Teachers' Day Speech Ideas : ಶಿಕ್ಷಕರ ದಿನದಂದು ವಿದ್ಯಾರ್ಥಿಗಳು ಭಾಷಣ ಮಾಡಲು ಇಲ್ಲಿದೆ ಮಾಹಿತಿ

ಶಿಕ್ಷಕರ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ. ಭಾರತದ ಎರಡನೇ ರಾಷ್ಟ್ರಪತಿ ಹಾಗೂ ಶ್ರೇಷ್ಠ ವಿದ್ವಾಂಸರಾಗಿದ್ದ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.

 
ಶಿಕ್ಷಕರ ದಿನಾಚರಣೆಗೆ ಭಾಷಣ ಮಾಡಲು ವಿದ್ಯಾರ್ಥಿಗಳಿಗೆ ಸಲಹೆ

ಈ ದಿನದಂದು ಅನೇಕ ಶಾಲಾ ಕಾಲೇಜುಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಅದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳು ಪಾಲ್ಗೊಳ್ಳುತ್ತಾರೆ. ವಿಶೇಷವಾಗಿ ವೇದಿಕೆ ಕಾರ್ಯಕ್ರಮಗಳನ್ನು ಕೂಡ ವಿದ್ಯಾರ್ಥಿಗಳು ಹಮ್ಮಿಕೊಳ್ಳುತ್ತಾರೆ. ಶಿಕ್ಷಕರ ದಿನದ ಕುರಿತು ವೇದಿಕೆಯ ಮೇಲೆ ವಿದ್ಯಾರ್ಥಿಗಳು ಹೇಗೆ ಭಾಷಣ ಮಾಡಬಹುದು ಎಂದು ಇಲ್ಲಿ ಮಾಹಿತಿ ಜೊತೆಗೆ ಸಲಹೆಗಳನ್ನು ನೀಡಲಾಗಿದೆ ಓದಿ ತಿಳಿಯಿರಿ.

ಶಿಕ್ಷಕರ ದಿನಾಚರಣೆಯ ಭಾಷಣ 1:

ನನ್ನ ಎಲ್ಲ ಗೌರವಾನ್ವಿತ ಶಿಕ್ಷಕರಿಗೆ ಮತ್ತು ಇಲ್ಲಿ ಉಪಸ್ಥಿತರಿರುವ ಎಲ್ಲರಿಗೂ ತುಂಬು ಹೃದಯದ ಸ್ವಾಗತ. ಇಂದು ನಾನು ಶಿಕ್ಷಕರ ದಿನದಂದು ಭಾಷಣ ಮಾಡಲು ಬಂದಿದ್ದೇನೆ. ನಮಗೆ ಯಾವಾಗಲೂ ಮಾರ್ಗದರ್ಶನ ಮಾಡುತ್ತಾ ಮತ್ತು ನಮಗೆ ಎಲ್ಲಾ ಬೋಧನೆಗಳು, ನೈತಿಕ ಮೌಲ್ಯಗಳು ಮತ್ತು ಶಿಸ್ತನ್ನು ನೀಡಿದ್ದಕ್ಕಾಗಿ ನನ್ನ ಪ್ರೀತಿಯ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು.

ಈಗ ನನ್ನ ಭಾಷಣವನ್ನು ಪ್ರಾರಂಭಿಸಲು ನಾನು ಬಯಸುತ್ತೇನೆ. ಭಾರತದ ಎರಡನೇ ರಾಷ್ಟ್ರಪತಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಆಚರಿಸಲು ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಡಾ. ರಾಧಾಕೃಷ್ಣನ್ ಭಾರತದ ಮೊದಲ ಉಪರಾಷ್ಟ್ರಪತಿ ಹಾಗೂ ಅವರು ಒಬ್ಬ ಮಹಾನ್ ವಿದ್ವಾಂಸ, ಆದರ್ಶ ಶಿಕ್ಷಕ ಮತ್ತು ಭಾರತ ರತ್ನ ಪುರಸ್ಕೃತ.

ಶಿಕ್ಷಕರು ನಮ್ಮ ಬದುಕಿನ ಆಧಾರ ಸ್ತಂಭಗಳಾಗಿದ್ದು, ಅವರು ನಮ್ಮ ವಿದ್ಯಾರ್ಥಿ ಜೀವನದುದ್ದಕ್ಕೂ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ನಮಗೆ ಜೀವನದಲ್ಲಿ ಅಮೂಲ್ಯವಾದ ಪಾಠಗಳನ್ನು ಕಲಿಸಲು ಶ್ರಮವಹಿಸುತ್ತಾರೆ. ನನ್ನ ಮೊದಲ ಮಾರ್ಗದರ್ಶಕರಾಗಿದ್ದಕ್ಕಾಗಿ ಮತ್ತು ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ನನಗೆ ಬೆಂಬಲ ನೀಡಿದ್ದಕ್ಕಾಗಿ ನಾನು ನನ್ನ ಶಿಕ್ಷಕರಿಗೆ ಮತ್ತು ಹೆತ್ತವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.

 

ನಮ್ಮ ದೇಶದ ಭವಿಷ್ಯವು ಇಂದಿನ ಮಕ್ಕಳ ಕೈಯಲ್ಲಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ನಮ್ಮ ಬದುಕಿನುದ್ದಕ್ಕೂ ಯಶಸ್ವಿಯಾಗಲು ಸಹಾಯ ಮಾಡುತ್ತಾರೆ.

ಶಿಕ್ಷಕರ ದಿನವನ್ನು ಅವರ ಶ್ರಮವನ್ನು ಗೌರವಿಸಲು ಹಾಗೂ ನಮ್ಮ ಜೀವನದಲ್ಲಿ ಅವರ ವಿಶೇಷ ಪಾತ್ರವನ್ನು ಗುರುತಿಸಲು ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷವಾದ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ. ಶಿಕ್ಷಕರ ದಿನವನ್ನು ಕೇವಲ ಭಾರತದಲ್ಲಿ ಆಚರಿಸುವುದಲ್ಲದೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಬೇರೆ ಬೇರೆ ದೇಶಗಳು ಈ ದಿನವನ್ನು ಬೇರೆ ಬೇರೆ ದಿನಾಂಕಗಳಲ್ಲಿ ಆಚರಿಸುತ್ತವೆ. ಯುನೆಸ್ಕೋ ಅಧಿಕೃತವಾಗಿ ಅಕ್ಟೋಬರ್ 5 ಅನ್ನು 1994 ರಲ್ಲಿ ವಿಶ್ವ ಶಿಕ್ಷಕರ ದಿನವನ್ನಾಗಿ ಘೋಷಿಸಿತು.

ಕೊನೆಯದಾಗಿ ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ನನ್ನ ಪ್ರೀತಿಯ ಶಿಕ್ಷಕರ ಮೇಲೆ ಭಾಷಣ ಮಾಡುವ ಅವಕಾಶವನ್ನು ಒದಗಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವ ಮೂಲಕ ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ. ನಾನು ಈ ಸಂಸ್ಥೆಯ ವಿದ್ಯಾರ್ಥಿ ಎಂದು ಕರೆದುಕೊಳ್ಳಲು ಹೆಮ್ಮೆ ಪಡುತ್ತೇನೆ ಇದು ನನಗೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಾಯ ಮಾಡಿದೆ ಮತ್ತು ಪ್ರತಿದಿನ ಹೊಸ ವಿಷಯಗಳನ್ನು ಕಲಿಯುವ ಉತ್ಸಾಹವನ್ನು ನೀಡಿದೆ. ಧನ್ಯವಾದಗಳು.

ಶಿಕ್ಷಕರ ದಿನಾಚರಣೆಯ ಭಾಷಣ 2:

ಇಲ್ಲಿ ನೆರೆದಿರುವ ಎಲ್ಲರಿಗೂ ಶುಭ ಮುಂಜಾನೆ. ಶಿಕ್ಷಕರ ದಿನದ ಈ ಶುಭ ಸಂದರ್ಭದಲ್ಲಿ ಭಾಷಣ ಮಾಡಲು ನಾನು ಇಲ್ಲಿದ್ದೇನೆ. ನನ್ನ ಎಲ್ಲಾ ಗೌರವಾನ್ವಿತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರುವ ಮೂಲಕ ನನ್ನ ಭಾಷಣವನ್ನು ಪ್ರಾರಂಭಿಸಲು ಬಯಸುತ್ತೇನೆ. ನಿಮ್ಮ ಕಠಿಣ ಪರಿಶ್ರಮದಿಂದಾಗಿ ನಾವು ವಿದ್ಯಾರ್ಥಿಯಾಗಿ ಪ್ರತಿದಿನ ಕಲಿಯುತ್ತೇವೆ ಮತ್ತು ಉತ್ತಮ ವ್ಯಕ್ತಿಯಾಗಿ ಬೆಳೆಯುತ್ತೇವೆ. ಶಿಕ್ಷಕರು ಯಾವಾಗಲೂ ನಮ್ಮೊಂದಿಗೆ ಆಧಾರ ಸ್ತಂಭವಾಗಿ ನಿಂತು ನಮ್ಮ ಹಲವಾರು ತಪ್ಪುಗಳನ್ನು ಸರಿಪಡಿಸಿದ್ದಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಬೋಧನೆಯ ಕಡೆಗೆ ಅವರ ಶ್ರಮವನ್ನು ಗುರುತಿಸಲು ಮತ್ತು ಅವರನ್ನು ಮೆಚ್ಚುಗೆಯೊಂದಿಗೆ ಗೌರವಿಸಲು ಭಾರತದಾದ್ಯಂತ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ಭಾರತದ ಮೊದಲ ಉಪರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಸೆಪ್ಟೆಂಬರ್ 5, 1988 ರಂದು ಜನಿಸಿದರು. ಅವರು ಭಾರತದ ಎರಡನೇ ರಾಷ್ಟ್ರಪತಿ ಮತ್ತು ಉತ್ತಮ ವಿದ್ವಾಂಸರೂ ಆಗಿದ್ದರು. ಅವರಿಗೆ ಬೋಧನೆಯ ಉತ್ಸಾಹವಿತ್ತು ಮತ್ತು ಅವರಿಗೆ ಭಾರತ ರತ್ನವನ್ನೂ ನೀಡಲಾಯಿತು. ಒಮ್ಮೆ ಅವರ ಕೆಲವು ವಿದ್ಯಾರ್ಥಿಗಳು ಅವರ ಹುಟ್ಟುಹಬ್ಬವನ್ನು ಆಚರಿಸಲು ಕೇಳಿದಾಗ ಡಾ. ರಾಧಾಕೃಷ್ಣನ್ ಅವರು 5 ನೇ ಸೆಪ್ಟೆಂಬರ್ ಅನ್ನು ತಮ್ಮ ಜನ್ಮದಿನವಾದ ಆಚರಿಸುವ ಬದಲು ಶಿಕ್ಷಕರ ದಿನವನ್ನಾಗಿ ಆಚರಿಸಿದರೆ ಅವರು ತುಂಬಾ ಕೃತಜ್ಞನಾಗಿರುತ್ತೇನೆ ಎಂದು ಹೇಳಿದರು. ಇದು ಅವರು ಬೋಧನೆಗೆ ಎಷ್ಟು ಮಹತ್ವ ಕೊಡುತ್ತಾರೆ ಎಂಬುದನ್ನು ನಿಜವಾಗಿಯೂ ತೋರಿಸುತ್ತದೆ. ಹೀಗಾಗಿ ಪ್ರತಿ ವರ್ಷವೂ ನಾವು ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಆಚರಿಸುವ ಹಿನ್ನೆಲೆಯಲ್ಲಿ ಶಿಕ್ಷಕರ ದಿನವನ್ನು ಆಚರಿಸುತ್ತೇವೆ.

ಶಿಕ್ಷಕರ ದಿನಾಚರಣೆಯು ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ನಾನು ವಿದ್ಯಾರ್ಥಿಯಾಗಿರುವುದರಿಂದ ನಮ್ಮ ಪ್ರೀತಿಯ ಶಿಕ್ಷಕರಿಗೆ ಗೌರವ ಸಲ್ಲಿಸುತ್ತಿದ್ದೇನೆ. ಈ ಅವಕಾಶ ಮಾಡಿಕೊಟ್ಟ ನಿಮಗೆಲ್ಲರಿಗೂ ಧನ್ಯವಾದಗಳು.

