Women's Day 2020: ಯಶಸ್ವೀ ಉದ್ಯಮಿ ಇಂದ್ರಾ ನೂಯಿ ಅವರ ಲೈಫ್ ಸ್ಟೋರಿ ನಿಮ್ಮ ಮುಂದೆ

By Kavya

ಭಾರತದಲ್ಲಿ ಹೆಣ್ಣು ಮಗು ಹುಟ್ಟಿತು ಎಂದ್ರೆ ಸಾಕು ಆಕೆಯ ಲೈಫ್ ಹೇಗಿರಬೇಕೆಂದು ಮೊದಲೇ ಮನೆಯವರು ನಿರ್ಧರಿಸಿ ಬಿಡುತ್ತಾರೆ. ಇನ್ನು ಆಕೆಯ ವಿದ್ಯಾಭ್ಯಾಸ, ಕೆರಿಯರ್ ಲೈಫ್ ಗೆಲ್ಲಾ ಆಕೆಯ ಕುಟುಂಬದಲ್ಲಿ ಪ್ರಾಮುಖ್ಯತೆ ನೀಡುವುದಿಲ್ಲ. ಆಕೆಗೆ ಗೃಹಿಣಿ ಆಗಿ ಹೇಗಿರಬೇಕು ಎಂಬ ಕೌಶಲ್ಯವನ್ನ ಮಾತ್ರ ಆಕೆಗೆ ಹೇಳಿಕೊಡುತ್ತಾರೆ ಅಷ್ಟೇ ಅಲ್ಲ ಆಕೆ ಮದುವೆಯ ಒಂದು ಮೆಟೀರಿಯಲ್ ಅಷ್ಟೇ ಅನ್ನೋದು ಮನೆಯವರ ಮೈಂಡ್‌ಸೆಟ್ ಆಗಿರುತ್ತದೆ.

ಹಾಗಂತಾ ಮೇಲೆ ಹೇಳಿರುವಂತೆ ಎಲ್ಲರ ಮನೆಯಲ್ಲಿ ಅಂತಹ ಮನಸ್ಥಿತಿಯವರು ಇರುವುದಿಲ್ಲ. ಈಗಂತೂ ಅಂತಹ ಮನಸ್ಥಿತಿ ಇರುವುದು ತುಂಬಾ ವಿರಳ. ಆದ್ರೆ ನಮ್ಮ ಅಜ್ಜ - ಅಜ್ಜಿ ಕಾಲದಲ್ಲಿ ಹೆಣ್ಣು ಅಂದ್ರೆ ಆಕೆಗೆ ಮದುವೆ ಮಾಡಿ ಕಳುಹಿಸಿ ಕೊಟ್ಟರೆ ಅಲ್ಲಿಗೆ ಎಲ್ಲಾ ಜವಾಬ್ದಾರಿ ಮುಗಿಯುತ್ತೆ ಅನ್ನೋ ನಂಬಿಕೆ ಇತ್ತು. ಇಂದು ನಾವು ನಿಮಗೆ ಪರಿಚಯಿಸಲಿರುವ ಯಶಸ್ವೀ ಮಹಿಳೆ ಇಂದ್ರಾ ನೂಯಿ ಅವರ ಹೆತ್ತವರು ಅಂತಹ ಮನಸ್ಥತಿಯವರಾಗಿರಲಿಲ್ಲ. ಆಕೆಯ ಕನಸು, ಇಷ್ಟಕ್ಕೆ ಮನೆಯ ಇತರ ಪುರುಷ ಸದಸ್ಯರಿಗೆ ನೀಡುವಷ್ಟೇ ಬೆಂಬಲ ನೀಡಿದ್ದರು ಇಂದ್ರಾ ಅವರ ಹೆತ್ತವರು.

 

ಇಂದ್ರಾ ಅವರಿಗೆ ಅನೇಕ ಅವಕಾಶಗಳು ದೊರಿತ್ತಿದ್ದು, ಇಂದು ಅವರು ಪೆಪ್ಸಿಕೋ ಎಂಬ ಪ್ರತಿಷ್ಟಿತ ಕಂಪನಿಯ ಸಿಇಓ ಆಗಿದ್ದಾರೆ. ಮಹಿಳಾ ದಿನಾಚರಣೆ ಹಿನ್ನೆಲೆ ಯಶಸ್ವೀ ಮಹಿಳಾ ಉದ್ಯಮಿ ಆಗಿರುವ ಇಂದ್ರಾ ಅವರ ಜೀವನದ ಸುಂದರ ಪಯಣದ ಒಂದು ನೋಟ ನಿಮಗಾಗಿ

