ಮೊದಲ ವರ್ಷದ ಬಿಟೆಕ್ ವಿದ್ಯಾರ್ಥಿಗಳಿಗೆ ಯಾವ ಪುಸ್ತಕ ಬೆಸ್ಟ್ ಗೊತ್ತಾ?

By Nishmitha B

ನೀವು ಕೂಡಾ ಬಿಟೆಕ್ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದರೆ ಇಲ್ಲ ನಿಮ್ಮ ಸಹೋದರಿ, ಸಹೋದರ, ಸ್ನೇಹಿತರು ಯಾರಾದ್ರೂ ಬಿಟೆಕ್ ಮೊದಲ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದರೆ ಅವರಿಗಾಗಿ ಕೆರಿಯರ್ ಇಂಡಿಯಾ ಬಿಟೆಕ್ ಮೊದಲ ಪುಸ್ತಕಕ್ಕೆ ಸಂಬಂಧಪಟ್ಟ ಸಲಹೆ ನೀಡುತ್ತಿದೆ. ನೀವು ಬಿಟೆಕ್ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದರೆ, ನಿಮಗೆ ಬೇಕಾದ ಪುಸ್ತಕಗಳು ಸಿಗುತ್ತಿಲ್ಲವಾಗಿದ್ದರೆ ನಾವು ನಿಮಗೆ ಸಲಹೆ ನೀಡುತ್ತೇವೆ ನೋಡಿ.

ಇಲ್ಲಿ ಕೆಲವೊಂದು ಪುಸ್ತಕಗಳ ಪಟ್ಟಿ ನೀಡಿದ್ದೇವೆ. ಈ ಪುಸ್ತಕಗಳು ನಿಮಗೆ ಸ್ಟಡೀಸ್ ಗೆ ಸಹಾಯಕವಾಗಲಿದೆ.

ಕೆಮೆಸ್ಟ್ರಿ:

ಕೆಮೆಸ್ಟ್ರಿ:

ಸಾಮಾನ್ಯ ಸ್ಟಡಿಗೆ ಸ್ಟಾನ್ಲೇ ಮನಾಹಾನ್ ಪುಸ್ತಕವನ್ನ ರೆಫರ್ ಮಾಡಬಹುದು. ಪ್ರಯೋಗಗಳಿಗೆ ಪೀಟರ್ ಟೂಲೇ ಪುಸ್ತಕ ಬೆಸ್ಟ್‌. ಸೈದ್ದಾಂತಿಕ ಅಧ್ಯಯನಕ್ಕೆ ಹೈಮಾನ್ ಗೆಸ್ಸೆರ್ ಪುಸ್ತಕ ರೆಫರ್ ಮಾಡಿ. ಈ ಎಲ್ಲಾ ಪುಸ್ತಕಗಳು ನಿಮಗೆ ಸುಲಭವಾಗಿ ಆನ್‌ಲೈನ್‌ನಲ್ಲಿ ಸಿಗುತ್ತದೆ. ಜಾನ್ ಸಿ ಎ ಬೋಯಿನ್ಸ್ ಅವರ ಕೆಮೆಸ್ಟ್ರೀ ಆಫ್ ಫಸ್ಟ್ ಪ್ರಿನ್ಸಿಪಲ್ಸ್ ಪುಸ್ತಕ ತುಂಬಾ ಪ್ರಯೋಜನಕಾರಿಯಾಗಿದೆ

ಗಣಿತ:

ಗಣಿತ:

