ಸಕ್ಸಸ್‌ಫುಲ್ ಕರಿಯರ್ ನಿಮ್ಮದಾಗಬೇಕೆ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ಬಹುತೇಕ ಜನರು ತಮ್ಮ ಆಸಕ್ತಿಗನುಗುಣವಾಗಿ ಹಾಗೂ ನಿರ್ಧಿಷ್ಟ ಧ್ಯೇಯದೊಂದಿಗೆ ಉತ್ತಮ ಕರಿಯರ್‌ ಅನ್ನು ಸೃಷ್ಟಿಸಿಕೊಂಡಾಗ ಉತ್ತಮ ಭವಿಷ್ಯವನ್ನು ಪಡೆಯುವುದರ ಜೊತೆಗೆ ಉತ್ತಮ ಹೆಸರು ಮತ್ತು ಹಣವನ್ನು ಗಳಿಸಿ ಆರಾಮದಾಯಕ ಜೀವನವನ್ನು ನಡೆಸುತ್ತಿದ್ದಾರೆ. ಅಂತಹ ಯಶಸ್ಸಿನ ಜೀವನವನ್ನು ಪಡೆಯಲು ನಾವು ಉತ್ತಮ ರೀತಿಯ ಕರಿಯರ್‌ ನಿರ್ಮಿಸಿಕೊಳ್ಳುವುದು ಹೆಚ್ಚು ಅಗತ್ಯ.

ಪ್ರತಿಯೊಬ್ಬ ವ್ಯಕ್ತಿಗೂ ಕರಿಯರ್ ಅನ್ನೋದು ತುಂಬಾನೆ ಮುಖ್ಯವಾಗಿರುವಂತದ್ದು. ನಮ್ಮ ಕರಿಯರ್‌ನ ನಾವು ಹೇಗೆ ನಿರ್ಮಿಸಿಕೊಳ್ಳುತ್ತೇವೆ ಎನ್ನುವುದು ನಮ್ಮ ಆಸಕ್ತಿ ಮತ್ತು ಗುರಿಯ ಮೇಲೆ ನಿರ್ಧರಿತವಾಗಿರುತ್ತದೆ. ವಿದ್ಯಾರ್ಥಿಯಾಗಿರುವಾಗಲೇ ನಮ್ಮ ಕರಿಯರ್ ಹೇಗಿರಬೇಕೆಂದು ನಿರ್ಧರಿಸಲು ಸೂಕ್ತವಾದ ಸಮಯ ಹಾಗಾಗಿ ನಾವಿಲ್ಲಿ ನಿಮಗೆ ಕೆಲವು ಸಲಹೆಗಳನ್ನು ನೀಡುವ ಮೂಲಕ ನಿಮ್ಮ ಕರಿಯರ್‌ ಅನ್ನು ಸೃಷ್ಟಿಸಿಕೊಳ್ಳಲು ಸಹಕರಿಸುತ್ತಿದ್ದೇವೆ.

ಯಶಸ್ವಿ ಕರಿಯರ್ ನಿಮ್ಮದಾಗಲು ಇಲ್ಲಿದೆ ಸಲಹೆ

 

ಕರಿಯರ್ ಅನ್ನೋದು ತುಂಬಾನೆ ಮುಖ್ಯ ಹಾಗಾಗಿ ನಮ್ಮ ಕರಿಯರ್‌ ಅನ್ನು ನಿರ್ಮಿಸಿಕೊಳ್ಳುವುದು ಹೇಗೆ ಎನ್ನುವುದಕ್ಕೆ ನಾವಿಲ್ಲಿ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ.

1. ನಿಮ್ಮ ಗುರಿ ಏನು ಅನ್ನುವುದನ್ನು ಗುರಿತಿಸಿಕೊಳ್ಳಿ:

ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಆಸಕ್ತಿಗಳು ಮತ್ತು ಆಸೆಗಳನ್ನು ಹೊಂದಿರುತ್ತಾನೆ ಅದಕ್ಕೆ ತಾನು ಏನು ಮಾಡಬೇಕು ಎಂಬುದನ್ನು ನಿರ್ಧರಿಸಲು ಮೊದಲು ನಿರ್ಧಿಷ್ಟವಾದ ಗುರಿಯನ್ನು ಹೊಂದಿರಬೇಕು. ಗುರಿ ಇಲ್ಲದ ವ್ಯಕ್ತಿ ಏನನ್ನು ಸಾಧಿಸಿಯಾನು? ಎನ್ನುವ ಮಾತಿದೆ ಹಾಗಾಗಿ ನೀವು ನಿಮ್ಮ ಗುರಿ ಏನೆಂದು ಮೊದಲು ಖಾತರಿ ಪಡಿಸಿಕೊಂಡು ನಂತರ ಅದಕ್ಕೆ ಏನೆಲ್ಲಾ ತಯಾರಿ ನಡೆಸಬೇಕೆಂದು ಪ್ಲಾನ್ ಮಾಡಿ. ಬದುಕಿನ ಆಶಯಕ್ಕೆ ಒಂದೆರಡು ಗುರಿಯನ್ನು ಇಟ್ಟುಕೊಂಡಿರುವುದು ಒಳತು. ಮೊದಲ ನಿಮ್ಮ ಗುರಿಯನ್ನು ತಲುಪಲು ಪೂರ್ವ ತಯಾರಿಗಳನ್ನು ನಡೆಸಿ.