ಬಾಲ್ಯ ಜೀವನ ಹಾಗೂ ಶೈಕ್ಷಣಿಕ ಜೀಚನ

ಬಾಲ್ಯ ಜೀವನ ಹಾಗೂ ಶೈಕ್ಷಣಿಕ ಜೀಚನ

ತಮಿಳು ದಂಪತಿಗೆ 1955 ಅಕ್ಟೋಬರ್ 28 ರಂದು ಇಂದ್ರಾ ಕೃಷ್ಣಮೂರ್ತಿ ನೂಯಿ ಜನಿಸಿದರು. ಅವರ ತಂದೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ನಲ್ಲಿ ಪ್ರೋಗ್ರೇಸೀವ್ ಆಫೀಸರ್ ಆಗಿದ್ದರು.

ಚೆನ್ನೈನ ಎಐಹೆಚ್ಎಸ್ಎಸ್ ನಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿದ ಇಂದ್ರಾ, ಮದ್ರಾಸ್ ಕ್ರೈಸ್ಟ್ ಕಾಲೇಜಿನಲ್ಲಿ ಬಿಎಸ್ ಸಿ ಪದವಿ ಪಡೆದರು. ಇನ್ನು ಫಿಸಿಕ್ಸ್, ಕೆಮೆಸ್ಟ್ರಿ ಹಾಗೂ ಗಣಿತ ಇವರ ಪ್ರಮುಖ ಸಬ್‌ಜೆಕ್ಟ್ ಆಗಿತ್ತು. ಬಳಿಕ ಉನ್ನತ ಶಿಕ್ಷಣಕ್ಕಾಗಿ ಕೊಲ್ಕತ್ತಾಕ್ಕೆ ಪಯಣ ಬೆಳೆಸಿದರು ಇಂದ್ರಾ. ಅಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಲ್ಲಿ ಫೈನಾನ್ಸ್ ಹಾಗೂ ಮಾರ್ಕೆಟಿಂಗ್ ವಿಷಯದಲ್ಲಿ ಮಾಸ್ಟರ್ ಡಿಗ್ರಿ ಪಡೆದರು ಇಂದ್ರಾ.

ಕೆರಿಯರ್ ಲೈಫ್

ಕೆರಿಯರ್ ಲೈಫ್

ABB ಜತೆ ಕೆರಿಯರ್ ಪ್ರಾರಂಭಿಸಿದ ಇಂದ್ರಾ ಬಳಿಕ Johnson & Johnson ಕಂಪನಿಗೆ ಸೇರಿದರು. ಈ ಕಂಪನಿಯ ಫಸ್ಟ್ ನ್ಯಾಪ್ಕಿನ್ ಸ್ಟೇಫ್ರೀ ಲಾಂಚ್‌ನಲ್ಲಿ ಇಂದ್ರಾ ಪ್ರಮುಖ ಪಾತ್ರವಹಿಸಿದ್ದರು. ಈ ಟೈಂನಲ್ಲಿ ಇಂದ್ರಾ ಅವರು ದೇಶದ ಮಹಿಳಾ ಸಬಲೀಕರಣದ ಶಕ್ತಿಯಾಗಿ ಪರಿಚಿತರಾದರು. ಅಷ್ಟೇ ಅಲ್ಲ ಇವರಲ್ಲಿ ಇನ್ನೂ ಏನನ್ನಾದರೂ ಸಾಧಿಸಬೇಕು ಎಂಬ ತುಡಿತ ಹಾಗೆಯೇ ಇತ್ತು. ಹಾಗಾಗಿ ಮತ್ತೆ ಶಿಕ್ಷಣದತ್ತ ಮುಖ ಮಾಡಿದರು ಇಂದ್ರಾ. ಅದಕ್ಕಾಗಿ ಯುಎಸ್‌ನ prestigious Yale Management School ನಲ್ಲಿ ಪಬ್ಲಿಕ್ ಆಂಡ್ ಪ್ರೈವೆಟ್ ವಿಷಯದಲ್ಲಿ ಮಾಸ್ಟರ್ ಡಿಗ್ರಿ ಪಡೆದರು ಇಂದ್ರಾಣಿ

ತನ್ನತನದ ಬಗ್ಗೆ  ನಂಬಿಕೆ ಇಟ್ಟುಕೊಂಡಿದ್ದ ಇಂದ್ರಾಣಿ
 

ತನ್ನತನದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದ ಇಂದ್ರಾಣಿ

ಹೊರದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಇಂದ್ರಾ ಅವರ ಗೆಳತಿಯರು ವೆಸ್ಟರ್ನ್ ಫಾರ್ಮಲ್ ಉಡುಗೆ ಧರಿಸುತ್ತಿದ್ದರು. ಅಂತಹ ಉಡುಗೆಗಾಗಿ ಇಂದ್ರಾ ಅವರು ಹಣ ಸಂಗ್ರಹಿಸಲು ಪ್ರಾರಂಭಿಸಿದ್ದರಂತೆ. ಅಷ್ಟೇ ಅಲ್ಲ ಕೊನೆಗೆ ಖರೀದಿಸಿದರು ಕೂಡಾ.

