ಐಪಿಎಲ್ ಮೈದಾನದಲ್ಲಿ ತಳಕು ಬಳಕು ಸೊಂಟ ಕುಣಿಸೋ ಚಿಯರ್ ಲೀಡರ್ಸ್ ಸಂಬಳ ಎಷ್ಟಿದೆ ಗೊತ್ತಾ?

By Kavya

ಬೆಸ್ಟ್ ಕ್ರಿಕೆಟರ್ಸ್ ಗೆ ತಮ್ಮ ಟ್ಯಾಲೆಂಟ್ ಪ್ರದರ್ಶಿಸಲು ಇಂಡಿಯನ್ ಪ್ರೀಮಿಯರ್ ಲೀಗ್ ಒಂದು ಉತ್ತಮ ವೇದಿಕೆಯಾಗಿದೆ. ಇನ್ನು ಐಪಿಎಲ್ ಎಂದ ಕ್ಷಣ ಕೇವಲ್ ಕ್ರಿಕೆಟ್ ಆಟಗಾರರು ಮಾತ್ರವಲ್ಲದೇ ಅಲ್ಲಿರುವ ಚಿಯರ್ ಲೀಡರ್ಸ್ ಕೂಡಾ ಕಣ್ಣು ಮುಂದೆ ಬರುತ್ತಾರೆ. ಐಪಿಎಲ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯದ ಜತೆಗೆ ಕಣ್ಣಿಗೆ ಗ್ಲಾಮರ್ ಕೂಡಾ ಇದೆ ಅಂದ್ರೆ ಅದು ಚಿಯರ್ ಲೀಡರ್ಸ್ ನಿಂದ. ಹೌದು ನಾವು ಚಿಯರ್ ಲೀಡರ್ಸ್ ಬಗ್ಗೆ ಮಾತನಾಡುತ್ತಿದ್ದೇವೆ. ಇವರು ಐಪಿಎಲ್ ಮೈದಾನದಲ್ಲಿ ಎಂಟರ್‌ಟೈನ್ ಮೆಂಟ್ ನೀಡುತ್ತಾರೆ. ಇವರು ಇಲ್ಲದ ಮೈದಾನ ನೋಡುವುದು ಬರಿ ಬೋರ್. ಪ್ರತೀ ಮ್ಯಾಚ್ ವೇಳೆ ಆಕರ್ಷಕ ತುಂಡು ಉಡುಗೆ ಧರಿಸಿ, ಇವರು ಕುಣಿದು ಕುಪ್ಪಳಿಸುತ್ತಾರೆ. ಇನ್ನು ಇವರ ಕೆಲಸ ವೇನೆಂದರೆ ಕ್ರಿಕೆಟ್ ಮಧ್ಯೆ ಅಲ್ಲಿ ನೆರೆದಿದ್ದ ಎಲ್ಲರಿಗೂ ಮನರಂಜನೆ ನೀಡುವುದು ಹಾಗೆಯೇ ಪಂದ್ಯದಲ್ಲಿ ಇನ್ನೂ ಹೆಚ್ಚು ಇಂಟ್ರಸ್ಟಿಂಗ್ ಬರುವಂತೆ ಮಾಡುವುದು.

ಚಿಯರ್ ಲೀಡರ್ಸ್ ಸಂಬಳ ಎಷ್ಟಿದೆ ಗೊತ್ತಾ

 

