ಹೊಟ್ಟೆಕಿಚ್ಚು ಪಡೋ ಸಹದ್ಯೋಗಿಯಾಂದಿಗೆ ಕೆಲಸ ಮಾಡೋಕೆ ಆಗುತ್ತೇನ್ರೀ?

Posted By: Sushma Charhra

ಕೆಲಸಕ್ಕೆ ಹೋಗೋದು ಅಂದ್ರೆ ಬೇಜಾರು. ಆಫೀಸಿನ ವಾತಾವರಣ ನಿಮಗೆ ಹಿಡಿಸುತ್ತಿಲ್ಲ. ಏನೋ ಒಂಥರಾ ಮನಸ್ಸಿಗೆ ಕಿರಿಕಿರಿ. ಕೆಲಸದ ಒತ್ತಡ ಒಂದೆಡೆಯಾದ್ರೆ ಕೋಲೀಗ್ಸ್ ಸರಿ ಇಲ್ಲದೇ ಇರುವುದು ಮತ್ತೊಂದು ಕಾರಣ. ಮನಸ್ಸಿಗೆ ಹಿಡಿಸೋ ಸಹದ್ಯೋಗಿಗಳಿದ್ರೆ ಕೆಲಸ ಮಾಡೋದು ಜೋಷ್ ಇರುತ್ತೆ. ಆದ್ರೆ ಸಹದ್ಯೋಗಿ ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುವವರಾಗಿದ್ರೆ ಒಂದು ರೀತಿಯ ಹಿಂಸೆಯಾಗುತ್ತೆ.

ಆದ್ರೆ ಯಾರಿಂದ ಈ ಹಿಂಸೆ ಶುರುವಾಗಿದೆ ಅನ್ನುವುದನ್ನು ನಿಮಗೆ ಗುರುತಿಸಿಕೊಳ್ಳೋದಕ್ಕೆ ಸಾಧ್ಯವಾಗ್ತಿಲ್ವಾ.. ಹಾಗಾದ್ರೆ ಈ ಲೇಖನ ಓದಿ ಯಾವ ಸಹದ್ಯೋಗಿ ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿದ್ದಾರೆ ಅನ್ನುವುದನ್ನು ಗುರುತಿಸುವುದು ಹೇಗೆ ಅನ್ನೋದನ್ನು ನಾವು ನಿಮಗೆ ತಿಳಿಸಿಕೊಡ್ತೀವಿ.ಇದು ಅಷ್ಟು ಸುಲಭದ ವಿಷಯವನ್ನು ಒಂದು ಗೂಢಾಚಾರಿ ಕೆಲಸ ಮಾಡ್ಬೇಕಾಗುತ್ತೆ. ಸೂಕ್ಷ್ಮವಾಗಿ ನಿಮ್ಮ ಸಹದ್ಯೋಗಿಯನ್ನು ಗಮನಿಸಬೇಕಾಗುತ್ತೆ. ನಿಮ್ಮ ಕೆಲಸದ ಜೊತೆ ತಾಳ್ಮೆ ಮತ್ತು ನಾಜೂಕಾಗಿ ಇಂತವರನ್ನು ನಿಭಾಯಿಸುವ ತಾಕತ್ತು ನಿಮ್ಮಲ್ಲಿರಬೇಕಾಗುತ್ತೆ.