ಆದ್ರೆ ದಿನಕಳೆದಂತೆ ಅವರಿಗೆ ಇದು ತನಗೆ ಸ್ಯೂಟ್ ಆಗುವಂತಹ ಉಡುಗೆ ಅಲ್ಲ ಎಂದು ಅನಿಸತೊಡಗಿತ್ತಂತೆ. ಆ ಮೇಲೆ ವಿದೇಶಿ ಉಡಗೆಗೆ ಬೈ ಬೈ ಹೇಳಿ ತಮಗೆ ಕಂಫರ್ಟೇಬಲ್ ಆಗುವಂತಹ ಸಾರೀ ಯನ್ನೇ ಧರಿಸಲು ಪ್ರಾರಂಭಿಸಿದ್ದರಂತೆ

ಪೆಪ್ಸಿಕೋ ಜರ್ನಿ ಹೀಗಿತ್ತು:

ಪೆಪ್ಸಿಕೋ ಜರ್ನಿ ಹೀಗಿತ್ತು:

ಪ್ರತಿಷ್ಟಿತ ಪೆಪ್ಸಿಕೋ ಸಂಸ್ಥೆಯಲ್ಲಿ ಸಣ್ಣ ಪೋಸ್ಟ್‌ನಿಂದ ಕೆರಿಯರ್ ಪ್ರಾರಂಭಿಸಿದ್ದ ಇಂದ್ರಾ ಇದೀಗ ಅದೇ ಸಂಸ್ಥೆಯ ನಿರ್ದೇಶಕಿ . ಈ ಯಶಸ್ವೀಗೆ ಅವರ ಕಠಿಣ ಶ್ರಮವೇ ಕಾರಣ. ಕಠಿಣ ಪರಿಶ್ರಮದಿಂದ 2006ರಲ್ಲಿ ಅವರು ಯಶಸ್ವಿ ಉದ್ಯಮಿಯಾಗಿ ಎಲ್ಲರಿಗೂ ಪರಿಚಿತರಾದರು

ಇದೀಗ ಪ್ರಸ್ತುತ ಇಂದ್ರಾ ಅವರ ಅವರ ಕೈ ಕೆಳಗೆ 2, 85,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಅಸಾಧಾರಣ ನಾಯಕತ್ವ ಕೌಶಲ್ಯಗಳ ಜತೆಗೆ ಶಕ್ತಿ ಸಾಮರ್ಥ್ಯದಿಂದ ಕಂಪನಿ ನಡೆಸಬೇಕು ಎಂದು ಇಂದ್ರಾ ಅವರು ತಿಳಿಸುತ್ತಾರೆ

ಆವಿಷ್ಕಾರ:

ಆವಿಷ್ಕಾರ:

ಪೆಪ್ಸಿಕೋದಲ್ಲಿ ಹೊಸ ಆವಿಷ್ಕಾರವೊಂದನ್ನ ಪರಿಚಯಿಸದರು ಇಂದ್ರಾ. 60,70 ರ ದಶಕದಲ್ಲಿ ಪ್ರಸಾರವಾಗುತ್ತಿದ್ದ ಮೌಂಟೇನ್ ಡೀವ್ ಜಾಹೀರಾತನ್ನ ಮತ್ತೆ ತಂದರು. ಈ ಪ್ರಯತ್ನ ಚೆನ್ನಾಗಿ ವರ್ಕೌಟ್ ಆಯಿತು. ಅಷ್ಟೇ ಅಲ್ಲ ಉತ್ಪನ್ನ ಕೂಡಾ ಚೆನ್ನಾಗಿಯೇ ಮಾರಾಟವಾಯಿತ್ತಂತೆ

ಬಳಿಕ ಪೆಪ್ಸಿ ನ್ಯಾಚುರಲ್ ಪ್ರೊಡಕ್ಟ್ ಪರಿಚಯಿಸದರು ಇಂದ್ರಾ. ಈ ಉತ್ಪನ್ನ ನ್ಯಾಚುರಲ್ ಗುಣಲಕ್ಷಣವನ್ನು ಒಳಗೊಂಡಿತ್ತು. ಇದು ಯುವಜನತೆಗಾಗಿ ತಯಾರ ಮಾಡಿದ ಉತ್ಪನ್ನವಾಗಿದ್ದು, ಅಷ್ಟೇ ಅಲ್ಲ ಆರೋಗ್ಯ ಹಾಗೂ ಡಯೆಟ್ ಬಗ್ಗೆ ಯೋಚಿಸಿ ಈ ಉತ್ಪನ್ನವನ್ನ ಬಿಡುಗಡೆ ಮಾಡಿದರು ಇಂದ್ರಾ ಅವರು. ಇದು ಇಂದ್ರಾ ಅವರ ಸ್ಮಾರ್ಟ್ ಯೋಚನಾ ಶಕ್ತಿಗೆ ಉದಾಹರಣೆಯಾಗಿದೆ

ಬ್ಯುಸಿನೆಸ್ ಜತೆ ಫ್ಯಾಮಿಲಿ ಬ್ಯಾಲೆನ್ಸ್

ಬ್ಯುಸಿನೆಸ್ ಜತೆ ಫ್ಯಾಮಿಲಿ ಬ್ಯಾಲೆನ್ಸ್

ಇಂದ್ರಾ ಅವರು ವೃತ್ತಿ ಜೀವನದಲ್ಲಿ ಸಖತ್ ಬ್ಯುಸಿ ಆಗಿದ್ದರು. ಹಾಗಂತಾ ಅವರು ಕೆರಿಯರ್ ಲೈಫ್ ಬಗ್ಗೆ ಮಾತ್ರ ಹೆಚ್ಚು ಫೋಕಸ್ ಮಾಡುತ್ತಿದ್ದರು ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು

ಇಂದ್ರಾ ಅವರು ಫ್ಯಾಮಿಲಿ ಬಗ್ಗೆಯೂ ಕೇರ್ ತೆಗೆದುಕೊಳ್ಳಲು ಯಾವತ್ತೂ ಮರೆತಿಲ್ಲ. ಇಬ್ಬರು ಹೆಣ್ಣು ಮಕ್ಕಳ ಹೆಮ್ಮೆಯ ತಾಯಿ ಈಕೆ. ಫ್ಯಾಮಿಲಿ ಹಾಗೂ ಕೆರಿಯರ್ ಲೈಫ್ ನ್ನು ಚೆನ್ನಾಗಿ ಬ್ಯಾಲೆನ್ಸ್ ಮಾಡುತ್ತಾರೆ ಇಂದ್ರಾ. ಅಷ್ಟೇ ಅಲ್ಲ ಅವರ ಕೆರಿಯರ್ ಲೈಫ್ ಗೆ ಲಿಂಕ್‌ ಇಲ್ಲದ ಹವ್ಯಾಸಗಳು ಅವರಿಗಿವೆ. ಇವರಿಗೆ ಕಲೆ ಅಂದ್ರೆ ತುಂಬಾ ಇಷ್ಟ. ಇವರಿಗೆ ಕಲೆ ಅಂದ್ರೆ ಎಷ್ಟು ಇಷ್ಟ ಎಂದ್ರೆ ಇವರು Lincoln Center for Performing Arts ಬೋರ್ಡ್ ನ ಸದಸ್ಯರಾಗಿರುವುದೇ ಸಾಕ್ಷಿ

ಇನ್ನು ಕಾಂಟ್ರವರ್ಸಿ ಅಂದ್ರೆ ಇಂದ್ರಾ ಅವರಿಗೆ ಅಷ್ಟಕಷ್ಟೆ. ಕಾಂಟ್ರವರ್ಸಿಗಳಿಂದ ಸದಾ ದೂರವಿರುತ್ತಿದ್ದರು. ಇನ್ನ ಇಂದ್ರಾ ಅವರನ್ನ ಹತ್ತಿರದಿಂದ ಬಲ್ಲವರು ಇವರ ಗ್ರಹಣಾ ಶಕ್ತಿ ತುಂಬಾ ಚೆನ್ನಾಗಿದೆ ಅಂತಾರೆ

ಇಂದ್ರಾ ಅವರ ಜೀವನದಿಂದ ನಾವು ಕಲಿಯಬಹುದಾದ  ಪ್ರಮುಖ ಅಂಶಗಳು

ಇಂದ್ರಾ ಅವರ ಜೀವನದಿಂದ ನಾವು ಕಲಿಯಬಹುದಾದ ಪ್ರಮುಖ ಅಂಶಗಳು

ಕೊಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಸಾಧಾರಣ ವಿದ್ಯಾರ್ಥಿಯಾಗಿದ್ದ ಇಂದ್ರಾ. ಆದ್ರೆ ಇದೀಗ ಇವರ ಯಶಸ್ವೀ ಲೈಫ್ ನೋಡಿದ್ರೆ ಏನು ತಿಳಿಯುತ್ತದೆ ಅಂದ್ರೆ ನಮ್ಮ ಯಶಸ್ವೀ ಜೀವನ ನಾವು ಪಡೆದಿರುವ ಅಂಕಗಳ ಮೇಲೆ ನಿರ್ಧಾರವಾಗುದಿಲ್ಲ ಎಂಬುದು.

Johnson & Johnson ಕಂಪನಿಯಲ್ಲಿ ಇಂದ್ರಾ ಅವರ ಕೆರಿಯರ್ ಲೈಫ್ ಚೆನ್ನಾಗಿತ್ತು. ಆದ್ರೆ ಇನ್ನೂ ಏನ್ನಾದಾರೂ ಹೆಚ್ಚಿನದನ್ನ ಸಾಧಿಸಬೇಕು ಎಂದು ಇಂದ್ರಾ ಅವರು ಗುರಿ ಇಟ್ಟುಕೊಂಡಿದ್ದರು. ಇದು ಏನು ತಿಳಿಸುತ್ತೆ ಅಂದ್ರೆ ನಿಮಗೆ ಜೀವನದಲ್ಲಿ ಏನನ್ನಾದರೂ ಸಾಧಿಸ ಬೇಕು ಅಂದುಕೊಂಡ್ರೆ ಅದರತ್ತ ಮುನ್ನುಗ್ಗಿ ಎಂಬುದು

ಪೆಪ್ಸಿಕೋ ಸೇರ್ಪಡೆಯಾದ ಬಳಿಕ ಇಂದ್ರಾ ಅವರು ಒಂದೇ ರಾತ್ರಿಯಲ್ಲಿ ಸಿಇಓ ಆಗಿಲ್ಲ. ಹಲವಾರು ವರ್ಷಗಳ ಕಠಿಣ ಪರಿಶ್ರಮದಿಂದ ಅವರು ಈ ಹುದ್ದೆಗೆ ಬಂದು ತಲುಪಿದ್ದಾರೆ. ಇದರಿಂದ ಏನು ತಿಳಿಯುತ್ತದೆ ಅಂದ್ರೆ ನಿಯಮಿತ ಪರಿಶ್ರಮದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು

ಒಮ್ಮೆ ಸಿಇಓ ಆದ ಬಳಿಕ ಅಲ್ಲಿಗೆ ಪ್ರಯತ್ನ ಸ್ಟಾಪ್ ಮಾಡಿಲ್ಲ ಇಂದ್ರಾ ಅವರು. ಕಂಪನಿ ಏಳ್ಗೆಗೆ ಮತ್ತಷ್ಟು ಪರಿಶ್ರಮ ಮುಂದುವರೆಸಿದರು. ಇದರರ್ಥ ಒಮ್ಮೆ ನೀವು ಸಾಧಿಸಿದ್ರೆ ಅಲ್ಲಿಗೆ ಎಲ್ಲಾ ಮುಗಿಯಿತು ಎಂದಲ್ಲ, ಪ್ರತಿದಿನ ಏನನ್ನಾದ್ರೂ ಹೊಸತ್ತಾಗಿ ಆವಿಷ್ಕಾರ ಮಾಡಬೇಕು ಎಂಬುವುದು

ಒಂದೇ ಸಮಯದಲ್ಲಿ ಯಾರಿಗೆ ಕೆರಿಯರ್ ಲೈಫ್ ಹಾಗೂ ಫ್ಯಾಮಿಲಿ ಬ್ಯಾಲೆನ್ಸ್ ಮಾಡಲು ಸಾಧ್ಯವಾಗುವುದಿಲ್ಲವೋ ಅವರು ಇಂದ್ರಾ ನೂಯಿ ಅವರ ಕತೆ ಓದಲೇ ಬೇಕು

For Quick Alerts
ALLOW NOTIFICATIONS  
For Daily Alerts

English summary
International women's day 2020: Indra Nooyi's parents motivated her to have dreams and aspirations of her own and gave her equal opportunities as that of any male member in the same household. Indra also made the most of the opportunities given to her and carved a niche for her by becoming the CEO of PepsiCo
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more