ಶೀಘ್ರಲಿಪಿಗಾರ ಉದ್ಯೋಗಕ್ಕೆ ಸೇರಿ ಕೈತುಂಬಾ ಸಂಪಾದಿಸಿ

ಇತ್ತೀಚೆಗೆ ಅನೇಕ ಕಡೆ ಶೀಘ್ರಲಿಪಿಗಾರ ಹುದ್ದೆಗಳು ಖಾಲಿ ಇವೆ ಎನ್ನುವ ಮಾಹಿತಿಯನ್ನು ಓದಿರುತ್ತೀರಿ. ಏನಿದು ಶೀಘ್ರಲಿಪಿಗಾರ? ಇದಕ್ಕೆ ಏನೆಲ್ಲಾ ವಿದ್ಯಾರ್ಹತೆ ಹೊಂದಿರಬೇಕು? ಇದರಿಂದ ಏನು ಲಾಭ ಅಂತೀರಾ ಹಾಗಿದ್ದರೆ ಈ ಲೇಖನವನ್ನು ಒಮ್ಮೆ ಓದಿ ಆಗ ನೀವೇ ಶೀಘ್ರಲಿಪಿಗಾರರಾಗಲು ಬಯಸುತ್ತೀರಾ.

ಶೀಘ್ರಲಿಪಿಗಾರ ಅಂದರೇನು?
 

ಶೀಘ್ರಲಿಪಿಗಾರ ಅಂದರೇನು?

ಶೀಘ್ರಲಿಪಿಗಾರ ಇದೊಂದು ಅತ್ಯಂತ ಪ್ರೊಫೆಷನಲ್ ವೃತ್ತಿ ಬದುಕು. ಶೀಘ್ರಲಿಪಿಗಾರರು ಬಹು ಬೇಗನೆ ಒಂದು ಭಾಷೆಯ ಬರಹವನ್ನು ಕೋಡ್ ಗಳ ಮೂಲಕ ಬರೆದು ನಂತರ ಟ್ರಾನ್ಸ್‌ಲೇಟ್ ಮಾಡುವ ಕೌಶಲ್ಯವನ್ನು ಹೊಂದಿರುತ್ತಾರೆ ಅದನ್ನು ಶಾರ್ಟ್ ಹ್ಯಾಂಡ್ ಅಂತ ಕರೆಯುತ್ತೇವೆ. ಸಾಮಾನ್ಯವಾಗಿ ನಿಮಿಷಕ್ಕೆ 200 ಪದಗಳನ್ನು ಬರೆಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದೊಂದು ಸುಲಭ ಮತ್ತು ಯಾವುದೇ ಯಂತ್ರಗಳ ಸಹಾಯವಿಲ್ಲದೆ ಮಾಡುವ ಒಂದು ಪ್ರೊಫೆಷನಲ್ ವೃತ್ತಿಯಾಗಿದೆ. ಹಾಗಾಗಿ ಅನೇಕ ಕಡೆಗಳಲ್ಲಿ ಶೀಘ್ರಲಿಪಿಗಾರರಿಗೆ ಭಾರೀ ಬೇಡಿಕೆ ಇದೆ. ಶೀಘ್ರಲಿಪಿಗಾರರು ನಡೆದ ಭಾಷಣಗಳನ್ನು ಬಹು ಬೇಗ ಡಾಕ್ಯುಮೆಂಟ್ ರೂಪದಲ್ಲಿ ಬರೆಯುವುದನ್ನು ಬಲ್ಲವರಾಗಿರುವುದರಿಂದ ಅವರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿ ಇವೆ.

ಸಾಮಾನ್ಯವಾಗಿ ಶೀಘ್ರಲಿಪಿಗಾರರು ಕೋರ್ಟ್ , ಪತ್ರಿಕಾ ಗೋಷ್ಟಿ . ಸರ್ಕಾರಿ ಕಚೇರಿಗಳಲ್ಲಿ , ಕಂಪೆನಿಗಳಲ್ಲಿ ಸಿಇಓ ಗಳಿಗೆ ಅಸಿಸ್ಟೆಂಟ್ ಅಥವಾ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುವ ಉದ್ಯೋಗಾವಕಾಶಗಳನ್ನು ಹೊಂದಿರುತ್ತಾರೆ.ಡಾಕ್ಟರ್ , ರಾಜಕಾರಣಿಗಳಿಗೆ ಪರ್ಸನಲ್ ಸೆಕ್ರೆಟರಿ ಆಗಿ ಕೂಡ ಕಾರ್ಯನಿರ್ವಹಿಸಲು ಅವಕಾಶಗಳನ್ನು ಹೊಂದಿರುತ್ತಾರೆ. ಕಾರಣ ಶೀಘ್ರಲಿಪಿಗಾರರಿಂದ ಬಹು ಬೇಗ ಬರಹಗಳ ಕೆಲಸಗಳು ನಡೆಯುತ್ತವೆ ಮತ್ತು ಅನಿರೀಕ್ಷಿತ ಬರಹದ ಕೆಲಸಗಳನ್ನು ಪೂರೈಸುವುದನ್ನು ಅವರು ಬಲ್ಲವರಾಗಿರುತ್ತಾರೆ.ಹಾಗಾಗಿ ಶೀಘ್ರಲಿಪಿಗಾರರು ಭಾರೀ ಉದ್ಯೋಗಾವಕಾಶವನ್ನು ಹೊಂದಿರುತ್ತಾರೆ ಮತ್ತು ಒಳ್ಳೆಯ ಗೌರವ ಹಾಗೆ ಹಣವನ್ನು ಸಂಪಾದಿಸಲು ಅವಕಾಶಗಳನ್ನು ಹೊಂದಿರುತ್ತಾರೆ. ಶೀಘ್ರಲಿಪಿಗಾರರು ತುಂಬಾನೆ ಹಾರ್ಡ್‌ವರ್ಕಿಂಗ್ ಮಾಡುವ ಅಗತ್ಯವಿರುತ್ತೆ ಮತ್ತು ಹಲವು ಭಾಷೆಗಳ ಮೇಲೆ ಹಿಡಿತವನ್ನು ಹೊಂದಿರಬೇಕಿರುತ್ತದೆ. ಹಲವು ಭಾಷೆಗಳ ಮೇಲೆ ಹಿಡಿತವಿದ್ದರೆ ಅವರಿಗೆ ಬಹು ಬೇಡಿಕೆಗಳು ಇರುತ್ತವೆ.

ಶೀಘ್ರಲಿಪಿಗಾರನ ಕೆಲಸ ಏನು:

ಶೀಘ್ರಲಿಪಿಗಾರನ ಕೆಲಸ ಏನು:

ಶೀಘ್ರಲಿಪಿಗಾರರು ಸಾಮಾನ್ಯವಾಗಿ ಕೋರ್ಟ್‌ಗಳಲ್ಲಿ ಲೀಗಲ್ ಪ್ರೊಸೀಡಿಂಗ್ಸ್ ಗಳನ್ನು ಲೈವ್ ಆಗಿ ಲಿಖಿತ ರೂಪದಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಲೈವ್ ಘಟನೆಗಳು ಮುಗಿದ ಬಳಿಕ ಅದನ್ನು ಸಾಮಾನ್ಯ ಭಾಷೆಗೆ ಯಾರು ಏನನ್ನು ಮಾತನಾಡಿದರು ಎನ್ನುವ ಸಂಪೂರ್ಣ ವಿವರವನ್ನು ಟ್ರಾನ್ಸ್‌ಲೇಟ್ ಮಾಡುತ್ತಾರೆ. ಲೈವ್ ನಲ್ಲಿ ಏನು ಭಾಷಣವನ್ನು ಆಲಿಸಿರುತ್ತಾರೋ ಅದೇ ರೀತಿಯಾಗಿಯೇ ಅವರ ಬರಹ ಕೂಡ ಇರಬೇಕಿರುವುದು ಶೀಘ್ರಲಿಪಿಗಾರರ ಕರ್ತವ್ಯವಾಗಿರುತ್ತದೆ.

