ಡಾಕ್ಟರ್, ಇಂಜಿನೀಯರ್ ಮಾತ್ರವಲ್ಲ ಈ ವಿಶೇಷ ವೃತ್ತಿಗಳಿಂದಲೂ ನೀವು ಕೈ ತುಂಬಾ ಸಂಪಾದಿಸಬಹುದು

By Nishmitha Bekal

ಭಾರತೀಯ ಪೋಷಕರು ತಮ್ಮ ಮಕ್ಕಳು ದೊಡ್ಡವರಾದ ಮೇಲೆ ಡಾಕ್ಟರ್ಸ್ ಅಥವಾ ಇಂಜಿನೀಯರ್ ಆಗಬೇಕೆಂದು ಕನಸು ಕಾಣುತ್ತಾರೆ. ಅದಕ್ಕಾಗಿ ಹಗಲು ರಾತ್ರಿ ಎನ್ನದೇ ಮಕ್ಕಳು ಓದುತ್ತಿರುವಂತೆ ಒತ್ತಡ ಹೇರುತ್ತಾರೆ. ಹಾಗೂ ಮೆರಿಟ್ ಸೀಟು ಪಡೆಯಲೇಬೇಕೆಂದು ಮಕ್ಕಳ ಜತೆ ತಾವೂ ಕೂಡಾ ನಿದ್ದೆ ಗೆಟ್ಟು ಪರಿಶ್ರಮ ಪಡುತ್ತಾರೆ. ಅಷ್ಟೇ ಅಲ್ಲ ಮೆರಿಟ್ ಸೀಟು ಸಿಕ್ಕಲ್ಲ ಎಂದಾದ್ರೂ ಪರವಾಗಿಲ್ಲ ಡೋನೇಶನ್ ಸೀಟಾದ್ರೂ ಸಿಗಲೆಂದು ಲಕ್ಷಗಟ್ಟಲೆ ಹಣ ಸುರಿಯುತ್ತಾರೆ.

 

ಇನ್ನು ಡಾಕ್ಟರ್ ಹಾಗೂ ಇಂಜಿನೀಯರ್ ಅಂದ್ರೆ ಸಮಾಜದಲ್ಲೇ ಅದೇನೋ ಒಂದು ರೀತಿಯ ಗೌರವ. ಅಷ್ಟೇ ಅಲ್ಲ ಈ ಕೆರಿಯರ್ ನಿಂದ ನೀವು ಕೈ ತುಂಬಾ ಹಣ ಸಂಪಾದನೆ ಕೂಡಾ ಮಾಡಬಹುದು. ಆದ್ರೆ ನಾವಿಲ್ಲಿ ಹೇಳುವ ಕೆರಿಯರ್ ಯನ್ನ ನೀವು ಆಯ್ಕೆ ಮಾಡಿಕೊಂಡ್ರೆ ನೀವು ಕೂಡಾ ಡಾಕ್ಟರ್ , ಇಂಜಿನೀಯರ್ಸ್ ಗಳಷ್ಟೇ ದುಡಿಯಬಹುದು. ಗೌರವ ಕೂಡಾ ಸಂಪಾದಿಸಬಹುದು.

More Read: ಇತ್ತೀಚೆಗಿನ ಯುವಜನತೆಗೆ ಕೈ ತುಂಬಾ ಸಂಪಾದಿಸಲು ಯೂನಿಕ್ ಕೆರಿಯರ್ ಆಯ್ಕೆಗಳು!

ಸ್ಟೈಲಿಸ್ಟ್

ಫ್ಯಾಶನ್ ಎಂಬುವುದು ಒಂದು ಪ್ರೇರಕ ಶಕ್ತಿ ಇದ್ದಂತೆ. ಜಗತ್ತಿನಾದ್ಯಂತ ಗ್ಲಾಮರ್ ದುನಿಯಾದಲ್ಲಿ ಸ್ಟೈಲಿಸ್ಟ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಫ್ಯಾಶನ್ ಡಿಸೈನಿಂಗ್ ಕೋರ್ಸ್ ನೀವು ಮಾಡಿದ್ದಲ್ಲಿ, ನೀವು ಬಾಲಿವುಡ್, ಸ್ಯಾಂಡಲ್ ವುಡ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿ, ಕೈ ತುಂಬಾ ಹಣ ಸಂಪಾದನೆ ಮಾಡಬಹುದು. ಒಮ್ಮೆ ಬಣ್ಣದ ಜಗತ್ತಿಗೆ ಕಾಲಿಟ್ರಿ ಅಂದ್ರೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲ.

ಇಂಸ್ಟಾಗ್ರಾಮರ್/ ಬ್ಲಾಗರ್

ಬ್ಲಾಗರ್ ಅವರುಗಳಿಗೆ ಇದೀಗ ಮಾರ್ಕೆಟ್ ಫೀಲ್ಡ್ ನಲ್ಲಿ ಹೆಚ್ಚಿನ ಬೇಡಿಕೆ ಇದೆ. ನಿಮ್ಮ ಬ್ಲಾಗ್ ಗೆ ಅತೀ ಹೆಚ್ಚು ಫಾಲೋವರ್ಸ್ ಇದ್ದಾರೆ ಎಂದಾದ್ರೆ ನೀವು ಈ ಕೆರಿಯರ್ ಆಯ್ಕೆ ಮಾಡಿಕೊಳ್ಳಬಹುದು. ಸಿಂಪಲ್ ಆಗಿ ಒಂದು ಉಡುಗೆ ಧರಿಸಿ, ಆ ಉಡುಗೆ ಬೆಲೆ, ಕ್ವಾಲಿಟಿ ಹಾಗೂ ಟ್ರೇಂಡ್ ಬಗ್ಗೆ ನಿಮ್ಮ ಬ್ಲಾಗ್ ನಲ್ಲಿ ತಿಳಿಸಿ. ಇದರಿಂದ ಆ ಮೇಲೆ ನೋಡಿ ಹೇಗೆ ಮಾರ್ಕೆಟಿಂಗ್ ನಡೆಯುತ್ತೆ ಎಂದು. ಮಾರ್ಕೆಟಿಂಗ್ ಅಷ್ಟೇ ಅಲ್ಲ ಜಾಹೀರಾತುಗಳು ಕೂಡಾ ನಿಮಗೆ ಸಿಗಲಿದೆ. ಜತೆಗೆ ಗೂಗಲ್, ಇಂಫೋಲಿಂಕ್ಸ್ ಗಳಿಂದ ಕೂಡಾ ನಿಮಗೆ ಆದಾಯವು ಬರುವುದು.

More Read: ಗೃಹಿಣಿಯರು ಮನೆಯಲ್ಲಿ ಕುಳಿತು ಈ ಎಲ್ಲಾ ಕೆಲಸ ಮಾಡಿದ್ರೆ ಕೈ ತುಂಬಾ ಸಂಪಾದಿಸಬಹುದು

 

 

ರಿಯಲ್ ಎಸ್ಟೇಟ್ ಡೀಲರ್ಸ್

ರಿಯಲ್ ಎಸ್ಟೇಟ್ ಡೀಲರ್ಸ್ ಮತ್ತು ಸೇಲ್ಸ್ ಪರ್ಸನ್ ಸದಾ ಖರೀದಿ ಹಾಗೂ ಮಾರಾಟದ ವ್ಯವಹಾರದಲ್ಲಿ ಬ್ಯುಸಿ ಇರುತ್ತಾರೆ. ಯಾರೂ ತಮಗೂ ಒಂದು ನೆಲೆಸಲು ಸ್ವಂತ ಮನೆ ಬೇಕೆಂದು ಕನಸು ಕಾಣುತ್ತಿರುತ್ತಾರೋ ಅಂತಹವರ ಕನಸು ನನಸು ಮಾಡುವಲ್ಲಿ ಈ ರಿಯಲ್ ಎಸ್ಟೇಟ್ ಡೀಲರ್ಸ್ ಗಳ ಪಾತ್ರ ಪ್ರಮುಖವಾದುದು. ಗ್ರಾಹಕರ ಹಾಗೂ ಮಾಲೀಕರ ನಡುವಿನ ಸೇತುವೆ ಆಗಿರುತ್ತಾರೆ ಈ ರಿಯಲ್ ಎಸ್ಟೇಟ್ ಡೀಲರ್ಸ್. ಇವರ ಆದಾಯ ನಿಜಕ್ಕೂ ಬೆಸ್ಟ್. ಪ್ರಾಪರ್ಟಿ ಬೆಲೆ ಹೆಚ್ಚಿದಂತೆ ಇವರ ಆದಾಯವೂ ಕೂಡಾ ಹೆಚ್ಚುತ್ತಾ ಹೋಗುತ್ತದೆ.

ಸೊಲ್ಯುಶನ್ ಆರ್ಕಿಟೆಕ್ಟ್

ಟೆಕ್ನಿಕಲ್ ಜತೆ ಜತೆಗೆ ಉತ್ಪನ್ನಗಳ ಡಿಸೈನ್ ಮತ್ತು ಪ್ರಾಜೆಕ್ಟ್ ಹಾಗೂ ಡೀಲ್ ಮಾಡಲು ಸೊಲ್ಯುಶನ್ ಆರ್ಕಿಟೆಕ್ಟ್ ಸಹಾಯ ಮಾಡುತ್ತಾರೆ. ಇತ್ತೀಚಿಗಿನ ದಿನಗಳಲ್ಲಿ ಈ ಕೆರಿಯರ್ ಸಖತ್ ಜನಪ್ರಿಯಗೊಳ್ಳುತ್ತಿದೆ. ಹೆಚ್ಚಿನ ಜನರು ಈ ಕೆರಿಯರ್ ನತ್ತನೇ ಓಡುತ್ತಿದ್ದಾರೆ. ಇದಕ್ಕೆ ಬೇಕಾದ ಶಿಕ್ಷಣಾರ್ಹತೆ ವಿಭಿನ್ನವಾಗಿದೆ. ಕಂಪ್ಯೂಟರ್ ಸಿಸ್ಟಮ್ ಜತೆ ಪದವಿ ಮಾಡಿದ್ರೆ ನೀವು ಯಶಸ್ವೀಯಗಾಗಿ ಸೊಲ್ಯುಶನ್ ಆರ್ಕಿಟೆಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಬಹುದು.

More Read: ಟ್ರಾವೆಲ್ ಪ್ರಿಯರಿಗೆ ಯಾವುದು ಬೆಸ್ಟ್ ಜಾಬ್ ಗೊತ್ತಾ?

 

 

For Quick Alerts
ALLOW NOTIFICATIONS  
For Daily Alerts

    English summary
    Parents always want their children Became a doctors or Engineers. And also Doctor or Engineer brings respect from the society and lots of income also. However, there are some Special professions you can earn more money compare to doctors and Enjineers

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more