2. ಪ್ರೊಫೆಷನಲ್ ರೆಸ್ಯುಮೆಯನ್ನು ಸಿದ್ಧಪಡಿಸಿ:

ಗುರಿ ನಿರ್ಧರಿಸಿದ ನಂತರ ಅದನ್ನು ತಲುಪುವ ಹಂತ ಮಹತ್ತರವಾದದ್ದು ಹಾಗಾಗಿ ನಿಮ್ಮೆ ರೆಸ್ಯುಮೆಯನ್ನು ಉತ್ತಮ ರೀತಿಯಲ್ಲಿ ಸಿದ್ಧಪಡಿಸಿ. ಒಂದು ರೆಸ್ಯುಮೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಬಿಂಬಿಸುವಂತದ್ದು ಹಾಗಾಗಿ ಅದರಲ್ಲಿ ಉಪಯುಕ್ತ ಮಾಹಿತಿಗಳನ್ನು ಅಗತ್ಯವಿದ್ದಷ್ಟು ನೀಡಿ ಸುಂದರವಾಗಿ ರಚಿಸಿ. ಸುಂದರ ಅಂದರೆ ಕಣ್ಣಿಗೆ ಸುಂದರವೆಂದಲ್ಲ ಅಲ್ಲಿ ನೀಡಲಾಗಿರುವ ಮಾಹಿತಿಗಳ ಕ್ರಮ ಅರ್ಥಗರ್ಭಿತ ಹಾಗೂ ಪಕ್ವತೆಯಿಂದ ಕೂಡಿರಲಿ.

3. ನಿಮ್ಮ ಸಾಮರ್ಥ್ಯದ ಬಗೆಗೆ ನಿಮಗೆ ನಂಬಿಕೆ ಇರಲಿ:

ಮನುಷ್ಯ ಎಂದ ಮೇಲೆ ಸಾಮಾನ್ಯವಾಗಿ ಅವನಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಆಲೋಚನೆಗಳಿರುತ್ತವೆ ಆದರೆ ನಿಮ್ಮ ಬಗೆಗೆ ನಿಮಗೆ ಹೆಚ್ಚು ತಿಳಿದಿರಲಿ. ನಿಮ್ಮ ಸಾಮರ್ಥ್ಯ ಏನೆಂದು ಅರ್ಥ ಮಾಡಿಕೊಂಡಿದ್ದಲ್ಲಿ ನಿಮಗೆ ಯಾವುದೇ ಸಂದರ್ಭಗಳು ಕಸಿವಿಸಿಯನ್ನುಂಟು ಮಾಡುವುದಿಲ್ಲ. ನಿಮ್ಮ ಬಲ ಮತ್ತು ದುರ್ಬಲಗಳ ಬಗೆಗೆ ಜಾಗರೂಕರಾಗಿರುವುದು ಅಗತ್ಯ.

 

4. ನಿಮ್ಮ ಬದುಕಿನ ಮುನ್ನುಡಿ ನಿಮ್ಮ ಕೈಯಲ್ಲಿರಲಿ:

ನೀವು ನಿಮ್ಮ ಬದುಕನ್ನು ನಿರ್ಧರಿಸುವವರು ಹಾಗಾಗಿ ನಿಮ್ಮ ಬದುಕಿನ ಗುರಿ ಮತ್ತು ಕನಸುಗಳನ್ನು ಈಡೇರಿಸಲು ನೀವೆ ಮುನ್ನುಡಿಯನ್ನು ಬರೆಯಬೇಕು, ಹಾಗಾಗಿ ನಿಮ್ಮ ತಪ್ಪುಗಳನ್ನು ತಿದ್ದಿಕೊಂಡು ಸರಿ ಮಾರ್ಗಗಳನ್ನು ಬಳಸಿ ಗುರಿಯನ್ನು ತಲುಪಿ. ಎಂತಹ ಸಂದರ್ಭಗಳಲ್ಲಿಯೂ ಎದೆಗುಂದದೆ ಆತ್ಮವಿಶ್ವಾಸದಿಂದ ಬದುಕಿ ಮತ್ತು ಛಲದಿಂದ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ.

