ್ ಇನ್ ಪಾಲಿಶ್ಡ್ ಡೈಮಂಡ್ ಗ್ರೇಡಿಂಗ್
  • ಡಿಪ್ಲೋಮಾ ಇನ್ ಜೆಮಾಲಾಜಿ
  • ಡಿಪ್ಲೋಮಾ ಇನ್ ಜೆಮ್ ಡಿಸೈನಿಂಗ್
ಜೆಮಾಲಾಜಿ ಕೋರ್ಸ್ ನಲ್ಲಿ ಏನೆಲ್ಲಾ ಕಲೆಯಬಹುದು
 

ಜೆಮಾಲಾಜಿ ಕೋರ್ಸ್ ನಲ್ಲಿ ಏನೆಲ್ಲಾ ಕಲೆಯಬಹುದು

ಜೆಮಾಲಾಜಿ ಕೋರ್ಸ್ ನ್ನ ಯಾರೆಲ್ಲಾ ಕೈಗೆತ್ತಿಕೊಳ್ಳುತ್ತಾರೋ ಅವರು, ಹರಳುಗಳ ಬಣ್ಣ ಹಾಗೂ ಗುರುತಿಸುವಿಕೆಯನ್ನ ತಿಳಿಯಬಹುದು. ನೈಸರ್ಗಿಕವಾಗಿ ಸಿಗುವ ರತ್ನಗಳ ಬಗ್ಗೆಯೂ ಕೂಡಾ ಕಲಿತುಕೊಳ್ಳಬಹುದು. ಅಷ್ಟೇ ಅಲ್ಲ ಆಭರಣಗಳ ಡಿಸೈನಿಂಗ್, ಕಂಪ್ಯೂಟರ್ ಡಿಸೈನ್ , ಟ್ರೆಡಿಶನ್ ಹಾಗೂ ಮಾರ್ಡನ್ ಟೆಕ್ನಿಕ್ಸ್ ಗಳಿಂದ ಆಭರಣಗಳ ತಯಾರಿಕೆ ಬಗ್ಗೆಯೂ ಕಲಿತುಕೊಳ್ಳಬಹುದು.

ಜೆಮಾಲಾಜಿಯಲ್ಲಿ ಕೆರಿಯರ್ ಲೈಫ್ ಹೀಗಿದೆ

ಜೆಮಾಲಾಜಿಯಲ್ಲಿ ಕೆರಿಯರ್ ಲೈಫ್ ಹೀಗಿದೆ

ಯಾರ ಬಳಿ ಜೆಮಾಲಾಜಿ ಗೆ ಸಂಬಂಧಪಟ್ಟಂತೆ ಪ್ರೊಫೆಶನಲ್ ಸರ್ಟಿಫಿಕೇಟ್ ಇರುತ್ತದೋ ಅವರಿಗೆ ಸಮೃದ್ಧ ಉದ್ಯೋಗವಕಾಶಗಳಿದೆ. ಹರಳು ರಫ್ತು ಕಂಪನಿಗಳಲ್ಲಿ ಹಲವಾರು ಉದ್ಯೋಗವಕಾಶಗಳಿರುತ್ತದೆ. ಅಷ್ಟೇ ಅಲ್ಲ ಆಭರಣಗಳ ಮಳಿಗೆಯಲ್ಲೂ ಈ ಕೋರ್ಸ್ ಮಾಡಿದ್ದಲ್ಲಿ ನೀವು ಕೆರಿಯರ್ ರೂಪಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಜೆಮ್ ಕಟ್ಟಿಂಗ್, ಪಾಲೀಶಿಂಗ್ ಸೇರಿದಂತೆ ಈ ಸಬ್‌ಜೆಕ್ಟ್ ನಲ್ಲಿ ಸ್ಪೇಶಲ್ ಕೋರ್ಸ್ ಮಾಡಿದ್ದಲ್ಲಿ ಹಲವಾರು ಇಂಡಸ್ಟ್ರಿಯಲ್ ಯೂನಿಟ್ ಗಳಲ್ಲಿ ವಿಫುಲ ಉದ್ಯೋಗವಕಾಶವಿದೆ.

ಜೆಮಾಲಾಜಿ ವೇತನ

ಜೆಮಾಲಾಜಿ ವೇತನ

ಕೋರ್ಸ್ ಹಾಗೂ ಎಕ್ಸ್ ಪೀರಿಯೆನ್ಸ್ ಗೆ ಸಂಬಂಧಪಟ್ಟಂತೆ ಜತೆಗೆ ಸ್ಟೇಟಸ್ ಎಲ್ಲಾ ಗಮನದಲ್ಲಿಟ್ಟುಕೊಂಡು ವೇತನ ನೀಡಲಾಗುತ್ತದೆ. ಫ್ರೆಶರ್ಸ್ ವರ್ಷಕ್ಕೆ 2 ಲಕ್ಷ ರೂ ವೇತನದಂತೆ ಕೆರಿಯರ್ ಆರಂಭಿಸಬಹುದು. ಇನ್ನೂ ಈ ಫೀಲ್ಡ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರೆ ಅಂತಹ ಅಭ್ಯರ್ಥಿಗಳು ವರ್ಷಕ್ಕೆ ೩.೫ ಲಕ್ಷ ವೆತನ ಪಡೆಯುತ್ತಾರೆ. ಇನ್ನೂ ವಿದೇಶಗಳಲ್ಲಿ ಈ ಕೋರ್ಸ್ ಮಾಡಿರುವ ಅಭ್ಯರ್ಥಿಗಳು ಅತೀ ಹೆಚ್ಚು ಸಂಪಾದನೆ ಮಾಡಬಹುದು.

ಭಾರತದಲ್ಲಿನ ಫೇಮಸ್ ಶಿಕ್ಷಣ ಸಂಸ್ಥೆಗಳು

ಭಾರತದಲ್ಲಿನ ಫೇಮಸ್ ಶಿಕ್ಷಣ ಸಂಸ್ಥೆಗಳು

ಭಾರತದಲ್ಲಿ ಜೆಮಾಲಾಜಿ ಕೋರ್ಸ್ ಗೆ ಸಂಬಂಧಪಟ್ಟಂತೆ ಹಲವಾರು ಶಿಕ್ಷಣ ಸಂಸ್ಥೆಗಳಿವೆ. ಅವುಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಾಜಿ. ನಂತರ ಕ್ರಮವಾಗಿ ಇಂಡಿಯನ್ ಜಿಮಾಲಾಜಿಕಲ್ ಇನ್‌ಸ್ಟಿಟ್ಯೂಟ್, ಜಿಮಾಲಾಜಿಕಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜೆಮ್ಸ್ ಆಂಡ್ ಜೆವೆಲ್ಲರಿ ಮತ್ತು ಸೈಂಟ್ ಕ್ಸವೈರ್ ಕಾಲೇಜು.

For Quick Alerts
ALLOW NOTIFICATIONS  
For Daily Alerts

English summary
Gems are the symbol of prestige, power, prosperity and glory since time immemorial. Gems are one of the most precious elements in this world and share equally with gold and platinum in terms of value. The precious stones such as diamonds, sapphires, emeralds and rubies are some of them to name which are associated with our Indian culture.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more