ಹೊಸ ಬ್ಯುಸಿನೆಸ್ ಗೆ ಕೈ ಹಾಕುವ ಮುನ್ನ ಈ 4 ಅಂಶಗಳ ಬಗ್ಗೆ ಗಮನವಿರಲಿ!

By Kavya

ಉದ್ಯಮ ಪ್ರಾರಂಭಿಸುವ ಮುನ್ನ ಕೆಲವೊಂದು ಮೂಲಭೂತ ಅಗತ್ಯಗಳನ್ನ ತಯಾರು ಮಾಡಿಕೊಂಡಿರಬೇಕು. ಮೊದಲಿಗೆ ಯೋಜನೆ ರೂಪಿಸಿಕೊಳ್ಳಬೇಕು. ನಂತರ ಅದರ ಬಗ್ಗೆ ಸ್ಟಡಿ ಮಾಡಿ, ಬಳಿಕ ಆ ಯೋಜನೆಯನ್ನ ಕಾರ್ಯರೂಪಕ್ಕೆ ತರಬೇಕು.

 
ಹೊಸ ಬ್ಯುಸಿನೆಸ್ ಗೆ ಕೈ ಹಾಕುವ ಮುನ್ನ ಈ 4 ಅಂಶಗಳ ಬಗ್ಗೆ ಗಮನವಿರಲಿ!

ಸಣ್ಣ ಉದ್ಯಮವು, ಚೆನ್ನಾಗಿ ಬೆಳೆಯಬೇಕೆಂದಿದ್ದರೆ, ಅದಕ್ಕೆ ಹಲವಾರು ಸ್ಟಾಟಜಿಗಳ ಜತೆಗೆ ಸ್ಮಾರ್ಟ್ ಆಗಿ ಪ್ಲ್ಯಾನ್ ಮಾಡುವ ಅಗತ್ಯವಿದೆ. ನೀವು ಸಕ್ಸಸ್ ಫುಲ್ ಆಗಿ ಬ್ಯುಸಿನೆಸ್ ಪ್ರಾರಂಭಿಸಿದ್ರೆ ಅದರ ಅಭಿವೃದ್ಧಿಯೂ ಕೂಡಾ ಮೇಲ್ಮಟ್ಟದಲ್ಲೇ ಇರುತ್ತದೆ. ಹಾಗಿದ್ರೆ ಸಕ್ಸಸ್ ಫುಲ್ ಆಗಿ ಬ್ಯುಸಿನೆಸ್ ಪ್ರಾರಂಭಿಸಬೇಕಾದ್ರೆ ನಮ್ಮಲ್ಲಿ ಮೂಲಭೂತವಾಗಿ ಏನೆಲ್ಲಾ ಇರಬೇಕು ಎಂದು ಇದೀಗ ನಿಮಗೆ ಸಲಹೆ ನೀಡುತ್ತಿದ್ದೇವೆ ಮುಂದಕ್ಕೆ ಓದಿ.

ಜ್ಞಾನ

ಜ್ಞಾನ

ಹೌದು ಯಾವುದೇ ಬ್ಯುಸಿನೆಸ್ ಗೆ ಕೈ ಹಾಕುವ ಮುನ್ನ ಅದರ ಬಗ್ಗೆ ನಿಮ್ಮ ಬಳಿ ಹೆಚ್ಚಿನ ಜ್ಞಾನ ಇರಬೇಕು. ಅತ್ಯುತ್ತಮ ಐಡಿಯಾಗಳು ನಿಮ್ಮ ಬಳಿ ಇರಬೇಕು. ಬ್ಯುಸಿನೆಸ್ ಪ್ರಾರಂಭ ಮಾಡುವ ಮುನ್ನ ನಿಮಗೆ ನೀವೇ ಪ್ರಶ್ನಿಸಿ, ಈ ಐಡಿಯಾ ವರ್ಕೌಟ್ ಆಗಬಹುದೇ ಎಂದು.ಒಂದು ವೇಳೆ ನೀವು ತಯಾರಿಲ್ಲ ಎಂದಾದ್ರೆ ಕೂಡಲೇ ಬ್ಯುಸಿನೆಸ್ ಪ್ರಾರಂಭಿಸಬೇಡಿ ಬದಲಿಗೆ ಸ್ವಲ್ಪ ಟೈಂ ತೆಗೆದುಕೊಳ್ಳಿ. ಸರಿಯಾಗಿ ಪ್ಲ್ಯಾನ್ ಮಾಡಿದ ಬಳಿಕವೇ ಉದ್ಯಮಕ್ಕೆ ಕೈ ಹಾಕುವುದು ಬೆಸ್ಟ್. ಯಾವ ಬ್ಯುಸಿನೆಸ್ ಪ್ರಾರಂಭಿಸಬೇಕೆಂದು ಯೋಚಿಸುತ್ತಿರೋ ಆ ಬ್ಯುಸಿನೆಸ್ ಬಗ್ಗೆ ಮೊದಲಿಗೆ ಚೆನ್ನಾಗಿ ತಿಳಿದುಕೊಳ್ಳಿ.

ಯೋಜನೆ

ಯೋಜನೆ

ನೀವು ಪ್ರಾರಂಭಿಸುವ ಬ್ಯುಸಿನೆಸ್ ಗೆ ಮತ್ತೋರ್ವ ಪಾಟ್ನರ್ ಇದ್ದಾರೆ ಎಂದಾದ್ರೆ ನೀವು ಬ್ಯುಸಿನೆಸ್ ಗೆ ಸಂಬಂಧಪಟ್ಟಂತೆ ಪ್ರತಿಯೊಂದು ಸಿಂಗಲ್ ವಿಚಾರವನ್ನ ಕೂಡಾ ಪ್ಲ್ಯಾನ್ ಮಾಡಿ ಮುಂದಿನ ಹೆಜ್ಜೆ ಇಡುವುದು ಬೆಸ್ಟ್. ಉದಾಹರಣೆಗೆ ಮೂಲಗಳು, ನಿಧಿ, ಸ್ಥಳ, ಖರ್ಚುವೆಚ್ಚ, ನೇಮಕಾತಿ ಹಾಗೂ ಹುದ್ದೆಗಳ ರೋಲ್ ಸೇರಿದಂತೆ ಪ್ರತಿಯೊಂದು ವಿಚಾರದ ಕುರಿತು ಚರ್ಚಿಸಿ ಯೋಜನೆ ಹಾಕಿಕೊಳ್ಳುವುದು ಬೆಸ್ಟ್.

ಗುರಿ
 

ಗುರಿ

ನಿಮ್ಮ ಗುರಿ ಬಗ್ಗೆ ನಿರ್ಧಿಷ್ಟತೆ ಇರಲಿ. ಒಮ್ಮೆ ಬ್ಯುಸಿನೆಸ್ ಪ್ರಾರಂಭಿಸಿದ್ರೆ ಅದು ಮೇಲೇಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದ್ರೆ ಅದು ದೊಡ್ಡ ವಿಚಾರವೇನಲ್ಲ. ಬದಲಿಗೆ ನೀವು ನಿಮ್ಮ ಗುರಿ ಬಗ್ಗೆ ನಿರ್ಧಿಷ್ಟತೆ ಹೊಂದಿರಿ. ಅದಕ್ಕಾಗಿ ಟಾರ್ಗೇಟ್ ರೂಪಿಸಿಕೊಳ್ಳಿ. ನೀವು ಇದೀಗ ಯಾವ ಸ್ಟೇಜ್ ನಲ್ಲಿ ಬ್ಯುಸಿನೆಸ್ ಪ್ರಾರಂಭಿಸಿದ್ದೀರಾ ಹಾಗೂ ಮುಂದಿನ ವರ್ಷಗಳಲ್ಲಿ ಎಷ್ಟರ ಮಟ್ಟಿಗೆ ಈ ಬ್ಯುಸಿನೆಸ್ ಬೆಳೆಯಬೇಕು ಎಂದು ಈಗಲೇ ಗುರಿಯನ್ನ ಇಟ್ಟುಕೊಂಡು ಕೆಲಸ ಪ್ರಾರಂಭಿಸಿದು ಬೆಟರ್.

ಹೆಚ್ಚಿನ ಪರಿಶ್ರಮ ವ್ಯಯಿಸಿ

ಹೆಚ್ಚಿನ ಪರಿಶ್ರಮ ವ್ಯಯಿಸಿ

ಹೌದು, ನಿಮ್ಮ ಬಳಿ ಐಡಿಯಾ ಇದೆ ಎಂದಾದ್ರೆ ಅಷ್ಟೇ ಸಾಲದು. ಯಾವಾಗ ನಿಮ್ಮ ಗಮನ ಪೂರ್ತಿ ನಿಮ್ಮ ಬ್ಯುಸಿನೆಸ್ ಕಡೆ ಮಾತ್ರ ಇಡುತ್ತೀರೋ ಆಗ ಮಾತ್ರ ನಿಮ್ಮ ಬ್ಯುಸಿನೆಸ್ ಸಕ್ಸಸ್ ಆಗಲು ಸಾಧ್ಯ. ಟ್ರಂಡಿಂಗ್ ಏನು ಹಾಗೂ ಕಷ್ಟಮರ್ ಗೆ ಏನು ಅಗತ್ಯವಿದೆ ಎಂಬ ವಿಚಾರದ ಮೇಲೆ ಮೊದಲು ಟಾರ್ಗೇಟ್ ರೂಪಿಸಿಕೊಳ್ಳಿ. ನಿಮಗೆ ಏನು ಬೇಕೋ ಅದನ್ನ ಮಾರಾಟ ಮಾಡುವ ಬದಲು ಕಸ್ಟಮರ್ ಗೆ ನಿಮ್ಮಿಂದ ಏನು ಬೇಕೋ ಅದನ್ನ ಮೊದಲು ತಿಳಿದುಕೊಂಡು ಉದ್ಯಮಕ್ಕೆ ಕೈ ಹಾಕುವುದು ಬೆಸ್ಟ್.

<strong>Most Read: ಆಫೀಸ್‌ನಲ್ಲಿ ಉಂಟಾಗುವ ಮುಜುಗರ ಸನ್ನಿವೇಶವನ್ನ ಹೇಗೆ ಹ್ಯಾಂಡಲ್ ಮಾಡಿದ್ರೆ ಚೆನ್ನ!</strong>Most Read: ಆಫೀಸ್‌ನಲ್ಲಿ ಉಂಟಾಗುವ ಮುಜುಗರ ಸನ್ನಿವೇಶವನ್ನ ಹೇಗೆ ಹ್ಯಾಂಡಲ್ ಮಾಡಿದ್ರೆ ಚೆನ್ನ!

For Quick Alerts
ALLOW NOTIFICATIONS  
For Daily Alerts

English summary
Need these things to start successful business. First Thing is idea. Yes, If you had a mindblowing idea and you wish to go ahead with it. small businesses need a smart plan and go-to-do-with strategies.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X