Social Media Day 2021 : ಈ ದಿನದ ಇತಿಹಾಸ, ಮಹತ್ವ ಮತ್ತು ಇನ್ನಷ್ಟು ಮಾಹಿತಿ ನಿಮಗಾಗಿ ಇಲ್ಲಿದೆ

ಸಾಮಾಜಿಕ ಮಾಧ್ಯಮ ದಿನದ ಇತಿಹಾಸ, ಮಹತ್ವ ಮತ್ತು ಇನ್ನಷ್ಟು ಮಾಹಿತಿ ಇಲ್ಲಿದೆ

ಸಾಮಾಜಿಕ ಜಾಲತಾಣ ಎನ್ನುವುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ನಾವು ಜಗತ್ತನ್ನು ನೋಡುವ ರೀತಿ ಮತ್ತು ನಮ್ಮ ಸ್ನೇಹಿತರು, ಪರಿಚಯಸ್ಥರು ಮತ್ತು ನಮ್ಮ ಪ್ರೀತಿಪಾತ್ರರ ಜೊತೆ ಸಂವಹನ ನಡೆಸುವ ರೀತಿ ತುಂಬಾನೆ ಬದಲಾಗಿದೆ. ಈ ಸಾಮಾಜಿಕ ಜಾಲತಾಣಗಳು ನಮ್ಮನ್ನು ಅಷ್ಟೊಂದು ಬದಲಾಯಿಸಿದೆ ಎಂದರೆ ತಪ್ಪಾಗಲಾರದು.

 

ಪ್ರತಿವರ್ಷ ಜೂನ್ 30 ಅನ್ನು ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಸಾಮಾಜಿಕ ಮಾಧ್ಯಮಗಳ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ. ಬನ್ನಿ ಈ ದಿನದ ಇತಿಹಾಸ, ಮಹತ್ವ ಮತ್ತು ಇನ್ನಷ್ಟು ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಸಾಮಾಜಿಕ ಮಾಧ್ಯಮ ದಿನದ ಇತಿಹಾಸ:

ಜಾಗತಿಕ ಸಂವಹನ ಮತ್ತು ಪ್ರಾಮುಖ್ಯತೆಯನ್ನು ಸಾರುವ ದೃಷ್ಟಿಯಿಂದ ಮೊದಲ ಬಾರಿಗೆ 2010 ಜೂನ್​ 30ರಂದು ಮಾಷಬಲ್​ ವಿಶ್ವ ಸಾಮಾಜಿಕ ಜಾಲತಾಣ ದಿನವನ್ನು ಆಚರಿಸಿದರು. ಮೊದಲ ಸಾಮಾಜಿಕ ವೇದಿಕೆಯಾದ ಸಿಕ್ಸ್​ಡಿಗ್ರೀಸ್​ಅನ್ನು 1997ರಲ್ಲಿ ಆಂಡ್ರ್ಯೂ ವೈನ್​ರಿಚ್​ ಪ್ರಾರಂಭಿಸಿದರು. ಇದರಲ್ಲಿ ಮೊದಲಿಗೆ ವೆಬ್​ಸೈಟ್​ ಬಳಕೆದಾರರಿಗೆ ತಮ್ಮ ಸ್ನೇಹಿತರು, ಕುಟುಂಬದ ಸದಸ್ಯರನ್ನು ಸೇರಿಸಲು ಅವಕಾಶ ಮಾಡಿಕೊಡಲಾಯಿತು. ತದನಂತರ ಶಾಲಾ ಅಂಗಸಂಸ್ಥೆಗಳು, ಪ್ರೊಫೈಲ್​ಗಳಂತಹ ವಿವಿಧ ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಜತೆಗೆ ಒಂದು ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿತ್ತು. 2001ರಲ್ಲಿ ಈ ವೇದಿಕೆ ಮುಚ್ಚಲ್ಪಟ್ಟಿತು.

ಆರಂಭದಲ್ಲಿ ಫೇಸ್​ಬುಕ್​ಅನ್ನು ಜನರು ಸಂವಹನ ನಡೆಸಲು ಬಳಸುತ್ತಿದ್ದರು. ಆದರೆ ಈಗ ಸಮಯ ಬದಲಾಗಿದೆ ಅಭಿವೃದ್ಧಿ ಹೊಂದುತ್ತಿರುವ ಯುಗದಲ್ಲಿ ಟ್ವಿಟರ್, ಇನ್​ಸ್ಟಾಗ್ರಾಂ, ಲಿಂಕ್ಡ್​ಇನ್​, ಸ್ನ್ಯಾಪ್‌ಚಾಟ್ ನಂತಹ ಅನೇಕ ಪ್ಲಾಟ್‌ಫಾರ್ಮ್‌ಗಳು ಮಾಹಿತಿಯ ಮೂಲಗಳಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.

 

ಸಾಮಾಜಿಕ ಮಾಧ್ಯಮ ದಿನದ ಮಹತ್ವ:

ಸಾಮಾಜಿಕ ಮಾಧ್ಯಮ ವೇದಿಕೆಗಳ ಪ್ರಾಮುಖ್ಯತೆ ಮತ್ತು ಅವು ನಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಎತ್ತಿ ಹಿಡಿಯಲು ಸಾಮಾಜಿಕ ಮಾಧ್ಯಮ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.

ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದ ಬಳಕೆ:

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸಾಮಾಜಿಕ ಮಾಧ್ಯಮವು ಭರವಸೆಯ ಕಿರಣವಾಗಿ ಹೊರಹೊಮ್ಮಿತು. ನಾವು ಟ್ವಿಟರ್, ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್ ಮೂಲಕ ಸ್ಕ್ರಾಲ್ ಮಾಡಿದರೆ ಹಾಸಿಗೆಗಳು, ಆಮ್ಲಜನಕ, ವೆಂಟಿಲೇಟರ್‌ಗಳು ಮತ್ತು ರೆಮ್‌ಡೆಸಿವಿರ್ ಗಾಗಿ ತೀವ್ರವಾದ ಮನವಿಗಳನ್ನು ಪ್ರಮುಖ ಪ್ಲಾಟ್‌ಫಾರ್ಮ್‌ಗಳಲ್ಲಿ ನೋಡುತ್ತಿದ್ದೆವು. ಅಲ್ಲದೆ ಸುತ್ತ ಮುತ್ತಲಿನ ಜನರ ನೋವು ದುಖಃಗಳನ್ನು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸಕಾರಾತ್ಮಕವಾಗಿ ನೋಡುವುದಾದರೆ ಈ ಸಾಮಾಜಿಕ ಮಾಧ್ಯಮದ ಮೂಲಕ ಅನೇಕರು ಕಷ್ಟದಲ್ಲಿರುವವರಿಗೆ ನೆರವಾಗಿದ್ದಾರೆ. ಇನ್ನೊಂದೆಡೆ ಸರ್ಕಾರವು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ದುರುಪಯೋಗಪಡಿಸಿಕೊಂಡಿದೆ, ಆರೋಗ್ಯ ಮೂಲಸೌಕರ್ಯಳು ಕುಸಿಯುತ್ತಿದೆ, ವೈದ್ಯಕೀಯ ನಿರ್ಲಕ್ಷ್ಯ, ವೈದ್ಯರು ಮತ್ತು ವೈದ್ಯಕೀಯ ಸಂಸ್ಥೆಗಳ ನಿರಾಸಕ್ತಿ ಕುರಿತಾದ ಕೆಲವು ಪೋಸ್ಟ್ ಗಳನ್ನು ನಾವು ನೋಡಿದ್ದೇವೆ ಇದು ಸಮಸ್ಯೆಗಳ ಭೀಕರತೆಯನ್ನು ಕೂಡ ಎತ್ತಿ ತೋರಿಸಿದೆ.

ಜಗತ್ತಿನಾದ್ಯಂತ ಮತ್ತು ಭಾರತದಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು:

ವರದಿಯೊಂದರ ಪ್ರಕಾರ ಇಂಟರ್ನೆಟ್ ಬಳಕೆದಾರರು ಕಳೆದ ವರ್ಷದಲ್ಲಿ ಶೇಕಡಾ 7.6 ರಷ್ಟು ಏರಿಕೆಯಾಗಿದೆ ಮತ್ತು 4.72 ಬಿಲಿಯನ್ ತಲುಪಿದ್ದಾರೆ. ಇದು ಈಗ ವಿಶ್ವದ ಒಟ್ಟು ಜನಸಂಖ್ಯೆಯ ಶೇಕಡಾ 60 ಕ್ಕಿಂತ ಹೆಚ್ಚು. ಒಂದು ವರ್ಷದಲ್ಲಿ ಅರ್ಧ ಶತಕೋಟಿಗೂ ಹೆಚ್ಚು ಹೊಸ ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಸೇರ್ಪಡೆಗೊಂಡಿದ್ದಾರೆ. ಈಗ ಏಪ್ರಿಲ್ 2021ರ ವೇಳೆಗೆ 4.33 ಬಿಲಿಯನ್ ಸಾಮಾಜಿಕ ಮಾಧ್ಯಮ ಬಳಕೆದಾರರಿದ್ದಾರೆ ಎಂದು ವರದಿ ಹೇಳುತ್ತಿದೆ.

ಭಾರತದಲ್ಲಿ ಜನವರಿ 2021ರ ಹೊತ್ತಿಗೆ 448 ಮಿಲಿಯನ್ ಸೋಷಿಯಲ್ ಮೀಡಿಯಾ ಬಳಕೆದಾರರಿದ್ದಾರೆ. 2020 ಮತ್ತು 2021 ರ ನಡುವೆ 78 ಮಿಲಿಯನ್ (+ 21%) ರಷ್ಟು ಬಳಕೆದಾರರು ಹೆಚ್ಚಾಗಿದ್ದಾರೆ. ವಾಟ್ಸಾಪ್ ಭಾರತದಲ್ಲಿ ಹೆಚ್ಚು ಬಳಕೆಯಾಗುವ ಅಪ್ಲಿಕೇಶನ್ ಆಗಿದ್ದು, ನಂತರ ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಅನ್ನು ಹೆಚ್ಚು ಬಳಸಲಾಗುತ್ತದೆ.

ಬಾರ್ ಮತ್ತು ಬೆಂಚ್ ವರದಿಯ ಪ್ರಕಾರ ಭಾರತದಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಹೀಗಿದ್ದಾರೆ:

ವಾಟ್ಸಾಪ್ -53 ಕೋಟಿ
ಯೂಟ್ಯೂಬ್ -44.8 ಕೋಟಿ
ಫೇಸ್‌ಬುಕ್ -41 ಕೋಟಿ
ಇನ್‌ಸ್ಟಾಗ್ರಾಮ್- 21 ಕೋಟಿ
ಟ್ವಿಟರ್ -1.75 ಕೋಟಿ

ವಿಶ್ವ ಸಾಮಾಜಿಕ ಮಾಧ್ಯಮ ದಿನದ ಉಲ್ಲೇಖಗಳು:

* "ಸಾಮಾಜಿಕ ಮಾಧ್ಯಮವು ಕೇವಲ ಮಾಧ್ಯಮವಲ್ಲ. ಕೇಳುವುದು, ತೊಡಗಿಸಿಕೊಳ್ಳುವುದು ಮತ್ತು ಸಂಬಂಧಗಳನ್ನು ಬೆಳೆಸುವುದು ಮುಖ್ಯ" - ಡೇವಿಡ್ ಆಲ್ಸ್ಟನ್

* "ಗೌಪ್ಯತೆ ಸತ್ತಿದೆ, ಸಾಮಾಜಿಕ ಮಾಧ್ಯಮವು ಧೂಮಪಾನ ಗನ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ" - ಪೀಟ್ ಕ್ಯಾಶ್ಮೋರ್, ಮಾಷಬಲ್ ಸಿಇಒ

* ಸೋಷಿಯಲ್ ಮೀಡಿಯಾವು "ಸಾರ್ವಜನಿಕರನ್ನು" ಪಿಆರ್‌ಗೆ ಮತ್ತು "ಮಾರುಕಟ್ಟೆಯನ್ನು" ಮಾರ್ಕೆಟಿಂಗ್‌ಗೆ ಕಾಲಿರುಸಿರುಸುವಂತೆ ಮಾಡುತ್ತದೆ" -ಕ್ರಿಸ್ ಬ್ರೋಗನ್, ನ್ಯೂ ಮಾರ್ಕೆಟಿಂಗ್ ಲ್ಯಾಬ್ಸ್ ಅಧ್ಯಕ್ಷ

For Quick Alerts
ALLOW NOTIFICATIONS  
For Daily Alerts

English summary
Social media day is today, So here we are giving history, significance and everything you need to know here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X