Self Study Tips During Lockdown: ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲೇ ಕುಳಿತು ಸ್ವತಃ ಅಧ್ಯಯನ ಮಾಡುವುದು ಹೇಗೆ ?

ಕೊರೋನಾ ವೈರಸ್ ಸೋಂಕು ದೇಶದೆಲ್ಲೆಡೆ ವ್ಯಾಪಿಸಿದ ನಂತರದ ದಿನಗಳಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಕರಾಳ ಛಾಯೆ ಮೂಡಿದೆ. ಅದರಲ್ಲೂ ರಾಜ್ಯ ಸರ್ಕಾರ ಕಠಿಣ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಶಾಲೆ ಕಾಲೇಜುಗಳು ಬಂದ್ ಆಗಿವೆ. ಹೀಗಿರುವಾಗ ಅನೇಕ ಪರೀಕ್ಷೆಗಳು ರದ್ದಾಗಿದೆ. ಇನ್ನೂ ಕೆಲವು ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.

 

 ಲಾಕ್‌ಡೌನ್ ಸಮಯದಲ್ಲಿ ಸ್ವತ: ಅಧ್ಯಯನ ಮಾಡುವುದು ಹೇಗೆ ? ಇಲ್ಲಿದೆ ಸಲಹೆ

ಮುಂದೂಡಲಾಗಿರುವ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಸ್ವತಃ ಹೇಗೆ ಅಧ್ಯಯನ ಮಾಡುವುದು ಎಂದು ಚಿಂತಿಸುತ್ತಿರುವಿರಾ! ಚಿಂತೆ ಬೇಡ. ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ತಮ್ಮಷ್ಟೆ ತಾವೆ ಯಾವೆಲ್ಲಾ ಉಪಕ್ರಮಗಳೊಂದಿಗೆ ಅಧ್ಯಯನ ಮಾಡಬಹುದು ಎಂದು ತಿಳಿಸುವ ಮೂಲಕ ನಾವು ನಿಮಗೆ ಸಹಾಯ ಮಾಡಲಿದ್ದೇವೆ.

ಸ್ಟಡಿ ಪ್ಲಾನ್:

ಸ್ಟಡಿ ಪ್ಲಾನ್:

ಮನೆಯಲ್ಲಿ ಒಬ್ಬರೆ ಕುಳಿತು ಯಾರ ಸಹಾಯವು ಇಲ್ಲದೆ ಅಧ್ಯಯನ ಮಾಡುವುದು ಸುಲಭದ ಮಾತಲ್ಲ. ಹಾಗಂತ ಕಷ್ಟವೂ ಅಲ್ಲ, ನಿಮಗೆ ನಾನು ಹೇಗೆ ಅಧ್ಯಯನ ಮಾಡಬೇಕು ಎಂಬ ಯೋಜನೆ ಇರಬೇಕು. ಹೌದು ನೀವು ಸ್ವತಃ ಅಧ್ಯಯನ ಮಾಡಲು ಪ್ರಾರಂಭಿಸುವಿರಾದರೆ ಮೊದಲ ಹಂತದಲ್ಲಿ ಹೇಗೆ ಅಧ್ಯಯನ ಮಾಡಬೇಕು ಎಂದು ಯೋಜನೆ ಹಾಕಿಕೊಳ್ಳಿ.

ಉದಾಹರಣೆಗೆ ನಿಮ್ಮ ಫೋನಿನಲ್ಲಿ ಅಥವಾ ಒಂದು ಹಾಳೆ ಮೇಲೆ ಅಥವಾ ನಿಮ್ಮ ಮನೆಯ ವಾಲ್ ಮೇಲೆ ವಿಷಯಕ್ಕನುಸಾರ ಸಮಯವನ್ನು ಮೀಸಲಿಡುವ ಮೂಲಕ ಒಂದಷ್ಟು ಯೋಜನೆಯನ್ನು ಹಾಕಿಕೊಳ್ಳಿ. ಅದರ ಅನುಸಾರವೇ ಅಧ್ಯಯನವನ್ನು ಪ್ರಾರಂಭಿಸಿ.

