ಡಿಜಿಟಲ್ ದುನಿಯಾದಲ್ಲಿ ವೆಬ್ ಡಿಸೈನಿಂಗ್ ದರ್ಬಾರ್

Posted By:

ವೆಬ್ ಡಿಸೈನ್ ಎಂದಾಕ್ಷಣ ಒಮ್ಮೆಲೆ ಕಂಪ್ಯೂಟರ್ ಪರದೆಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಪ್ರತಿಯೊಂದಕ್ಕು ಅಂತರ್ಜಾಲವನ್ನೇ ಅವಲಂಭಿಸಿರುವ ಇಂದಿನ ಸ್ಮಾರ್ಟ್ ಯುಗದಲ್ಲಿ ವೆಬ್ ಡಿಸೈನ್ ಮಹತ್ವದ ಸ್ಥಾನ ಪಡೆದಿದೆ. ವೆಬ್ ಡಿಸೈನರ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ವೆಬ್ ಡಿಸೈನ್ ಕಲಿತವರು ಕುಳಿತಲ್ಲಿಯೇ ಕೈತುಂಬ ಹಣ ಸಂಪಾದಿಸಬಹುದಾಗಿದೆ. ಸ್ವಂತ ಉದ್ಯೋಗ ಮಾಡುವುದರ ಜೊತೆಗೆ ಮನೆಯಲ್ಲೇ ಕುಳಿತು ಮಾಡಬಹುದಾದ ಕೆಲಸ ಇದಾಗಿದೆ. ಕಡಿಮೆ ಸಮಯದಲ್ಲಿ ಕಡಿಮೆ ಖರ್ಚಿನಲ್ಲಿ ಕಲಿತು ಬೇಗ ಉದ್ಯೋಗ ಗಿಟ್ಟಿಸುವ ಅವಕಾಶವನ್ನು ವೆಬ್ ಡಿಸೈನ್ ಕಲ್ಪಿಸಿದೆ.

ವೆಬ್ ಡಿಸೈನರ್ ಆಗಬೇಕೆಂದರೆ ಕಂಪ್ಯೂಟರ್ ಬಗ್ಗೆ ಚೆನ್ನಾಗಿ ತಿಳಿದಿರಲೇಬೇಕೆಂದೇನಿಲ್ಲ. ಕಂಪ್ಯೂಟರ್ ಸೈನ್ಸ್ ಓದದೇ ಇದ್ದರೂ ನೀವು ವೆಬ್ ಡಿಸೈನರ್ ಆಗಬಹುದು.

ವೆಬ್ ಡಿಸೈನಿಂಗ್ ಎಂದರೇನು ?

ಅಂತರ್ಜಾಲ ತಾಣಗಳ ರಚನೆ ಮತ್ತು ರಚನಾ ಯೋಜನೆಯನ್ನು ಸಿದ್ಧಪಡಿಸುವುದೇ ವೆಬ್ ಡಿಸೈನಿಂಗ್. ಒಂದು ಕಂಪ್ಯೂಟರ್ ನ ಪೇಜ್ ಹೇಗೆ ಕಾರ್ಯ ನಿರ್ವಹಿಸುತ್ತದೆ. ಅದನ್ನು ತಯಾರು ಮಾಡುವುದು ಹೇಗೆ ಎನ್ನುವುದನ್ನು ತಿಳಿದರೆ ನೀವೂ ಕೂಡ ವೆಬ್ ಡಿಸೈನರ್ ಆಗಬಹುದು. ಇವೆಲ್ಲವನ್ನು ಕಲಿಸಲೆಂದೆ ಹಲವು ಖಾಸಗಿ ಸಂಸ್ಥೆಗಳು ಮತ್ತು ಕಾಲೇಜುಗಳು ಈ ಕೋರ್ಸ್ಗಳನ್ನು ಶುರು ಮಾಡಿವೆ.