ಶೀಘ್ರಲಿಪಿಗಾರರು ಏನೆಲ್ಲಾ ವಿದ್ಯಾರ್ಹತೆಯನ್ನು ಹೊಂದಿರಬೇಕು:

ಶೀಘ್ರಲಿಪಿಗಾರರು ಏನೆಲ್ಲಾ ವಿದ್ಯಾರ್ಹತೆಯನ್ನು ಹೊಂದಿರಬೇಕು:

ಶೀಘ್ರಲಿಪಿಗಾರರಾಗಲು 10+2 ವಿದ್ಯಾರ್ಹತೆ ಅಥವಾ ಸಮನಾದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದಿಂದ ಹೊಂದಿರಬೇಕು. ಅಭ್ಯರ್ಥಿಗಳು ಇಂತಿಷ್ಟು ಅಂಕಗಳನ್ನು ಪಡೆದಿರಬೇಕೆಂಬ ನಿಯಮವಿರುವುದಿಲ್ಲ. ಆದರೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸಲು ಕನಿಷ್ಟ 60% ರಷ್ಟು ಅಂಕಗಳನ್ನು ಪಡೆದಿರಬೇಕು.

ಶೀಘ್ರಲಿಪಿಗಾರರಾಗಲು ವಯೋಮಿತಿ ಎಷ್ಟಿರಬೇಕು:
 

ಶೀಘ್ರಲಿಪಿಗಾರರಾಗಲು ವಯೋಮಿತಿ ಎಷ್ಟಿರಬೇಕು:

ಶೀಘ್ರಲಿಪಿಗಾರರಾಗಲು ಯಾವುದೇ ವಯೋಮಿತಿಗಳಿರುವುದಿಲ್ಲ ಆದರೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳು ಕನಿಷ್ಟ 18 ರಿಂದ ಗರಿಷ್ಟ 27 ವರ್ಷ ವಯೋಮತಿಯನ್ನು ಹೊಂದಿರಬೇಕು( ಕೆಲವು ಅಭ್ಯರ್ಥಿಗಳು 30 ವರ್ಷ ವಯೋಮಿತಿ ಸಡಿಲಿಕೆಯನ್ನು ಹೊಂದಿರುತ್ತಾರೆ)

ಶೀಘ್ರಲಿಪಿಗಾರರಾಗಲು ಏನು ಮಾಡಬೇಕು:

ಶೀಘ್ರಲಿಪಿಗಾರರಾಗಲು ಏನು ಮಾಡಬೇಕು:

ಶೀಘ್ರಲಿಪಿಗಾರರಾಗಲು ಇಷ್ಟ ಪಡುವ ಅಭ್ಯರ್ಥಿಗಳು 10+2 ಶಿಕ್ಷಣವನ್ನು ಹೊಂದಿದ್ದಲ್ಲಿ ಮತ್ತು ಇಂಗ್ಲೀಷ್ ಹಾಗೂ ಇತರೆ ಭಾಷೆಗಳ ಮೇಲೆ ಹಿಡಿತವನ್ನು ಹೊಂದಿದ್ದಲ್ಲಿ ಕೆಲವು ಪ್ರೈವೇಟ್ ಟ್ರೈನಿಂಗ್ ಸೆಂಟರ್‌ಗಳಲ್ಲಿ ಶಾರ್ಟ್ ಹ್ಯಾಂಡ್ ಕಲಿಯಲು ಸೇರಿಕೊಳ್ಳಬಹುದು. ಈ ಕೋರ್ಸ್ ಗಳಿಗೆ ಸೇರಿದ 6 ತಿಂಗಳಿಂದ 1 ವರ್ಷದೊಳಗೆ ವಿದ್ಯಾರ್ಥಿಗಳು ನಿಮಿಷಕ್ಕೆ 80 ರಿಂದ 120 ಪದಗಳನ್ನು ಶಾರ್ಟ್ ಹ್ಯಾಂಡ್ ನಲ್ಲಿ ಬರೆಯಲು ಕಲಿಯುತ್ತಾರೆ.

