ಸೆಲಬ್ರಟಿ ಮಕ್ಕಳು... ಯಾವ್ಯಾವ ದೇಶದಲ್ಲಿ, ಯಾವ್ಯಾವ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಗೊತ್ತಾ?

ದೇಶದ ಸೌಲಭ್ಯ ವಂಚಿತ ಅದೆಷ್ಟೋ ಶಾಲೆಗಳು ಸದಾ ಸುದ್ದಿಯಲ್ಲಿರುತ್ತವೆ ಅಷ್ಟೇ ಅಲ್ಲ ಅತೀ ಹೆಚ್ಚು ಅಂಕ ಸ್ಕೋರ್ ಮಾಡಿರುವ ಶಾಲಾ ಕಾಲೇಜು ಕೂಡಾ ಸುದ್ದಿಯಲ್ಲಿ ಇರುತ್ತೆ. ಅದೇ ರೀತಿ ಕೆಲವೊಮ್ಮೆ ಅಲ್ಲಿ ಕಲಿಯುವಂತಹ ವಿದ್ಯಾರ್ಥಿಗಳ ಹೆಸರಿನಿಂದ ಅದೆಷ್ಟೇ ಶಾಲಾ ಕಾಲೇಜುಗಳು ಫೇಮಸ್ ಆಗಿರುತ್ತವೆ.

ಫೇಮಸ್ ತಾರೆಯರ ಮಕ್ಕಳು ಯಾವ ಶಾಲೆ ವಿದ್ಯಾರ್ಥಿಗಳು ಗೊತ್ತಾ?

ಹೌದು ಬಾಲಿವುಡ್ ತಾರೆಯರ ಮಕ್ಕಳು ಏನೇ ಮಾಡಿದ್ರೂ ಹೈಲೆಟ್ ಆಗ್ತಾರೆ. ಯಾಕೆಂದ್ರೆ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಇನ್ನೂ ಈ ವಿಷಯಕ್ಕೆ ವಿದ್ಯಾಭ್ಯಾಸ ಹೊರತಲ್ಲ. ಬಾಲಿವುಡ್ ತಾರೆಯರ ಮಕ್ಕಳು ಯಾವ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತೆ. ಬನ್ನಿ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ

ಬಾಲಿವುಡ್ ತಾರೆಯರ ಮಕ್ಕಳು ಕಲಿಯುತ್ತಿರುವ ಶಾಲಾ- ಕಾಲೇಜುಗಳು:

ಶಾರೂಖ್ ಖಾನ್:

ಮೂರು ಮಕ್ಕಳ ತಂದೆ ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್. ಕಿಂಗ್ ಖಾನ್ ಪುತ್ರಿ ಸುಹಾನಾ ಧೀರೂಬಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಕಲಿಯುತ್ತಿದ್ದಾಳೆ. ಆಕೆ ಜತೆ ಶಾರೂಖ್ ಕೊನೆಯ ಪುತ್ರ ಅಬ್ ರಾಮ್ ಗೂ ಕೂಡಾ ಅದೇ ಶಿಕ್ಷಣ ಸಂಸ್ಥೆಯಲ್ಲಿ ಇದೀಗ ತಮ್ಮ ಶಿಕ್ಷಣಾಭ್ಯಾಸ ಪ್ರಾರಂಭಿಸಿದ್ದಾರೆ. ಇನ್ನೂ ಶಾರೂಖ್ ಹಿರಿಯ ಪುತ್ರ ಆರ್ಯನ್ ಲಂಡನ್‌ ಯೂನಿವರ್ಸಿಟಿಯಿಂದ ಪದವಿ ಪಡೆದಿದ್ದಾರೆ.