ವೆಬ್ ಡಿಸೈನಿಂಗ್ ಕೋರ್ಸ್

ವೆಬ್ ಡಿಸೈನಿಂಗ್ ಕೋರ್ಸ್

ಈ ಕೋರ್ಸ್ ಕಲಿಯಲು ಕಾಲೇಜಿಗೆ ಹೋಗಲೇಬೇಕು ಎಂದೇನಿಲ್ಲ. ಇಂದು ಖಾಸಗಿ ಸಂಸ್ಥೆಗಳೇ ಈ ಕೋರ್ಸನ್ನು ಹೆಚ್ಚಾಗಿ ನೀಡುತ್ತಿವೆ. ಇಂದು ಇದನ್ನು ಕಲಿಯುವವರ ಸಂಖ್ಯೆ ಹೆಚ್ಚಿರುವುದರಿಂದ ಪ್ರತಿ ನಗರಗಳಲ್ಲೂ ನಾವು ಈ ಕೋರ್ಸ್ ಪಡೆಯಬಹುದಾಗಿದೆ. ದಿನಕ್ಕೆ ಒಂದೆರೆಡು ಗಂಟೆಗಳ ತರಗತಿಗೆ ಹಾಜರಾದರೇ ಸಾಕು ಕೆಲವೇ ತಿಂಗಳಲ್ಲಿ ನೀವು ವೆಬ್ ಡಿಸೈನರ್ ಆಗಬಹುದು.

ಇನ್ನು ಕೆಲವು ವೆಬ್ಸೈಟ್ ಗಳು ಆನ್-ಲೈನ್ ಮೂಲಕವೇ ಈ ಕೋರ್ಸನ್ನು ಕಲಿಸಿ ಸರ್ಟಿಫಿಕೇಟ್ ನೀಡುತ್ತಿವೆ. ಅಲ್ಲದೇ ಕೆಲವು ಕಂಪನಿಗಳು ವೆಬ್-ಪೇಜ್ ಗಳನ್ನು ಸುಲಭವಾಗಿ ಡಿಸೈನ್ ಮಾಡಬಹುದಾದಂತ ವ್ಯವಸ್ಥೆಯನ್ನು ಹೊಂದಿವೆ.

ಬಿ.ಇ/ಬಿ.ಟೆಕ್, ಬಿ.ಎಸ್ಸಿ (ಕಂಪ್ಯೂಟರ್) ಅಥವಾ ಬಿ.ಸಿ.ಎ ಕಲಿತಂತಹ ವಿದ್ಯಾರ್ಥಿಗಳಿಗೆ ವೆಬ್ ಡಿಸೈನಿಂಗ್ ಸುಲಭವೆನಿಸಬಹುದು.  ತಂತ್ರಜ್ಞಾನ ಬಳಸುವುದರ ಜೊತೆಗೆ ನಿಮ್ಮಲ್ಲಿ ಕ್ರಿಯಾತ್ಮಕವಾಗಿ ಯೋಚಿಸುವ ಕಲೆ ಇದ್ದರೆ ಸಾಕು ವೆಬ್ ಡಿಸೈನ್ ಸುಲಭ. ಕೆಲವು ಖಾಸಗಿ ತರಬೇತಿ ಸಂಸ್ಥೆಗಳು 10+2 ಉತ್ತೀರ್ಣರಾಗಿರುವವರಿಗೂ ಸಹ ವೆಬ್ ಡಿಸೈನಿಂಗ್ ಕೋರ್ಸ್ ಗಳನ್ನು ಒದಗಿಸುತ್ತವೆ.

ವೆಬ್ ಡಿಸೈನಿಂಗ್ ತರಬೇತಿಯಲ್ಲಿ ಹೆಚ್ಚಾಗಿ ಅಂತರ್ಜಾಲ ತಾಣ ರಚನೆಗೆ ಅವಶ್ಯಕವಾದ ಮೂಲಭೂತ ಜ್ಞಾನ ಮತ್ತು ಡಿಸೈನ್ ಗೆ ಅತ್ಯಾವಶ್ಯಕವಾಗಿರುವ ಇತರ ತಾಂತ್ರಿಕ ವಿಷಯಗಳು ಮತ್ತು ಕೌಶಲಗಳನ್ನು ಕಲಿಸಿಕೊಡಲಾಗುತ್ತದೆ. ಅಂತರ್ಜಾಲ ತಾಣ ನಿರ್ಮಾಣದ ಮೂಲಭೂತ ಅಂಶಗಳಾದ (ಆರ್ಕಿಟೆಕ್ಚರ್), ಎಚ್ ಟಿಎಮ್ಎಲ್, ಸಿಎಚ್ಪಿ, ಅಂತರ್ಜಾಲ ಪುಟದ ತಂತ್ರಾಂಶ ತಯಾರಿಕೆಗೆ ಅವಶ್ಯಕವಾದ ಕೋಡಿಂಗ್, ಜಾವಾ ಸ್ಕ್ರಿಪ್ಟ್, ಫ್ಲ್ಯಾಶ್, ಗ್ರಾಫಿಕ್ಸ್ ಬಳಕೆ, ಅನಿಮೇಶನ್, ಡ್ರೀಮ್ ವೀವರ್ ಇವೆಲ್ಲ ಸಾಮಾನ್ಯವಾಗಿ ವೆಬ್ ಡಿಸೈನಿಂಗ್ ಪಠ್ಯ ಕ್ರಮದಲ್ಲಿ ಅಡಕವಾಗಿರುವ ವಿಷಯಗಳು.