ಮೂಲಭೂತ ಮಾಹಿತಿಯನ್ನ ಒಳಗೊಂಡಿರುವ ಗಿಲ್ಬರ್ಟ್ ಸ್ಟ್ರಾಂಗ್ ಬೆಸ್ಟ್ ಪುಸ್ತಕ. ಡೆಬೊರಾ ಹ್ಯಾಲೆಟ್ ಅವರು ಬರೆದಿರುವ ಅಪ್ಲೈಡ್ ಕ್ಯಾಲ್ಕುಲಸ್ ಕೂಡಾ ಬೆಸ್ಟ್‌ ಪುಸ್ತಕ. ಫ್ರಾನ್ಸಿಸ್ ಹೈಲ್ಡ್ಬ್ರಾಂಡ್ ಅವರ ಅಪ್ಲೈಡ್ ಮ್ಯಾಥಮ್ಯಾಟಿಕ್ಸ್ ಪುಸ್ತಕವು ಚೆನ್ನಾಗಿದೆ

ಭೌತತಶಾಸ್ತ್ರ:
 

ಭೌತತಶಾಸ್ತ್ರ:

ಭೌತಶಾಸ್ತ್ರ ವಿಷಯಕ್ಕೆ ಸಂಬಂಧಪಟ್ಟಂತೆ ಎ.ಕೆ ಜಾ ಅವರ ಪುಸ್ತಕ ಬೆಸ್ಟ್. ಡೇನಿಯಲ್ ಫ್ಲೆಯಿಸ್ಕ್ ಅವರ ವೆಕ್ಟರ್ಸ್ ಹಾಗೂ ಟೆಂಸರ್ಸ್ ಪುಸ್ತಕ ಬೆಸ್ಟ್. ಸ್ಟೀವ್ ಅಡಾಮ್ಸ್ ಅವರ ಪುಸ್ತಕವು ಭೌತಶಾಸ್ತ್ರಕ್ಕೆ ಹೇಳಿ ಮಾಡಿಸಿದ ಪುಸಕ್ತವಾಗಿದೆ.

ಕಮ್ಯುನಿಕೇಶನ್ ಸ್ಕಿಲ್:

ಕಮ್ಯುನಿಕೇಶನ್ ಸ್ಕಿಲ್:

ಕಮ್ಯುನಿಕೇಶನ್ ಸ್ಕಿಲ್ ಹೆಚ್ಚಿಸಿಕೊಳ್ಳಲು ಮರುಕಟ್ಟೆಯಲ್ಲಿ ತುಂಬಾ ಪುಸ್ತಕಗಳು ಲಭ್ಯವಿದೆ. ಗ್ರಾಮರ್ ಸಂಬಂಧಪಟ್ಟಂತೆ ನಿಮಗೆ ವಿಶೇಷವಾದ ಪುಸ್ತಕ ಬೇಕು ಅಂತಿದ್ರೆ ನೀವು ವ್ರೆನ್ ಹಾಗೂ ಮಾರ್ಟಿನ್ ಅವರ ಪುಸ್ತಕ ರೆಫರ್ ಮಾಡಿ. ಹೆಲಿಯೋ ಗ್ರಾಸಿಯಾ ಅವರ ಪುಸ್ತಕ ಕೂಡಾ ರೆಫರ್ ಮಾಡಬಹುದು

ಎಲೆಕ್ಟ್ರೋನಿಕ್ ಸೈನ್ಸ್:

ಎಲೆಕ್ಟ್ರೋನಿಕ್ ಸೈನ್ಸ್:

ಜೆಫ್ ವಾರಿಂಗ್ ಅವರ ಓಸ್ಕರ್ ಆಂಡ್ ದಿ ಬರ್ಡ್ ಪುಸ್ತಕ ಈ ಸಬ್‌ಜೆಕ್ಟ್ಗೆ ಬೆಸ್ಟ್‌. ಆಂಡ್ರಿಯನ್ ವೇಗುಡ್ ಅವರ ಪುಸ್ತಕ ತುಂಬಾ ವಿವರಣಾತ್ಮಕವಾಗಿ ನೀಡಿದ್ದು ಇದನ್ನು ಕೂಡಾ ರೆಫರ್ ಮಾಡಬಹುದು

ಎಂಜಿನಿಯರಿಂಗ್ ಮೆಕ್ಯಾನಿಕ್ಸ್

ಎಂಜಿನಿಯರಿಂಗ್ ಮೆಕ್ಯಾನಿಕ್ಸ್

ರಸ್ಸೆಲ್ ಹಿಬ್ಬೆಲರ್ ಅವರು ಬರೆದಿರುವ ಡೈನಾಮಿಕ್ಸ್, ಫೆರ್ಡಿನಾಂದ್ ಬೀರ್ ಅವರು ಬರೆದಿರುವ ವೆಕ್ಟರ್ ಮೆಕಾನಿಕ್ಸ್, ಈಗೊರ್ ಪೊಪೊವ್ ಅವರು ಬರೆದಿರುವ ಮ್ಯಾಕಾನಿಕ್ಸ್ ಆಫ್ ಸಾಲಿಡ್ಸ್ ಪುಸ್ತಕಗಳು ಈ ಕೋರ್ಸ್ ಗೆ ಉತ್ತಮ

ಸಮಾಜದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಭಾವ

ಸಮಾಜದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಭಾವ

ಮೆರಿಟ್ ಸ್ಮಿತ್ ಅವರು ಬರೆದಿರುವ ರೆಸ್ಪಾನ್ಸಿಬಲ್ ಸೈನ್ಸ್ ಪುಸ್ತಕ ತುಂಬಾ ಒಳ್ಳೆಯ ಪುಸ್ತಕ ಹಾಗೂ ಫೇಮಸ್ ಕೂಡಾ ಇದೆ. ಉನ್ನತ ಶಿಕ್ಷಣ ಹಾಗೂ ರಿಸರ್ಚ್ ಮಾಡುವವರು ಈ ಪುಸ್ತಕವನ್ನ ರೆಫರ್ ಮಾಡುತ್ತಾರೆ. ಬರ್ಟ್ರಾಂಡ್ ರಸ್ಸೆಲ್ ಅವರ ಮ್ಯಾರೇಜ್ ಆಂಡ್ ಮಾರಲ್ಸ್ ಕೂಡಾ ಬೆಸ್ಟ್ ಪುಸ್ತಕವಾಗಿದೆ

 

 

ಕಂಪ್ಯೂಟರ್ ಆಂಡ್ ಆಟೋ ಕಾಡ್ಗಿಚ್ಚು

ಕಂಪ್ಯೂಟರ್ ಆಂಡ್ ಆಟೋ ಕಾಡ್ಗಿಚ್ಚು

ಕಂಪ್ಯೂಟರ್ ಪದ ಯಾರು ಕೇಳಿಲ್ಲ ಹೇಳಿ. ಇದೊಂದು ತುಂಬಾ ಇಂಟ್ರಸ್ಟಿಂಗ್ ಸಬ್‌ಜೆಕ್ಟ . ಈ ಸಬ್‌ಜೆಕ್ಟ್ಗೆ ಸಂಬಂಧಪಟ್ಟಂತೆ ಮಾರುಕಟ್ಟೆಯಲ್ಲಿ ಅನೇಕ ಪುಸ್ತಕಗಳು ಲಭ್ಯವಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾಮನ್ ಪುಸ್ತಕವೆಂದ್ರೆ ಟಾಕೂರ್ ಹಾಗೂ ಕ್ಯಾಡ್ಫೋಕ್ಸ್. ವಿಷ್ಣು ಪ್ರಿಯಾ ಸಿಂಗ್ ಅವರು ಫೇಮಸ್ ಲೇಖಕ. ಅವರ ಪುಸ್ತಕಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತದೆ. ಟೆರಿ ವೋಹ್ಲರ್, ತಿಮೋತಿ ಸೀನ್, ಕಿಂಗ್ಸ್ಲೆ ಕೆಲವು ಪ್ರಮುಖ ಬರಹಗಾರರ ಪುಸ್ತಕಗಳು ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ ಆನ್‌ಲೈನ್‌ನಲ್ಲಿ ಟೊರಂಟೋ ಪಬ್ಲಿಕ್ ಲೈಬ್ರರಿಯಲ್ಲಿ ಇನ್ನೂ ಹಲವಾರು ಪುಸ್ತಕಗಳು ಲಭ್ಯವಿದೆ

ಇಂಟ್ರಡಕ್ಷನ್ ಟು ಪ್ರೋಗ್ರಾಮಿಂಗ್

ಇಂಟ್ರಡಕ್ಷನ್ ಟು ಪ್ರೋಗ್ರಾಮಿಂಗ್

ಈ ಸಬ್‌ಜೆಕ್ಟ್ ಬಗ್ಗೆ ಸ್ಟ್ರಾಂಗ್ ಹಾಗೂ ಇಂರ್ಫೋಮೇಟಿವ್ ಇಂಟ್ರಡಕ್ಷನ್ ಬೇಕಿದ್ರೆ ಥೋಮಸ್ ಕೊರ್ಮನ್ ಅವರ ಅಲ್ಗೊರಿತ್ಮ್ಸ ಪುಸ್ತಕ ರೆಫರ್ ಮಾಡಿ. ಇವರು ಮೊದಲಿನಿಂದ ಸ್ವಲ್ಪ ಫೇಮಸ್. ಅಷ್ಟೇ ಅಲ್ಲ ಸ್ಟೇಫನ್ ಫೂಟ್ ಅವರ ಪುಸ್ತಕಗಳು ಕೂಡಾ ಜನಪ್ರಿಯ ಪಡೆದಿವೆ

 

 

ಉತ್ಪಾದನಾ ಪ್ರಕ್ರಿಯೆ

ಉತ್ಪಾದನಾ ಪ್ರಕ್ರಿಯೆ

ಘೋಶ್ ಎ ಹಾಗೂ ಮಲ್ಲಿಕ್ ಎ ಅವರು ಬರೆದಿರುವ ಮ್ಯಾನುಫ್ಯಾಕ್ಚರಿಂಗ್ ಸೈನ್ಸ್ ಪುಸ್ತಕ ಮಾರ್ಕೆಟ್ ನಲ್ಲಿರು ಬೆಸ್ಟ್ ಪುಸ್ತಕ. ಮೆಕ್ಯಾನಿಕಲ್ ಇಂಜಿನಿಯರಿಂಗ್, ಕಲ್ಪಕ್ಜಿಯನ್ ಮತ್ತು ಸ್ಕಿಮಿಡ್ ಮೂಲಭೂತ ಪರಿಕಲ್ಪನೆಗಳ ಬಗ್ಗೆ ಯಾರಿಗೆ ತಿಳಿದುಕೊಳ್ಳುವ ಆಸಕ್ತಿ ಇದೆಯೋ ಅವರು ಈ ಪುಸ್ತಕ ರೆಫರ್ ಮಾಡಬಹುದು.

ನಾವು ರೆಫರ್ ಮಾಡಿರುವ ಪುಸ್ತಕಗಳು ಖಂಡಿತ ನಿಮಗೆ ಸಹಾಯಕವಾಗುವುದು ಎಂಬುದು ನಾವು ತಿಳಿಯುತ್ತೇವೆ. ಈ ಪುಸ್ತಕಗಳನ್ನು ನೀವು ನಿಮ್ಮ ಕ್ಲಾಸ್‌ಮೇಟ್ಸ್ , ಸ್ನೇಹಿತರಿಗೆ ಅಷ್ಟೇ ಅಲ್ಲ ನಿಮ್ಮ ಜೂನಿಯರ್ಸ್ ಗೂ ರೆಫರ್ ಮಾಡಬಹುದು

 

For Quick Alerts
ALLOW NOTIFICATIONS  
For Daily Alerts

English summary
Here are few good books that Career India has curated to help you with your task of finding the right book for the right subject requirement especially For 1st Year BTech Students
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X