ಐಪಿಎಲ್ ನಿಂದ ಅದೆಷ್ಟೋ ಮಂದಿ ಸಿಕ್ಕಾಪಟ್ಟೆ ಹಣ ಗಳಿಸುತ್ತಾರೆ. ಬನ್ನಿ ಐಪಿಎಲ್ ನಿಂದ ಈ ಚಿಯರ್ ಲೀಡರ್ಸ್ ಎಷ್ಟು ದುಡಿಯುತ್ತಾರೆ ನೋಡೋಣ. ಪ್ರತಿ ಮ್ಯಾಚ್ ಪ್ರಕಾರ ಇವರು ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲ ಮ್ಯಾಚ್ ಜತೆ ಬೋನಸ್, ವಿನ್ನಿಂಗ್ ಆದ್ರೆ ಮತ್ತೆ ಎಕ್ಸ್ಟಾ ಹಣ ಹೀಗೆ ಒಟ್ಟು ಸುಮಾರು 6,000 ರಿಂದ 12,000 ರೂ ವರೆಗೆ ಇವರು ಸಂಪಾದಿಸುತ್ತಾರೆ. ಟೀಂ ವಿನ್ ಆದ್ರೆ ಅದಕ್ಕೆ ಮತ್ತೆ 3000 ರೂ ಹೆಚ್ಚುವರಿ ವೇತನವಾಗಿ ಪಡೆಯುತ್ತಾರೆ.

ಇವರ ಡ್ಯಾನ್ಸ್ ಜತೆ ಪಂದ್ಯ ನೋಡುವುದು ಮತ್ತಷ್ಟು ರೋಮಾಂಚನಕಾರಿ. ಇನ್ನು ಕಳೆದ ವರ್ಷದ ಪಂದ್ಯದತ್ತ ಕಣ್ಣು ಹಾಯಿಸಿದ್ರೆ ಚಿಯರ್ ಲೀಡರ್ಸ್ ಪ್ರತೀ ಮ್ಯಾಚ್ ಗೆ 6000 ರೂ ಪಡೆದಿದ್ದಾರೆ. ಪಂದ್ಯ ಜಯಗಳಿಸಿದ ಟೀಂ ಚಿಯರ್ ಲೀಡರ್ಸ್ ಗೆ 3000 ರೂ. ಜತೆಗೆ ಬೋನಸ್ ಕೂಡಾ ನೀಡಿರುತ್ತಾರಂತೆ. ಇನ್ನು ಪಾರ್ಟಿ ವೇಳೆ ಇನ್ನಿತ್ತರ ಶೋಗಳಿದ್ರೆ ಅದಕ್ಕೆ ಮತ್ತೆ ಹೆಚ್ಚುವರಿ ಹಣ ನೀಡಲಾಗುತ್ತದೆ. ಈ ಹಣ 5000 ದಿಂದ 12000 ದವರೆಗೆ ಸಿಗುತ್ತೆ. ಇನ್ನು ಫೋಟೋಶೂಟ್ ಎಂದೆಲ್ಲಾ ಮತ್ತೆ 5000 ರೂ ನೀಡಲಾಗುತ್ತದೆ ಈ ಚಿಯರ್ ಲೀಡರ್ಸ್ ಗೆ. ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಅತೀ ಹೆಚ್ಚು ಸಂಭಾವನೆ ನೀಡುವ ಟೀಂ ಎಂಬ ಹೆಗ್ಗಳಿಕೆ ಕೂಡಾ ಪಡೆದಿದೆ.

ಯಾವ ಯಾವ ಟೀಂನ ಚಿಯರ್ ಲೀಡರ್ಸ್ ಎಷ್ಟು ವೇತನ ಪಡೆಯುತ್ತಾರೆ ಎಂದು ಮುಂದಕ್ಕೆ ಓದಿ

ಡೆಲ್ಲಿ ಡೇರ್ ಡೆವಿಲ್ಸ್:

ಜಿಎಮ್ ಆರ್ ಗ್ರೂಫ್ ಒಡೆತನದ ಡೆಲ್ಲಿ ಡೇರ್ ಡೆವಿಲ್ಸ್. ಈ ಟೀಂ ನ ಚಿಯರ್ ಲೀಡರ್ಸ್ ಬಿಳಿ ಬಣ್ಣದ ಶಾರ್ಟ್ ಉಡುಗೆ ಧರಿಸಿರುತ್ತಾರೆ . ಪ್ರತೀ ಮ್ಯಾಚ್ ಗೆ ಈ ಟೀಂ ರೂ. 9700 ರೂ ವೇತನ ಪಡೆಯುತ್ತಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

 

ಚೆನ್ನೈ ಸೂಪರ್ ಕಿಂಗ್ಸ್:

ಐಪಿಎಲ್ ಇತಿಹಾಸದ ಸಕ್ಸಸ್ ಫುಲ್ ಟೀಂ ಅಂದ್ರೆ ಚೆನ್ನೈ ಸೂಪರ್ ಕಿಂಗ್ಸ್. ಎರಡು ಬಾರಿ ಈ ಟೂರ್ನಮೆಂಟ್ ಕಪ್ ತಮ್ಮದಾಗಿಸಿಕೊಂಡಿದೆ ಈ ಟೀಂ. ಈ ವರ್ಷ ಕೂಡಾ ಕಪ್ ತಮ್ಮದೇ ಮಾಡಿಕೊಳ್ಳುವ ಎಲ್ಲಾ ಲಕ್ಷಣಗಳು ಕೂಡಾ ಕಾಣಿಸಿಕೊಳ್ಳುತ್ತಿವೆ. ಇನ್ನೂ ಈ ಟೀಂ ನ ಚಿಯರ್ ಲೀಡರ್ಸ್ ಕೂಡಾ ಹೆಚ್ಚು ಸಂಪಾದಿಸಿದ್ದಾರೆ. ಹಳದಿ ಮಿನಿ ಸ್ಕರ್ಟ್ ಧರಿಸೋ ಈ ಹುಡುಗಿಯರು, ಪ್ರತಿ ಮ್ಯಾಚ್ ಗೆ 10000 ರೂ ಗಳಿಸುತ್ತಾರೆ.

ಸನ್‌ ರೈಸ್ ಹೈದ್ರಾಬಾದ್:

2016ರಲ್ಲಿ ಈ ಟೀಂ ಐಪಿಎಲ್ ಕಪ್ ತಮ್ಮದಾಗಿಸಿಕೊಂಡಿತ್ತು. ಕೇಸರಿ ಬಣ್ಣದ ಮಿನಿ ಸ್ಕರ್ಟ್ ಧರಿಸೋ ಈ ಚೆಲುವೆಯರು ಕೈಯಲ್ಲಿ ಪಾಂ ಪಾಂ ಹಿಡಿದು ಕುಣಿದು ಕುಪ್ಪಳಿಸುತ್ತಾರೆ. ಕಲಾನಿತಿ ಮರನ್ ಆಫ್ ಸನ್ ಗ್ರೂಫ್ ಈ ಟೀಂನ ಒಡೆತನ ವಹಿಸಿಕೊಂಡಿದೆ. ಈ ಟೀಂ ನ ಚಿಯರ್ ಲೀಡರ್ಸ್ ಪ್ರತೀ ಮ್ಯಾಚ್ ಗೆ 9500 ರೂ ವೇತನ ಪಡೆಯುತ್ತದೆ.

ಕಿಂಗ್ಸ್ XI ಪಂಜಾಬ್:

ಈ ಟೀಂ ನ ಚಿಯರ್ ಲೀಡರ್ಸ್ ಗಳು ಡಿಚ್ಡ್ ಪ್ಯಾಂಟ್ ಧರಿಸುತ್ತಾರೆ. ಹಾಗೂ ಕೆಂಪು ಬಣ್ಣದ ಉಡುಗೆ. ಪ್ರತೀ ಸಿಕ್ಸ್, ಫೋರ್ ಹಾಗೂ ವಿಕೆಟ್ ಕಿತ್ತಾಗ ಇವರು ಕುಣಿದು ಕುಪ್ಪಳಿಸುತ್ತಾರೆ. ಪ್ರತೀ ಮ್ಯಾಚ್ ಗೆ ಇವರು 9,500 ರೂ ಸಂಪಾದಿಸುತ್ತಾರೆ.