ಅಭ್ಯರ್ಥಿಗಳು ITI ( industrial training institution) ಸೇರಿ ಶಾರ್ಟ್ ಹ್ಯಾಂಡ್ ಮತ್ತು ಟೈಪಿಂಗ್ ನಲ್ಲಿ ಸರ್ಟಿಫಿಕೇಟ್ ಅಥವಾ ಡಿಪ್ಲೋಮಾ ಕೋರ್ಸ್ ಕೂಡ ಮಾಡಬಹುದು. ಈ ಕೋರ್ಸ್ ಅನ್ನು ಮುಗಿಸಲು 1 ರಿಂದ 1 ವರೆ ವರ್ಷಗಳು ಬೇಕಾಗುತ್ತದೆ. ಅಭ್ಯರ್ಥಿಗಳಿಗೆ ಟೈಪಿಂಗ್ ಮತ್ತು ಶಾರ್ಟ್‌ಹ್ಯಾಂಡ್ ನಲ್ಲಿ ಜ್ಞಾನವಿದ್ದಲ್ಲಿ ಕೋರ್ಸ್ ಅನ್ನು ತುಂಬಾನೆ ಸುಲಭವಾಗಿ ಪೂರ್ಣಗೊಳಿಸಬಹುದು.

ಐಟಿಐ ಕೋರ್ಸ್ ಸೇರುವುದು ಹೇಗೆ:

17 ವರ್ಷ ಮೇಲ್ಪಟ್ಟ ಮತ್ತು ಮೆಟ್ರಿಕ್ ಪಾಸ್ ಆದಂತಹ ಅಭ್ಯರ್ಥಿಗಳು ಐಟಿಐ ಕೋರ್ಸ್ ಅನ್ನು ತೆಗೆದುಕೊಳ್ಳಬಹುದು.

ಈ ಕೋರ್ಸ್ ಗಳಿಗೆ ಸೇರಲು ಕೆಲವು ಸಂಸ್ಥೆಗಳು ಪ್ರವೇಶ ಪರೀಕ್ಷೆಯನ್ನು ನಡೆಸುತ್ತವೆ ಮತ್ತು ಇನ್ನೂ ಕೆಲವು ಪ್ರೈವೇಟ್ ಸಂಸ್ಥೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಂಕಗಳ ಮೇಲೆ ದಾಖಲಾತಿ ಮಾಡಿಕೊಳ್ಳುತ್ತವೆ.

ಕೋರ್ಸ್ ಮುಗಿದ ನಂತರ:

ಕೋರ್ಸ್ ಮುಗಿದ ನಂತರ:

ಈ ಕೋರ್ಸ್ ಗಳನ್ನು ಮುಗಿಸಿದ ಬಳಿಕ ಅಭ್ಯರ್ಥಿಗಳು ಪ್ರೈವೇಟ್ ಸೆಕ್ಟರ್‌ಗಳಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಅಥವಾ ಅಡ್ವೋಕೇಟ್ ಗಳ ಬಳಿ ಕೆಲಸ ಮಾಡಬಹುದು ಅಥವಾ ಫ್ರೀಲ್ಯಾನ್ಸರ್ ಆಗಿ ಕೂಡ ಕೆಲಸ ನಿರ್ವಹಿಸಬಹುದು. ಅಲ್ಲದೇ ಅಭ್ಯರ್ಥಿಗಳು ಸರ್ಕಾರದ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಕೂಡ ಅರ್ಜಿ ಹಾಕಬಹುದು.

ಶೀಘ್ರಲಿಪಿಗಾರರ ಕೆಲಸ ಹೇಗಿರುತ್ತೆ:

ಶೀಘ್ರಲಿಪಿಗಾರರ ಕೆಲಸ ಹೇಗಿರುತ್ತೆ:

ಅಭ್ಯರ್ಥಿಗಳು ಶೀಘ್ರಲಿಪಿಗಾರ ಅಥವಾ ಕೋರ್ಟ್ ರಿಪೋರ್ಟರ್ ಆಗಿ ಕೆಲಸ ನಿರ್ವಹಿಸಬಹುದು. ಹೇಳಿದ ಪದಗಳನ್ನು ತಕ್ಷಣವೇ ಶಾರ್ಟ್‌ಹ್ಯಾಂಡ್ ನಲ್ಲಿ ನೋಟ್ ಮಾಡಿಕೊಂಡು ಟೈಪಿಂಗ್ ನಲ್ಲಿ ಅತೀ ವೇಗವಾಗಿ ಯಾವುದೇ ತಪ್ಪಿಲ್ಲದೇ ವಿಷಯವನ್ನು ಬರೆಯುವುದು ಶೀಘ್ರಲಿಪಿಗಾರನ ಕೆಲಸವಾಗಿರುತ್ತದೆ. ಶೀಘ್ರಲಿಪಿಗಾರ ಒಬ್ಬರು ಮಾತನಾಡುವಾಗಿನ ವೇಗದೊಡನೆಯೇ ತಾನೂ ಕೋಡ್‌ಗಳ ಮೂಲಕ ವಿಷಯವನ್ನು ಬರೆಯುತ್ತಾನೆ ತದನಂತರ ಟೈಪಿಂಗ್ ನಲ್ಲಿ ಬರಹ ರೂಪಕ್ಕೆ ತರುತ್ತಾನೆ.

ಶೀಘ್ರಲಿಪಿಗಾರರಿಗೆ ಉದ್ಯೋಗಾವಕಾಶ:

ಶೀಘ್ರಲಿಪಿಗಾರರಿಗೆ ಉದ್ಯೋಗಾವಕಾಶ:

ಶೀಘ್ರಲಿಪಿಗಾರರಿಗೆ ಸರ್ಕಾರದ ಹಲವು ಸೆಕ್ರೆಟರಿಯಲ್ ಡಿಪಾರ್ಟ್ಮೆಂಟ್‌ಗಳಲ್ಲಿ ಮತ್ತು ಪ್ರೈವೇಟ್ ಆಫೀಸ್‌ಗಳಲ್ಲಿ ಅನೇಕ ಉದ್ಯೋಗಾವಕಾಶಗಳು ಇರುತ್ತವೆ. ಶಾರ್ಟ್ ಹ್ಯಾಂಡ್ ನಿಂದ ಪರ್ಸನಲ್ ಅಸಿಸ್ಟೆಂಟ್ ಮತ್ತು ಪ್ರೈವೇಟ್ ಸೆಕ್ರೆಟರಿ ಆಗುವ ಉದ್ಯೋಗಾವಕಾಶಗಳು ಲಭಿಸುತ್ತವೆ.

ಶೀಘ್ರಲಿಪಿಗಾರ ವೇತನ ಹೇಗಿರುತ್ತೆ:

ಶೀಘ್ರಲಿಪಿಗಾರ ವೇತನ ಹೇಗಿರುತ್ತೆ:

ಈ ಹುದ್ದೆಗಳಿಗೆ ಸೇರಿದ ಅಭ್ಯರ್ಥಿಗಳಿಗೆ 10,000/--ರಿಂದ ವೇತನವು ಪ್ರಾರಂಭವಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಪ್ರವೇಶ ಪರೀಕ್ಷಾ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನವು ಸಿಗುತ್ತದೆ.

ಶೀಘ್ರಲಿಪಿಗಾರರ ಜವಾಬ್ದಾರಿಗಳು ಏನಿರುತ್ತವೆ:

ಶೀಘ್ರಲಿಪಿಗಾರರ ಜವಾಬ್ದಾರಿಗಳು ಏನಿರುತ್ತವೆ:

ಸಾಮಾನ್ಯವಾಗಿ ಶೀಘ್ರಲಿಪಿಗಾರರು ಕೌಶಲ್ಯಯುತ ಕೆಲಸಗಾರರಾಗಿರುತ್ತಾರೆ. ಏನೇ ಲೈವ್ ಘಟನೆಗಳನ್ನು ನಡೆದಂತೆಯೇ ಬರೆಯುವ ಸಾಮರ್ಥ್ಯವನ್ನು ಉಳ್ಳವರಾಗಿರುತ್ತಾರೆ ಮತ್ತು ಬರೆದುದನ್ನು ಬಹು ಬೇಗ ಟೈಪ್ ಮಾಡುವುದನ್ನು ಬಲ್ಲವರಾಗಿರುತ್ತಾರೆ.

1 ಭಾಷಣವನ್ನು ನೋಟ್ ಮಾಡಿಕೊಳ್ಳುವುದು:

ಶೀಘ್ರಲಿಪಿಗಾರು ಸಾಮಾನ್ಯವಾಗಿ ಸಭೆ ಸಮಾರಂಭಗಳಲ್ಲಿ ಹಿರಿಯ ವ್ಯಕ್ತಿಗಳು ಮಾಡಿದಂತಹ ಭಾಷಣವನ್ನು ಶೀಘ್ರಲಿಪಿ ಮೂಲಕ ನೋಟ್ ಮಾಡಿಕೊಳ್ಳುವುದು.

2 ಪ್ರೆಸ್ ಕಾನ್ಫರೆನ್ಸ್‌ಗಳನ್ನು ಬ್ರೀಫ್ ಮಾಡುವುದು:

ಶೀಘ್ರಲಿಪಿಗಾರು ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡಾಗ ಅಲ್ಲಿ ನಡೆದ ಭಾಷಣವನ್ನು ಕೇಳಿಸಿಕೊಂಡು ಶೀಘ್ರಲಿಪಿಯಲ್ಲಿ ನೋಟ್ ಮಾಡಿಕೊಳ್ಳಬೇಕಿರುತ್ತದೆ ಇದರಿಂದ ಸರ್ಕಾರಕ್ಕೂ ಪತ್ರಿಕಾ ಗೋಷ್ಠಿಯಲ್ಲಿ ನಡೆದ ಭಾಷಣದ ನಿಖರ ಮಾಹಿತಿಯು ಲಭ್ಯವಾಗುತ್ತದೆ. ಹೀಗಾಗಿ ಶೀಘ್ರಲಿಪಿಗಾರರಿಗೆ ಭಾರೀ ಬೇಡಿಕೆಯಿರುತ್ತದೆ.

3 ಸಚಿವ ಅಥವಾ ಅಧಿಕಾರಿಗಳಿಗೆ ಸಹಾಯಕರಾಗುವುದು:

ಶೀಘ್ರಲಿಪಿಗಾರರು ಸಚಿವ ಅಥವಾ ಅಧಿಕಾರಿಗಳಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಾರೆ ಹೇಗೆಂದರೆ ಅವರಿಗೆ ಬೇಕಾಗಿರುವ ಭಾಷಣವನ್ನು ಶೀಘ್ರಲಿಪಿಗಾರರೇ ಬರೆಯುತ್ತಾರೆ ಕಾರಣ ಶೀಘ್ರಲಿಪಿಗಾರರು ವಿಷಯ ಜ್ಞಾನವನ್ನು ಹೆಚ್ಚಾಗಿ ಹೊಂದಿರುತ್ತಾರೆ ಮತ್ತು ಹೇಗೆ ಜನರಿಗೆ ತಲುಪುವಂತೆ ಬರೆಯಬೇಕೆಂಬ ಜ್ಞಾನವನ್ನು ಹೊಂದಿರುತ್ತಾರೆ.

4 ಪಬ್ಲಿಕ್ ರಿಲೇಶನ್ಸ್ ಗಳಿಗೆ ಸಹಾಯಕವಾಗುತ್ತದೆ:

ಪಬ್ಲಿಕ್ ರಿಲೇಶನ್ಸ್ ಅಧಿಕಾರಿಗಳಿಗೆ ಶೀಘ್ರಲಿಪಿಗಾರರು ಹೆಚ್ಚು ಪ್ರಯೋಜನಕಾರಿಯಾಗಿರುತ್ತಾರೆ ಯಾಕೆಂದರೆ ಅಧಿಕಾರಿಗಳು ಕೆಲವು ಮಾಹಿತಿಗಳನ್ನು ಜನರಿಗೆ ತಲುಪಿಸಬೇಕಿರುತ್ತದೆ ಹಾಗಾಗಿ ಅಧಿಕಾರಿಗಳು ತಾವು ಹೇಳುವ ವಿವರಣೆಯನ್ನು ಶೀಘ್ರಲಿಪಿಗಾರರು ಶೀಘ್ರಲಿಪಿಯಲ್ಲಿ ಅದೇ ರೀತಿಯಾಗಿ ಬರೆದು ತಲುಪಿಸುತ್ತಾರೆ. ಹಾಗಾಗಿ ಅಧಿಕಾರಿಗಳು ಶೀಘ್ರಲಿಪಿಗಾರರ ಸಹಾಯ ತೆಗೆದುಕೊಳ್ಳುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
Here is the complete guide on how to become an stenographer. Check out the courses, requirements and salary
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more