Summer Solstice 2021 Date : ಈ ವರ್ಷದ ದೀರ್ಘಕಾಲ ಹಗಲು ಹೊಂದಿರುವ ದಿನದ ಬಗ್ಗೆ ತಿಳಿಯಬೇಕಾದ ಸಂಗತಿಗಳಿವು

ಜೂನ್ 21 ಸೋಮವಾರವು ದೀರ್ಘಕಾಲ ಹಗಲು ಹೊಂದಿರುವ ದಿನ. ಇದನ್ನು ಬೇಸಿಗೆ ಅಯನ ಸಂಕ್ರಾಂತಿ ಎಂದುರೆ ಕರೆಯಲಾಗುತ್ತದೆ. ಏನಿದು ಬೇಸಿಗೆ ಅಯನ ಸಂಕ್ರಾಂತಿ ತಿಳಿಯೋಣ ಬನ್ನಿ.

 
 ಬೇಸಿಗೆ ಅಯನ ಸಂಕ್ರಾಂತಿ ದಿನ ಎಂದರೇನು ? ಇಲ್ಲಿ ದಿನದ ಮಾಹಿತಿ

ಏನಿದು ಬೇಸಿಗೆ ಅಯನ ಸಂಕ್ರಾಂತಿ ?:

ಬೇಸಿಗೆ ಅಯನ ಸಂಕ್ರಾಂತಿ ಎಂದರೆ ಉತ್ತರ ಗೋಳಾರ್ಧದಲ್ಲಿ ಅತೀ ದೀರ್ಘವಾದ ಹಗಲುಳ್ಳ ದಿನ ಮತ್ತು ವರ್ಷದಲ್ಲಿ ಅತೀ ಕಡಿಮೆ ರಾತ್ರಿ ಹೊಂದಿರುವ ದಿನ. ಅಂದರೆ ಈ ದಿನ ಸೂರ್ಯೋದಯ ಬೇಗ ಆಗಿ, ಸೂರ್ಯಾಸ್ತವು ಬಹಳ ತಡವಾಗಿ ಆಗುವುದು. 2021ರಲ್ಲಿ ಈ ದಿನವು ಜೂನ್ 21ರಂದು ಬಂದಿದೆ. ಅನೇಕ ಕಡೆ ರೈತರು ಬೆಳೆಗಳನ್ನು ಬಿತ್ತನೆ ಅಥವಾ ಕೊಯ್ಲು ಮಾಡುವ ಮೂಲಕ ಈ ದಿನವನ್ನು ಗುರುತಿಸಿದ್ದಾರೆ.

ಭೂಮಿಯ ಧ್ರುವಗಳಲ್ಲಿ ಒಂದಾದ ಸೂರ್ಯನ ಕಡೆಗೆ ಗರಿಷ್ಠ ಓರೆಯಾದಾಗ ಬೇಸಿಗೆಯ ಅಯನ ಸಂಕ್ರಾಂತಿ ಸಂಭವಿಸುತ್ತದೆ. ಇದು ಪ್ರತಿ ಗೋಳಾರ್ಧದಲ್ಲಿ ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ.

 ಬೇಸಿಗೆ ಅಯನ ಸಂಕ್ರಾಂತಿ ದಿನ ಎಂದರೇನು ? ಇಲ್ಲಿ ದಿನದ ಮಾಹಿತಿ

ಬೇಸಿಗೆ ಅಯನ ಸಂಕ್ರಾಂತಿ 2021 ಯಾವಾಗ?:

ಬೇಸಿಗೆ ಅಯನ ಸಂಕ್ರಾಂತಿ 2021 ಸೋಮವಾರ ಜೂನ್ 21, 2021 ರಂದು ಸಂಭವಿಸುತ್ತದೆ. ತಾಂತ್ರಿಕವಾಗಿ ಸೂರ್ಯನು ಕಾಲ್ಪನಿಕ ಟ್ರಾಪಿಕ್ ಆಫ್ ಕ್ಯಾನ್ಸರ್ ಅಥವಾ 23.5 ° N ಅಕ್ಷಾಂಶದ ಮೇಲೆ ನೇರವಾಗಿರುವಾಗ ಸಂಕ್ರಾಂತಿ ಸಂಭವಿಸುತ್ತದೆ.

 ಬೇಸಿಗೆ ಅಯನ ಸಂಕ್ರಾಂತಿ ದಿನ ಎಂದರೇನು ? ಇಲ್ಲಿ ದಿನದ ಮಾಹಿತಿ

ಬೇಸಿಗೆ ಅಯನ ಸಂಕ್ರಾಂತಿ ಎಂದು ಏಕೆ ಕರೆಯುತ್ತಾರೆ ?:

ಅಯನ ಸಂಕ್ರಾಂತಿ ಎಂಬ ಪದವು ಲ್ಯಾಟಿನ್ ಭಾಷೆಯಿಂದ ಬಂದಿದ್ದು, 'ಸೋಲ್' ಎಂದರೆ ಸೂರ್ಯ ಮತ್ತು 'ಸಿಸ್ಟೆರೆ' ಸ್ಥಿರವಾಗಿ ನಿಲ್ಲುವುದು ಎಂದರ್ಥ. ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಇದು ಸಂಭವಿಸುತ್ತದೆ.

 ಬೇಸಿಗೆ ಅಯನ ಸಂಕ್ರಾಂತಿ ದಿನ ಎಂದರೇನು ? ಇಲ್ಲಿ ದಿನದ ಮಾಹಿತಿ

ಬೇಸಿಗೆ ಅಯನ ಸಂಕ್ರಾಂತಿ ಮತ್ತು ಚಳಿಗಾಲದ ಅಯನ ಸಂಕ್ರಾಂತಿ:

ಅಯನ ಸಂಕ್ರಾಂತಿಯು ಒಂದು ಖಗೋಳ ಘಟನೆಯಾಗಿದ್ದು, ಇದು ವರ್ಷದಲ್ಲಿ ಎರಡು ಬಾರಿ ಸಂಭವಿಸಲಿದೆ. ಬೇಸಿಗೆಯಲ್ಲಿ ಒಮ್ಮೆ (ಜೂನ್) ಮತ್ತು ಚಳಿಗಾಲದಲ್ಲಿ ಒಮ್ಮೆ (ಡಿಸೆಂಬರ್) ಸಂಭವಿಸುತ್ತದೆ.

 

ಜೂನ್ ಅಯನ ಸಂಕ್ರಾಂತಿ / ಬೇಸಿಗೆ ಅಯನ ಸಂಕ್ರಾಂತಿಯ ಸಮಯದಲ್ಲಿ ಯುಕೆ, ಯುಎಸ್ಎ, ಕೆನಡಾ, ರಷ್ಯಾ, ಭಾರತ ಮತ್ತು ಚೀನಾ ದೇಶಗಳಲ್ಲಿ ಬೇಸಿಗೆಯ ಸಮಯವಾಗಿದೆ ಮತ್ತು ಇದು ವರ್ಷದ ಅತೀ ದೀರ್ಘ ದಿನವಾಗಿದೆ. ಆಸ್ಟ್ರೇಲಿಯಾ, ಅರ್ಜೆಂಟೀನಾ, ಚಿಲಿ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾದಲ್ಲಿ ಚಳಿಗಾಲದ ಸಮಯವಾಗಿದೆ. ಮತ್ತು ವರ್ಷದ ಅತ್ಯಂತ ಕಡಿಮೆ ದಿನವಾಗಿದೆ.

ಡಿಸೆಂಬರ್ ಅಯನ ಸಂಕ್ರಾಂತಿ / ಚಳಿಗಾಲದ ಅಯನ ಸಂಕ್ರಾಂತಿಯ ಸಮಯದಲ್ಲಿ ಯುಕೆ, ಯುಎಸ್ಎ, ಕೆನಡಾ, ರಷ್ಯಾ, ಭಾರತ ಮತ್ತು ಚೀನಾದಲ್ಲಿ ಚಳಿಗಾಲದ ಸಮಯವಾಗಿದೆ ಮತ್ತು ಇದು ವರ್ಷದ ಅತ್ಯಂತ ಕಡಿಮೆ ದಿನವಾಗಿದೆ. ಆಸ್ಟ್ರೇಲಿಯಾ, ಅರ್ಜೆಂಟೀನಾ, ಚಿಲಿ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಬೇಸಿಗೆಯ ಸಮಯವಾಗಿದ್ದು, ಇದು ವರ್ಷದ ಅತಿ ದೀರ್ಘವಾದ ದಿನವಾಗಿದೆ.

For Quick Alerts
ALLOW NOTIFICATIONS  
For Daily Alerts

English summary
Summer solstice 2021 falls on monday june 21. Its time to celebrate the longest day of the year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X