ಈ ಕಂಪ್ಯೂಟರ್‌ ಕೋರ್ಸ್‌ಗಳನ್ನು ಮಾಡಿದ್ರೆ ಕೌಶಲ್ಯ ಅಭಿವೃದ್ಧಿ ಜೊತೆಗೆ ಉದ್ಯೋಗ ಗಿಟ್ಟಿಸಿಕೊಳ್ಳಬಹುದು

ಉದ್ಯೋಗ ಇಂದು ಅನಿವಾರ್ಯವೂ ಹೌದು ಮತ್ತು ಅಗತ್ಯವೂ ಹೌದು ಹಾಗಾಗಿ ನಾವು ಏನೇ ಶಿಕ್ಷಣವನ್ನು ಪಡೆದರೂ ನಮ್ಮ ಕೌಶಲ್ಯ ಅಭಿವೃದ್ದಿ ಕೂಡ ಅಷ್ಟೇ ಪ್ರಮುಖವಾಗಿರುತ್ತದೆ. ನಾವು ಶಿಕ್ಷಣ ಪಡೆಯುವುದರ ಜೊತೆಗೆ ಯಾವೆಲ್ಲಾ ಕಂಪ್ಯೂಟರ್‌ ಕೋರ್ಸ್‌ಗಳನ್ನು ಮಾಡಿದ್ರೆ ನಮ್ಮ ಕರಿಯರ್‌ಗೆ ಸಹಾಯವಾಗಬಹುದು ಅನ್ನುವುದಲ್ಲದೇ ಯಾವೆಲ್ಲಾ ಅಲ್ಪಾವಧಿಯ ಕಂಪ್ಯೂಟರ್‌ ಕೋರ್ಸ್‌ಗಳನ್ನು ಮಾಡಬಹುದು ಎನ್ನುವುದನ್ನು ನಾವಿಲ್ಲಿ ತಿಳಿಸಲಿದ್ದೇವೆ.

ಈ ಕಂಪ್ಯೂಟರ್‌ ಕೋರ್ಸ್‌ಗಳನ್ನು ಮಾಡಿದರೆ ಬಹುಬೇಗ ಉದ್ಯೋಗ ಸಿಗತ್ತೆ

ಅಲ್ಪಾವಧಿಯ ಕೋರ್ಸ್‌ ಮಾಡುವುದೇಕೆ? ಎನ್ನುವುದಕ್ಕೆ ಉತ್ತರ ಇಲ್ಲಿದೆ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಈ ಕೋರ್ಸ್‌ಗಳನ್ನು ಮಾಡುವುದರಿಂದ ಅವರ ಕೌಶಲ್ಯ ಅಭಿವೃದ್ದಿಗೊಳ್ಳುತ್ತದೆ. ಅಲ್ಲದೇ ಉದ್ಯೋಗದಲ್ಲಿರುವವರೂ ಕೂಡ ಈ ಅಲ್ಪಾವಧಿ ಕೋರ್ಸ್‌ ಮಾಡುವುದರಿಂದ ಅವರ ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಪಡೆಯಬಹುದು. ಇಂದಿನ ದಿನಗಳಲ್ಲಿ ಈ ಕಂಪ್ಯೂಟರ್ ಕೋರ್ಸ್‌ಗಳನ್ನು ಮಾಡಿದರೆ ಉದ್ಯೋಗದಲ್ಲಿ ಅಭಿವೃದ್ದಿ ಮಾಡಿಕೊಳ್ಳುವುದು ಅಲ್ಲದೇ ಪಾರ್ಟ್‌ ಟೈಂ ಉದ್ಯೋಗವನ್ನು ಕೂಡ ಪಡೆಯಬಹುದು. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳು ರಜೆಯಲ್ಲಿ ಈ ಕೋರ್ಸ್‌ಗಳನ್ನು ಕೂಡ ಮಾಡಬಹುದು.