ಅಕ್ಷಯ್ ಕುಮಾರ್:

ಕಿಲಾಡಿ ಅಕ್ಷಯ್ ಕುಮಾರ್ ಗೂ ಕೂಡಾ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಕೂಡಾ ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ಥರಹ ಚಾರ್ಮಿಂಗ್ ಫೇಸ್ ಹೊಂದಿದ್ದಾರೆ. ಅಕ್ಷಯ್ ಹಿರಿಯ ಪುತ್ರ ಆರವ್, ಸೌತ್ ಈಸ್ಟ್ ಏಷಿಯಾದಲ್ಲಿನ ಯುನೈಟೆಡ್ ವರ್ಲ್ಡ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಚಿಕ್ಕ ಮಗಳು ನಿತಾರಾ ಮಮ್ಮಿ ಟ್ವಿಂಕಲ್ ಜತೆ ಪೇಂಟಿಂಗ್ ಮಾಡುವುದರಲ್ಲಿ ಬ್ಯುಸಿ ಇದ್ದಾರೆ

ಐಶ್ವರ್ಯ ರೈ:

ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್, ಮುಂಬಯಿಯ ಧೀರೂಬಾಯಿ ಅಂಬಾನಿ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾಳೆ.ಆರಾಧ್ಯನ ಪ್ರತೀ ಸ್ಕೂಲ್ ಫಂಕ್ಷನ್‌ನಲ್ಲಿ ತಾಯಿ ಐಶ್ವರ್ಯ ಕೂಡಾ ಲವಲವಿಕೆಯಿಂದ ಪಾಲ್ಗೊಳ್ಳುವುದು ನೀವು ನೋಡಿರಬಹುದು.

ಹೃತಿಕ್ ರೋಶನ್:

ಗ್ರೀಕ್ ಗಾಡ್ ಎಂದೇ ಫೇಮಸ್ ಆಗಿರುವ ಹೃತಿಕ್ ನ ಇಬ್ಬರು ಮಕ್ಕಳಾದ ರೆಹಾನ್ ಹಾಗೂ ರಿದಾನ್ ರೋಶನ್ ಜತೆ ಸಿಕ್ಕಾಪಟ್ಟೆ ಹಾಲಿಡೇ ಮಜಾ ಮಾಡಿರುವುದು ನೀವು ನೋಡಿರುತ್ತೀರಾ. ಇಬ್ಬರೂ ಮಕ್ಕಳು ಮುಂಬಯಿಯ ಧೀರೂಬಾಯಿ ಅಂಬಾನಿ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

ಶ್ರೀದೇವಿ ಕಪೂರ್:

ಶ್ರೀದೇವಿ ಓರ್ವ ಪುತ್ರಿ ಜಾಹ್ನವಿ ಕಪೂರ್ ಇದೀಗ ತಮ್ಮ ಚೊಚ್ಚಲ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಇನ್ನು ಚಿಕ್ಕ ಪುತ್ರಿ ಖುಷಿ ಕೂಡಾ ಅದೆಷ್ಟೋ ಭಾರಿ ತಾಯಿ ಜತೆ ಮೀಡಿಯಾ ಮುಂದೆ ಲೈಮ್ ಲೈಟ್ ಗೆ ಬರುತ್ತಿದ್ದರು. ಶ್ರೀದೇವಿ ಇಬ್ಬರೂ ಮಕ್ಕಳು ಮುಂಬಯಿಯ ಧೀರೂಬಾಯಿ ಅಂಬಾನಿ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

ಅಮೀರ್ ಖಾನ್:

ಅಮೀರ್ ಖಾನ್ ಪುತ್ರಿ ಇರಾ ಖಾನ್ ಹಾಗೂ ಪುತ್ರ ಅಜಾದ್ ಖಾನ್ ಇಬ್ಬರೂ ಮುಂಬಯಿಯ ಧೀರೂಬಾಯಿ ಅಂಬಾನಿ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

For Quick Alerts
ALLOW NOTIFICATIONS  
For Daily Alerts

    English summary
    Parents have to take some tough decisions when it comes to choose a school for their children. and its not different for celebrities also.but Most of the bollywood star kids attend Dhirubhai Ambani school. here is the list of star kids and their schools.

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more