ಎಷ್ಟೇ ಪರಿಶ್ರಮದಿಂದ ದುಡಿದ್ರೂ ನಿಮ್ಮ ಕೆಲಸ ಹೋಗಲು ಇವಿಷ್ಟು ಸಾಕು!

ಆಫೀಸ್‌ನಲ್ಲಿ ಈಗಷ್ಟೇ ಸೇರಿದ್ದರೂ ಇಲ್ಲ ಅದೆಷ್ಟೇ ಹಾರ್ಡ್ ವರ್ಕ ಮಾಡಿದ್ರೂ ನಾವು ಮಾಡುವ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳಿಂದ ನಾವು ಕೆಲಸವನ್ನೇ ಕಳೆದುಕೊಳ್ಳುತ್ತೇವೆ. ತಪ್ಪು ಮಾಡುವುದು ಸಹಜ ಆದ್ರೆ ಆ ತಪ್ಪನ್ನೇ ನಮ್ಮ ಅಭ್ಯಾಸವನ್ನಾಗಿ ಮಾಡಿಕೊಳ್ಳಬಾರದು. ಇದರಿಂದ ನಾವು ಕೆಲಸ ಕಳೆದುಕೊಳ್ಳುವ ಸಂಭವ ಎದುರಾಗಬಹುದು. ಬನ್ನಿ ಅಂತಹ ತಪ್ಪುಗಳು ಯಾವುವು ಎಂದು ಇದೀಗ ಕೆರಿಯರ್ ಇಂಡಿಯಾ ನಿಮಗೆ ತಿಳಿಸುತ್ತಿದೆ ಮುಂದಕ್ಕೆ ಓದಿ.

ನೀವು ಆಲಸಿಗಳೇ... ಹಾಗಿದ್ರೆ ಈ ಜಾಬ್ ನಿಮಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತೆ!

ಕಂಪನಿಯ ರೂಲ್ಸ್, ಕಲ್ಚರ್ ಗೆ ವಿರುದ್ಧ

ಹೌದು ಇತ್ತೀಚಿಗಿನ ದಿನಗಳಲ್ಲಿ ಪ್ರತಿಯೊಂದು ಕಂಪನಿಯು ತನ್ನದೇ ಆದಂತಹ ರೂಲ್ಸ್ ಗಳನ್ನ ಹೊಂದಿರುತ್ತದೆ. ಕಂಪನಿಗೆ ಕೆಲಸಕ್ಕೆ ಸೇರಿದ ಕೂಡಲೇ ಆ ಕಂಪನಿಯ ರೀತಿ ನೀತಿ ನಿಯಮಗಳನ್ನ ನಾವು ಅನುಸರಿಸಬೇಕು. ಅದು ಬಿಟ್ಟು ನನ್ನ ಸ್ಟೈಲೇ ಬೇರೆ ನನ್ನದೇ ಕೆಲವೊಂದು ನಿಯಮಗಳಿವೆ ಹಾಗಾಗಿ ಕಂಪನಿ ನೀತಿಯನ್ ಫಾಲೋ ಮಾಡದೇ ನಿರ್ಲಕ್ಷಿಸಿದ್ರೆ ನೀವು ಕೆಲಸ ಕಳೆದುಕೊಳ್ಳುವುದು ಗ್ಯಾರಂಟಿ.

 

ಉಡುಗೆ ವಿಚಾರ

ನೀವು ಈ ವಿಚಾರವನ್ನ ಯಾವತ್ತೂ ನಿರ್ಲಕ್ಷಿಸಬೇಡಿ. ಕಾರ್ಪೋರೇಟಿವ್ ಸಂಸ್ಥೆಯಲ್ಲಿ ನೀವು ದುಡಿಯುತ್ತಿದ್ದೀರಿ ಎಂದಾದ್ರೆ ಅಲ್ಲಿನ ಕಲ್ಚರ್ ಗೆ ತಕ್ಕಂತೆ ಉಡುಗೆ ತೊಡುವುದು ಅಗತ್ಯ. ಹಾಗೂ ನೀವು ಮೆಸ್ಸಿಯಾಗಿ ಉಡುಗೆ ಧರಿಸಿ ಹೋದ್ರೆ ಆಲಸಿ, ಆಸಕ್ತಿ ಕಳೆದುಕೊಂಡವರಂತೆ ಹಾಗೂ ಜವಬ್ದಾರಿ ಇಲ್ಲದವರಂತೆ ಅನಿಸಿಕೊಳ್ಳುವಿರಿ. ಹುದ್ದೆಗೆ ತಕ್ಕದಾದ ಉಡುಗೆ ಧರಿಸಿ ಹೋಗಿ ಇಲ್ಲಂದ್ರೆ ಆ ಕಾರಣಕ್ಕೂ ನೀವು ಕೆಲಸ ಕಳೆದುಕೊಳ್ಳಬಹುದು.

 

ಒರಟು ವರ್ತನೆ ಹಾಗೂ ನೆಗಟೀವ್ ಅಟ್ಯಿಟ್ಯುಡ್

ನೀವು ಒಂದು ವೇಳೆ ನೆಗಟೀವ್ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿದ್ದರೆ ಇಲ್ಲ ಕೋ-ವರ್ಕರ್ಸ್ ಜತೆ ಹಾಗೂ ಜ್ಯೂನಿಯರ್ಸ್ ಜತೆ ಕೆಟ್ಟದಾಗಿ ಅಟ್ಯಿಟ್ಯುಡ್ ಪ್ರದರ್ಶಿಸುವವರಾಗಿದ್ದರೆ, ನೋ ಡೌಟ್ ನಿಮ್ಮ ಕೆಲಸಕ್ಕೆ ಶೀಘ್ರದಲ್ಲಿ ಗುಡ್ ಬೈ ಕೂಡಾ ಹೇಳಲಿರುವಿರಿ. ನಿಮ್ಮ ಈ ವರ್ತನೆಯಿಂದ ಕಂಪನಿಯು ನಿಮ್ಮನ್ನ ಕೆಲಸದಿಂದ ಕಿತ್ತು ಹಾಕುವುದರಲ್ಲಿ ಯಾವುದೇ ಡೌಟ್ ಇಲ್ಲ.

 

ಈ-ಮೇಲ್ ವಿಚಾರ:

ಹೌದು ಕಾರ್ಪೋರೆಟ್ ಕಂಪನಿಗಳಲ್ಲಿ ಪ್ರತಿಯೊಂದು ಕೆಲಸವನ್ನ ಈ-ಮೇಲ್ ಮೂಲಕ ಮಾಡಬೇಕಾಗುತ್ತದೆ. ಈ ವೇಳೆ ನೀವು ಅನ್‌ಪ್ರೊಫೆಶನಲ್ ಆಗಿ ನಿಮಗಿಂತ ಉನ್ನತ ಸ್ಥಾನದಲ್ಲಿ ಇರುವ ಅಧಿಕಾರಿಗಳಿಗೆ ಮೇಲ್ ಮಾಡಿದ್ರೆ ಇಲ್ಲ ಅಧಿಕಾರಿಗಳು ಕಳುಹಿಸುವ ಮೇಲ್ ಇಲ್ಲ ಸಂದೇಶವನ್ನ ನಿರ್ಲಕ್ಷಿಸಿದ್ರೆ ಕೂಡಾ ನೀವು ಕೆಲಸ ಕಳೆದು ಕೊಳ್ಳುವ ಚ್ಯಾನ್ಸಸ್ ಇರುತ್ತದೆ. ಉನ್ನತ ಅಧಿಕಾರಿಗಾಗಿ ಒರಟಾಗಿ ಮೇಲ್ ಮಾಡಿದ್ರೆ ನಿಮ್ಮ ಕೆಲಸ ಗೋವಿಂದ ಗೋವಿಂದಾ!!!!

 

ಸಮಯ ನಿರ್ಲಕ್ಷ್ಯ:

ಹೌದು ಆಫೀಸ್‌ಗೆ ಸರಿಯಾದ ಟೈಂ ಗೆ ಬರದಿದ್ದಲ್ಲಿ, ಇಲ್ಲ ನಿಗಧಿತ ಸಮಯಕ್ಕಿಂತ ಬೇಗನೇ ಆಫೀಸ್‌ನಿಂದ ಹೊರಟು ಹೋದ್ರೆ ನಿಮ್ಮ ಬೇಜವಬ್ದಾರಿ ತನ ಇದರಲ್ಲಿ ಎದ್ದು ಕಾಣಿಸುತ್ತದೆ. ಒಂದು ವೇಳೆ ಅಪರೂಪಕ್ಕೆ ಇಲ್ಲ ನಿರ್ಧಿಷ್ಟವಾದ ಕಾರಣವಿದ್ರೆ ಓಕೆ. ಆದ್ರೆ ವಿನಾಃ ಕಾರಣ ನಿಮಗೆ ಬೇಕಾದ ಟೈಂಗೆ ಆಫೀಸ್‌ಗೆ ಬರುವುದು ಇಲ್ಲ ಆಫೀಸ್ ಅವಧಿ ಮುಗಿಯೋ ಮುನ್ನನೇ ತೆರಳುವುದು ಮಾಡಿದ್ರೆ ಖಂಡಿತ ನೀವು ಆ ಕಂಪನಿಯಲ್ಲಿ ಹೆಚ್ಚು ವರ್ಷ ದುಡಿಯಲಾರಿರಿ

 

ಸ್ಟ್ರೆಂಥ್ ಹಾಗೂ ವೀಕ್‌ನೆಸ್ ... ಇಂಟರ್ವ್ಯೂನಲ್ಲಿ ಕೇಳುವ ಈ ಪ್ರಶ್ನೆಗೆ ಹೀಗೆ ಉತ್ತರಿಸಿದ್ರೆ ಕೆಲಸ ಗ್ಯಾರಂಟಿ ಗೊತ್ತಾ

For Quick Alerts
ALLOW NOTIFICATIONS  
For Daily Alerts

  English summary
  The mistakes that mar the reputation at the office and make one look like an utterly unprofessional person. Sometimes we are not even aware of such gaffes. Most of the times, it’s the gradual accumulation of smaller offenses that keeps one from getting ahead in their careers.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more