ಕ್ಯಾಂಪಸ್ ಇಂಟರ್ವ್ಯೂನಲ್ಲಿ ನಿಮಗೆ ಜಾಬ್ ಸಿಗಬೇಕಾ... ಹಾಗಿದ್ರೆ ನೀವು ಫಾಲೋ ಮಾಡಬೇಕಾದ ಟಿಪ್ಸ್!

ಕಾಲೇಜಿನಲ್ಲಿ ಕ್ಯಾಂಪಸ್ ಇಂಟರ್ವ್ಯೂ ಬಗ್ಗೆ ನೀವು ಕೇಳಿರುತ್ತೀರಾ... ಈ ಇಂಟರ್ವ್ಯೂ ಅಲ್ಲಿ ಹೇಗೆ ಸಂದರ್ಶನಕಾರರನ್ನ ಇಂಪ್ರೇಸ್ ಮಾಬೇಕು ಎಂದು ನಿಮಗೆ ಗೊತ್ತಾ. ಬೆಸ್ಟ್ ಜಾಬ್ ಆಫರ್ ನಿಮ್ಮದಾಗಿಸಲು ನೀವೇನು ಮಾಡಬೇಕು ಎಂದು ನಾವು ನಿಮಗೆ ಸಲಹೆ ನೀಡುತ್ತೇವೆ ಮುಂದಕ್ಕೆ ಓದಿ.

ಕ್ಯಾಂಪಸ್ ಇಂಟರ್ವ್ಯೂನಲ್ಲಿ ನಿಮಗೆ ಜಾಬ್ ಸಿಗಬೇಕಾ... ಹಾಗಿದ್ರೆ ನೀವು ಫಾಲೋ ಮಾಡಬೇಕಾದ ಟಿಪ್ಸ್!

 

ಬೆಸ್ಟ್ ಕಾಲೇಜು ಸೇರಬೇಕು ಎಂಬುವುದು ಎಲ್ಲರ ಕನಸಾಗಿರುತ್ತದೆ. ಇನ್ನು ಈ ಕಾಲೇಜುಗಳಲ್ಲಿ ಕೊನೆಯ ಸೆಮಿಸ್ಟರ್ ವೇಳೆ ಕ್ಯಾಂಪಸ್ ಇಂಟರ್ವ್ಯೂ ನಡೆಸುತ್ತಾರೆ.ಈ ಇಂಟರ್ವ್ಯೂ ಅಲ್ಲಿ ಅದೆಷ್ಟೋ ಕಂಪನಿಗಳು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ನೀಡುತ್ತದೆ. ಇನ್ನೂ ಈ ಟೈಂನಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕೂಡಾ ಹೆಚ್ಚಿರುವುದರಿಂದ ಜಾಬ್ ಗಾಗಿ ತುಂಬಾ ಕಾಂಪಿಟೇಶನ್ ಏರ್ಪಟ್ಟಿರುತ್ತದೆ. ಸೋ ನೀವೀಗ ಆ ಟೆನ್ಶನ್ ಬಿಟ್ಟು ಬಿಡಿ, ಎಷ್ಟೇ ಸ್ಪರ್ಧೆ ಇದ್ದರೂ ಸುಲಭವಾಗಿ ಆ ಜಾಬ್ ನಿಮ್ಮದಾಗಿಸಿಕೊಳ್ಳಬೇಕಾದ್ರೆ ನೀವು ಕೆಲವೊಂದು ಗುಣಗಳನ್ನ ಮೈಗೂಡಿಸಿಕೊಳ್ಳಬೇಕು.

ಆ ಗುಣಗಳು ಯಾವುವು ಎಂದು ನಿಮಗೆ ಕೆರಿಯರ್ ಇಂಡಿಯಾ ಸಲಹೆ ನೀಡುತ್ತದೆ:

ಕಾಂಫಿಡೆಂಟ್ ಆಗಿರಿ:

ಇದು ಮೊದಲು ನೆನಪಿಟ್ಟುಕೊಳ್ಳಬೇಕಾದ ವಿಷಯ. ಸಂದರ್ಶನಕಾರರು ನಿಮ್ಮಿಂದ ಮೊದಲು ಬಯಸುವುದು ನಿಮ್ಮ ಕಾಂಫಿಡೆಂಟನ್ನ. ಸಂದರ್ಶನ ವೇಳೆ ಸಂದರ್ಶನ ಕೊಠಡಿಗೆ ನೀವು ಕಾಂಫಿಡೆಂಟ್ ನಿಂದ ಎಂಟ್ರಿ ನೀಡಿ. ನಿಮ್ಮ ಕಾಂಫಿಡೆಂಟ್ ಎಲ್ಲಾ ಸಂದರ್ಶನಕಾರರನ್ನ ಇಂಪ್ರೇಸ್ ಮಾಡುತ್ತದೆ. ಹಾಗಾಗಿ ನೀವು ಎಂಟ್ರಿ ನೀಡುವಾಗಲೇ ಸ್ಕೋರ್ ಪಡೆದುಕೊಂಡಿರುತ್ತೀರಿ. ನೆನಪಿಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ನರ್ವಸ್ ಆಗಬೇಡಿ. ಇದೀಗ ಕಂಪನಿಗಳು ಕಾಂಫಿಡೆಂಟ್ ನಿಂದ ಇರುವ ಯಂಗ್ ಉದ್ಯೋಗಿಗಳಿಗೆ ಹೆಚ್ಚು ಇಂಪೋರ್ಟೆಂಸ್ ನೀಡುತ್ತದೆ.

ಉತ್ತಮ ಕಮ್ಯುನಿಕೇಶನ್ ಕೌಶಲ್ಯ:

ನಿಮ್ಮ ಉತ್ತಮ ಕಮ್ಯುನಿಕೇಶನ್ ಕೌಶಲ್ಯ ನಿಮ್ಮನ್ನ ಉದ್ಯೋಗದ ಆಯ್ಕೆ ವಿಚಾರದಲ್ಲಿ ಎಲ್ಲರಿಗಿಂತ ಮುಂದಕ್ಕೆ ತಂದು ನಿಲ್ಲಿಸುತ್ತದೆ. ಯಾರು ಸಂದರ್ಶನ ವೇಳೆ ಚೆನ್ನಾಗಿ ಮಾತನಾಡಬಲ್ಲರೋ ಅವರು ಸುಲಭವಾಗಿ ಜಾಬ್ ಅವಕಾಶವನ್ನ ಬಾಚಿಕೊಳ್ಳುತ್ತಾರೆ. ಚೆನ್ನಾಗಿ ಕಮ್ಯುನಿಕೇಟ್ ಮಾಡುವುದರಿಂದ ಅಲ್ಲಿ ಯಾವುದೇ ಅಪಾರ್ಥವಾಗುವ ಸಂಭವವಿರುವುದಿಲ್ಲ. ಈ ಕ್ವಾಲಿಟಿಯನ್ನ ಸಂದರ್ಶನಕಾರರು ನಿಮ್ಮಿಂದ ಬಯಸುತ್ತಾರೆ. ಹಾಗಾಗಿ ಇದೀಗ ನಿಮ್ಮ ಕಮ್ಯುನಿಕೇಶನ್ ಸ್ಕಿಲ್ ಇಂಪ್ರೂವ್ ಮಾಡುವ ಸಮಯವಿದು. ಸೂಪರ್ ಕಮ್ಯುನಿಕೇಶನ್ ಸ್ಕಿಲ್ ನಿಮ್ಮದಾಗಿದ್ರೆ ಕ್ಯಾಂಪಸ್ ಇಂಟರ್ವ್ಯೂ ಅಲ್ಲಿ ಇತರರಿಗಿಂತ ಬೇಗನೇ ನೀವು ಅವಕಾಶ ಬಾಚಿಕೊಳ್ಳುತ್ತೀರಾ.

ಜಾಣತನ:

ನೀವು ಸಂದರ್ಶನ ವೇಳೆ ಸತ್ಯವಾದುದು ಹಾಗೂ ಗೌರವಯುತವಾದ ಮಾತುಗಳನ್ನೇ ಆಡಿ. ಕ್ಯಾಂಪಸ್ ಸಂದರ್ಶನ ವೇಳೆ ಈ ಕ್ವಾಲಿಟಿ ನಿಮ್ಮಲ್ಲಿ ಇರಲೇ ಬೇಕು. ಸಂದರ್ಶನಕಾರರು ಇಂಟರ್ವ್ಯೂ ವೇಳೆ ಪರ್ಟಿಕ್ಯೂಲರ್ ಸಂದರ್ಭದವನ್ನುದ್ದೇಶಿಸಿ ಪ್ರಶ್ನೆ ಕೇಳಬಹುದು. ಆದ್ರೆ ನೀವು ಹಾನೆಸ್ಟ್ ಆಗಿ ಹಾಗೂ ಜಾಣತನದಿಂದ ಉತ್ತರಿಸಬೇಕು. ಸಂದರ್ಶನಕಾರರು ನಿಮ್ಮಿಂದ ನಿರೀಕ್ಷಿಸುವ ಟಾಪ್ ಕ್ವಾಲಿಟಿಗಳಲ್ಲಿ ಇದು ಕೂಡಾ ಒಂದು.

ನಾಯಕತ್ವ:

ಕಂಪನಿಯು ನಿಮ್ಮಿಂದ ಒಂದು ಹೆಜ್ಜೆ ಹೆಚ್ಚಿದನ್ನೇ ನಿರೀಕ್ಷಿಸುತ್ತದೆ. ನಿಮ್ಮಲ್ಲಿ ನಾಯಕತ್ವದ ಗುಣವಿದೆಯೇ ಎಂದು ಪರೀಕ್ಷಿಸುತ್ತದೆ. ಕೆಲವೊಮ್ಮೆ ಸಂದರ್ಶನಕಾರರು ನಿಮ್ಮಿಂದ ಸ್ವಲ್ಪ ಮೂಡ್ ಆಫ್ ಆಗಬಹುದು. ಆ ಟೈಂನಲ್ಲಿ ನಿಮ್ಮ ಮಾತುಗಳಿಂದ ಮತ್ತೆ ಅವರ ಮುಖದಲ್ಲಿ ನಗು ತರಿಸಿ.

ಶಿಸ್ತಿನಿಂದ ಇರಿ:

ಸರಿಯಾದ ಟೈಂ ಗೆ ಸಂದರ್ಶನಕ್ಕೆ ಹಾಜರಾಗಿರಿ. ಇದರಿಂದ ಸಂದರ್ಶನಕಾರರು ನೀವು ಸಮಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀರಾ ಎಂಬುವುದು ತಿಳಿಯುತ್ತಾರೆ. ನೀವು ಕೊಟ್ಟ ಸಮಯದೊಳಗೆ ಪ್ರಾಜೆಕ್ಟ್ ಮಾಡಿ ಮುಗಿಸುತ್ತೀರಾ ಎಂದು ಅವರು ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ತಾಳುವರು. ಇನ್ನು ಅವರು ಕೇಳುವ ಪ್ರಶ್ನೆಗಳಿಗೆ ತಾಳ್ಮೆ ಹಾಗೂ ಸಂಯಮದಿಂದ ಯೋಚಿಸಿ ಉತ್ತರಿಸಿ.

For Quick Alerts
ALLOW NOTIFICATIONS  
For Daily Alerts

  English summary
  Getting into a reputed college is a dream come true. But the pressure begins to pile up as soon as you enter in the final semester. This is an anxiety more than pressure. Yes, you become more anxious to know in which company you will end landing. As there are a number of companies offering jobs to thousands of students at one go.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more