ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುತ್ತಿಲ್ಲಾ ಅಂತಾ ನಿಮಗನಿಸ್ತಿದೇಯಾ?

Written By: Rajatha

ನೀವು ಕೆಲಸ ಮಾಡುತ್ತಿರುವ ಸ್ಥಳ ಸರಿಯಾಗಿಲ್ಲವೆಂದು ನಿಮ್ಮ ಒಳಮನಸ್ಸು ಹೇಳುತ್ತಿದ್ದರೆ ಅದನ್ನು ಕಡೆಗಣಿಸುವ ಬದಲು, ನಿಮ್ಮ ಬ್ಯುಸಿ ಶೆಡ್ಯೂಲ್‌ನ ಕೆಲವು ಸಮಯವನ್ನು ತೆಗೆದುಕೊಂಡು ನಿಮ್ಮ ಫೀಸ್‌ನಲ್ಲಿ ಈ ಸಂಕೇತಗಳು ಇವೆಯೇ ಎನ್ನುವುದನ್ನು ಪತ್ತೆಹಚ್ಚಿ. ಈ ಎಲ್ಲಾ ಸಂಕೇತಗಳೂ ಇದ್ದೂ ನೀವು ಅದೇ ಕಂಪನಿಯಲ್ಲಿ ವರ್ಷಗಟ್ಟಲೇ ದುಡಿಯಬೇಕೆಂದಿದ್ದರೆ ಅದು ನಿಮ್ಮ ನೈತಿಕತೆಯನ್ನು ಮಾತ್ರ ಕುಗ್ಗಿಸೋದಲ್ಲ, ಬದಲಾಗಿ ನಿಮ್ಮನ್ನು ವೈಯಕ್ತಿಕವಾಗಿಯೂ ಕುಗ್ಗಿಸುತ್ತದೆ.

1. ವಿಚಿತ್ರ ಸಂದರ್ಶನ ವಿಧಾನ

ಯಾವುದೇ ಒಂದು ಕೆಲಸದ ಮೊದಲ ಹಂತವೆಂದರೆ ಸಂದರ್ಶನವನ್ನು ಎದುರಿಸುವುದು. ನೌಕರರಿಗೆ ವಿಭಿನ್ನ ಟಾಸ್ಕ್ ನೀಡುವುದು ಅಥವಾ ವಿಚಿತ್ರ ಸಂದರ್ಶನವನ್ನು ನಡೆಸುವುದು ಇದೆಲ್ಲವೂ ಯಾವ ಸ್ಥಳದಲ್ಲಿ ಕಾರ್ಮಿಕರು ಖುಷಿಯಿಂದಿಲ್ಲವೋ, ಅಲ್ಲಿನ ಕೆಲಸದ ವಾತಾವರಣ ಸರಿಯಾಗಿಲ್ಲ ಎನ್ನುವುದನ್ನು ಬಿಂಬಿಸುತ್ತದೆ.

2. ಚೆಲ್ಲಾ ಪಿಲ್ಲಿಯಾಗಿರುವ ಆಫೀಸ್

ಆಫೀಸ್‌ನಲ್ಲಿ ಕೆಲಸ ಸರಿಯಾದ ವಾತಾವರಣದಲ್ಲಿ ನಡೆಯುವುದು ಮುಖ್ಯ. ಕೆಲವರಂತೂ ಇತರರಿಗಿಂತಲೂ ವಸ್ತುಗಳನ್ನು ಅಧಿಕ ಚೆಲ್ಲಾಪಿಲ್ಲಿಯಾಗಿಡುತ್ತಾರೆ. ಇದು ಒಳ್ಳೆಯ ಲಕ್ಷಣವಲ್ಲ. ಅಲ್ಲಿ ಕೆಲಸ ಮಾಡುವವರು ತಾವು ಮಾಡುತ್ತಿರುವ ಕೆಲಸದಲ್ಲಿ ಆಸಕ್ತಿಯನ್ನೇ ಹೊಂದಿಲ್ಲ ಎನ್ನುವುದನ್ನು ಅದು ತೋರಿಸುತ್ತದೆ.

3. ಅತ್ಯಧಿಕ ಸ್ಪರ್ಧೆ

ಸಹೋದ್ಯೋಗಿಗಳ ಜೊತೆಗೆ ಸ್ಪರ್ಧೇ ಒಳ್ಳೆಯದೇ. ಆದರೆ ಎಲ್ಲರೂ ಇಲಿಯಂತೆ ಓಟಕ್ಕಿತ್ತರೆ ತಮ್ಮ ಸಾಧನೆಗಾಗಿ ಒಬ್ಬರ ಮೇಲೆ ಒಬ್ಬರು ಹರಿದುಹೋಗುವ ಸಾಧ್ಯತೆ ಹೆಚ್ಚು. ಅದರ ಬಗ್ಗೆ ಚಿಂತಿಸಬೇಕಾಗುತ್ತದೆ.

4. ಉದ್ಯೋಗಿಗಳು ಹೊರನಡೆಯುವುದು

ಸಾಕಷ್ಟು ಉದ್ಯೋಗಿಗಳು ಕಂಪನಿ ಬಿಟ್ಟು ಹೋಗುವುದನ್ನು ನೀವು ನೋಡುತ್ತಿರಬಹುದು. ಆದರೆ ಅದಕ್ಕೆ ಕಾರಣಗಳೇನು? ಒಬ್ಬರೋ ಇಬ್ಬರೂ ವೈಯಕ್ತಿಕ ಅಥವಾ ಔದ್ಯೋಗಿಕ ಕಾರಣಕ್ಕೆ ಕಂಪನಿ ಬಿಟ್ಟು ಹೋಗುವುದು ಅಂದರೆ ನಂಬಬಹುದು. ಅದರೆ ಬಹಳಷ್ಟು ಉದ್ಯೋಗಿಗಳು ಕಂಪನಿ ಬಿಟ್ಟು ಹೊರನಡೆಯುತ್ತಿದ್ದಾರೆಂದರೆ ಆ ಕಂಪನಿಯಲ್ಲಿ ಏನೋ ಕೊರತೆ ಇದೆ ಎಂದೇ ಅರ್ಥ.

5. ಕಳಪೆ ನಾಯಕತ್ವ

ನೀವು ಯಾರ ಕೈ ಕೆಳಗೆ ಕೆಲಸ ಮಾಡುತ್ತಿದ್ದೀರೋ ಅವರು ಬರೀ ಮಾತಿನಲ್ಲೇ ಆಳಬಲ್ಲರೇ ವಿನಃ ಒಂದು ತಂಡವನ್ನು ಮುಂದುವರೆಸಿಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿಲ್ಲದಿದ್ದರೆ ನೀವು ಸರಿಯಾದ ಜಾಗದಲ್ಲಿಲ್ಲ ಎಂದರ್ಥ. ಮ್ಯಾನೇಜ್‌ಮೆಂಟ್‌ನ ನಿರ್ಧಾರವು ಉಳಿದ ಉದ್ಯೋಗಿಗಳಿಗೆ ಪೂರಕವಾಗಿಲ್ಲವೆಂದಾದಲ್ಲಿ ಆದಷ್ಟು ಬೇಗ ನೀವು ಆ ಕಂಪನಿಯಿಂದ ಹೊರಬರುವುದು ಒಳಿತು.

6. ಗೌರವದ ಕೊರತೆ

ಆಫೀಸ್‌ನಲ್ಲಿ ಯಾರೂ ಮತ್ತೊಬ್ಬರನ್ನು ಗೌರವಿಸದೇ ಇರುವುದು. ನಾವು ಗೌರವದ ಬಗ್ಗೆ ಮಾತನಾಡುತ್ತಿರುವಾಗ ಇದು ಕೇವಲ ಔದ್ಯೋಗಿಕ ಗೌರವ ಮಾತ್ರವಲ್ಲ. ವ್ಯಕ್ತಿಯನ್ನು ವೈಯಕ್ತಿಕವಾಗಿಯೂ ಗೌರವಿಸಬೇಕು. ಒಂದು ವೇಳೆ ಹಾಗೆ ನಡೆಯುತ್ತಿಲ್ಲವೆಂದಾದಲ್ಲಿ ನೀವು ಸರಿಯಾದ ಸ್ಥಳದಲ್ಲಿದ್ದ ಎಂಬುವುದನ್ನು ತಿಳಿಯಬಹುದು.

