ಎಸ್‌ಎಸ್‌ಎಲ್‌ಸಿ ಪರೀಕ್ಷೆ 2020: ಗಣಿತ ವಿಷಯದಲ್ಲಿ ಉತ್ತಮ ಅಂಕಗಳಿಸಲು ಹೀಗೆ ಮಾಡಿ

ಅನೇಕ ವಿದ್ಯಾರ್ಥಿಗಳಿಗೆ ಗಣಿತ ಎಂದರೆ ಕಬ್ಬಿಣ ಕಡಲೆಯಂತೆ ಮತ್ತೆ ಕೆಲವರಿಗೆ ಗಣಿತ ಎಂದರೆ ತುಂಬಾ ಸುಲಭ ಎನ್ನುವ ಅಭಿಪ್ರಾಯಗಳಿವೆ. ಹತ್ತನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಗಣಿತ ಪರೀಕ್ಷೆಗೆ ಹೇಗೆ ಓದಿದರೆ ಒಳಿತು ಮತ್ತು ಹೇಗೆ ತಯಾರಿ ನಡೆಸಬೇಕು ಎಂಬುದನ್ನು ನಾವಿಲ್ಲಿ ತಿಳಿಸಲಿದ್ದೇವೆ.

 

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಗಣಿತದಲ್ಲಿ ಉತ್ತಮ ಅಂಕ ಪಡೆಯಲು ಸಲಹೆ

ಪ್ರಮುಖ ವಿಷಯಗಳ ಪಟ್ಟಿ ಮಾಡಿ:

ವಿದ್ಯಾರ್ಥಿಗಳು ತಾವು ಓದಿರುವ ವಿಷಯಗಳನ್ನು ಮತ್ತು ತಾವು ನೋಟ್‌ ಮಾಡಿಕೊಂಡಿರುವ ಪ್ರಮುಖ ಅಂಶಗಳನ್ನು ಸಂಪೂರ್ಣವಾಗಿ ಗಮನಿಸಿ ಉದಾಹರಣೆಗೆ ಸೂತ್ರ ಮತ್ತು ಪ್ರಮೇಯಗಳ ಕಡೆಗೆ ಹೆಚ್ಚಿನ ಗಮನವನ್ನು ಕೊಡಿ.

ಲೆಕ್ಕಗಳ ಸಂಪೂರ್ಣ ವಿಸ್ತರಣೆಯನ್ನು ಗಮಿನಿಸಿ:

ಉದಾಹರಣೆ ನೀವು ಸಾಲ್ವ್ ಮಾಡಿರುವ ಲೆಕ್ಕಗಳ ಸ್ಟೆಪ್ಸ್‌ಗಳನ್ನು ಗಮನಿಸಿಕೊಳ್ಳಿ ಕಾರಣ ಅನೇಕ ಬಾರಿ ವಿದ್ಯಾರ್ಥಿಗಳು ಲೆಕ್ಕಗಳನ್ನು ಮಾಡುವಾಗ ಸಣ್ಣ ತಪ್ಪುಗಳಿಂದ ಅಂಕಗಳನ್ನು ಕಳೆದುಕೊಳ್ಳುತ್ತಾರೆ.

ಹಿಂದಿನ ಪ್ರಶ್ನೆ ಪತ್ರಿಕೆಯನ್ನು ಒಮ್ಮೆ ಪರಿಶೀಲಿಸಿ:

ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಏನನ್ನೂ ಹೆಚ್ಚಾಗಿ ಓದಲು ಸಾಧ್ಯವಿರುವುದಿಲ್ಲ ಹಾಗಾಗಿ ಓದಿರುವುದನ್ನು ನೆನಪು ಮಾಡಿಕೊಳ್ಳುವ ಉದ್ದೇಶದಿಂದ ಹಿಂದಿನ ಪ್ರಶ್ನೆ ಪತ್ರಿಕೆಗಳ ಪ್ಯಾಟ್ರನ್‌ ಮತ್ತು ಪ್ರಶ್ನೆಗಳನ್ನು ಒಮ್ಮೆ ಪರಿಶೀಲಿಸಿ.

ಪರೀಕ್ಷಾ ಹಿಂದಿನ ದಿನ ಓದಲು ಪ್ರಾರಂಭಿಸದಿರಿ:

ವರ್ಷವೆಲ್ಲಾ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಈ ಎರಡು ದಿನಗಳನ್ನು ಓದಲು ಮೀಸಲಿಡಿ ಆದರೆ ಪರೀಕ್ಷೆಯ ಹಿಂದಿನ ರಾತ್ರಿ ಓದುವುದಕ್ಕೆ ಪ್ರಾರಂಭಿಸಬೇಡಿ. ಇದರಿಂದ ಅನೇಕ ಸಂಶಯಗಳು ಗೊಂದಲಗಳು ತಲೆಯಲ್ಲಿ ಹುಟ್ಟಿಕೊಂಡು ಇನ್ನಷ್ಟು ಭಯಕ್ಕೆ ದಾರಿ ಮಾಡುತ್ತವೆ.

ಪರೀಕ್ಷಾ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿ:

ವಿದ್ಯಾರ್ಥಿಗಳು ಗಣಿತ ವಿಷಯದ ಪರೀಕ್ಷೆ ಎಂದು ಚಿಂತಿಗೆ ಒಳಪಟ್ಟು ಆಯಾಸಗೊಳ್ಳದೆ ಪರೀಕ್ಷೆಯ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡುವುದು ಒಳಿತು. ಇದರಿಂದ ಮೆದುಳು ಇನ್ನಷ್ಟು ಚುರುಕುಗೊಳ್ಳುತ್ತದೆ ಮತ್ತು ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಲು ಸಹಾಯ ಮಾಡುತ್ತದೆ.

ಟೈಂ ಮ್ಯಾನೇಜ್ಮೆಂಟ್ ಸರಿಯಾಗಿ ಮಾಡಿ:

ವಿದ್ಯಾರ್ಥಿಗಳು ಪರೀಕ್ಷಾ ಹಿಂದಿನ ದಿನ ಮತ್ತು ಪರೀಕ್ಷಾ ದಿನದಂದು ಸಮಯ ನಿರ್ವಹಣೆಯ ಬಗೆಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ.

 

ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಯಾವುದೇ ಹೊಸ ಲೆಕ್ಕಗಳನ್ನು ಓದುವುದು ಗೊಂದಲಕ್ಕೀಡಾಗುವುದು ಮತ್ತು ಆತಂಕಕ್ಕೆ ಒಳಗಾಗುವುದು ಅನಗತ್ಯವಾಗಿರುತ್ತದೆ. ಗಣಿತ ವಿಷಯ ಅಂದಾಗ ಮನಸ್ಸು ಎಷ್ಟು ಪ್ರಶಾಂತವಾಗಿರುತ್ತದೆಯೋ ಅಷ್ಟು ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಬರೆಯಲು ಸಹಾಯವಾಗುತ್ತದೆ. ವಿದ್ಯಾರ್ಥಿಗಳು ಎಲ್ಲಾ ವಿಷಯಗಳಂತೆ ಗಣಿತ ವಿಷಯವನ್ನು ಓದಲು ಸಾಧ್ಯವಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಹೆಚ್ಚು ತೊಡಗಿದಲ್ಲಿ ಲೆಕ್ಕಗಳು ಸುಲಭವಾಗುತ್ತವೆ ಮತ್ತು ಯಾವುದೇ ಗೊಂದಲಗಳಿಲ್ಲದೆಯೇ ಸುಲಭವಾಗಿ ಉತ್ತರಿಸಬಹುದು. ಗಣಿತ ಪರೀಕ್ಷೆಯೆಂದು ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೊಳಗಾಗದೆ ಮತ್ತು ಯಾವುದೇ ರೀತಿಯ ಗೊಂದಲಗಳಿಗೆ ಒಳಗಾಗದೆ ಪರೀಕ್ಷೆಯನ್ನು ಬರೆದಲ್ಲಿ ಖಂಡಿತವಾಗಿಯೂ ಉತ್ತಮ ಅಂಕಗಳನ್ನು ಗಳಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
Here we are sharing the preparation tips for SSLC mathematics examination. Take a look
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X