ಅಲ್ಪಾವಧಿಯಲ್ಲಿ ಕಲಿಯಬಹುದಾದ ಕಂಪ್ಯೂಟರ್‌ ಕೋರ್ಸ್‌ಗಳು ಇಲ್ಲಿವೆ:

1. ಸಿಎಡಿ/ ಕ್ಯಾಡ್ ಕೋರ್ಸ್:

ಸಿಎಡಿ ಅಥವಾ ಕ್ಯಾಡ್ ಅಂದರೆ ಕಂಪ್ಯೂಟರ್ ಏಡೆಡ್ ಡಿಸೈನ್ / ಡ್ರಾಯಿಂಗ್ . ಸಿಎಡಿ / ಕ್ಯಾಡ್ ಅನ್ನು ಆಟೋಮೊಬೈಲ್ ಡಿಸೈನ್, ಆರ್ಕಿಟೆಕ್ಚರ್, ಸಿವಿಲ್ ಇಂಜಿನಿಯರಿಂಗ್, ಜ್ಯುವೆಲ್ಲರಿ ಡಿಸೈನ್, ಗ್ರಾಫಿಕ್ ಡಿಸೈನ್ ಇತ್ಯಾದಿ ಕ್ಷೇತ್ರಗಳಲ್ಲಿ ಬಳಸಲಾಗುವುದು. 3 ರಿಂದ 6 ತಿಂಗಳ ಅವಧಿಯ ಕೋರ್ಸ್‌ ಇದಾಗಿದ್ದು ಇಲ್ಲಿ ನಿಮಗೆ ಸಾಫ್ಟ್‌ವೇರ್, ಸಿಎಡಿ ಟೆಕ್ನಿಕ್ಸ್‌, ಸ್ಕೆಚ್ಚಿಂಗ್ ಇತ್ಯಾದಿ ವಿಷಯಗಳ ಬಗೆಗೆ ತರಬೇತಿಯನ್ನು ನೀಡಲಾಗುತ್ತದೆ.

2. ಸಿ / ಸಿ++ ಪ್ರೋಗ್ರಾಮಿಂಗ್:

ಸಿ ಪ್ರೊಗ್ರಾಮಿಂಗ್ ಅನ್ನುವುದು ಬಹಳಾನೆ ಪ್ರಸಿದ್ಥಿಯನ್ನು ಪಡೆದಿರುವ ಕೋರ್ಸ್‌ ಆಗಿರುತ್ತದೆ. 3 ರಿಂದ 6 ತಿಂಗಳ ಕಲಿಕೆ ಇದಾಗಿದ್ದು, ಇದೊಂದು ಪ್ರಾಥಮಿಕ ಹಂತದ ಕಲಿಕೆಯಾಗಿರುತ್ತದೆ. ಇಲ್ಲಿ ಸಿ/ ಸಿ++ ನ ಬೇಸಿಕ್ ಕಲಿಕೆಯನ್ನು ನೀವು ಪಡೆಯುತ್ತೀರಿ.

3. ಜಾವಾ ಪ್ರೊಗ್ರಾಮಿಂಗ್:

ಜಾವಾ ಪ್ರೊಗ್ರಾಮಿಂಗ್ ಬಗ್ಗೆ ಕೇಳಿರುತ್ತೀರಿ. ಇದೊಂದು ಉತ್ತಮ ಕೋರ್ಸ್‌ ಆಗಿದ್ದು ಜಾವಾ ಕೌಶಲ್ಯದ ಬಗೆಗೆ ತರಬೇತಿಯನ್ನು ಇಲ್ಲಿ ಪಡೆಯುತ್ತೀರಿ. ಈ ಕೋರ್ಸ್‌ನಲ್ಲಿ 3 ರಿಂದ 6 ತಿಂಗಳ ತರಬೇತಿಯನ್ನು ಪಡೆದು ನಂತರ ಸರ್ಟಿಫಿಕೇಟ್‌ ಅನ್ನು ಪಡೆಯಬಹುದು.

4. ಎಕ್ಸೆಲ್ ಟ್ರೈನಿಂಗ್:

ಎಂ.ಎಸ್‌ ಎಕ್ಸೆಲ್ ಅನ್ನುವುದು ನಮ್ಮ ದಿನ ನಿತ್ಯದ ಬದುಕಿನಲ್ಲಿ ಹೆಚ್ಚು ಮಹತ್ವಯುತವಾಗಿದೆ. ಎಕ್ಸೆಲ್‌ ಅನ್ನು ಯಾವುದೇ ಕಚೇರಿಯಲ್ಲಿ, ಶಾಲಾ ಕಾಲೇಜುಗಳಲ್ಲಿ ಮತ್ತು ಸಂಸ್ಥಗಳಲ್ಲಿ ಬಳಕೆ ಮಾಡಲಾಗುತ್ತಿದೆ.ಹಾಗಾಗಿ ಪ್ರತಿಯೊಬ್ಬರಿಗೂ ಇದರ ಕಲಿಕೆ ಅಗತ್ಯ.