ವೆಬ್ ಡಿಸೈನಿಂಗ್ ಕೋರ್ಸ್ ನೀಡುವ ಸಂಸ್ಥೆಗಳು

ಕೆಲವು ಖಾಸಗಿ ಕಂಪ್ಯೂಟರ್ ತರಬೇತಿ ಸಂಸ್ಥೆಗಳು ವೆಬ್ ಡಿಸೈನಿಂಗ್ ಸರ್ಟಿಫಿಕೇಟ್ ಕೋರ್ಸ್ ಗಳನ್ನು, ಡಿಪ್ಲೋಮಾ ಕೋರ್ಸ್ ಗಳನ್ನು ಒದಗಿಸುತ್ತವೆ.
ಅರೆನಾ, ಎನ್.ಐ.ಐ.ಟಿ, ವಿನ್ ಟೂನ್ಝ್ ಆ್ಯನಿಮೇಷನ್, ಫ್ರೇಮ್ ಬಾಕ್ಸ್ ಅನಿಮೇಷನ್ , ವಿಷ್ಯುಯಲ್ ಎಫೆಕ್ಟ್ಸ್, ಜೈನ್ ಆ್ಯನಿಮೇಷನ್ ಸ್ಕೂಲ್, ಎಸ್.ಎಸ್.ಐ. ಕಂಪ್ಯೂಟರ್ ಎಜ್ಯುಕೇಷನ್, ಜೈನ್ ಇನ್ ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಆರ್ಟ್ ಇತ್ಯಾದಿಗಳಂತಹ ಜನಪ್ರಿಯ ಕಂಪ್ಯೂಟರ್ ತರಬೇತಿ ಸಂಸ್ಥೆಗಳು ವೆಬ್ ಡಿಸೈನಿಂಗ್ ನಲ್ಲಿ ಸರ್ಟಿಫಿಕೇಟ್, ಮತ್ತು ಡಿಪ್ಲೋಮಾ ಕೋರ್ಸ್ ಗಳನ್ನು ಒದಗಿಸುತ್ತಿವೆ.

ಉದ್ಯೋಗಾವಕಾಶ

ವೆಬ್ ಸೈಟ್ ಡಿಸೈನ್ ಸಂಸ್ಥೆಗಳು, ವೆಬ್ ಕನ್ಸಲ್ಟಿಂಗ್, ಸಾಫ್ಟ್ ವೇರ್ ಸಂಸ್ಥೆಗಳು, ಸ್ಟಾಕ್ ಛಾಯಾಚಿತ್ರಣ ಸಂಸ್ಥೆಗಳು, ವೆಬ್ ಮಾರ್ಕೆಟಿಂಗ್ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಅಂತರ್ಜಾಲ ಮಾರ್ಕೆಟಿಂಗ್ ಸಂಸ್ಥೆಗಳು, ವೆಬ್ ಜಾಹೀರಾತು ಸಂಸ್ಥೆಗಳು.. ಹೀಗೆ ಹತ್ತು-ಹಲವು ಕ್ಷೇತ್ರಗಳಲ್ಲಿ ವೆಬ್ ಡಿಸೈನರ್ ಗಳಿಗೆ ವಿಪುಲ ಉದ್ಯೋಗಾವಕಾಶಗಳಿವೆ. ಅಲ್ಲದೇ ನೀವು ಫ್ರೀಲ್ಯಾನ್ಸ್ ವೆಬ್ ಡಿಸೈನರ್ ಆಗಿ ಸ್ವತಂತ್ರವಾಗಿ ಸಹ ಕಾರ್ಯ ನಿರ್ವಹಿಸಬಹುದಾಗಿದೆ.

English summary
Web design encompasses many different skills and disciplines in the production and maintenance of websites.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia