ವಿದೇಶದಲ್ಲಿ ವಿದ್ಯಾಭ್ಯಾಸದ ಕನಸು...ಯಾವೆಲ್ಲಾ ದೇಶದಲ್ಲಿ ಫ್ರೀ ಎಜ್ಯುಕೇಶನ್ ಇದೆ ಗೊತ್ತಾ?

ಜಗತ್ತಿನಾದ್ಯಂತ ಉತ್ತಮ ಶಿಕ್ಷಣವನ್ನು ಒದಗಿಸುವ ವಿಶ್ವಮಟ್ಟದ ವಿಶ್ವವಿದ್ಯಾನಿಲಯ ನಮ್ಮಲ್ಲಿ ಇದೆ. ಆದ್ರೂ ನಮ್ಮಲ್ಲಿ ಕೆಲವು ವಿದ್ಯಾರ್ಥಿಗಳಿಗೆ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮುಂದೆಯವರೆಸಬೇಕೆಂಬ ಕನಸು ಇರುತ್ತದೆ. ಆದ್ರೆ ವಿದೇಶದಲ್ಲಿ ಸ್ಟಡಿ ಮಾಡುವುದರಿಂದ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳ ಕನಸು ನನಸಾಗದೇ ಕನಸಾಗಿಯೇ ಉಳಿಯುತ್ತದೆ. ಆದ್ರೆ ನಾವು ಇವತ್ತು ನಿಮ್ಮ ಕನಸು ಸಕಾರಗೊಳಿಸುವುದಕ್ಕಾಗಿ ವಿದೇಶದಲ್ಲಿನ ಸ್ಟಡೀಸ್ ಬಗ್ಗೆ ಮಾಹಿತಿ ನೀಡುತ್ತೇವೆ. ಅದು ಕೂಡಾ ಉಚಿತ ಶಿಕ್ಷಣದ ಬಗ್ಗೆ ಕೆರಿಯರ್ ಇಂಡಿಯಾ ನಿಮಗೆ ಮಾಹಿತಿ ನೀಡುತ್ತಿದೆ.

ಯಾವೆಲ್ಲಾ ದೇಶದಲ್ಲಿ ಫ್ರೀ ಎಜ್ಯುಕೇಶನ್ ಇದೆ ಗೊತ್ತಾ?

 

ಈ ಜಗತ್ತಿನಲ್ಲಿ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಉಚಿತ ಶಿಕ್ಷಣ ನೀಡುತ್ತವೆ. ಶಿಕ್ಷಣ ಮಾತ್ರವಲ್ಲದೆ ಹಾಸ್ಟೇಲ್, ಸ್ಕೋಲರ್ ಶಿಪ್, ಹಾಗೂ ಉಚಿತ ಪುಸ್ತಕಗಳು ಸೇರಿದಂತೆ ಇನ್ನಿತ್ತರ ಸೌಲಭ್ಯಗಳನ್ನ ಕೂಡಾ ನೀಡುತ್ತದೆ. ಬನ್ನಿ ಪ್ರಪಂಚದ ಯಾವೆಲ್ಲಾ ದೇಶದ ವಿಶ್ವವಿದ್ಯಾನಿಯಗಳು ಉಚಿತ ಶಿಕ್ಷಣ ನೀಡುತ್ತವೆ ಎಂಬ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

ಜರ್ಮನಿ:

ಇಡೀ ಜಗತ್ತಿನಾದ್ಯಂತ ಉನ್ನತ ಶಿಕ್ಷಣ ವಿಚಾರಕ್ಕೆ ಜರ್ಮನಿ ದೇಶ ಸಖತ್ ಫೇಮಸ್ ಆಗಿದೆ. ಇಲ್ಲಿ ಶಿಕ್ಷಣ ಪಡೆಯಲು ಪ್ರತಿ ವರ್ಷಕ್ಕೆ ಲಕ್ಷ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಪ್ರಪಂಚದ ಟಾಪ್ ೨೫೦ ಯೂನಿವರ್ಸಿಟಿ ಲಿಸ್ಟ್ ನಲ್ಲಿ ಜರ್ಮನಿಯ ೧೬ ವಿಶ್ವವಿದ್ಯಾನಿಲಯಗಳು ಸ್ಥಾನ ಗಿಟ್ಟಿಸಿಕೊಂಡಿವೆ. ನಮ್ಮ ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಶುಲ್ಕವಿದೆ. ಆದ್ರೆ ಸರ್ಕಾರಿ ವಿಶ್ವವಿದ್ಯಾನಿಯಗಳು ಉಚಿತವಾಗಿ ಶಿಕ್ಷಣ ನೀಡುತ್ತವೆ. ಆದ್ರೆ ಜರ್ಮನ್ ದೇಶದಲ್ಲಿ ಬಹಳಷ್ಟು ವಿಷಯದ ಮೇಲೆ ಶಿಕ್ಷಣವನ್ನ ನೀಡುತ್ತದೆ. ಒಂದು ವೇಳೆ ನೀವು ಕೂಡಾ ಜರ್ಮನ್ ದೇಶದಲ್ಲಿ ಕಲಿಯಬೇಕು ಎಂದು ಅಂದುಕೊಂಡಿದ್ದರೆ, ನಿಮ್ಮ ಕನಸು ಸಕಾರಗೊಳಿಸಬಹುದು. ಅಷ್ಟೇ ಅಲ್ಲ ಇಲ್ಲಿ ಎಜ್ಯುಕೇಶನ್ ಜತೆ ನೀವು ಪಾರ್ಟ್ ಟೈಂ ಜಾಬ್ ಕೂಡಾ ಮಾಡಬಹುದು.

ಸ್ವೀಡನ್:

ಒಂದು ವೇಳೆ ಹೊರದೇಶದಲ್ಲಿ ನಿಮಗೆ ಪಿಹೆಚ್ ಡಿ ಇಲ್ಲ ರಿಸರ್ಚ್ ಮಾಡಬೇಕೆಂದು ನೀವು ಅಂದುಕೊಂಡಿದ್ದರೆ ನಿಮಗೆ ಸ್ವೀಡನ್ ಬೆಸ್ಟ್. ಸ್ವೀಡನ್‌ನ ಪ್ರತಿಯೊಂದು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನ ಫ್ರೀಯಾಗಿ ನೀಡುತ್ತದೆ. ಅಷ್ಟೇ ಅಲ್ಲ ತಿಂಗಳಿಗೆ ಸ್ಕೋಲರ್ ಶಿಪ್ ಕೂಡಾ ನೀಡುತ್ತದೆ. ಯೂರೋಪ್ ಪ್ರಾಂತ್ಯದ ಪ್ರತಿಯೊಂದು ವಿದ್ಯಾರ್ಥಿಗಳಿಗೆ ಸ್ವೀಡನ್ ಉಚಿತ ಶಿಕ್ಷಣ ನೀಡುತ್ತದೆ. ಹಾಗಾಗಿ ಭಾರತೀಯ ವಿದ್ಯಾರ್ಥಿಗಳು ಇಲ್ಲಿ ಉಚಿತವಾಗ ಪಿಹೆಚ್ ಡಿ ಕೋರ್ಸ್ ಮಾಡಬಹುದಾಗಿದೆ. ಒಂದು ವೇಳೆ ನೀವು ಕೂಡಾ ಹೊರದೇಶದಲ್ಲಿ ಪಿಹೆಚ್ ಡಿ ಇಲ್ಲ ರಿಸರ್ಚ್ ಮಾಡಬೇಕು ಎಂದು ಅಂದುಕೊಂಡಿದ್ದರೆ ನಿಮಗೆ ಸ್ವೀಡನ್ ಬೆಸ್ಟ್

 

ನಾರ್ವೇ:

ನಿಮಗೆ ವಿಶ್ವದ ಬೆಸ್ಟ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಮಾಡಬೇಕೆಂದು ಅಂದುಕೊಂಡಿದ್ದರೆ ನಾರ್ವೇ ದೇಶ ಬೆಸ್ಟ್. ನಾರ್ವೇಯಲ್ಲಿ ನೀವು ಪದವಿಯಿಂದ ಹಿಡಿದು ಪಿಹೆಚ್ ಡಿ ವರೆಗೆ ಫ್ರೀಯಾಗಿ ವಿದ್ಯಾಭ್ಯಾಸ ಮಾಡಬಹುದು. ಆದ್ರೆ ನಿಮಗೆ ಇಲ್ಲಿಯ ಭಾಷೆ ಗೊತ್ತಿರುವುದು ಕಡ್ಡಾಯವಾಗಿದೆ. ಒಂದು ವೇಳೆ ನೀವು ನಾರ್ವೇಯ ಭಾಷೆ ಕಲಿತರೆ ನೀವು ಇಲ್ಲಿ ಸುಲಭವಾಗಿ ಅಡ್ಮಿಶನ್ ಪಡೆಯಬಹುದು. ಒಂದು ವೇಳೆ ನೀವು ಭಾಷೆ ಗೊತ್ತಿಲ್ಲದಿದ್ದರೂ ಅಡ್ಮಿಶನ್ ಆಗ ಬಯಸಿದ್ರೆ ನೀವು ಇಂತಿಷ್ಟು ಎಂದು ಶುಲ್ಕ ಪಾವತಿಸಬೇಕಾಗುತ್ತದೆ.

ಫಿನ್ ಲ್ಯಾಂಡ್:

ನಾರ್ವೇ ತರಹ ಫಿನ್ ಲ್ಯಾಂಡ್ ನಲ್ಲೂ ಫ್ರೀ ಎಜ್ಯುಕೇಶನ್ ಇದೆ. ಈ ದೇಶದಲ್ಲೂ ಕೂಡಾ ನೀವು ಫ್ರೀ ಯಾಗಿ ಶಿಕ್ಷಣ ಪಡೆಯಬಹುದಾಗಿದೆ. ಆದರೆ ಇಲ್ಲಿ ಇಂಗ್ಲೀಷ್ ವಿಷಯದಲ್ಲಿ ಶಿಕ್ಷಣ ಪಡೆಯುವವರು ಮಾತ್ರ ಟ್ಯೂಶನ್ ಶುಲ್ಕ ಪಾವತಿಸಬೇಕಾಗುತ್ತದೆ. ಇನ್ನೂ ನಿಮಗೆ ಇಲ್ಲಿ ಉಚಿತ ಶಿಕ್ಷಣ ಪಡೆಯಬೇಕೆಂದಿದ್ದರೆ, ನಿಮಗೂ ಇಲ್ಲಿಯ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು.

ಚೆಕ್ ಗಣರಾಜ್ಯ:

ಈ ದೇಶದಲ್ಲಿ ಕೆಜಿಯಿಂದ ಹಿಡಿದು ಪಿಜಿ ವರೆಗೆ ಉಚಿತ ಶಿಕ್ಷಣ ಸಿಗುತ್ತದೆ. ಇಲ್ಲಿ ಶಿಕ್ಷಣಕ್ಕೆ ಯಾವುದೇ ರೀತಿಯ ಶುಲ್ಕ ಸ್ವೀಕರಿಸುವುದಿಲ್ಲ. ಆದ್ರೆ ಇಲ್ಲಿನ ಸ್ಥಳೀಯ ಭಾಷೆಯ ಬಗ್ಗೆ ನಿಮಗೆ ತಿಳುವಳಿಕೆ ಇರಬೇಕು. ಒಂದು ವೇಳೆ ಇಂಗ್ಲೀಷ್ ವಿಷಯದಲ್ಲಿ ಶಿಕ್ಷಣ ಪಡೆಯಬೇಕೆಂದಿದ್ದರೆ ನೀವು ಶುಲ್ಕ ಪಾವತಿಸಬೇಕು.

For Quick Alerts
ALLOW NOTIFICATIONS  
For Daily Alerts

English summary
Studying in a Foreign Country is everyone's dream. The experience of living in an unknown place is one that we all crave for. New Culture, New friends, New People, New Food, New Lifestyle etc. There are many Countries worldwide where students are able to study abroad for free. here is the list about Providing free education collages
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more