ಹಾಸ್ಟೆಲ್ ಲೈಫ್ ನಲ್ಲಿ ಮರೆಯಲು ಸಾಧ್ಯವಾಗದೇ ಇರುವ ಸಂಗತಿ ... ಗುಡ್ ಮೆಮೋರಿಸ್

Posted By:

ಹಾಸ್ಟೆಲ್ ಲೈಫ್ ಎಂಬುವುದು ಜೀವನದ ಕೊನೆಯ ದಿನಗಳವರೆಗೆ ನೆನಪಿಟ್ಟುಕೊಳ್ಳುವಂತಹ ಅನುಭವ. ಹಾಸ್ಟೆಲ್ ಅಲ್ಲಿ ಇದ್ದವರು ಈ ಅನುಭವವನ್ನ ಯಾವಾಗಲೂ ಮಿಸ್ ಮಾಡಿಕೊಳ್ಳುತ್ತಾರೆ. ಮನೆಯಿಂದ ದೂರವಿದ್ದರೂ ಸ್ನೇಹಿತರೇ ಅವರ ಬಂಧು ಬಳಗ ಎಲ್ಲಾ ಆಗಿರುತ್ತಾರೆ. ನೀವು ಕೂಡಾ ಹಾಸ್ಟೆಲ್ ಲೈಫ್ ಅನುಭವಿಸಿದ್ರೆ ಖಂಡಿತಾ ಇದನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತೀರಾ.

ಪ್ರತ್ಯೇಕ ಕಿಚನ್ ಇರುತ್ತದೆ:

ಹಾಸ್ಟೆಲ್ ಫುಡ್ ಅಷ್ಟೊಂದು ಚೆನ್ನಾಗಿರುವುದಿಲ್ಲ. ನೀವು ಯಾವ ದೇಶ, ಯಾವ ಊರು ಯಾವ ರಾಜ್ಯ ಎಂಬುವುದು ಇಲ್ಲಿ ಇಂಪೋರ್ಟೆಂಟ್ ಅಲ್ಲ. ಪ್ರತಿಯೊಬ್ಬರಿಗೂ ತಮ್ಮ ಹಾಸ್ಟೆಲ್ ಫುಡ್ ಬಗ್ಗೆ ಯಾವತ್ತೂ ಒಳ್ಳೆ ಅಭಿಪ್ರಾಯ ಇರುವುದಿಲ್ಲ. ಫುಡ್ ಚೆನ್ನಾಗಿಲ್ಲ ಎಂದು ಉಪವಾಸ ಕುಳಿತುಕೊಳ್ಳಲು ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ರೂಂನಲ್ಲೇ ಚಿಕ್ಕ ಅಡುಗೆ ಕೋಣೆ ನಿರ್ಮಿಸಿಕೊಂಡಿರುತ್ತಾರೆ. ತಮಗೆ ಬೇಕಾದ ಸಣ್ಣಪುಟ್ಟ ನೂಡಲ್ಸ್, ಬ್ರೆಡ್ ರೋಸ್ಟ್, ಎಗ್ ಆಮ್ಲೇಟ್ ಮುಂತಾದ ತಿನಿಸುಗಳನ್ನ ರೂಂನಲ್ಲೇ ಸ್ವತಃ ಮಾಡಿಕೊಳ್ಳುತ್ತಾರೆ

ಕದ್ದುಮುಚ್ಚಿ ತಿನ್ನುವುದು:

ನಿಮಗೆ ಹಸಿವಾದಾಗ ಅಡುಗೆ ಮಾಡಿಕೊಡಲು ಹಾಸ್ಟೆಲ್ ನಲ್ಲಿ ನಿಮ್ಮ ಅಮ್ಮ ಇರಲ್ಲ ಹಾಗೆಯೇ ಆರ್ಡರ್ ಮಾಡಿದ್ರೆ ತಂದು ಕೊಡಲು ಯಾವ ಡೆಲಿವರಿ ಬಾಯ್ ಕೂಡಾ ಇರಲ್ಲ. ಇಲ್ಲಿರುವ ಒಂದೇ ಉಪಾಯ ಅಂದ್ರೆ ನೀವು ಹಾಸ್ಟೆಲ್ ನಿಂದ ಹೊರಗೆ ಹೋಗಿ ಏನಾದ್ರೂ ಫುಡ್ ಪಾರ್ಸೆಲ್ ಮಾಡಿ ತರುವುದು. ಸ್ನೇಹಿತರ ಜತೆ ನೈಟ್ ಸಿನಿಮಾ ಶೋಗೆ ಹೋಗುವದು.ಹಾಸ್ಟೆಲ್ ನಲ್ಲಿ ಟೈಂ ಸ್ಟ್ರಿಕ್ಟ್ ಆಗಿ ಫಾಲೋ ಮಾಡುತ್ತಾರೆ. ಟೈಂ ಮುಗಿದ ಬಳಿಕ ನೀವು ಹಾಸ್ಟೇಲ್ ಬಿಟ್ಟು ಹೋಗುವಂತಿಲ್ಲ. ಇಂತಹ ಟೈಂನಲ್ಲಿ ನೀವು ಕದ್ದು ಮುಚ್ಚಿ ಹಾಸ್ಟೆಲ್ ನಿಂದ ಹೊರಗೆ ಹೋಗಿ ಎಂಜಾಯ್ ಮಾಡಿರುತ್ತೀರಿ

ತುಂಟಾಟದ ಆಟಗಳನ್ನ ಆಡುತ್ತೀರಿ:

ನಿವು ಬರೀ ನಿಮ್ಮ ಸ್ನೇಹಿತರ ಜತೆ ಇರುವುದೆಂದ್ರೆ ನೀವು ತುಂಟಾಟದ ಆಟಗಳನ್ನ ಹೆಚ್ಚಾಗಿ ಆಡುರುತ್ತೀರ. ನಿಮಗೆ ಎಂಟರ್‌ಟೈನ್ ಮೆಂಟ್ ಮಾಡಲು ತುಂಬಾ ಸ್ನೇಹಿತರು ಇರುತ್ತಾರೆ. ಟ್ರುಥ್ ಆಂಡ್ ಡೇರ್ ಅಂತಹ ಆಟಗಳನ್ನ ಹೆಚ್ಚಾಗಿ ಆಡಿರುತ್ತೀರಿ

ಖಾಸಾಗಿತನ ಮರೆತಿರುತ್ತೀರಿ:

ಮನೆಯಲ್ಲಿದ್ರೆ ನೀವು ಪ್ರತ್ಯೇಕ ಕೊಠಡಿಯಲ್ಲಿ ಇರುತ್ತೀರಿ. ಆದ್ರೆ ಅದೇ ಹಾಸ್ಟೆಲ್ ನಲ್ಲಿ ನೀವು ನಿಮ್ಮ ಫ್ರೆಂಡ್ಸ್ ಜತೆ ರೂಂ ಶೇರ್ ಮಾಡಿಕೊಳ್ಳಬೇಕಾಗುತ್ತದೆ, ಹಾಗಾಗಿ ಆ ಸಮಯದಲ್ಲಿ ನೀವು ಪರ್ಸನಲ್ ಎಂಬುವುದೇ ಮರೆಯುತ್ತೀರಿ. ಎಲ್ಲರ ಮುಂದೆಯೇ ಆರಾಮವಾಗಿ ಬಟ್ಟೆ ಬದಲಿಸುತ್ತೀರಾ. ಅರೆ ಬರೆ ಉಡುಗೆಯಲ್ಲಿ ತಿರುಗಾಡಿಕೊಂಡು ಇರುತ್ತೀರಾ

ಜತೆಯಾಗಿ ಟಿವಿ:

ಹಾಸ್ಟೆಲ್ ನಲ್ಲಿ ಇರಬೇಕಾದ್ರೆ ನಿಮ್ಮ ಎಂಟರ್‌ಟೈನ್ ಮೆಂಟ್ ಅಂದ್ರೆ ಲ್ಯಾಪ್‌ಟಾಪ್ ಆಗಿರುತ್ತದೆ. ಆದ್ರೆ ಲ್ಯಾಪ್‌ಟಾಪ್ ಬಿಟ್ಟರೆ ಮತ್ತೆ ಇರುವುದು ಟಿವಿ. ನೀವು ಇತರ ಸ್ನೇಹಿತರ ಜತೆಗೂಡಿ ಟಿವಿ ನೋಡುತ್ತೀರಿ. ಮ್ಯಾಚ್ ಇಲ್ಲ ಯಾವುದಾದ್ರೂ ಸಿನಿಮಾ ಇದ್ರೆ ಜಾಲಿಯಾಗಿ ಜತೆಯಾಗಿ ಕುಳಿತು ಮಜಾ ಮಾಡುತ್ತಾ ಸಿನಿಮಾ ನೋಡುತ್ತೀರಿ.

English summary
5 things All are did in their hostel life. Staying away from home its verry difficult, but also hostel life is so beautyful.once we experienced means we will never forget our experience.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia