ಸಂದರ್ಶನಕಾರ ಬಯಸುವುದು ಇದನ್ನೇ... ತಿಳಿದುಕೊಂಡು ಇಂಟರ್ವ್ಯೂಗೆ ಹೋಗಿ ಕೆಲಸ ಗ್ಯಾರಂಟಿ

By Kavya

ಸಂದರ್ಶನಕ್ಕೆ ಹಾಜರಾಗುವುದೆಂದ್ರೆ ನಮ್ಮ ಜೀವನದ ತುಂಬಾ ಪ್ರಮುಖ ಹಾಗೂ ಕಷ್ಟದ ಸನ್ನಿವೇಶ. ಇಂಟರ್ವ್ಯೂ ಅಲ್ಲಿ ಎಲ್ಲಿ ರಿಜೆಕ್ಟ್ ಆಗ್ತೇನೋ ಅನ್ನೋ ಭಯದಿಂದ ನಾವೂ ಸಂದರ್ಶನ ಎದರಿಸುವ ಮುನ್ನನೇ ತುಂಬಾ ನರ್ವಸ್ ಆಗಿ ಬಿಡುತ್ತೇವೆ. ಹಾಗಾಗಿ ನಾವು ಇಂಟರ್ವ್ಯೂ ವೇಳೆ ಸರಿಯಾಗಿ ಉತ್ತರಿಸದೇ ವಿಫಲರಾಗುತ್ತೇವೆ. ಅಷ್ಟೇ ಅಲ್ಲದೇ ಸಂದರ್ಶನ ಮಾಡುವವರು ನಮ್ಮಿಂದ ಏನೂ ಬಯಸುತ್ತಾರೆ ಎಂಬುವುದು ನಮಗೆ ತಿಳಿದಿರುವುದಿಲ್ಲ. ಸಂದರ್ಶನಕಾರರು ಹುದ್ದೆಗೆ ತಕ್ಕಂತ ಕೌಶಲ್ಯ ನಮ್ಮಿಂದ ಬಯಸುತ್ತಾರೆ. ಅಷ್ಟೇ ಅಲ್ಲ ಇನ್ನೂ ಅನೇಕ ಕ್ವಾಲಿಟಿಗಳನ್ನ ನಮ್ಮಿಂದ ಬಯಸುತ್ತಾರೆ. ಆ ಕ್ವಾಲಿಟಿ ಯಾವುದು ಎಂದು ತಿಳಿಯಲು ಮುಂದಕ್ಕೆ ಓದಿ.

 
ಇಂಟರ್ವ್ಯೂ ವೇಳೆ ನಿಮ್ಮಿಂದ ಸಂದರ್ಶನಕಾರ ಬಯಸುವ ಕ್ವಾಲಿಟಿ!

ಅಭ್ಯರ್ಥಿಗಳಿಂದ ಈ ಕೆಳಗೆ ನೀಡಿರುವ ಕ್ವಾಲಿಟಿಗಳನ್ನ ಸಂದರ್ಶನಕಾರರು ಬಯಸುತ್ತಾರೆ:

ಐ ಕಾಂಟೆಕ್ಟ್:

ಹೌದು ಇದು ತುಂಬಾ ಪ್ರಮುಖವಾದುದು. ಸಂದರ್ಶನ ಮಾಡುವ ವೇಳೆ ಹೆಚ್ಚಿನ ಜನರು ಟೆನ್ಶನ್ ನಿಂದ ಕೆಳಗೆ ನೆಲ ನೋಡುವುದು, ಕೈ ನೋಡುವುದು, ಮೇಜು ನೋಡುವುದು ಮಾಡುತ್ತಾರೆ. ಇದರಿಂದ ನಿಮ್ಮ ಕಾಂಫಿಡೆಂಟ್ ಇಲ್ಲ ಎಂಬ ನಿರ್ಧಾರಕ್ಕೆ ಸಂದರ್ಶನಕಾರರು ಬರುತ್ತಾರೆ. ಇದರಿಂದ ಜಾಬ್ ನಿಮ್ಮ ಕೈ ತಪ್ಪಿ ಕೂಡಾ ಹೋಗಬಹುದು. ಹಾಗಾಗಿ ನೀವು ಇಂಟರ್ವ್ಯೂ ವೇಳೆ ಸಂದರ್ಶನಕಾರರ ಕಣ್ಣು ನೋಡಿಕೊಂಡೇ ಧೈರ್ಯವಾಗಿ ಮಾತನಾಡಿ.

ಕಾಂಫಿಡೆನ್ಸ್:

ತುಂಬಾ ಬಾರಿ ಈ ಪದ ನೀವು ಕೇಳಿರಬಹುದು. ಹೌದು ಈ ಅಂಶ ಪ್ರಮುಖ ಕೂಡಾ ಹಾಗೂ ಸತ್ಯ ಕೂಡಾ. ಕಾಂಪಿಡೆನ್ಸ್ ನಲ್ಲಿ ಇದ್ರೆ ನೀವು ಸುಲಭವಾಗಿ ಸಕ್ಸಸ್ ಪಡೆಯಬಹುದು. ನೀವು ಯಾವ ಫೀಲ್ಡ್‌ನಲ್ಲಿ ಇದ್ದೀರಾ ಎನ್ನುವುದು ಪ್ರಮುಖವಲ್ಲ. ಆದ್ರೆ ನಿಮ್ಮಲ್ಲಿ ಎಷ್ಟು ಕಾಂಫಿಡೆನ್ಸ್ ಇದೆ ಎನ್ನುವುದು ಮುಖ್ಯ. ಸಂದರ್ಶನ ವೇಳೆ ಸಂದರ್ಶನಕಾರರು ನಿಮ್ಮಂದ ಬಯಸುವ ಕ್ವಾಲಿಟಿ ಕೂಡಾ ಇದಾಗಿದೆ.

ಕಮ್ಯುನಿಕೇಶನ್ ಪವರ್:

ನೀವು ಯಾವ ಭಾಷೆಯಲ್ಲಿ ಮಾತನಾಡುತ್ತೀರಿ ಅನ್ನೋದು ಮುಖ್ಯವಲ್ಲ, ಬದಲಿಗೆ ನಿಮ್ಮ ಮಾತು ಇತರರು ಆಲಿಸುವಂತೆ ನೀವು ಹೇಗೆ ಮಾಡುತ್ತೀರಿ ಅನ್ನೋದು ಇಂಪೋರ್ಟೆಂಟ್. ನೀವೇ ಏನೇ ಮಾತನಾಡಿ, ಆದ್ರೆ ಪಾಯಿಂಟ್ ಇರೋ ಮಾತುಗಳನ್ನೇ ಆಡಿ. ಆಗ ಸಂದರ್ಶನಕಾರರು ನಿಮ್ಮ ಸೆನ್ಸ್ ನ್ನ ಮೆಚ್ಚಿಕೊಳ್ಳುತ್ತಾರೆ.

ವಾಸ್ತವದಲ್ಲೆ ಇರಿ:

ನಿಮ್ಮ ಮನಸ್ಸು ವಾಸ್ತವದಲ್ಲೇ ಇದೆಯೇ ಎಂದು ಚೆಕ್ ಮಾಡಿಕೊಳ್ಳಲು ಸಂದರ್ಶನಕಾರರು ನಿಮಗೆ ಸುತ್ತಿ ಬಳಸಿ ಪ್ರಶ್ನೆಗಳನ್ನ ಕೇಳಬಹುದು. ಹಾಗಾಗಿ ಆ ಟೈಂನಲ್ಲಿ ನೀವು ಮೈಯೆಲ್ಲಾ ಕಿವಿಯಾಗಿದ್ದು, ಆಕ್ಟೀವ್ ಆಗಿರುವುದು ಬೆಸ್ಟ್. ನಿಮ್ಮಲ್ಲಿ ವಾಸ್ತವತೆಯ ಗುಣ ಇರಬೇಕು ಎಂದು ಕೂಡಾ ಅವರು ಬಯಸುತ್ತಾರೆ.

 

ನೀತಿ ನಿಯಮ ತಿಳಿದಿರಬೇಕು:

ಇದು ತುಂಬಾ ಪ್ರಮುಖವಾದ ವಿಷಯ ಹಾಗೂ ಪ್ರತಿಯೊಬ್ಬನು ಸಂದರ್ಶನಕ್ಕೆ ಹೋಗುವ ಮುನ್ನ ತಿಳಿದುಕೊಂಡಿರಬೇಕಾದ ವಿಷಯ. ಸಂದರ್ಶನಕಾರ ಸಂದರ್ಶನದ ವೇಳೆ ನಿಮ್ಮ ಅನಿಸಿಕೆ, ನೀತಿ, ನಿಯಮಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಯಾಕೆಂದ್ರೆ ನಿಮಗೆ ಜಾಬ್ ನೀಡಿದಾಗ ನೀವು ನೀತಿ ಹಾಗೂ ನಿಷ್ಟೆಯಿಂದ ಕೆಲಸ ಮಾಡುಬೇಕು ಎಂಬ ಉದ್ದೇಶದಿಂದ. ಹಾಗಾಗಿ ನಿಮ್ಮ ನೀತಿ ಹಾಗೂ ನಿಲುವಿನ ಬಗ್ಗೆ ಸಂದರ್ಶನಕಾರ ತಿಳಿದುಕೊಳ್ಳಲು ಯತ್ನಿಸುತ್ತಾನೆ.

ಈ ಐದು ಗುಣಲಕ್ಷಣಗಳನ್ನ ನೀವು ನಿಮ್ಮದಾಗಿಸಿಕೊಂಡ್ರೆ ಸುಲಭವಾಗಿ ನೀವು ಆ ಜಾಬ್ ನಿಮ್ಮದಾಗಿಸಿಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
Are you Going to interview... then you must follow this tips. interview is one of the difficult situation in our life. interview time we will get panic sometime. we never know what our interviewer is expecting from us. So if you also have no clue about the things an interviewer looks in an employee read these.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X