ಎಕ್ಸೆಲ್ ತರಬೇತಿ ಪ್ರೋಗ್ರಾಂನಲ್ಲಿ ನಿಮಗೆ ಸ್ಪ್ರೆಡ್ ಶೀಟ್, ಬೇಸಿಕ್ ಫಾರ್ಮುಲಾ, ಎಡಿಟಿಂಗ್, ಫಾರ್ಮ್ಯಾಟಿಂಗ್ ಇತ್ಯಾದಿ ವಿಷಯಗಳ ಬಗೆಗೆ ತರಬೇತಿಯನ್ನು ನೀಡಲಾಗುತ್ತದೆ. ಈ ಕೋರ್ಸ್‌ ಅನ್ನು ನೀವು ಕೇವಲ 1 ರಿಂದ 3 ತಿಂಗಳ ಅವಧಿಯೊಳಗೆ ಕಲಿಯಬಹುದು.

5. ಎಂಎಸ್ ಆಫೀಸ್ ಟ್ರೈನಿಂಗ್:

ಎಂಎಸ್ ಆಫೀಸ್ ತರಬೇತಿಯು ಒಂದು ಬೇಸಿಕ್ ಕಲಿಕೆಯಾಗಿರುತ್ತದೆ. ಈ ಕಲಿಕೆಯನ್ನು 1 ರಿಂದ 3 ತಿಂಗಳೊಳಗೆ ನೀವು ಮಾಡಬಹುದು. ಈ ಕೋರ್ಸ್‌ ನಲ್ಲಿ ನೀವು ವರ್ಡ್‌ ಪ್ರೊಸೆಸಿಂಗ್, ಎಕ್ಸೆಲ್, ಆಕ್ಸೆಸ್, ಪವರ್ ಪಾಯಿಂಗ್ ಮತ್ತು ಇತ್ಯಾದಿ ವಿಷಯಗಳನ್ನು ನೀವು ಕಲಿಯುತ್ತೀರಿ.

6. ಬೇಸಿಕ್ ಕಂಪ್ಯೂಟರ್ ಟ್ರೈನಿಂಗ್:

ಬೇಸಿಕ್ ಕಂಪ್ಯೂಟರ್ ಟ್ರೈನಿಂಗ್ ಇದನ್ನು ನೀವು 3 ರಿಂದ 6 ತಿಂಗಳೊಳಗೆ ಕಲಿತು ಸರ್ಟಿಫಿಕೇಟ್ ಅನ್ನು ಪಡೆಯಬಹುದು. ಇಲ್ಲಿ ಕಂಪ್ಯೂಟರ್ ಬಳಸುವುದರಿಂದ ಹಿಡಿದು ಹೇಗೆ ಆಪರೇಟ್ ಮಾಡಬೇಕು ಎನ್ನುವುದರ ಜೊತೆಗೆ ಇತ್ಯಾದಿ ವಿಷಯಗಳನ್ನು ಕಲಿಯುತ್ತೀರಿ.

7. ವೆಬ್‌ ಡೆವಲಪ್ಮೆಂಟ್ ಟ್ರೈನಿಂಗ್:

ವೆಬ್‌ ಡೆವಲಪ್ಮೆಂಟ್ ಟ್ರೈನಿಂಗ್‌ನಲ್ಲಿ ನೀವು ವೆಬ್‌ಸೈಟ್‌ , ಬ್ಲಾಗ್ ಮತ್ತು ಇತರೆ ವೆಬ್‌ ಪೋರ್ಟಲ್‌ಗಳನ್ನು ನಿರ್ಮಿಸುವುದನ್ನು ಕಲಿಯುತ್ತೀರಿ. ಈ ತರಬೇತಿಯಲ್ಲಿ ನೀವು ಪ್ರಾಗ್ರಾಮಿಂಗ್ ಲಾಂಗ್ವೇಜ್, ಇಂಟರ್‌ನೆಟ್ ಟೆಕ್ನಾಲಜಿ, ವೆಬ್‌ ಡೆವಲಪ್ಮೆಂಟ್, ವೆಬ್‌ ಹೋಸ್ಟಿಂಗ್ ಇತ್ಯಾದಿ ವಿಷಯಗಳ ಕಲಿಕೆಯನ್ನು ನೀವು ಮಾಡುತ್ತೀರಿ. ಈ ಕೋರ್ಸ್‌ ಅನ್ನು ನೀವು 3 ರಿಂದ 6 ತಿಂಗಳ ಅವಧಿಯ ಒಳಗೆ ಕಲಿಯಬಹುದು.