ಶಕುನಿ ಬುದ್ಧಿ ತೋರಿಸ್ತಾರೆ ನಿಮ್ಮ ಸಹೋದ್ಯೋಗಿ

ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುವ ಸಹೋದ್ಯೋಗಿ ನಿಮ್ಮಡೊನೆ ಅತ್ಯಾಪ್ತರಂತೆ ವರ್ತಿಸುತ್ತಾರೆ. ಆದ್ರೆ ಶಕುನಿ ಹಾಗೆ ನಿಮ್ಮ ಜೊತೆಗೆ ಇದ್ದು ನಿಮ್ಮ ಬೆನ್ನಿಗೆ ಚೂರಿ ಹಾಕ್ತಾ ಇರ್ತಾರೆ. ಇಂತವರನ್ನು ಬಹಳ ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕಾಗುತ್ತೆ. ಸಹೋದ್ಯೋಗಿಗಳಲ್ಲಿ ಯಾರ್ಯಾರು ನಿಮ್ಮ ಬಗ್ಗೆ ಯಾವ ಭಾವನೆಯನ್ನು ಹೊಂದಿದ್ದಾರೆ ಅನ್ನೋದನ್ನು ಮತ್ತೊಬ್ಬ ಸಹದ್ಯೋಗಿಯ ಬಳಿ ವಿಚಾರಿಸಿಕೊಳ್ಳುತ್ತಾ ಇರುವುದು ಆಫೀಸಿನಲ್ಲಿ ನಿಮ್ಮ ಶ್ರೇಯೋಭಿವೃದ್ಧಿಗೆ ಒಳಿತು.

ಬಾಸ್ ಬಳಿ ನಿಮ್ಮ ಬಗ್ಗೆ ದೂರು ಹೇಳ್ತಾರೆ

ಯಾರೋ ನಿಮ್ಮ ಬಾಸ್ ಬಳಿ ನಿಮ್ಮ ಕೆಲಸದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡ್ತಾ ಇರ್ತಾರೆ. ಅವರು ಬಾಸ್ ಬಳಿ ನಿಮ್ಮ ಬಗ್ಗೆ ಹೇಳುವ ಅಗತ್ಯವೇ ಇರುವುದಿಲ್ಲ. ಆದರೂ ನಿಮ್ಮ ಕೆಲಸದ ಬಗ್ಗೆ ನಿಮ್ಮ ಬಾಸ್ ಬಳಿ ಕಿವಿ ಚುಚ್ಚುತ್ತಾರೆ. ಅವರು ಹೀಗೆ ಹೇಳ್ತಿದ್ರು ಅಂತ ನಿಮ್ಮ ಬಾಸ್ ನಿಮ್ಮ ಬಳಿ ಹೇಳದೇ ಇರಬಹುದು. ಅಥವಾ ಹೇಳಲೂ ಬಹುದು. ನೇರವಾಗಿ ವಿಷಯ ತಿಳಿದರೆ ನಿಮಗೇ ಒಳಿತು. ಒಂದು ವೇಳೆ ತಿಳಿಯದೇ ಹೋದರೆ ನೀವು ಫರ್ಫೆಕ್ಟ್ ಆಗಿದ್ದಾಗಲೂ ನಿಮ್ಮ ಬಾಸ್ ನಿಮ್ಮನ್ನು ಹೆಚ್ಚು ಗಮನಿಸುತ್ತಾರೆಯೇ ಅನ್ನೋದನ್ನು ತಿಳಿದುಕೊಳ್ಳಿ ಅಷ್ಟೇ ಅಲ್ಲ ನಿಮ್ಮ ಬಾಸ್ ನಿಮ್ಮ ಬಳಿ ಕೆಲಸದ ವಿಚಾರದಲ್ಲಿ ನೀವು ಮಾಡಿದ್ದು ಸಾಕಾಗಿಲ್ಲ ಅಥವಾ ಸರಿಯಾಗಿಲ್ಲ ಅಂತ ಪದೇ ಪದೇ ಹೇಳುತ್ತಿದ್ದಾರಾ ಗಮನಿಸಿಕೊಳ್ಳಿ. ನೀವು ಸರಿಯಾಗಿದ್ದಾಗಲೂ ಇಂತಹ ಕಂಪ್ಲೇಂಟ್ ಗಳು ಬರುತ್ತಿದ್ದರೆ ನಿಮ್ಮ ಸಹದ್ಯೋಗಿಗಳಲ್ಲೇ ಯಾರೋ ಒಬ್ಬರು ನಿಮ್ಮ ಬಾಸ್ ಬಳಿ ನಿಮ್ಮ ಬಗ್ಗೆ ನೆಗೆಟಿವ್ ಇಂಪ್ರೆಷನ್ ಬರುವ ಹಾಗೆ ಮಾಡಿರಬಹುದು..ಆ ಸಹೋದ್ಯೋಗಿ ನಿಮ್ಮ ಬಗ್ಗೆ ಹೊಟ್ಟೆಯುರಿ ಪಟ್ಟುಕೊಳ್ಳುತ್ತಿರಬಹುದು.

ಪ್ರಮೋಷನ್ ಆದಾಗ ಕಂಗ್ರ್ಯಾಟ್ಸ್ ಹೇಳದ ಸಹದ್ಯೋಗಿ

ಕೋಲೀಗ್ಸ್ ಅಂದ ಮೇಲೆ ಹೊಟ್ಟೆಯುರಿ ಪಟ್ಟುಕೊಳ್ಳುವವರು ಇದ್ದೇ ಇರುತ್ತಾರೆ. ನಿಮಗೆ ಪ್ರಮೋಷನ್ ಬಂದಾಗ ಯಾರೆಲ್ಲಾ ನಿಮಗೆ ಶುಭಾಶಯ ತಿಳಿಸಿದ್ರು ಅನ್ನೋದನ್ನು ನೆನಪಲ್ಲಿ ಇಟ್ಟುಕೊಳ್ಳಿ. ಯಾವುದಾದ್ರೂ ಸಹೋದ್ಯೋಗಿ ನಿಮಗೆ ಶುಭಾಶಯ ತಿಳಿಸದೇ ಹೋದಲ್ಲಿ, ಅಥವಾ ಶುಭಾಶಯ ತಿಳಿಸುವಾಗ ಅವರ ಮುಖದ ಭಾವನೆಯಲ್ಲಿ ಸಂತೋಷ ಕಾಣದೆ ಇದ್ದಲ್ಲಿ ಅವರಿಗೆ ನಿಮ್ಮ ಪ್ರಮೋಷನ್ ಬಗ್ಗೆ ಹೊಟ್ಟೆಯುರಿ ಆಗಿರಬಹುದು. ಇಂತಹ ಸಹೋದ್ಯೋಗಿಯನ್ನು ಬಹಳ ಕೇರ್ ಫುಲ್ ಆಗಿ ಮುಂದಿನ ದಿನಗಳಲ್ಲಿ ನೀವು ಹ್ಯಾಂಡಲ್ ಮಾಡಬೇಕಾಗುತ್ತದೆ.