7.ಕೆಟ್ಟ ಹೆಸರು

ಯಾವುದೇ ಕಂಪನಿಗೆ ಇಂಟರ್ವ್ಯೂಗೆ ಹೋಗುವ ಮೊದಲು ಆ ಕಂಪನಿಯ ಬಗ್ಗೆ ತಿಳಿದುಕೊಳ್ಳಿ. ಅದಕ್ಕೆ ಒಳ್ಳೆಯ ಹೆಸರು ಇದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಿ. ನೌಕರಿ.ಕಾಂ ಅಥವಾ ಗ್ಲಾಸ್ ಡೋರ್.ಕಾಂ ವೆಬ್‌ಸೈಟ್‌ಗಳಿಂದ ಆ ಕಂಪನಿಯ ಬಗ್ಗೆ ರಿವ್ಯೂ ಪಡೆಯಿರಿ. ಸಾಮಾನ್ಯವಾಗಿ ಇವುಗಳ ರಿವ್ಯೂ ಸರಿಯಾಗಿಯೇ ಇರುತ್ತದೆ.

8. ತಪ್ಪಿಗೆ ಕ್ಷಮೆ ಇಲ್ಲದಾಗ

ಯಾವುದೇ ಒಬ್ಬ ವ್ಯಕ್ತಿಯಿಂದ ತಪ್ಪು ಆಗಿಯೇ ಆಗುತ್ತದೆ. ಅದರಲ್ಲೂ ಹೊಸದಾಗಿ ಕೆಲಸಕ್ಕೆ ಸೇರಿದ್ದಾರೆಂದರೆ ತಪ್ಪಾಗುವುದು ಸಹಜ. ಆದರೆ ಆ ತಪ್ಪಿಗೆ ಕಂಪನಿ ನಿಮಗೆ ಬೈದರೆ ನೀವು ಈ ಬಗ್ಗೆ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. ಯಾಕೆಂದರೆ ಪ್ರತಿಯೊಂದು ಕಂಪನಿಯೂ ತಪ್ಪಾದರೆ ಅದನ್ನು ಕ್ಷಮಿಸಿ. ಮುಂದೆ ಅಂತಹ ತಪ್ಪು ಆಗದಂತೆ ಕಲಿಯಲು ಅನುವು ಮಾಡಿಕೊಡುತ್ತದೆ.

9. ಒಳ್ಳೆ ಕೆಲಸಕ್ಕೆ ಯಾವತ್ತೂ ಪ್ರಶಂಶಿಸದಿದ್ದಾಗ

ನೀವು ಹೊಗಳಿಕೆ ಅರ್ಹವಾದ ಕೆಲಸವನ್ನು ಮಾಡಿದಾಗ ನಿಮ್ಮ ಬಾಸ್ ನಿಮ್ಮನ್ನು ಹೋಗಳೋದೇ ಇಲ್ಲ. ಅಲ್ಲದೆ ಸಂಬಳ ಕೂಡಾ ಕಡಿಮೆ ಸಿಗುತ್ತದೆ. ಮಾರ್ಕೇಟ್ ಸ್ಟ್ಯಾಂಡರ್ಡ್‌ಗೆ ಸಮನಾಗಿ ಸಂಬಳ ದೊರೆಯುತ್ತಿಲ್ಲವೆಂದಾದಲ್ಲಿ ನೀವು ತಪ್ಪಾದ ಜಾಗದಲ್ಲಿದ್ದೀರಾ. ಆರೋಗ್ಯಕರವಲ್ಲದ ಕಂಪನಿಯಲ್ಲಿ ವರ್ಷಗಟ್ಟಲೇ ಇರೋದು ನಿಮ್ಮ ಬೆಳವಣಿಗೆಯನ್ನು ನೀವೇ ಕುಂಠಿತಗೊಳಿಸಿದಂತೆ.

English summary
The fact remains that more often than not, the intuition tells us things that are true, things that the rational part of our brain simply refuses to acknowledge.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia