SSLC Exam 2020: ವಿಜ್ಞಾನ ವಿಷಯದಲ್ಲಿ ಹೈಸ್ಕೋರ್ ಮಾಡೋಕೆ ಇಲ್ಲಿದೆ ಸಿಂಪಲ್ ಟಿಪ್ಸ್

ಎಸ್‌ಎಸ್‌ಎಲ್‌ಸಿ ಎನ್ನುವುದು ವಿದ್ಯಾರ್ಥಿಗಳ ಜೀವನದಲ್ಲಿ ಅತೀ ಪ್ರಮುಖ ಘಟ್ಟ. ಇಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಅವರ ಕನಸಿನ ಜೀವನ ಸುಗಮವಾಗಿರಲು ಇಲ್ಲಿ ಹೆಚ್ಚು ಶ್ರಮ ಪಡಲೇಬೇಕೆನ್ನುವುದು ಶಿಕ್ಷಕರ ಮತ್ತು ಪೋಷಕರ ನಂಬಿಕೆ. ಇನ್ನೂ ಅದೆಷ್ಟೋ ಪೋಷಕರು ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ತಮ್ಮ ಮಕ್ಕಳು ಹೆಚ್ಚಿನ ಅಂಕಗಳನ್ನು ತೆಗೆಯಬೇಕು ಅವರ ಇಂಜಿನಿಯರ್ ಮತ್ತು ವೈದ್ಯನಾಗುವ ಕನಸು ಈಡೇರಬೇಕು ಎಂದೇ ಆಸೆ ಹೊತ್ತಿರುತ್ತಾರೆ. ಇನ್ನೂ ಈ ಎರಡು ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳು ನೀಡುವುದು ಸರ್ವೇ ಸಾಮಾನ್ಯ.

 ಎಸ್‌ಎಸ್‌ಎಲ್‌ಸಿ ವಿಜ್ಞಾನ ಪರೀಕ್ಷೆಯಲ್ಲಿ ಹೈಸ್ಕೋರ್ ಮಾಡೋಕೆ ಹೀಗೆ ಮಾಡಿ...

ವಿಜ್ಞಾನ ವಿಷಯದ ಪರೀಕ್ಷೆಗೆ ವಿದ್ಯಾರ್ಥಿಗಳು ಈಗಾಗಲೇ ತಯಾರಿ ನಡೆಸುತ್ತಿದ್ದು, ವಿಜ್ಞಾನದಲ್ಲಿ ಜೀವಶಾಸ್ತ್ರ,ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಎಲ್ಲವೂ ಕೂಡ ಪ್ರಮುಖವಾದವು ಹಾಗಾಗಿ ವಿದ್ಯಾರ್ಥಿಗಳು ಈ ವಿಷಯಗಳಿಗೆ ಸಮನಾದ ಪ್ರಾಮುಖ್ಯತೆಯನ್ನು ನೀಡಬೇಕಿರುತ್ತದೆ. ಇನ್ನೂ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವಾಗ ಯಾವ ರೀತಿಯ ತಯಾರಿ ನಡೆಸಿದರೆ ಒಳಿತು ಎನ್ನುವುದನ್ನು ಇಲ್ಲಿ ತಿಳಿಸಲಿದ್ದೇವೆ.

ಪ್ರಮುಖ ವಿಷಯಗಳ ಕಿರು ಪಟ್ಟಿ:

ಪ್ರಮುಖ ವಿಷಯಗಳ ಕಿರು ಪಟ್ಟಿ:

ವಿದ್ಯಾರ್ಥಿಗಳು ತಾವು ಓದಿರುವ ವಿಷಯಗಳನ್ನು ಒಂದು ಕಡೆ ನೋಟ್ ಮಾಡಿಕೊಳ್ಳುವುದು ಮತ್ತು ನೋಟ್ ಮಾಡಿಕೊಂಡುವ ಪ್ರಮುಖ ವಿಷಯಗಳನ್ನು ಮಾತ್ರ ಓದಿ ಸಂಪೂರ್ಣವಾದ ಸಾರವನ್ನು ನೆನಪು ಮಾಡಿಕೊಳ್ಳುವುದು. ಇನ್ನೂ ಫ್ಲೋ ಚಾರ್ಟ್ ತಯಾರಿಸಿದ್ದಲ್ಲಿ ಇನ್ನಷ್ಟು ವಿಷಯವನ್ನು ಸುಲಭವಾಗಿ ನೆನಪಿಡಲು ಸಹಾಯಕವಾಗುವುದು. ವರ್ಷವೆಲ್ಲಾ ಓದಿದ ವಿಷಯಗಳನ್ನು ಈಗ ಕಿರು ಪಟ್ಟಿಯನ್ನು ಮಾಡಿ ಪರೀಕ್ಷಾ ಹಿಂದಿನ ದಿನದವರೆಗೆ ಓದುವುದು ಹೆಚ್ಚಿಗೆ ಲಾಭವಾಗುವುದು. 

ಪ್ರಮುಖ ಅಂಶಗಳನ್ನು ಹೆಚ್ಚು ಅಭ್ಯಸಿಸಿ:

ಪ್ರಮುಖ ಅಂಶಗಳನ್ನು ಹೆಚ್ಚು ಅಭ್ಯಸಿಸಿ:

ವಿದ್ಯಾರ್ಥಿಗಳು ವಿಜ್ಞಾನದ ವಿಷಯದ ಭೌತಶಾಸ್ತ್ರದಲ್ಲಿ ಬರುವ ಲೆಕ್ಕಗಳನ್ನು, ರಸಾಯನ ಶಾಸ್ತ್ರದಲ್ಲಿರುವ ಕೆಮಿಕಲ್ ರಿಯಾಕ್ಷನ್‌ ಮತ್ತು ಪರಿಯಾಟಿಕ್ ಟೇಬಲ್ ನೆನಪಿನಲ್ಲಿಡುವುದು ಮತ್ತು ಜೀವಶಾಸ್ತ್ರದಲ್ಲಿ ಬರುವ ಎಲ್ಲಾ ಡೈಯಾಗ್ರಾಮ್‌ ಗಳನ್ನು ಬರೆದು ಹೆಚ್ಚು ಪ್ರಯತ್ನ ಮಾಡುವುದು ಇದರಿಂದ ಹೆಚ್ಚಿನ ಅಂಕಗಳನ್ನು ಸುಲಭವಾಗಿ ಪಡೆಯಲು ಸಹಾಯವಾಗುವುದು.

ಯಾವುದೇ ಗೊಂದಲ ಮತ್ತು ತಪ್ಪುಗಳನ್ನು ನಿಯಂತ್ರಿಸಿ:
 

ಯಾವುದೇ ಗೊಂದಲ ಮತ್ತು ತಪ್ಪುಗಳನ್ನು ನಿಯಂತ್ರಿಸಿ:

ವಿಜ್ಞಾನವು ಪ್ರಾಯೋಗಿಕ ಅಂಶಗಳನ್ನು ಹೆಚ್ಚು ಹೊಂದಿದ್ದು ಅವುಗಳನ್ನು ಉತ್ತರಿಸುವಾಗ ಯಾವುದೇ ರೀತಿಯ ಗೊಂದಲ ಮತ್ತು ತಪ್ಪುಗಳಿಗೆ ಎಡೆಮಾಡದೇ ವಿದ್ಯಾರ್ಥಿಗಳು ಉತ್ತರಿಸುವುದು ಒಳಿತು. ಇಲ್ಲವಾದಲ್ಲಿ ಯಾವುದೋ ಒಂದು ಹಂತದಲ್ಲಿ ಮಾಡುವ ಸಣ್ಣ ತಪ್ಪಿಗೆ ಸರಿಯಾದ ಉತ್ತರ ಬರೆಯಲಾಗದೆ ಅಂಕಗಳ ನಷ್ಟವನ್ನು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಹಾಗಾಗಿ ಆ ತಪ್ಪುಗಳು ಆಗದಂತೆ ಎಚ್ಚರ ವಹಿಸಲು ಹೆಚ್ಚು ಅಧ್ಯಯನ ಕೈಗೊಳ್ಳಿ. 

ಹಿಂದಿನ ಪ್ರಶ್ನೆ ಪತ್ರಿಕೆಯನ್ನು ಒಮ್ಮೆ ಪರಿಶೀಲಿಸಿ:

ಹಿಂದಿನ ಪ್ರಶ್ನೆ ಪತ್ರಿಕೆಯನ್ನು ಒಮ್ಮೆ ಪರಿಶೀಲಿಸಿ:

ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಏನನ್ನೂ ಹೆಚ್ಚಾಗಿ ಓದಲು ಸಾಧ್ಯವಿರುವುದಿಲ್ಲ ಹಾಗಾಗಿ ಓದಿರುವುದನ್ನು ನೆನಪು ಮಾಡಿಕೊಳ್ಳುವ ಉದ್ದೇಶದಿಂದ ಹಿಂದಿನ ಪ್ರಶ್ನೆ ಪತ್ರಿಕೆಗಳ ಪ್ಯಾಟ್ರನ್‌ ಮತ್ತು ಪ್ರಶ್ನೆಗಳನ್ನು ಒಮ್ಮೆ ಪರಿಶೀಲಿಸಿ.

ಪರೀಕ್ಷಾ ಹಿಂದಿನ ದಿನ ಓದಲು ಪ್ರಾರಂಭಿಸದಿರಿ:

ಪರೀಕ್ಷಾ ಹಿಂದಿನ ದಿನ ಓದಲು ಪ್ರಾರಂಭಿಸದಿರಿ:

ವರ್ಷವೆಲ್ಲಾ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಈ ಎರಡು ದಿನಗಳನ್ನು ಓದಲು ಮೀಸಲಿಡಿ ಆದರೆ ಪರೀಕ್ಷೆಯ ಹಿಂದಿನ ರಾತ್ರಿ ಓದುವುದಕ್ಕೆ ಪ್ರಾರಂಭಿಸಬೇಡಿ. ಇದರಿಂದ ಅನೇಕ ಸಂಶಯಗಳು ಗೊಂದಲಗಳು ತಲೆಯಲ್ಲಿ ಹುಟ್ಟಿಕೊಂಡು ಇನ್ನಷ್ಟು ಭಯಕ್ಕೆ ದಾರಿ ಮಾಡುತ್ತವೆ.

ಪರೀಕ್ಷಾ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿ:

ಪರೀಕ್ಷಾ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿ:

ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಪರೀಕ್ಷೆ ಎಂದು ಚಿಂತಿಗೆ ಒಳಪಟ್ಟು ಆಯಾಸಗೊಳ್ಳದೆ ಪರೀಕ್ಷೆಯ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡುವುದು ಒಳಿತು. ಇದರಿಂದ ಮೆದುಳು ಇನ್ನಷ್ಟು ಚುರುಕುಗೊಳ್ಳುತ್ತದೆ ಮತ್ತು ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಲು ಸಹಾಯ ಮಾಡುತ್ತದೆ.

ಟೈಂ ಮ್ಯಾನೇಜ್ಮೆಂಟ್ ಸರಿಯಾಗಿ ಮಾಡಿ:

ಟೈಂ ಮ್ಯಾನೇಜ್ಮೆಂಟ್ ಸರಿಯಾಗಿ ಮಾಡಿ:

ವಿಜ್ಞಾನ ಪರೀಕ್ಷೆಯಲ್ಲಿ ಟೈಂ ಮ್ಯಾನೇಜ್ಮೆಂಟ್ ಮಾಡುವುದು ತುಂಬಾನೆ ಸುಲಭ ಆದರೆ ಆದರೆ ವಿದ್ಯಾರ್ಥಿಗಳು ಹೆಚ್ಚು ಸಕಾರಾತ್ಮ ಆಲೋಚನೆಗಳನ್ನು ಹೊಂದಿದ್ದಲ್ಲಿ ಮಾತ್ರ ಪರೀಕ್ಷೆಯನ್ನು ನಿಗದಿತ ಸಮಯದೊಳಗೆ ಉತ್ತಮವಾಗಿ ಬರೆಯಲು ಸಾಧ್ಯವಾಗುವುದು. ಅದಕ್ಕೆ ಬೇಕಾದ ಪೂರಕ ತಯಾರಿಗಳನ್ನು ಇಂದಿನಿಂದಲೇ ಸಿದ್ಧಪಡಿಸಿಕೊಳ್ಳುವುದು ಅಗತ್ಯ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳನ್ನು ಚೆನ್ನಾಗಿ ಬರೆದರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಆದರೆ ಯಾವ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವ ಹಂಬಲ ಹೊಂದಿರುತ್ತಾರೆ ಅಂತಹ ವಿದ್ಯಾರ್ಥಿಗಳು ಇನ್ನೇನು ಪರೀಕ್ಷೆಗೆ ಇರುವ ಕೆಲವೇ ದಿನಗಳಲ್ಲಿ ಹೆಚ್ಚಿನ ಶ್ರಮವಹಿಸಿದರೆ ಖಂಡಿತವಾಗಿಯೂ ಅವರ ಕನಸ್ಸನ್ನು ನನಸು ಮಾಡಿಕೊಳ್ಳವುದು ಸುಲಭವಾದೀತು.

ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ಇರುವ ಸಮಯವನ್ನು ಸದ್ಭಳಕೆ ಮಾಡಿಕೊಂಡು ಪರೀಕ್ಷೆಯನ್ನು ಬರೆಯಿರಿ ಉತ್ತಮ ಫಲಿತಾಂಶ ಲಭಿಸುವುದರ ಜೊತೆಗೆ ನಿಮ್ಮ ಕನಸಿನ ಭವಿಷ್ಯದ ಹಾದಿ ಸುಗಮವಾಗುವುದು.

For Quick Alerts
ALLOW NOTIFICATIONS  
For Daily Alerts

English summary
Students appearing for SSLC exam this year shall be very nervous and hence to ease the preparation we are presenting tips for sslc science examination. Take a look.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X