ಯಾವಾಗಲೂ ನಿಮ್ಮ ಕಾಂಪಿಟೇಟರ್ ಆಗಿರಲು ಬಯಸುತ್ತಾರೆ

ನೀವು ನಿಮ್ಮ ಟಾರ್ಗೆಟ್ ತಲುಪಿರ್ತೀರಿ. ಆದರೆ ನಿಮ್ಮ ಸಹೋದ್ಯೋಗಿಯೊಬ್ಬ ಟಾರ್ಗೆಟ್ ಗಿಂತಲೂ ಹೆಚ್ಚು ಮಾಡಲು ಪ್ರಯತ್ನಿಸುತ್ತಾನೆ. ಮತ್ತು ಅದನ್ನು ಎಲ್ಲರ ಬಳಿ ಹೇಳಿಕೊಳ್ಳುತ್ತಾನೆ ನಾನು ಇಷ್ಟು ಮಾಡಿದೆ, ಅಷ್ಟು ಮಾಡಿದೆ ಎಂದು ತನ್ನನ್ನು ತಾನು ಹೆಚ್ಚು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಈ ಸಹೋದ್ಯೋಗಿ ನಿಮ್ಮನ್ನು ನೇರವಾಗಿ ದೂರುವುದಿಲ್ಲ. ಆದರೆ ನಿಮಗಿಂತ ಹೆಚ್ಚು ಮಾಡಿದ್ದೀನಿ ಅನ್ನುವುದನ್ನು ಎಲ್ಲರಿಗೂ ತಿಳಿಯುವಂತೆ ಮಾಡುತ್ತಾನೆ/ಳೆ. ಅಷ್ಟೇ ಅಲ್ಲ ಟಾರ್ಗೆಟ್ ಗಿಂತ ಹೆಚ್ಚು ಮಾಡಲು ಎಷ್ಟು ಕಷ್ಟ ಪಟ್ಟೀದ್ದೀನಿ ಗೊತ್ತಾ ಅಂತ ತನ್ನನ್ನು ತಾನು ಮತ್ತಷ್ಟು ಹೊಗಳಿ ಎಲ್ಲರ ಬಳಿ ಸಿಂಪತಿ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಅನುಮಾನವೇ ಬೇಡ. ಈ ಸಹದ್ಯೋಗಿಗೆ ನಿಮ್ಮ ಮೇಲೆ ಹೊಟ್ಟೆಯುರಿ ಇದೆ ಅನ್ನುವುದರ ಬಗ್ಗೆ. ಇದಕ್ಕೆ ಏನು ಪರಿಹಾರ ಮಾಡಬಹುದು ಅನ್ನುವುದನ್ನು ನೀವೇ ಆಲೋಚಿಸಬೇಕು.

ನಿಮ್ಮನ್ನ ಅಂಡರ್ ಎಸ್ಟಿಮೇಟ್ ಮಾಡುವ ಸಹದ್ಯೋಗಿ

ನೀವು ಉತ್ತಮ ಕೆಲಸಗಾರನೆ. ಅದಕ್ಕೆ ನಿಮ್ಮ ಬಾಸ್ ಕೂಡ ನಿಮ್ಮನ್ನು ಹೊಗಳುತ್ತಾರೆ. ನಿಮ್ಮ ಆತ್ಮವಿಶ್ವಾಸವೂ ಚೆನ್ನಾಗಿದೆ. ಆದ್ರೆ ಹೊಟ್ಟೆಕಿಚ್ಚು ಪಡುವ ಸಹದ್ಯೋಗಿಗಳಲ್ಲಿ ಕೆಲವರು ನಿಮ್ಮನ್ನ ಬೇಕಂತಲೆ ನಿಮ್ಮ ಬಳಿಯೇ ಅಂಡರ್ ಎಸ್ಟಿಮೇಟ್ ಮಾಡಿ ಮಾತನಾಡ್ತಾರೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವ ಪ್ರಯತ್ನ ಅಷ್ಟೇ., ನಿಮ್ಮ ಒಳ್ಳೆಯ ಪ್ರಯತ್ನವನ್ನು ಅದೇನು ಮಹಾ ಕೆಲಸವಲ್ಲ ಬಿಡು ಅನ್ನುವಂತೆ ವರ್ತಿಸುತ್ತಾರೆ. ಬಟ್ ಬಿ ಕೇರ್ ಫುಲ್.. ನಿಮ್ಮ ಕೆಲಸದ ಬಗ್ಗೆ ನೀವು ಹೆಚ್ಚೆಚ್ಚು ಕಾನ್ಫಿಡೆಂಟ್ ಆಗಿರಬೇಕು. ಇಲ್ಲದೇ ಹೋದಲ್ಲಿ ಇಂತಹ ಸಹದ್ಯೋಗಿಗಳಿಂದ ನಿಮ್ಮ ಕ್ರೆಡಿಟ್ ಲೈನ್ ಕಡಿಮೆಯಾಗುತ್ತೆ ಅಷ್ಟೇ..

ನಿಮ್ಮ ಕೆಲಸದ ಸಮಯದಲ್ಲಿ ಆಗಾಗ ತೊಂದರೆ ನೀಡುತ್ತಲೇ ಇರುವುದು.

ಕೆಲವು ಕಾಲೇಜು ಗೆಳೆಯರನ್ನು ನೆನಪಿಸಿಕೊಳ್ಳಿ. ನಿಮ್ಮೊಂದಿಗೆ ಹರಟೆ ಹೊಡೆದು ಸಮಯ ಹಾಳು ಮಾಡಿ ನಿಮ್ಮನ್ನ ರಾತ್ರಿ ನಿದ್ದೆ ಮಾಡಿಸಿ, ಅವರು ರಾತ್ರಿಯೆಲ್ಲ ಓದಿ ಪರೀಕ್ಷೆಯಲ್ಲಿ ಪಾಸಾಗ್ತಾರೆ ನೋಡಿ ಅಂತ ಬುದ್ದಿಯ ಕೋಲೀಗ್ಸ್ ಆಫೀಸಿನಲ್ಲೂ ನಿಮಗೆ ಕಾಣಸಿಗ್ತಾರೆ. ಅವರು ಹೇಗೆ ಅಂದ್ರೆ ಓವರ್ ಟೈಮ್ ಕೆಲಸ ಮಾಡ್ತಿದ್ದಾರೆ ಅನ್ನುವಂತೆ ಬಿಂಬಿಸಿಕೊಳ್ತಾರೆ. ಆದ್ರೆ ಕೆಲಸದ ಸಮಯದಲ್ಲಿ ನಿಮ್ಮೊಂದಿಗೆ ಹರಟೆ ಹೊಡೆದು, ನಿಮ್ಮ ಸಮಯ ಹಾಳು ಮಾಡಿ, ನಿಮ್ಮ ಪ್ರೊಡಕ್ಟಿವಿಟಿಯನ್ನು ಕಡಿಮೆಗೊಳಿಸ್ತಾರೆ. ಅಂದರೆ ನೀವು ಮುಂದೆ ಬರಬಾರದು ಅನ್ನೋದು ಅವರ ಉದ್ದೇಶ. ಇವರಿಗೆ ನಿಮ್ಮ ಬಗ್ಗೆ ಸ್ಟಮಕ್ ಬರ್ನಿಂಗ್ . ನಿಮಗಿಂತ ಅವರು ಮುಂದಿರಬೇಕು ಅನ್ನುವ ಭಾವನೆ ಅಷ್ಟೇ.

ಒಟ್ಟಿನಲ್ಲಿ ಆಫೀಸಿನಲ್ಲಿ ಚಿತ್ರವಿಚಿತ್ರ ಗುಣಗಳಿರುವ ಸಹದ್ಯೋಗಿಗಳು ಸಿಗ್ತಾರೆ. ಅವರಲ್ಲಿ ಈ ಹೊಟ್ಟೆಕಿಚ್ಚು ಪಡುವ ಸಹೋದ್ಯೋಗಿಗಳಿಂದ ನೀವು ಸ್ವಲ್ಪ ಎಚ್ಚರದಿಂದ ಇರಬೇಕಾಗುತ್ತೆ. ಮೊದಲು ಅವರನ್ನು ಗುರುತಿಸಿಕೊಂಡು ಮುನ್ನೆಡೆದರೆ ಆಫೀಸಿನಲ್ಲಿ ನೀವು ಉತ್ತಮ ಕೆಲಸಗಾರರಾಗಿ ಇರಬಹುದು.

English summary
A large part of today's workforce consists of mature working professionals with brilliant educational degrees and impressive resumes. One would be tempted to believe, then, that with such backgrounds there would hardly be scope for jealousy to crop up at workplaces. But it is a universally acknowledged truth: the green-eyed monster can turn into a serious issue for both employees and employers, dividing employees into groups and distracting people from work.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia