ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯೇ ಭೌತಶಾಸ್ತ್ರ, ಈಗಾಗ್ಲೇ ತಯಾರಿ ಆಗಿರ್ಬೇಕಲ್ಲಾ...?

By Kavya

ದ್ವಿತೀಯ ಪಿಯುಸಿ ಪರೀಕ್ಷೆಗೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮೊದಲ ಪರೀಕ್ಷೆ ಭೌತಶಾಸ್ತ್ರ. ಈಗಾಗಾಲೇ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ತಯಾರಿಯನ್ನು ಮುಗಿಸಿ. ರಿವಿಶನ್ ಮಾಡುತ್ತಿರಬಹುದು. ಪರೀಕ್ಷೆಗೆ ಯಾವ ರೀತಿ ತಯಾರಾಗಬೇಕು ಎನ್ನುವುದನ್ನು ಇಲ್ಲಿ ನಿಮಗೆ ತಿಳಿಸಲಾಗಿದೆ.

ಕರ್ನಾಟಕ ದ್ವಿತಿಯ ಪಿಯುಸಿ ಭೌತಶಾಸ್ತ್ರ ಪರೀಕ್ಷೆ

ವಿಭಾಗಪ್ರಶ್ನೆಗಳ ವಿಧಗಳುಪ್ರತಿ ಉತ್ತರಕ್ಕೂಅಂಕ ಒಟ್ಟು ಪ್ರಶ್ನೆಗಳುಉತ್ತರಿಸಬೇಕಾದ ಪ್ರಶ್ನೆಗಳು
1ಅತೀ ಸಣ್ಣ ಪ್ರಶ್ನೋತ್ತರ11010
2ಸಣ್ಣ ಪ್ರಶ್ನೋತ್ತರ285
3ಸಣ್ಣ ಪ್ರಶ್ನೋತ್ತರ385
4ದೊಡ್ಡ ಪ್ರಶ್ನೋತ್ತರ532
5ದೊಡ್ಡ ಪ್ರಶ್ನೋತ್ತರ532
6ಸಂಖ್ಯಾತ್ಮಕ ಸಮಸ್ಯೆಗಳು553

ಪರೀಕ್ಷೆಗೂ ಮುಂಚಿತವಾಗಿ ಈ ಅಂಶಗಳನ್ನು ಅನುಸರಿಸಿ

1. ವಿಷಯಗಳ ಬಗ್ಗೆ ಒಂದು ನೋಟ್ ತಯಾರಿಸಿಟ್ಟುಕೊಳ್ಳಿ

1. ವಿಷಯಗಳ ಬಗ್ಗೆ ಒಂದು ನೋಟ್ ತಯಾರಿಸಿಟ್ಟುಕೊಳ್ಳಿ

ಸಣ್ಣ ಪೇಪರ್‌ನಲ್ಲಿ ಎಲ್ಲಾ ಮುಖ್ಯವಾದ ವಿಷಯಗಳನ್ನು ಬರೆದಿಟ್ಟುಕೊಳ್ಳಿ. ಇದು ನೀವು ಪರೀಕ್ಷೆ ಬರೆಯುವುದಕ್ಕೂ ಮುನ್ನ ರಿವಿಶನ್ ಮಾಡಲು ಸಹಕಾರಿಯಾಗುತ್ತದೆ. ಹೀಗೆ ಬರೆದಿಡುವುದರಿಂದ ನೀವು ಓದಿದೆಲ್ಲಾ ನೆನಪಿನಲ್ಲಿರಲು ಸಹಾಯವಾಗುತ್ತದೆ. ಕೆಲವು ಪಾಯಿಂಟ್‌ಗಳನ್ನು ಇಟ್ಟುಕೊಂಡು ತಯಾರಿಸಬಹುದು.

2. ಎಲ್ಲಾ ಮಹತ್ವದ ಟಾಪಿಕ್‌ನ್ನು ಕವರ್ ಮಾಡಿ

2. ಎಲ್ಲಾ ಮಹತ್ವದ ಟಾಪಿಕ್‌ನ್ನು ಕವರ್ ಮಾಡಿ

ಬಹುತೇಕ ಪಾಠಗಳು ಎಲೆಕ್ಟ್ರಿಸಿಟಿ ಹಾಗೂ ಕರೆಂಟ್ ಬಗ್ಗೆನೇ ಇರುತ್ತದೆ. ಮೊದಲಿಗೆ ಎಲೆಕ್ಟ್ರಿಕ್ ಕರೆಂಟ್‌ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ನಂತರ ಅದಕ್ಕೆ ಸಂಬಂಧಿಸಿದ ಉಳಿದ ವಿಷಯಗಳ ಬಗ್ಗೆಯೂ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಡೈವರ್ಶನ್ ಆಫ್ ಕರೆಂಟ್,
a)ಓಮ್ಸ್ ಲಾ,.
b)ಫಾರ್ಮುಲಾ
c)ಸರ್ಕ್ಯೂಟ್ ಡೈಯಗ್ರಾಮ್

ಇನ್ನೊಂದು ಮುಖ್ಯ ವಿಷಯವೆಂದರೆ ಮೇಗ್ನೆಟಿಜಮ್
a)ಮೆಗ್ನೆಟಿಕ್ ಫೀಲ್ಡ್ಸ್ ಆಫ್‌ ಲೈನ್
b)ಫಾರ್ಮುಲಾ
c)ಎಲೆಕ್ಟ್ರೋಮ್ಯಾಗ್ನೆಟ್ ಇಂಡಕ್ಷನ್ ರಿಲೇಟೆಡ್ ಪ್ರಾಬ್ಲಮ್ಸ್ ಆಂಡ್ ಕಾನ್ಸೆಪ್ಟ್

ಇತರ ಮುಖ್ಯ ವಿಷಯಗಳು
a)ಅಟೋಮಿಕ್ ಸ್ಟ್ರಕ್ಟರ್
b)ಲೆನ್ಸಸ್ ಫ್ರಂ ಲೈಟ್

 

3. ನಿಮ್ಮ ಎಲ್ಲಾ ಅಗತ್ಯ ವಸ್ತುಗಳನ್ನು ತಯಾರಿಟ್ಟುಕೊಳ್ಳಿ

3. ನಿಮ್ಮ ಎಲ್ಲಾ ಅಗತ್ಯ ವಸ್ತುಗಳನ್ನು ತಯಾರಿಟ್ಟುಕೊಳ್ಳಿ

ನಿಮ್ಮ ಬ್ಯಾಗ್‌ನಲ್ಲಿ ಹಾಲ್ ಟಿಕೇಟ್, ಸ್ಕೇಲ್, ಪೆನ್, ಪೆನ್ಸಿಲ್, ರಬ್ಬರ್, ಶಾರ್ಪನರ್, ಕಂಪಾಸ್, ಐಡಿ ಕಾರ್ಡ್, ನೀರಿನ ಬಾಟಲಿ ತಯಾರಿಟ್ಟುಕೊಳ್ಳಿ. ನಿಮಗೆ ಪಾಸಿಟಿವ್ ವಸ್ತುಗಳಾದ ದೇವರ ಫೋಟೋ ಹೀಗೆ ಏನಾದರೂ ಹಿಡಿದುಕೊಳ್ಳುವ ಅಭ್ಯಾಸವಿದ್ದರೆ ಅದನ್ನೂ ಹಿಡಿದುಕೊಳ್ಳಬಹುದು. ಕೊನೆ ಕ್ಷಣದಲ್ಲಿ ಇವುಗಳಿಗಾಗಿ ಹುಡುಕಾಡುತ್ತಾ ಇರಬೇಡಿ.

4. ಲೆಕ್ಕವನ್ನು ಬಿಟ್ಟುಬಿಡಬೇಡಿ

4. ಲೆಕ್ಕವನ್ನು ಬಿಟ್ಟುಬಿಡಬೇಡಿ

ಲೆಕ್ಕಗಳನ್ನು ಬಗೆಹರಿಸುವುದಕ್ಕಿಂತಲೂ ಥಿಯರಿ ಓದುವುದು ಸುಲಭವೆನಿಸಬಹುದು. ಹಾಗಂತ ಲೆಕ್ಕವನ್ನು ಪೂರ್ಣವಾಗಿ ಬಿಟ್ಟುಬಿಡಬೇಡಿ. ಯಾವುದಾದರೂ ಮುಖ್ಯ ವಿಷಯದ ಮೇಲಿನ ಲೆಕ್ಕವನ್ನು ತೆಗೆದುಕೊಳ್ಳಿ. ಅದನ್ನು ಬಗೆಹರಿಸುವುದರ ಹಿಂದಿರುವ ಲಾಜಿಕ್‌ನ್ನು ಅರ್ಥಮಾಡಿಕೊಳ್ಳಿ.

5. ಕೀ ವರ್ಡ್ಸ್‌ನ್ನು ನೆನಪಿಟ್ಟುಕೊಳ್ಳಿ

5. ಕೀ ವರ್ಡ್ಸ್‌ನ್ನು ನೆನಪಿಟ್ಟುಕೊಳ್ಳಿ

ಭೌತಶಾಸ್ತ್ರದಲ್ಲಿ ಬಹಳಷ್ಟು ವ್ಯಾಖ್ಯಾನಗಳು ಇರುತ್ತವೆ. ಕೀ ವರ್ಡ್‌ಗಳಿಗೆ ಹೆಚ್ಚಿನ ಅಂಕವನ್ನು ನೀಡಲಾಗುತ್ತದೆಯೇ ವಿನಹಃ ನೀವು ಎಷ್ಟು ದೊಡ್ಡ ಉತ್ತರ ಬರೆದಿದ್ದೀರಿ ಎನ್ನುವುದನ್ನು ನೋಡೋದಿಲ್ಲ. ಪರೀಕ್ಷೆ ಬರೆಯುವದಕ್ಕೂಮುನ್ನ ಒಮ್ಮೆ ಎಲ್ಲಾ ಕೀ ವರ್ಡ್‌ಗಳನ್ನು ಪುನಾರಾವರ್ತನೆ ಮಾಡಿ.

6. ಆಶಾವಾದಿಯಾಗಿರಿ

6. ಆಶಾವಾದಿಯಾಗಿರಿ

ಪರೀಕ್ಷೆ ಬರೆಯುವಾಗ ಮೊದಲು ಆಶಾವಾದಿಗಳಾಗಿರಬೇಕು. ಸಾಮಾನ್ಯವಾಗಿ ಪ್ರಶ್ನಾಪತ್ರಿಕೆ ಈ ರೀತಿ ಬರುತ್ತದೆ.

  • 40% ಸುಲಭ ಪ್ರಶ್ನೆಗಳು
  • 40% ಸಾಧಾರಣ ಪ್ರಶ್ನೆಗಳು
  • 20% ಕಠಿಣ ಪ್ರಶ್ನೆಗಳು
  • ಹೀಗಿರುವಾಗ ಸುಲಭದ ಪ್ರಶ್ನೆಗಳು ಹಾಗೂ ಸಾಧಾರಣ ಪ್ರಶ್ನೆಗಳಿಂದ ನೀವು ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಉಳಿದವುಗಳೆಲ್ಲಾ ನಿಮ್ಮ ನಿಮ್ಮ ಮನೋಸ್ಥಿತಿಯ ಮೇಲೆ ನಿಂತಿದೆ. ಪರೀಕ್ಷೆ ಮುಗಿಯುವವರೆಗೂ ಆಶಾವಾದಿಯಾಗೇ ಇರಿ.

     

    7. ಒಳ್ಳೆಯ ನಿದ್ದೆ ಮಾಡಿ

    7. ಒಳ್ಳೆಯ ನಿದ್ದೆ ಮಾಡಿ

    ರಾತ್ರಿ ಇಡೀ ಕೂತು ನಿದ್ದೆಗೆಟ್ಟು ಓದುವ ಅಗತ್ಯವಿಲ್ಲ. ಇದರಿಂದ ನಿಮ್ಮ ದೇಹ ಮರುದಿನ ಆಯಾಸಗೊಳ್ಳುತ್ತದೆ. ನಿಮಗೆ ಓದಲೂ ಇನ್ನೂ ಬಾಕಿ ಇದೆ ಎಂದಾದಲ್ಲಿ ಪರೀಕ್ಷೆ ಹಾಲ್‌ಗೆ ತೆರಳುವ ಮುನ್ನ ಕನಿಷ್ಠ ಆರು ಗಂಟೆಯಾದರೂ ನಿದ್ದೆ ಮಾಡಲೇ ಬೇಕು. ಇಲ್ಲವಾದಲ್ಲಿ ಪರೀಕ್ಷೆ ಹಾಲ್‌ನಲ್ಲಿ ತೂಕಡಿಸಬೇಕಾಗುತ್ತದೆ.

     

     

For Quick Alerts
ALLOW NOTIFICATIONS  
For Daily Alerts

English summary
The first exam for the science students is Physics. By now, students would have already completed their preparation and be doing their revisions today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X