8. ಪಿಹೆಚ್‌ಪಿ ಟ್ರೈನಿಂಗ್:

ಪ್ರಾಥಮಿಕ ಹಂತದ ಕಲಿಕೆಯ ಕೋರ್ಸ್‌ ಇದಾಗಿದ್ದು, ಇಲ್ಲಿ ಪಿಹೆಚ್‌ಪಿಯ ಪ್ರಾಥಮಿಕ ಹಂತದ ಬಗೆಗೆ ಹೆಚ್ಚು ನೀವು ಕಲಿಯುತ್ತೀರಿ. ಈ ಕಲಿಕಯೆನ್ನು ನೀವು 3 ರಿಂದ 6 ತಿಂಗಳ ಅವಧಿಯೊಳಗೆ ಮಾಡಬಹುದು.

9. ಡಾಟಾ ಎಂಟ್ರಿ ಟ್ರೈನಿಂಗ್:

ಇದೊಂದು ಎಂಟ್ರಿ ಲೆವೆಲ್ ಕೋರ್ಸ್‌ ಆಗಿರುತ್ತದೆ. ಈ ತರಬೇತಿಯಲ್ಲಿ ನೀವು ವರ್ಡ್ ಪ್ರೊಸೆಸಿಂಗ್, ಎಡಿಟಿಂಗ್, ಫಾರ್ಮಾಟಿಂಗ್, ಆಪರೇಟಿಂಗ್ ಸಿಸ್ಟಂ ಇತ್ಯಾದಿ ವಿಚಾರಗಳ ಬಗೆಗೆ ಕಲಿಯುತ್ತೀರಿ. ಈ ಕೋರ್ಸ್‌ ಮುಗಿದ ನಂತರ ನೀವು ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸವನ್ನು ನಿರ್ವಹಿಸಬಹುದು. ಈ ಕೋರ್ಸ್‌ ಮಾಡಲು ಕೇವಲ 1 ರಿಂದ 3 ತಿಂಗಳ ಅವಧಿಗಳು ಸಾಕು.

10. ಒರಾಕಲ್ ಟ್ರೈನಿಂಗ್:

ಒರಾಕಲ್ ಒಂದು ಡಾಟಾಬೇಸ್ ಮ್ಯಾನೇಜ್ಮೆಂಟ್ ಸಿಸ್ಟಂ ಆಗಿರುತ್ತದೆ. ಈ ತರಬೇತಿಯನ್ನು ನೀವು 6 ತಿಂಗಳ ಅವಧಿಯಲ್ಲಿ ಪಡೆಯಬಹುದು. ಈ ತರಬೇತಿಯಲ್ಲಿ ಪ್ರಾಥಮಿಕ ಹಂತದ ಡಾಟಾಬೇಸ್ ಮ್ಯಾನೇಜ್ಮೆಂಟ್ (ಸೇಫ್ಟಿ, ಡಿಪ್ಲಾಯ್ಮೆಂಟ್, ಮ್ಯಾನೇಜ್ಮೆಂಟ್, ಕ್ರಿಯೇಷನ್) ಬಗೆಗೆ ಕಲಿಕೆಯನ್ನು ಮಾಡುತ್ತೀರಿ.

11. ವಿಬಿ ಎನ್‌ಇಟಿ ಟ್ರೈನಿಂಗ್:

ವಿಷ್ಯುಯಲ್ ಬೇಸಿಕ್. ಎನ್‌ಇಟಿ ಒಂದು ಆಬ್ಜೆಕ್ಟ್ ಓರಿಯೆಂಟೆಡ್ ಪ್ರೊಗ್ರಾಮಿಂಗ್ ಆಗಿದೆ. ವಿಷ್ಯುಯಲ್ ಬಗೆಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಬೇಸಿಕ್ ತರಬೇತಿಯನ್ನು ಪಡೆಯಬಹುದು. ಈ ಕೋರ್ಸ್ 6 ತಿಂಗಳ ಅವಧಿಯನ್ನು ಒಳಗೊಂಡಿರುತ್ತದೆ.