ರಾಜಸ್ತಾನ ರಾಯಲ್ಸ್:

ಇವರು ಡ್ಯಾನ್ಸಿಂಗ್ ಜತೆ ಜಿಮ್‌ನಾಸ್ಟಿಕ್ ಸ್ಕಿಲ್ ಕೂಡಾ ಪ್ರದರ್ಶಿಸುತ್ತಾರೆ. ಎಲ್ಲಾ ರೀತಿಯ ಹಾರ್ಡ್ ವರ್ಕ್ ಇವರು ಮಾಡುತ್ತಾರೆ. ಪ್ರತಿ ಮ್ಯಾಚ್ ಗೆ ಇವರು 11500 ರಿಂದ 12000 ರೂ ವರೆಗೆ ಪಡೆಯುತ್ತಾರೆ.

ಮುಂಬಯಿ ಇಂಡಿಯನ್ಸ್:

ಟೀ 20 ಲೀಗ್‌ನ ಮೋಸ್ಟ್ ಫಾಲೋವ್ಡ್ ಸಕ್ಸಸ್ ಟೀಂ ಎಂದ್ರೆ ಅದು ಮುಂಬಯಿ ಇಂಡಿಯನ್ಸ್, ಈ ಟೀಂ ನ ಚಿಯರ್ ಲೀಡರ್ಸ್ ಕಡು ನೀಲಿ ಹಣ್ಣ ಗೋಲ್ಡನ್ ಬಣ್ಣದ ಉಡುಗೆ ಧರಿಸುತ್ತಾರೆ. ಪ್ರತೀ ಮ್ಯಾಚ್ ಗೆ 16000 ರೂ ಪಡೆಯುವ ಇವರು, ರೂ.6500 ಬೋನಸ್ ಪಡೆಯುತ್ತಾರೆ.

ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು:

ಐಪಿಎಲ್ ಟೀಂನಲ್ಲಿ ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು ಟೀಂ ನ ಚಿಯರ್ ಟೀಂ ತುಂಬಾ ಗ್ಲಾಮರಸ್ ಆಗಿದೆ. ಒಂದು ಬಾರಿಯೂ ಈ ಟೀಂ ಐಪಿಎಲ್ ಪಂದ್ಯ ಜಯಗಳಿಸಿಲ್ಲ. ಈ ಟೀಂನ ಚಿಯರ್ ಲೀಡರ್ಸ್ ಕೆಲವೊಮ್ಮೆ ನಾನ್ ಸ್ಟಾಪ್ ಆಗಿ ಕುಣಿಯುತ್ತಾರೆ. ಮುಂಬಯಿ ಇಂಡಿಯನ್ಸ್ ಅಷ್ಟೇ ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು ಕೂಡಾ ಪೇ ಮಾಡುತ್ತಾರೆ. ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು ಟೀಂ ನ ಚಿಯರ್ ಲೀಡರ್ಸ್ ಗೆ ಪ್ರತೀ ಮ್ಯಾಚ್ ಗೆ 16000 ರೂ ವೇತನ ನೀಡಲಾಗುತ್ತದೆ.

ಕೊಲ್ಕತ್ತಾ ನೈಟ್ ರೈಡರ್ಸ್:

ಈ ಟೀಂ ನ ಒಡೆತನ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಅವರದು. ಇವರು ಮೋಸ್ಟ್ ಫೇಮಸ್ ಸೆಲಬ್ರಿಟ ಕೂಡಾ. ಇವರ ಟೀಂನ ಪ್ರತಿಯೊಬ್ಬರಿಗೂ ಇವರು ಹೆಚ್ಚು ವೇತನ ನೀಡುತ್ತಾರೆ. ಈ ಟೀಂನ ಚಿಯರ್ ಲೀಡರ್ಸ್ ಗೆ ಸುಮಾರು 20000ರೂ ವೇತನ ನೀಡಲಾಗುತ್ತದೆ. ಜತೆಗೆ ಇವರಿಗೆ 6500 ರೂ ಬೋನಸ್ ಕೂಡಾ ನೀಡಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
The Indian premier league provided a great platform for not only every youngsters cricketrs also for cheerleaders. During the every match these cheerleaders wearing a skimpy outfit, display their scintillating dancing moves. here are the salaries of cheerleaders in the IPL.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more