ಕೊನೆಯದಾಗಿ, ನಮ್ಮ ಜೀವನದಲ್ಲಿ ಆದರ್ಶಪ್ರಾಯರಾಗಿರುವ ನನ್ನ ಎಲ್ಲಾ ಶಿಕ್ಷಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ನಾವು ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಸಹಾಯ ಮಾಡುತ್ತೇನೆ. ಶಿಕ್ಷಕರ ದಿನದ ವಿಶೇಷ ಸಂದರ್ಭದಲ್ಲಿ ಭಾಷಣ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ.

ಶಿಕ್ಷಕರ ದಿನಾಚರಣೆಗೆ 10 ಸಾಲಿನ ಭಾಷಣ 3:

ಎಲ್ಲರಿಗೂ ಶುಭೋದಯ. ಶಿಕ್ಷಕರ ದಿನದಂದು ಭಾಷಣ ಮಾಡಲು ನಾನು ಇಲ್ಲಿದ್ದೇನೆ.

ಶಿಕ್ಷಕರ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ಆಚರಿಸಲಾಗುತ್ತದೆ.

ಇದನ್ನು ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ಆಚರಿಸಲಾಗುತ್ತದೆ. ಅವರು 5 ನೇ ಸೆಪ್ಟೆಂಬರ್ 1988 ರಂದು ಜನಿಸಿದರು.

ಡಾ.ಎಸ್. ರಾಧಾಕೃಷ್ಣನ್ ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿ.

ಅವರು ಒಬ್ಬ ಮಹಾನ್ ವಿದ್ವಾಂಸ ಮತ್ತು ಶಿಕ್ಷಕರಾಗಿದ್ದರು ಮತ್ತು ಅವರಿಗೆ ಭಾರತ ರತ್ನ ಕೂಡ ನೀಡಲಾಯಿತು.

ನಮ್ಮ ಜೀವನದಲ್ಲಿ ಶಿಕ್ಷಕರು ವಹಿಸಿದ ಶ್ರಮ ಮತ್ತು ಪಾತ್ರವನ್ನು ಗುರುತಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ನಮ್ಮ ಜೀವನವನ್ನು ಉತ್ತಮಗೊಳಿಸಲು ಮತ್ತು ನಮ್ಮ ತಪ್ಪುಗಳನ್ನು ಸರಿಪಡಿಸುವಲ್ಲಿ ನಮ್ಮ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ.

ಶಿಕ್ಷಕರ ಗೌರವಾರ್ಥವಾಗಿ ವಿವಿಧ ದೇಶಗಳು ಶಿಕ್ಷಕರ ದಿನವನ್ನು ವಿವಿಧ ದಿನಾಂಕಗಳಲ್ಲಿ ಆಚರಿಸುತ್ತವೆ.

ಯುನೆಸ್ಕೋ 1994 ರಲ್ಲಿ 5 ನೇ ಅಕ್ಟೋಬರ್ ಅನ್ನು ವಿಶ್ವ ಶಿಕ್ಷಕರ ದಿನವನ್ನಾಗಿ ಘೋಷಿಸಿತು.

ಶಿಕ್ಷಕರ ಗೌರವಾರ್ಥ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ಮತ್ತು ಕಾರ್ಯಗಳನ್ನು ಆಯೋಜಿಸಲಾಗಿದೆ.

ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ವಿನೋದ ಮತ್ತು ಉತ್ಸಾಹ ತುಂಬಿದ ದಿನವಾಗಿದೆ.

ನನ್ನ ಜೀವನದಲ್ಲಿ ಒಂದು ಬಲವಾದ ಆಧಾರ ಸ್ತಂಭವಾಗಿದ್ದಕ್ಕಾಗಿ ಮತ್ತು ನನ್ನ ಜೀವನದ ಪ್ರತಿ ಹಂತದಲ್ಲೂ ನನಗೆ ಮಾರ್ಗದರ್ಶನ ನೀಡಿದ ನನ್ನ ಶಿಕ್ಷಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕೊನೆಯದಾಗಿ ನನ್ನ ಪ್ರೀತಿಯ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು.

For Quick Alerts
ALLOW NOTIFICATIONS  
For Daily Alerts

English summary
Teachers day is on september 5. Here is the speech ideas for students.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X