Solar Eclipse 2021: ವರ್ಷದ ಮೊದಲ ಸೂರ್ಯಗ್ರಹಣ ಎಲ್ಲಿ, ಯಾವಾಗ ಮತ್ತು ಹೇಗೆ ನೋಡಬಹುದು ?

ವರ್ಷದ ಮೊದಲ ಸೂರ್ಯಗ್ರಹಣ ಎಲ್ಲಿ ಮತ್ತು ಯಾವಾಗ ? ಇಲ್ಲಿದೆ ಮಾಹಿತಿ

ಚಂದ್ರಗ್ರಹಣ ಸಂಭವಿಸಿದ ಹದಿನೈದು ದಿನಗಳ ಒಳಗಾಗಿ ಈ ವರ್ಷದ ಸೂರ್ಯಗ್ರಹಣವೂ ಕೂಡ ಸಂಭವಿಸಲಿದೆ. ಆಂಗ್ಲ ಕ್ಯಾಲೆಂಡರ್ ಅನುಸಾರ ವರ್ಷದ ಮಧ್ಯಭಾಗದಲ್ಲಿ ಕಾಣುತ್ತಿರುವ ಈ ಸೂರ್ಯಗ್ರಹಣವು 2021ರ ಮೊದಲ ಸೂರ್ಯ ಗ್ರಹಣವಾಗಿದೆ. ಈ ಬಾರಿ ಉಂಗುರ ತೊಡಿಸಿದ ರೀತಿಯಲ್ಲಿ ಸೂರ್ಯ ಗ್ರಹಣ ಕಾಣಿಸಲಿದ್ದು ಅದನ್ನು ರಿಂಗ್ ಆಫ್ ಫೈರ್ ಅರ್ಥಾತ್ ಬೆಂಕಿಯ ಉಂಗುರ ಎಂದು ಬಣ್ಣಿಸಲಾಗಿದೆ.

ಸದರಿ ಗ್ರಹಣದ ಸಂದರ್ಭದಲ್ಲಿ ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯಿಂದ ಸಾಕಷ್ಟು ದೂರಕ್ಕೆ ಇರುವ ಕಾರಣ ಸೂರ್ಯನನ್ನು ಸಂಪೂರ್ಣ ಮುಚ್ಚಲು ವಿಫಲವಾಗಿ ಮಧ್ಯಭಾಗವನ್ನಷ್ಟೇ ಆಕ್ರಮಿಸುತ್ತಾನೆ. ಆಗ ಸೂರ್ಯನ ಹೊರ ಭಾಗವಷ್ಟೇ ವೃತ್ತಾಕಾರದಲ್ಲಿ ಕಾಣಿಸಲಿದ್ದು ಅದು ಬೆಂಕಿಯ ಉಂಗುರದಂತೆ ಗೋಚರಿಸಲಿದೆ.

ಸೂರ್ಯಗ್ರಯಣ ಯಾವ ಸಮಯದಲ್ಲಿ ನಡೆಯಲಿದೆ ?:

ಜೂನ್ 10,2021 ರಂದು ವರ್ಷದ ಮೊದಲ ಸೂರ್ಯಗ್ರಹಣವು ಗುರುವಾರ ಮಧ್ಯಾಹ್ನ 1:42ಕ್ಕೆ ಆರಂಭವಾಗಲಿದ್ದು, ಸಂಜೆ 6: 41ಕ್ಕೆ ಕೊನೆಗೊಳ್ಳುವುದು. ಇದು ವಾರ್ಷಿಕ ಸೂರ್ಯಗ್ರಹಣವಾಗಿದ್ದು, ಗ್ರಹಣ ಸಮಯದಲ್ಲಿ ಬೆಂಕಿಯ ಉಂಗುರದಂತೆ ಗೋಚರಿಸುತ್ತದೆ.

ಸೂರ್ಯಗ್ರಹಣ ಎಲ್ಲೆಲ್ಲಿ ನೋಡಬಹುದು ?:

ಜೂನ್‌ 10ರಂದು ನಡೆಯುವ ಸೂರ್ಯಗ್ರಹಣವು ಉತ್ತರ ಅಮೆರಿಕಾ, ಯುರೋಪ್‌ ಮತ್ತು ಏಷ್ಯಾದ ಉತ್ತರ ಭಾಗದಲ್ಲಿ ಭಾಗಶಃ ಕಂಡುಬರುತ್ತದೆ. ಅಲ್ಲದೇ ಉತ್ತರ ಕೆನಡಾ,ಗ್ರೀನ್‌ಲ್ಯಾಂಡ್‌ ಮತ್ತು ರಷ್ಯಾದಲ್ಲಿ ಪೂರ್ಣ ಸೂರ್ಯಗ್ರಹಣವನ್ನು ಕಾಣಬಹುದು. ಭಾರತದಲ್ಲಿ ಕೂಡಾ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. ಆದರೆ ಭಾರತದ ಕೆಲವೆಡೆ ಮಾತ್ರ ಈ ಗ್ರಹಣ ಗೋಚರವಾಗಲಿದೆ.

ಸೂರ್ಯಗ್ರಹಣವನ್ನು ನೋಡುವುದು ಹೇಗೆ ?:

ಸೂರ್ಯಗ್ರಹಣವನ್ನು ನೇರವಾಗಿ ನೋಡುವುದು ಸೂಕ್ತವಲ್ಲ ಇದರಿಂದ ಕಣ್ಣಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಬಾಕ್ಸ್ ಪ್ರೊಜೆಕ್ಟರ್ ಮೂಲಕ ಸೂರ್ಯನನ್ನು ವೀಕ್ಷಿಸುವುದು ಅಥವಾ ಬೈನಾಕ್ಯುಲರ್‌ಗಳು ಅಥವಾ ಟೆಲಿಸ್ಕೋಪ್ ಬಳಸಿ ಸೂರ್ಯಗ್ರಹಣವನ್ನು ವೀಕ್ಷಿಸಲು ಸುರಕ್ಷಿತ ಮತ್ತು ಸುಲಭವಾದ ಮಾರ್ಗವಾಗಿದೆ.

2021 ರ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 4 ರಂದು ಸಂಭವಿಸುತ್ತದೆ. ಇದು ಒಟ್ಟು ಸೂರ್ಯಗ್ರಹಣವಾಗಿದ್ದು, ಇದು ಬೆಳಿಗ್ಗೆ 10:59 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 03:07 ಕ್ಕೆ ಕೊನೆಗೊಳ್ಳುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Solar eclipse is on june 10. Here is the details about where, when and how to watch solar eclipse.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X