ನೀವು ಕೆಲಸ ಮಾಡುತ್ತಿರುವ ವಾತಾವರಣ ಪೂರಕವಾಗಿದೆಯೇ?

By Rajatha

ಬಹಳಷ್ಟು ಜನರು ತಮ್ಮ ದಿನಚರಿಯಲ್ಲಿ ಹೆಚ್ಚಿನ ಕಾಲವನ್ನು ಆಫೀಸ್‌ನಲ್ಲೇ ಕಳೆಯುತ್ತಾರೆ. ಖುಷಿ ಖುಷಿಯಾಗಿ ಜೀವನ ಸಾಗಿಸಬೇಕಾದರೆ ನಮ್ಮ ಸಮಯ ಚೆನ್ನಾಗಿ ಕಳೆಯಬೇಕು. ಆಫೀಸ್‌ನಲ್ಲಿ ದಿನ ಚೆನ್ನಾಗಿ ಕಳೆದರೆ ಇಡೀ ದಿನ ನಮ್ಮ ಮೂಡ್ ಕೂಡಾ ಚೆನ್ನಾಗಿ ಇರುತ್ತದೆ. ಇಲ್ಲವೆಂದಾದರೆ ಅದು ನಮ್ಮ ಪರ್ಸನಲ್ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಸ್ನೇಹಿತರು, ಫ್ಯಾಮಿಲಿಯ ಮೇಲೂ ಪರಿಣಾಮ ಬೀರಬಹುದು. ಯಾವುದೇ ಕಚೇರಿಯಲ್ಲಾಗಲಿ ಖುಷಿಯಿಂದ, ಸಂತೋಷದಿಂದ, ಮನಶಾಂತಿಯಿಂದ ಕೆಲಸ ಮಾಡಬೇಕಾದರೆ ಇವೆಲ್ಲದಕ್ಕೂ ಆಫೀಸ್‌ನಲ್ಲಿ ಆರೋಗ್ಯಕರ ವಾತಾವರಣ ಇರಬೇಕಾದುದು ಮುಖ್ಯ.

ಸಾಮಾನ್ಯವಾಗಿ ನೀವು ಯಾರಲ್ಲಾದರೂ ಅವರ ಕೆಲಸದ ಬಗ್ಗೆ ಅಲ್ಲಿನ ವಾತಾವರಣದ ಬಗ್ಗೆ ಕೇಳಿದರೆ ಪ್ರತಿಯೊಬ್ಬರ ಅಭಿಪ್ರಾಯ ಭಿನ್ನವಾಗಿರುತ್ತದೆ. ಕೆಲವರು ಆಫೀಸ್‌ನ ಬಗ್ಗೆ ಖುಷಿಯಿಂದ ಮಾತನಾಡಿದರೆ , ಇನ್ನು ಕೆಲವರು ಆಫೀಸ್‌ನ ವಿಷ್ಯವನ್ನು ಹೊರಗೆ ಮಾತಾಡಲು ಇಚ್ಛಿಸುವುದಿಲ್ಲ. ಇನ್ನೂ ಕೆಲವರು ಇಡೀ ದಿನ ಆಫೀಸ್‌ನಲ್ಲಿ ನಡೆದಿರುವುದರ ಬಗ್ಗೆ ಮಾತಾನಾಡುತ್ತಾರೆ. ಯಾಕೆ ನನಗೆ ಆ ವ್ಯಕ್ತಿ ಅಂದರೆ ಇಷ್ಟವಿಲ್ಲ, ಆ ಆಫೀಸ್‌ ಅಂದರೆ ಇಷ್ಟವಿಲ್ಲ ಎನ್ನುವುದರ ಬಗ್ಗೆ ಹೇಳುತ್ತಾರೆ.

 

ನೀವು ನಿಮ್ಮ ಆಫೀಸ್‌ ಬಗ್ಗೆ ಖುಷಿಯಿಂದ ಮಾತಾಡಿದರೆ ಅಥವಾ ಆಫೀಸ್‌ ಬಗ್ಗೆ ಹೊರಗಡೆ ಮಾತಾಡುವುದಿಲ್ಲವೆಂದಾದರೆ ನೀವು ಉತ್ತಮವಾಗಿರುವ ಆಫೀಸ್ ವಾತಾವರಣದಲ್ಲಿದ್ದೀರ ಎಂದರ್ಥ. ಅದೇ ನೀವು ಆಫೀಸ್ ಬಗ್ಗೆ, ಬಾಸ್ ಬಗ್ಗೆ ನೆಗೆಟಿವ್ ಆಲೋಚನೆ ಇಟ್ಟುಕೊಂಡಿದ್ದೀರೆಂದಾದರೆ ನೀವು ಖಂಡಿತವಾಗಿಯೂ ಕಚೇರಿಯಲ್ಲಿ ನೆಮ್ಮದಿಯಾಗಿಲ್ಲ. ನಿಮ್ಮ ಸುತ್ತಮುತ್ತಲಿನ ವಾತಾವರಣ ಸರಿಯಾಗಿಲ್ಲವೆಂದರ್ಥ. ನೀವು ಅಥವಾ ನಿಮ್ಮ ಸ್ನೇಹಿತರು ಅಂತಹ ವಾತಾವರಣದಲ್ಲಿದ್ದೀರಾ ಎನ್ನುವುದನ್ನು ತಿಳಿಯಲು ಇಲ್ಲಿದೆ ಕೆಲವು ಉಪಾಯ