5. ನಿಮ್ಮನ್ನು ಘನತೆಗೆ ದಕ್ಕೆ ಉಂಟಾಗದಂತೆ ನೋಡಿಕೊಳ್ಳಿ:

ಪ್ರತಿಯೊಬ್ಬರ ಬದುಕಿಗೆ ಘನತೆ ಎನ್ನುವುದು ತುಂಬಾನೆ ಮುಖ್ಯವಾದದ್ದು, ಅದು ಸೋತಾಗ ಆಗಲಿ ಅಥವಾ ಗೆದ್ದಾಗಲೇ ಆಗಲಿ ಹೇಗೆ ವರ್ತಿಸಬೇಕು ಮತ್ತು ಹೇಗಿರಬೇಕು ಎನ್ನುವುದು ತಿಳಿದಿರಬೇಕು. ನೀವು ಸೋತಾಗ ಅಥವಾ ಗೆದ್ದಾಗ ಬೀಗಬೇಡಿ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಆಗ ನಿಮ್ಮ ಘನತೆಗೆ ಎಂದೂ ದಕ್ಕೆ ಬರುವುದಿಲ್ಲ. ಯಾವುದೇ ಸಂದರ್ಭಗಳಲ್ಲಿಯೂ ನಿಮ್ಮ ಘನತೆಗೆ ಚ್ಯುತಿ ಬರದಂತೆ ನೋಡಿಕೊಳ್ಳಿ.

6. ನಿಮ್ಮನ್ನೆ ನೀವು ಬ್ಯಾಂಡ್ ಆಗಿ ಪರಿಚಯಿಸಿಕೊಳ್ಳಿ:

ಇಂದಿನ ದಿನಗಳಲ್ಲಿ ಬ್ರ್ರಾಂಡಿಂಗ್ ತುಂಬಾನೆ ಮಹತ್ತರ ಪಾತ್ರವಹಿಸುತ್ತಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ಇನ್ನೊಬ್ಬರಿಗೆ ಪರಿಚಯಿಸಲು ಅಥವಾ ತನ್ನ ಸಾಮರ್ಥ್ಯವನ್ನು ಇನ್ನೊಬ್ಬರಿಗೆ ಪರಿಚಯಿಸುವ ಸಲುವಾಗಿ ಬ್ರಾಂಡಿಂಗ್‌ ಮಾಡಿಕೊಳ್ಳುವ ಹಲವಾರು ಮಂದಿಯನ್ನು ನಾವಿಂದು ಕಾಣುತ್ತಿದ್ದೇವೆ. ಹಾಗಾಗಿ ನಿಮ್ಮನ್ನು ನೀವು ಬ್ರಾಂಡ್ ಅಗಿ ಜನಕ್ಕೆ ಪರಿಚಯಿಸಿಕೊಳ್ಳಿ ಆಗ ಮಾತ್ರ ಸಂಸ್ಥೆಯೂ ನಿಮ್ಮನ್ನು ಗುರುತಿಸುತ್ತದೆ. ಆಗ ನಿಮ್ಮನ್ನು ಸಮಾಜವು ಗುರುತಿಸುತ್ತದೆ.

7. ನೆಟ್‌ವರ್ಕ್‌ ಬೆಳೆಸಿಕೊಳ್ಳಿ:

ನೀವು ಜೀವನದಲ್ಲಿ ಯಶಸ್ವಿಯಾಗಲು ಇರುವ ಮುಖ್ಯವಾದ ಹಂತಗಳಲ್ಲಿ ಒಂದಾದ ನೆಟ್‌ವರ್ಕಿಂಗ್‌. ನಾವು ಜೀವನದಲ್ಲಿ ಹಲವಾರು ಜನರನ್ನು ಭೇಟಿ ಮಾಡುತ್ತೇವೆ. ಅವರೊಂದಿಗೆ ಉತ್ತಮ ಸಂವಹನ ಬೆಳೆಸಿಕೊಳ್ಳುವುದು ಅಗತ್ಯ. ಯಾವ ಸಂದರ್ಭದಲ್ಲಿ ಯಾರು ಹೇಗೆ ಸಹಾಯಕ್ಕೆ ಆಗುತ್ತಾರೆ ತಿಳಿದಿಲ್ಲ ಆದರೆ ನಮಗೆ ಪರಿಚಯವಾದ ಜನರೊಂದಿಗೆ ಉತ್ತಮ ಸಂವಹನ ಹೊಂದಿದ್ದಲ್ಲಿ ನೀವು ಒಂದು ಹಂತದಲ್ಲಿ ಸಾಧಿಸಿದ ಹಾಗೆ. ಹಾಗಾಗಿ ನೆಟ್‌ವರ್ಕ್‌ ಬೆಳೆಸಿಕೊಳ್ಳಿ ಇದರಿಂದ ನಿಮ್ಮ ಭವಿಷ್ಯದಲ್ಲಿ ಯಶಸ್ವಿಯನ್ನು ಹೊಂದಬಹುದು.

For Quick Alerts
ALLOW NOTIFICATIONS  
For Daily Alerts

English summary
Here we are giving tips & strategies to build successful career. Read on
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X