12. ಎಎಸ್‌ಪಿ. ಎನ್‌ಇಟಿ ಟ್ರೈನಿಂಗ್:

ಎಎಸ್‌ಪಿ. ಎನ್‌ಇಟಿ ಇದೊಂದು ವೆಬ್‌ ಅಪ್ಲಿಕೇಶನ್ ಫ್ರೇಮ್‌ವರ್ಕ್‌ ಆಗಿರುತ್ತದೆ. ವೆಬ್‌ ಡೆವಲಪ್ಮೆಂಟ್‌ಗಳಲ್ಲಿ ಈ ಕಲಿಯನ್ನು ಬಳಕೆ ಮಾಡಬಹುದು. ಅಲ್ಲದೇ ಇದನ್ನು ಮೈಕ್ರೋಸಾಫ್ಟ್ ಡೆವಲಪ್ ಮಾಡಲಾಗಿರುತ್ತದೆ. ಒಟ್ಟಾರೆ ಈ ತರಬೇತಿಯಲ್ಲಿ ಎಎಸ್‌ಪಿ.ಎನ್‌ಇಟಿ ಫ್ರೇಮ್‌ವರ್ಕ್‌ನ ಪ್ರಾಥಮಿಕ ಕಲಿಕೆಯನ್ನು ನೀವು ಮಾಡಬಹುದು.

13. ಟ್ಯಾಲಿ ಟ್ರೈನಿಂಗ್:

ಟ್ಯಾಲಿ ಕಲಿಕೆ ತುಂಬಾನೆ ಪ್ರಮುಖವಾದುದು ಏಕೆಂದರೆ ಅನೇಕ ಸಂಸ್ಥೆಗಳು ಹಣಕಾಸು ನಿರ್ವಹಣೆಯ ಬಗೆಗೆ ಎಂಟ್ರಿ ಮಾಡಲು ಟ್ಯಾಲಿ ಬಳಸುತ್ತಾರೆ. ಟ್ಯಾಲಿ ಒಂದು ಪ್ರಾಥಮಿಕ ಕಲಿಕೆಯಾಗಿದ್ದು, ಇದನ್ನು ನೀವು 3 ರಿಂದ 6 ತಿಂಗಳೊಳಗೆ ಕಲಿಯಬಹುದು.

14. ಆಪ್ ಡೆವಲಪ್ಮೆಂಟ್ ಟ್ರೈನಿಂಗ್:

ಭಾರತದಲ್ಲಿ ವಿವಿಧ ರೀತಿಯ ಆಪ್ ಡೆವಲಪ್ಮೆಂಟ್ ಟ್ರೈನಿಂಗ್‌ಗಳಿವೆ. ಆಪ್‌ ಡೆವಲಪ್ಮೆಂಟ್ ಟ್ರೈನಿಂಗ್‌ ಅನ್ನು ಕೋರ್ಸ್‌ ಕಂಟೆಂಟ್ ಮೇಲೆ ವಿಂಗಡಿಸಲಾಗಿದೆ ಅವುಗಳೆಂದರೆ ಆಂಡ್ರಾಯಿಡ್ ಆಪ್ ಮತ್ತು ಐಓಎಸ್ ಆಪ್ ಡೆವಲಪ್ಮೆಂಟ್ ಪ್ರೋಗ್ರಾಂಗಳು. ಪ್ರಾಥಮಿಕ ಹಂತದ ಆಪ್ ಡೆವಲಪ್ಮೆಂಟ್ ಕೋರ್ಸ್‌ ಇದಾಗಿದ್ದು 3 ರಿಂದ 6 ತಿಂಗಳ ಅವಧಿಯೊಳಗೆ ಕಲಿಯಬಹುದು. ಈ ತರಬೇತಿಯಲ್ಲಿ ನೀವು ಆಪ್‌ ಡೆವಲಪ್ಮೆಂಟ್‌ನ ಪ್ರಾಥಿಮಿಕ ಕಲಿಕೆಯನ್ನು ಮಾಡಬಹುದು.

For Quick Alerts
ALLOW NOTIFICATIONS  
For Daily Alerts

English summary
Here we are giving details of short term computer courses which is available in india and which is helpful to build career after
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X