ನಿರಾಶಾವಾದ ಪರಿಸರ:

ನಿಮ್ಮ ಸಹೋದ್ಯೋಗಿ ಯಾರಾದರೂ ಜೀವನದಲ್ಲಿ ನಿರಾಶೆಯಾಗಿದ್ದರೆ, ಯಾವಾಗ ಕಠಿಣ ಪರಿಸ್ಥಿತಿ ಉಂಟಾಗುತ್ತದೆ ಆಗ ಬಹಳ ಕೆಟ್ಟದಾಗಿ ವರ್ತಿಸುತ್ತಾರೆ. ಇಂತಹ ನೆಗೆಟಿವ್ ಆಲೋಚನೆಗಳು ಜೀವನದಲ್ಲಿ ಬಹಳಷ್ಟು ಬದಲಾವಣೆಯನ್ನುಂಟು ಮಾಡುತ್ತದೆ. ನಿಮ್ಮನ್ನು ಕತ್ತಲೆಯತ್ತ ಕೊಂಡೊಯ್ಯುತ್ತದೆ. ಜಿಗುಪ್ಸೆಹೊಂದಿದವರಂತೆ ಇರುತ್ತಾರೆ.

ಕೆಲಸ-ಲೈಫ್ ಬ್ಯಾಲೆನ್ಸ್

ಜೀವನದಲ್ಲಿ ಯಾವತ್ತಾದರೂ ನಿಮ್ಮ ಕೆರಿಯರ್‌ಗಿಂತ ಮಿಗಿಲಾದದ್ದು ಇನ್ನೇನೂ ಇಲ್ಲ ಎಂದೆನಿಸಿದಾಗ ನಿಮ್ಮ ಜೀವನದ ನಿರ್ಧಾರಗಳನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂದರ್ಥ. ಕೆಲಸ ಹಾಗೂ ಜೀವನವನ್ನು ಸರಿಯಾಗಿ ಸಾಗಿಸುತ್ತಾ ಹೋಗುವುದು ಸ್ವಲ್ಪ ಕಷ್ಟವೇ ಸರಿ. ಯಾವುದೇ ಒಂದು ಬದಿಗೆ ಹೆಚ್ಚು ಭಾಗುವುದು ಜೀವನದ ಮೇಲೆ ಪರಿಣಾಮ ಬೀರುವುದಂತೂ ಖಂಡಿತ.

ಆಫೀಸ್‌ಗೆ ಹೋಗುವುದೆಂದರೆ ಇಷ್ಟವಿಲ್ಲದಿರುವುದು

ಹೆಚ್ಚಿನವರಿಗೆ ಸೋಮವಾರ ಬಂತೆಂದರೆ ಆಫೀಸ್‌ಗೆ ಹೋಗುವುದು ಇಷ್ಟವಿರೋದಿಲ್ಲ. ಆದರೆ ಆಫೀಸ್‌ಗೆ ಹೋಗುವುದೇ ಕಷ್ಟವಾಗುತ್ತಿದೆ. ಮನಸ್ಸು ಕೇಳುತ್ತಿಲ್ಲ, ಆಫೀಸ್‌ ಎಂದರೆ ಕೋಪ ಬರುತ್ತದೆ ಎಂದಾದರೆ ನೀವು ವಿಷಕಾರಿ ಕೆಲಸದ ಸ್ಥಳದಲ್ಲಿದ್ದೀರ ಎಂದರ್ಥ. ಪ್ರತಿಯೊಬ್ಬರಿಗೂ ತಮ್ಮ ಆಫೀಸ್‌ ಬಗ್ಗೆ ಏನಾದರೊಂದು ಇಷ್ಟವಿರುವುದಿಲ್ಲ. ಹಾಗಂತ ಆಫೀಸ್‌ನ ಬಗ್ಗೆ ಯಾವುದೇ ವಿಷ್ಯವೂ ಇಷ್ಟವಿಲ್ಲವೆಂದಾದರೆ ಸ್ವಲ್ಪ ಯೋಚಿಸಬೇಕಾಗಿರುವಂತಹ ವಿಷ್ಯವೇ ಸರಿ.

ಚಿಹ್ನೆಗಳನ್ನು ಗಮನಿಸುವುದು

ನಿಮಗನಿಸಬಹುದು ಈ ಗುರುತುಗಳೆಲ್ಲಾ ಮೊದಲಿನಿಂದಲೂ ಇದ್ದವು ಆದರೆ ನೀವು ಅದನ್ನು ಗಮನಿಸಿರಲಿಲ್ಲ. ನಿಮ್ಮೊಳಗೆ ಪ್ರಶ್ನೆ ಮೂಡಬಹುದು. ಈ ಮೊದಲೆಲ್ಲಾ ಅವುಗಳು ನನ್ನ ಗಮನಕ್ಕೆ ಯಾಕೆ ಬಂದಿರಲಿಲ್ಲ ಈಗ ಯಾಕೆ ಬಂದಿವೆ? ಯಾಕೆಂದರೆ ಇದಕ್ಕೂ ಮೊದಲು ನೀವು ಕಚೇರಿಯಲ್ಲಿ ಹನಿಮೂನ್ ಪಿರಿಯಡ್‌ನಲ್ಲಿದ್ದಿರಿ. ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಕಾಣಿಸುತ್ತದೆ. ನಮ್ಮ ಕಣ್ಣೆದುರೇ ಎಲ್ಲವೂ ನಡೆಯುತ್ತಿದ್ದರೂ ಅದರತ್ತ ನಾವು ಗಮನ ಹರಿಸುವುದಿಲ್ಲ.

ಸಹಕಾರದ ಕೊರತೆ

ನಿಮ್ಮ ಸಹೋದ್ಯೋಗಿ ಅಥವಾ ಬಾಸ್ ಯಾವಾಗಲೂ ನಿಮ್ಮಲ್ಲಿ ಜಗಳವಾಡುತ್ತಿದ್ದರೆ, ಪ್ರತಿಯೊಬ್ಬರನ್ನು ಕೀಳಾಗಿ ಕಾಣುತ್ತಿದ್ದರೆ ನೀವು ಅದೇ ಕಚೇರಿಯಲ್ಲಿ ಕೆಲಸ ಮುಂದುವರಿಸುವುದೋ ಬೇಡವೋ ಎನ್ನುವುದರ ಬಗ್ಗೆ ಆಲೋಚಿಸಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ಸ್ಪರ್ಧೇ ಒಳ್ಳೆಯದೇ ಆದರೆ ಆರೋಗ್ಯಕರವಲ್ಲದ ಸ್ಪರ್ಧೇ ನಿಮಗೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಒಳ್ಳೆಯದಲ್ಲ.

ಬಾಸ್ ಬೆಂಬಲಿಸುತ್ತಿಲ್ಲ

ನಿಮ್ಮ ಬಾಸ್‌ಗೆ ಕೇವಲ ಕೆಲಸ ಪೂರ್ಣ ಗೊಳಿಸುವುದರಲ್ಲಷ್ಟೇ ಆಸಕ್ತಿ ಹೊರತು ನಿಮಗೆ ಕೆಲಸದ ವಿಷ್ಯದಲ್ಲಿ ಬೆಂಬಲಿಸುವುದಿಲ್ಲವೆಂದಾದರೆ ನೀವು ಆರೋಗ್ಯಕರ ಕೆಲಸದ ವಾತಾವರಣದಲ್ಲಿಲ್ಲ ಎಂದರ್ಥ. ಕೆಲಸದ ವಿಷ್ಯದಲ್ಲಿ ತಾರತಮ್ಯ ತೋರುತ್ತಿದ್ದಾರೆ, ನಿಮಗೆ ಚಾಲೆಂಜಿಂಗ್ ಇಲ್ಲದ ಕೆಲಸವನ್ನು ಮಾಡಲು ಹೇಳುತ್ತಿದ್ದರೆ ಆ ಕಚೇರಿಯಲ್ಲಿ ಕೆಲಸ ಮುಂದುವರಿಸುವ ನಿರ್ಧಾರದ ಬಗ್ಗೆ ಒಮ್ಮೆ ಆಲೋಚಿಸಬೇಕಾಗುತ್ತದೆ.

ಒಳಮನಸ್ಸು ಕೆಲಸ ಬಿಡುವಂತೆ ಒತ್ತಾಯಿಸುತ್ತಿದ್ದರೆ

ಪ್ರತಿಯೊಬ್ಬರಿಗೂ ಮನಸ್ಸೊಂದು ಹೇಳಿದರೆ, ಮೈಂಡ್ ಒಂದು ಹೇಳುತ್ತದೆ. ಆತ್ಮಸಾಕ್ಷಿ ಒಂದು ಹೇಳುತ್ತದೆ. ನಿಮ್ಮ ಹೃದಯ ಅಥವಾ ಆತ್ಮಸಾಕ್ಷಿ ನೀವು ಆ ಕೆಲಸ ಬಿಡುವಂತೆ ಹೇಳುತ್ತಿದ್ದರೆ, ನಿಮ್ಮ ಮೈಂಡ್ ಬೇಡ ಎನ್ನುತ್ತಿರಬಹುದು. ಇಂತಹ ಕಠಿಣ ಸಂದರ್ಭದಲ್ಲಿ ನಿಮ್ಮ ಹೃದಯ ಯಾವತ್ತೂ ನಿಮ್ಮನ್ನು ದಾರಿ ತಪ್ಪಿಸುವುದಿಲ್ಲ.

ನಿಮಗೆ ಗೊತ್ತಿರುವವರೇ ನಿಮ್ಮಲ್ಲಿ ಬದಲಾವಣೆಯನ್ನು ಕಾಣಬಹುದು

ನಿಮ್ಮ ಸ್ನೇಹಿತರಾಗಿರಬಹುದು ಅಥವಾ ಫ್ಯಾಮಿಲಿ ಸದಸ್ಯರಾಗಿರಬಹುದು ನಿಮ್ಮಲ್ಲಿ ಬದಲಾವಣೆಯನ್ನು ಕಾಣುತ್ತಿದ್ದರೆ, ನಿಮ್ಮ ನಡವಳಿಕೆಯಲ್ಲಿ ಬದಲಾವಣೆ ಕಂಡರೆ ಅದೆಲ್ಲವೂ ನಿಮ್ಮ ಕೆಲಸದಲ್ಲಿನ ಒತ್ತಡ, ಕೆಲಸದ ವಾತಾವರಣದಿಂದಲೇ ಆಗಿರುತ್ತದೆ.

ಆಫೀಸ್‌ನಲ್ಲಿ ಹೈ ಡ್ರಾಮ

ಆಫೀಸ್‌ಗೆ ಪ್ರತಿಯೊಬ್ಬರು ಕೆಲಸಕ್ಕೆಂದೇ ಹೋಗುತ್ತಾರೆ. ಆದರೆ ಅಲ್ಲಿ ಕೆಲಸ ನಡೆಯುವುದಕ್ಕಿಂತ ಹೆಚ್ಚು ಹೈ ಡ್ರಾಮ ನಡೆಯುತ್ತಿದ್ದರೆ, ಆಫೀಸ್ ಒಳಗಡೆಯೇ ರಾಜಕೀಯ ನಡೆಯುತ್ತಿದ್ದರೆ ನೀವು ನಿಜವಾಗಿ ವಿಷಕಾರಿ ಕೆಲಸದ ವಾತಾವರಣದಲ್ಲಿದ್ದೀರ ಎಂದರ್ಥ.

ನೀವು ಸಂತೋಷವಾಗಿಲ್ಲ

ನೀ ವು ನಿಮ್ಮ ಕೆಲಸದ ಸ್ಥಳದಲ್ಲಿ ಸ್ವಲ್ಪವೂ ಖುಷಿಯಾಗಿಲ್ಲ ಆದರೂ ಕೆಲವು ಕಾರಣಗಳಿಂದ ಕೆಲಸ ಬಿಡುವಹಾಗಿಲ್ಲ. ಇವೆಲ್ಲವೂ ನಿಮ್ಮ ಆರೋಗ್ಯದ ಮೇಲೆ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಆದರೆ ಯಾವ ಜಾಗದಲ್ಲಿ ನಿಮಗೆ ಸಂತೋಷ ಇಲ್ಲವೋ ಆ ಜಾಗದಲ್ಲಿ ಯಾವತ್ತೂ ಇರಲು ಪ್ರಯತ್ನಿಸಬೇಡಿ.

For Quick Alerts
ALLOW NOTIFICATIONS  
For Daily Alerts

    English summary
    Considering that all of us spend the major portion of our working hours in office, having quality time there is of utmost importance to people who want to lead a happy life. Because of the sheer amount of time that is involved in the same, the mood of a person in their office is well carried over to their personal life.

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more