ಇಂಟರ್‍ವ್ಯೂ ಕೊನೆಯಲ್ಲಿ ಸಂದರ್ಶನಕಾರರಿಗೆ ನೀವು ಕೇಳಲೇ ಬೇಕಾದ ಪ್ರಶೆಗಳು!

ನಿಮಗೆ ಇಂಟರ್‍ವ್ಯೂಗೆ ಕರೆ ಬಂದಿದಾ... ಹಾಗಿದ್ರೆ ನೀವು ಮೊದಲಿಗೆ ಏನು ಮಾಡಬೇಕು ಎಂದ್ರೆ ನಿಮಗೆ ಕರೆ ಬಂದಿರುವ ಕಂಪನಿಯ ಹೆಸರು, ಡೀಟೆಲ್ಸ್ ಗೂಗಲ್ ಅಲ್ಲಿ ಹಾಕಿ ಸರ್ಚ ಮಾಡಿ.

By Kavya

ನಿಮಗೆ ಇಂಟರ್‍ವ್ಯೂಗೆ ಕರೆ ಬಂದಿದಾ... ಹಾಗಿದ್ರೆ ನೀವು ಮೊದಲಿಗೆ ಏನು ಮಾಡಬೇಕು ಎಂದ್ರೆ ನಿಮಗೆ ಕರೆ ಬಂದಿರುವ ಕಂಪನಿಯ ಹೆಸರು, ಡೀಟೆಲ್ಸ್ ಗೂಗಲ್ ಅಲ್ಲಿ ಹಾಕಿ ಸರ್ಚ ಮಾಡಿ. ಕೊನೆಗೆ ನೀವು ಸಂದರ್ಶನಕ್ಕೆ ಹೋದಾಗ ಇಂಟವ್ರ್ಯೂ ಎಲ್ಲಾ ರೀತಿಯ ರೌಂಡ್ ಮುಗಿದ ಬಳಿಕ ನಿಮಗೆ ಏನಾದ್ರೂ ಕೇಳಲು ಪ್ರಶ್ನೆ ಇದೆಯಾ ಎಂದು ಸಂದರ್ಶನಕಾರರು ಪ್ರಶ್ನಿಸುತ್ತಾರೆ. ಆದ್ರೆ ನೀವು ಇಲ್ಲ ಎಂದು ಹೇಳಿ ಸುಮ್ಮನಾಗುತ್ತೀರಿ.

ಇಂಟರ್‍ವ್ಯೂ ವೇಳೆ ನೀವು ಕೇಳಬೇಕಾದ ಪ್ರಶ್ನೆಗಳು!

ಆದ್ರೆ ನೀವು ಆ ರೀತಿ ಹೇಳುವುದು ಸರಿಯಾ ಎಂದು ಒಂದು ಬಾರಿ ಯೋಚಿಸಿ. ನಿಜ ಹೇಳಬೇಕಂದ್ರೆ ಅದು ತಪ್ಪು. ಗೂಗಲ್‍ನಲ್ಲಿ ಕಂಪನಿ ಬಗ್ಗೆ ತಿಳಿದುಕೊಳ್ಳುವುದು ಸಾಮಾನ್ಯ. ಆದ್ರೆ ನೀವು ತಪ್ಪದೇ ಸಂದರ್ಶನದ ಕೊನೆಯ ಭಾಗದಲ್ಲಿ ಕೆಲವೊಂದು ಪ್ರಶ್ನೆಗಳನ್ನ ಕೇಳಬೇಕು. ಇನ್ನು ಎಸ್ ಅಥವಾ ನೋ ಉತ್ತರದ ಪ್ರಶ್ನೆಗಳನ್ನ ಕೇಳಬೇಡಿ ಬದಲಿಗೆ ಲಾಜಿಕ್ ಪ್ರಶ್ನೆಗಳನ್ನ ಕೇಳಿ.

ನೀವು ಕೇಳಬೇಕಾದ ಪ್ರಶ್ನೆಯ ಬಗ್ಗೆ ಮೊದಲಿಗೆ ತಯಾರಾಗಿ. ಇಲ್ಲಿ ಯಾವ ರೀತಿಯ ಲಾಜಿಕ್ ಪ್ರಶ್ನೆಗಳನ್ನ ಕೇಳಬಹುದು ಎಂಬ ಲಿಸ್ಟ್ ಇಲ್ಲಿದೆ.

1 ಯಾವ ರೀತಿಯ ಟ್ರೈನಿಂಗ್ ಆಕ್ಟಿವಿಟೀಸ್ ಆಫರ್ ನೀಡುತ್ತೀರಾ:

ಟ್ರೈನಿಂಗ್ ಎಂಬುವುದು ಕಂಪನಿಯ ಅತೀ ದೊಡ್ಡ ಭಾಗ. ಕೆಲವೊಮ್ಮೆ ಕಂಪನಿಗಳಲ್ಲಿ ಟ್ರೈನಿಂಗ್ ಮೂಲಕ ನೀವು ಕೆರಿಯರ್ ಪ್ರಾರಂಭಿಸಬೇಕು. ಹಾಗಾಗಿ ಸಂದರ್ಶನ ವೇಳೆ ಈ ಪ್ರಶ್ನೆಯನ್ನ ಕಾಂಫಿಡೆಂಟ್ ಆಗಿ ನೀವು ಕೇಳಿ. ಇದರಿಂದ ಸಂದರ್ಶನಕಾರರಿಗೆ ನಿಮ್ಮ ಕಾಂಫಿಡೆಂಟ್ ಬಗ್ಗೆ ತಿಳಿಯುವುದು. ಅಷ್ಟೇ ಅಲ್ಲ ನಿಮಗೆ ಹೊಸತೇನಾದ್ರೂ ಕಲಿಯುವ ಹಂಬಲಿವಿದೆ ಎಂಬ ಭಾವನೆ ಸಂದರ್ಶನಕಾರರಲ್ಲಿ ಮೂಡುತ್ತದೆ.


2 ನನ್ನ ಹುದ್ದೆಯ ಪ್ರತಿ ದಿನದ ಕೆಲಸದ ಬಗ್ಗೆ ತಿಳಿಸುವಿರಾ?

ಇದು ತುಂಬಾ ಪ್ರಯೋಜನಕಾರ ಪ್ರಶ್ನೆಯಾಗಿದೆ. ಈ ಪ್ರಶ್ನೆ ಕೇಳುವುದರಿಂದ ನಿಮಗೆ ನಿಮ್ಮ ಪ್ರತಿದಿನದ ಕೆಲಸದ ಬಗ್ಗೆ ಒಂದು ಐಡಿಯಾ ಸಿಗುತ್ತದೆ. ಪ್ರತಿದಿನ ನೀವು ಯಾವ ರೀತಿಯ ಟಾಸ್ಕ್ ಮುಗಿಸಬೇಕು ಎಂಬ ಮಾಹಿತಿ ನಿಮಗೆ ಸಿಗುತ್ತದೆ. ಅಷ್ಟೇ ಅಲ್ಲ ಆ ಕೆಲಸ ನೀವು ಮಾಡಲು ಸಾಧ್ಯವೇ, ಇಲ್ಲ ನಿಮ್ಮಿಂದ ಸಾಧ್ಯವಿಲ್ಲವೇ ಹಾಗೂ ಆ ಕೆಲಸ ನಿಮಗೆ ಇಂಟ್ರಸ್ಟ್ ಇಲ್ಲವೇ ಅಥವಾ ಇದೆಯೇ ಎಂಬುವುದು ನೀವು ಈ ವೇಳೆ ನಿರ್ಧರಿಸಬಹುದು.


3. ಬ್ರೀಫ್ ಆಗಿ ಕಂಪನಿಯ ಬಗ್ಗೆ ತಿಳಿಸುವಿರಾ?

ನೀವು ಈಗಾಗಲೇ ಕಂಪನಿ ಬಗ್ಗೆ ತಿಳಿದುಕೊಂಡಿರುತ್ತೀರಾ.. ಇದರ ಬಗ್ಗೆ ನೀವೇನು ಹೇಳುತ್ತಿರಾ ಎಂದು ನಿಮಗೆ ಸಂದರ್ಶನಕಾರರು ನೇರವಾಗಿ ಕೇಳಬಹುದು. ಆದ್ರೆ ಇದೀಗ ನಿಮ್ಮ ಸರದಿ. ಕಂಪನಿ ಕಲ್ಚರ್ ಕಂಪನಿ ರೂಲ್ಸ್ ಹಾಗೂ ಇನ್ನಿತ್ತರ ಪ್ರಮುಖ ವಿಚಾರದ ಬಗ್ಗೆ ತಿಳಿದುಕೊಳ್ಳಿ. ಹಾಗಾಗಿ ಸಂದರ್ಶನದ ಕೊನೆಯ ಟೈಂನಲ್ಲಿ ನೀವು ಈ ಪ್ರಶ್ನೆಗಳನ್ನ ಕೇಳಬಹುದು.


4 ಈ ದೊಡ್ಡ ಕಂಪನಿಯಲ್ಲಿ ನನ್ನಿಂದ ಏನೂ ನಿರೀಕ್ಷಿಸುತ್ತೀರಾ?

ನಂಬಿ ಈ ಪ್ರಶ್ನೆ ನಿಮಗೆ ಸ್ವಲ್ಪ ಕಠೋರವಾಗಿ ಕೇಳಬಹುದು. ಆದ್ರೂ ನೀವು ಈ ಪ್ರಶ್ನೆ ಕೇಳಲೇ ಬೇಕು. ಈ ಪ್ರಶ್ನೆಯಿಂದ ನೀವು ಅಭಿವೃದ್ಧಿ ಹೊಂದುತ್ತೀರಾ ಅಷ್ಟೇ ಅಲ್ಲ ಈ ಪ್ರಶ್ನೆ ಕೇಳಿದಾಗ ಸಂದರ್ಶನಕಾರ ಕಂಪನಿಗೆ ಸಂಬಂಧಿಸಿದಂತೆ ತನ್ನ ಅನುಭವದ ಮಾತುಗಳನ್ನ ತಿಳಿಸಬಹುದು. ಇದರಿಂದ ನಿಮ್ಮಲ್ಲಿ ಕಂಪನಿ ಬಗ್ಗೆ ಒಂದು ಚಿತ್ರಣ ಮೂಡಬಹುದು

5. ಈ ಹುದ್ದೆಯಿಂದ ಯಾವ ರೀತಿಯಲ್ಲಿ ಕೆರಿಯರ್ ಬೆಳವಣಿಗೆಗೆ ಅವಕಾಶವಿದೆ?

ಕೊನೆಯಲ್ಲಿ ಇದೆಲ್ಲಾ ಮಾಡುವುದು ನಿಮ್ಮ ಕೆರಿಯರ್ ಫ್ಯೂಚರ್ ಗೆ ಎಂಬುವುದು ತಿಳಿದುಕೊಳ್ಳಿ. ಹಾಗಾಗಿ ಈ ಪ್ರಶ್ನೆ ಕೇಳಿ, ಇದರಿಂದ ಕಂಪನಿಯು ನಿಮ್ಮ ಕೆರಿಯರ್ ಬೆಳವಣಿಗೆಗೆ ಹೇಗೆ ಸಹಾಯಕವಾಗುತ್ತದೆ ಎಂಬುವುದು ತಿಳಿದುಕೊಳ್ಳಿ. ಅಷ್ಟೇ ಅಲ್ಲ ನಮ್ಮಿಂದ ಯಾವ ರೀತಿಯ ಅಭಿವೃದ್ಧಿ ಕಂಪನಿ ನಿರೀಕ್ಷಿಸುತ್ತಿದೆ ಎಂಬ ಐಡಿಯಾ ಕೂಡಾ ನಿಮಗೆ ಸಿಗುವುದು

6. ಇಂಟರ್ ವ್ಯೂ ವಿಭಾಗದ ಮುಂದಿನ ಸ್ಟೆಪ್ ಯಾವುದು?

ಇದು ಕೊನೆಯದಾಗಿ ಕೇಳಬಹುದಾದಂತಹ ಪ್ರಶ್ನೆ. ಅಷ್ಟೇ ಅಲ್ಲ ಪ್ರಾಮುಖ್ಯತೆ ಇರುವ ಪ್ರಶ್ನೆ ಕೂಡಾ. ಈ ಪ್ರಶ್ನೆ ಕೇಳುವುದರಿಂದ ನಿಮಗೆ ಯಾವಾಗ ಕಾಲ್ ಲೆಟರ್ ಬರಬಹುದು ಎಂಬ ಅಂದಾಜು ಮೂಡುತ್ತದೆ. ಅಷ್ಟೇ ಅಲ್ಲ ಈ ಪ್ರಶ್ನೆ ಕೇಳುವುದರಿಂದ ನೀವು ಕೆಲಸ ಮಾಡಲು ಆದಷ್ಟು ಬೆಗ ಸಿದ್ಧರಿದ್ದೀರಿ ಎಂದು ಕಂಪನಿಗೆ ತಿಳಿಯುತ್ತದೆ.

ಈ ಪ್ರಮುಖ ಪ್ರಶ್ನೆಗಳನ್ನ ನೀವು ಕೂಡಾ ಸಂದರ್ಶನಕಾರರಿಗೆ ಕೇಳಿ, ನಿಮ್ಮ ಸ್ಮಾರ್ಟನೆಸ್ ನಿಂದ ಆ ಹುದ್ದೆ ನಿಮ್ಮದಾಗುವುದರಲ್ಲಿ ಯಾವುದೇ ಡೌಟ್ ಇಲ್ಲ.

For Quick Alerts
ALLOW NOTIFICATIONS  
For Daily Alerts

English summary
whenever you get a call for an interview, all you do google company's name and read some details, facts. At the interview employer asks, Do you have any questions. honestly you have to say yes. you have to ask some logical questions. when These were the smart questions you should ask at the end of an interview.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X