ನೋಟ್ ಮಾಡಿಕೊಳ್ಳಿ:

ನೋಟ್ ಮಾಡಿಕೊಳ್ಳಿ:

ಈಗ ನೀವು ಸ್ವತಃ ಅಧ್ಯಯನವನ್ನು ಮಾಡಲು ಪ್ರಾರಂಭಿಸಿದ್ದೀರಿ. ಅಂದರೆ ಅದರ ಅರ್ಥ ಮೊದಲನೇ ಹಂತದಲ್ಲಿ ನೀವು ಯಶಸ್ವಿಯಾಗಿದ್ದೀರಿ. ಹಾಗಾದ್ರೆ ಅಧ್ಯಯನ ಮಾಡುವುದು ಹೇಗೆ ? ವಿದ್ಯಾರ್ಥಿಯು ಮೊದಲು ಓದಲು ಆರಂಭಿಸುತ್ತಾ ಹೋಗಿ. ತದನಂತರ ಪುಸ್ತಕದ ಪ್ರತಿ ಪುಟದ ಮುಖ್ಯ ಅಂಶಗಳನ್ನು ಒಂದು ಹಾಳೆ ಮೇಲೆ ಟಿಪ್ಪಣಿಯಾಗಿ ಬರೆಯುತ್ತಾ ಹೋಗಿ.

ನೆನಪಿಡಿ ಟಿಪ್ಪಣಿ ತೆಗೆದುಕೊಳ್ಳುವುದು ಎಂದರೆ ಪುಸ್ತಕದಲ್ಲಿ ನೀಡಿರುವ ಪ್ರತಿಯೊಂದು ಪದವನ್ನು ನೀವು ನಕಲಿ ಮಾಡುವುದು ಎಂದು ಅರ್ಥವಲ್ಲ. ಮುಖ್ಯ ವಿಷಯಗಳನ್ನು ನೀವು ಸಂಕ್ಷಿಪ್ತ ರೂಪದಲ್ಲಿ ಬರೆದುಕೊಳ್ಳಬೇಕಿರುತ್ತದೆ. ಇಲ್ಲಿ ನೀವು ನಿಮಗೆ ಕಷ್ಟ ಎನಿಸುವ ವಿಷಯಗಳನ್ನು ಒಂದೆಡೆ ನೋಟ್ ಮಾಡಿಕೊಳ್ಳುತ್ತಾ ಹೋಗಬೇಕಿರುತ್ತದೆ. ನೋಟ್ ಮಾಡಿಕೊಂಡದ್ದಾಯಿತು ಮುಂದೇನು ?...

ವೀಡಿಯೊ ಉಪನ್ಯಾಸಗಳು:
 

ವೀಡಿಯೊ ಉಪನ್ಯಾಸಗಳು:

ವಿದ್ಯಾರ್ಥಿಗಳು ಪುಸ್ತಕ ಓದಿ ಅಧ್ಯಯನ ಮಾಡುವುದು ಒಳಿತು. ಆದರೆ ಇನ್ನೊಂದು ರೀತಿಯ ಅಧ್ಯಯನ ನಿಮ್ಮನ್ನು ಇನ್ನಷ್ಟು ಉಲ್ಲಾಸ ಮತ್ತು ಆಸಕ್ತಿಯಿಂದ ಓದುವಂತೆ ಮಾಡುತ್ತದೆ. ಅದೇನೆಂದರೆ ವೀಡಿಯೊ ಉಪನ್ಯಾಸಗಳ ಮೂಲಕ ಅಧ್ಯಯನ ಮಾಡುವುದು. ನಿಮ್ಮ ಮನೆಯು ಸೌಕರ್ಯದಿಂದ ಕೂಡಿದ್ದಲ್ಲಿ ಖಂಡಿತವಾಗಿಯೂ ವೀಡಿಯೊ ಉಪನ್ಯಾಸಗಳ ಮೊರೆ ಹೋಗಬಹುದು.

ವೀಡಿಯೊ ಉಪನ್ಯಾಸಗಳನ್ನು ಪಡೆಯಲು ನಿಮಗೆ ಅನೇಕ ಪ್ಲಾಟ್‌ಫಾರ್ಮ್‌ಗಳಿವೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಎಲ್ಲಾ SWAYAM ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸುತ್ತಿದೆ. ವಿದ್ಯಾರ್ಥಿಗಳು ಯೂಟ್ಯೂಬ್‌ನಲ್ಲಿ ವೀಡಿಯೊ ಟ್ಯುಟೋರಿಯಲ್ ಗಳ ಅಧ್ಯಯನ ಮಾಡಲು ಪ್ರಾಂಭಿಸಬಹುದು. ಈಗ ಅಧ್ಯಯನ ಮಾಡುತ್ತಿರುವಿರಿ ಮುಂದೇನು ಮಾಡಬೇಕು ?...

ಅಣಕು ಪರೀಕ್ಷೆ / ಆನ್‌ಲೈನ್ ರಸಪ್ರಶ್ನೆ:

ಅಣಕು ಪರೀಕ್ಷೆ / ಆನ್‌ಲೈನ್ ರಸಪ್ರಶ್ನೆ:

ನಿಮ್ಮ ಅಧ್ಯಯನ ಉತ್ತಮ ರೀತಿಯಲ್ಲಿ ಮುಂದುವರೆದಿದೆಯೇ ಅಥವಾ ಇಲ್ಲವೇ ? ಹಾಗಾದ್ರೆ ಅದನ್ನು ತಿಳಿಯುವುದು ಹೇಗೆ ?....

ನಿಮ್ಮ ಪ್ರಗತಿಯನ್ನು ನಿರ್ಣಯಿಸುವುದು ಅಧ್ಯಯನದ ಪ್ರಮುಖ ಭಾಗವಾಗಿದೆ. ಸ್ವಯಂ ಅಧ್ಯಯನ ಮಾಡುವಾಗ ವಿದ್ಯಾರ್ಥಿಗಳು ತಾವು ಓದಿದ ವಿಷಯದ ಅಥವಾ ವಿಷಯದಲ್ಲಿನ ತಮ್ಮ ಜ್ಞಾನವನ್ನು ಮೌಲ್ಯಮಾಪನ ಮಾಡಲು ಆನ್‌ಲೈನ್‌ನಲ್ಲಿ ಲಭ್ಯವಿರುವ ಅಣಕು ಪರೀಕ್ಷೆಗಳು ಮತ್ತು ರಸಪ್ರಶ್ನೆಗಳನ್ನು ತೆಗೆದುಕೊಳ್ಳಬಹುದು. ಇದರಿಂದ ನಿಮಗೆ ನೀವು ಅಧ್ಯಯನ ನಡೆಸುತ್ತಿರುವ ಬಗೆ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಯಬಹುದು.

ಓದಿಗೆ ಬ್ರೇಕ್:

ಓದಿಗೆ ಬ್ರೇಕ್:

ಸ್ವತಃ ಅಧ್ಯಯನ ಮಾಡುವಾಗ ಸದಾ ಓದುತ್ತಿದ್ದರೆ ಮಾತ್ರ ಓದಿದಂತೆ ಎಂದು ಭಾವಿಸಬಾರದು. ಯಾವುದೇ ಕ್ರಿಯೆಗೂ ಸ್ವಲ್ಪ ವಿರಾಮದ ಅವಶ್ಯಕತೆ ಇದ್ದೇ ಇರುತ್ತದೆ. ಹಾಗೆಯೇ ಅಧ್ಯಯನ ಮಾಡುವಾಗಲೂ ವಿದ್ಯಾರ್ಥಿಗಳು ಓದಿಗೆ ಒಂದು ವಿರಾಮ ನೀಡಿ ವಿಶ್ರಾಂತಿ ಪಡೆಯುವುದು ಒಳಿತು. ಸ್ವತಃ ಅಧ್ಯಯನ ಮಾಡುವಾಗ ನಿಮಗೆ ನೀವೇ ಪುನಃ ಚೈತನ್ಯ ತುಂಬಲು ಅಧ್ಯಯನದಲ್ಲಿ ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ.

ಇದಿಷ್ಟೂ ಸ್ವತಃ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಬೇಕಾದ ಸರಳ ಮತ್ತು ಸುಲಭವಾದ ದಾರಿಗಳು. ಹಾಗಾದ್ರೆ ತಡ ಮಾಡುವ ಅಗತ್ಯವಿಲ್ಲ ನಿಮಗೆ ನೀವೆ ಯೋಜನೆ ಹಾಕಿಕೊಳ್ಳಿ ಓದನ್ನು ಆರಂಭಿಸಿ, ನಿಮಗೆ ನೀವೇ ಮಾರ್ಗದರ್ಶಕರಾಗಿ.....

For Quick Alerts
ALLOW NOTIFICATIONS  
For Daily Alerts

English summary
During lockdown students are planing to study. how to do self study during lockdown here is the tips.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X