ಆಫೀಸ್‌ನಲ್ಲಿ ಕಂಟಿನ್ಯೂ ವರ್ಕ್... ವರ್ಕ್ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಲು ಸುಲಭ ಟಿಪ್ಸ್!

ಪ್ರತಿಷ್ಟಿತ ಕಂಪನಿಗಳಲ್ಲಿ, ಉನ್ನತ ಹುದ್ದೆಗಳಲ್ಲಿ ಇರುವವರು ಪ್ರತಿ ದಿನ ೧೨ ರಿಂದ ೧೪ ಗಂಟೆ ಕಂಟಿನ್ಯೂ ಆಗಿ ದುಡಿಯುತ್ತಾರೆ

ಪ್ರತಿಷ್ಟಿತ ಕಂಪನಿಗಳಲ್ಲಿ, ಉನ್ನತ ಹುದ್ದೆಗಳಲ್ಲಿ ಇರುವವರು ಪ್ರತಿ ದಿನ 12 ರಿಂದ 14 ಗಂಟೆ ಕಂಟಿನ್ಯೂ ಆಗಿ ದುಡಿಯುತ್ತಾರೆ. ಇದರಿಂದ ಅವರ ಎಕ್ಸ್‌ಪೀರಿಯೆನ್ಸ್ ವ್ಯಾಲ್ಯೂ ಕೂಡಾ ಹೆಚ್ಚಾಗುವುದು. ಆದ್ರೆ ಹಲವಾರು ಕಾರಣದಿಂದ ಕೆಲವೊಮ್ಮೆ ಕಂಟಿನ್ಯೂ ಆಗಿ ಕೆಲಸ ಮಾಡುವುದು ಅವರ ಚಾಯ್ಸ್ ಆಗಿರದೇ, ಅಗತ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ವರ್ಕ್ ಲೋಡ್ ನ್ನ ಹೇಗೆ ನಿಭಾಯಿಸುವುದು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ.

ಆಫೀಸ್‌ನಲ್ಲಿ ಕಂಟಿನ್ಯೂ ವರ್ಕ್... ವರ್ಕ್ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಲು ಸುಲಭ ಟಿಪ್ಸ್!

ತುಂಬಾ ಸಮಯದವರೆಗೆ ಕಂಟಿನ್ಯೂ ಆಗಿ ಕೆಲಸ ಮಾಡುವ ಅನಿವಾರ್ಯ ಎದುರಾದರೆ ಈ ಟಿಪ್ಸ್ ಫಾಲೋ ಮಾಡುವುದರ ಮೂಲಕ ನಿಮ್ಮ ವರ್ಕ್ ಲೋಡ್ ಕಡಿಮೆ ಮಾಡಿಕೊಳ್ಳಬಹುದು. ಆ ಟಿಪ್ಸ್ ಯಾವುವು ಎಂಬುವುದಕ್ಕೆ ಮುಂದಕ್ಕೆ ಓದಿ

ಪ್ರತೀ ದಿನ ಸಣ್ಣ ಬ್ರೇಕ್ ತೆಗೆದುಕೊಳ್ಳಿ:

ನೀವು ಎಷ್ಟು ಇಂಪೋರ್ಟೆಂಟ್ ಟಾಸ್ಕ್ ಮಾಡುತ್ತಿದ್ದೀರಾ ಎಂಬುವುದು ಪ್ರಮುಖವಲ್ಲ ಬದಲಿಗೆ ಪ್ರತೀ 1 ಅಥವಾ 2 ಗಂಟೆ ಮಧ್ಯೆ ಬ್ರೇಕ್ ತೆಗೆದುಕೊಳ್ಳುವುದು ಉತ್ತಮ. ಚೇರ್ ಇಂದ ಎದ್ದೇಳಿ, ಒಂದು ಗ್ಲಾಸ್ ನೀರು ಕುಡಿಯಿರಿ, ಚಿಕ್ಕದಾದ ವಾಕ್ ಮಾಡಿ, ಕಿಟಕಿ ಹೊರಗಡೆಯ ವ್ಯೂ ಒಂದು ಬಾರಿ ನೋಡಿ, ಹಾಗೂ ಜತೆಗೆ ಒಂದು ಕಪ್ ಕಾಫಿ ಸವಿಯಿರಿ. ಒಂದು ಬಾರಿ ಈ ಅಭ್ಯಾಸ ನೀವು ಫಾಲೋ ಮಾಡಿ ನೋಡಿ. ನಿಮ್ಮ ಮೂಡ್ ಫ್ರೆಶ್ ಆಗುವುದರಲ್ಲಿ ಯಾವುದೇ ಡೌಟ್ ಇರುವುದಿಲ್ಲ.

ವರ್ಕಿಂಗ್ ಟೇಬಲ್ ಮೇಲೆ ಏನೂ ತಿನ್ನಬೇಡಿ:

ಕಂಟಿನ್ಯೂಸ್ ಆಗಿ 12 ರಿಂದ 14 ಗಂಟೆ ಕೆಲಸವಿದ್ದರೆ ನೀವು ಕುಳಿತ ಜಾಗದಲ್ಲೇ ಲಂಚ್ , ಡಿನ್ನರ್ ಹಾಗೂ ಸ್ನಾಕ್ಸ್ ಎಲ್ಲವನ್ನ ಮಾಡುತ್ತೀರಿ. ಆದರೆ ಅದು ತಪ್ಪು. ಕಂಟಿನ್ಯೂಸ್ ವರ್ಕ್ ಮಾಡುವಾಗ, ಕ್ವಾಲಿಟಿ ಈಟಿಂಗ್ ಟೈಂ ಕೂಡಾ ನಿಗಧಿ ಪಡಿಸಿಕೊಳ್ಳಿ. ಹೊರಗಡೆ ಹೋಗಿ ಫ್ರೀ ಮೈಂಡ್‌ನಿಂದ ಆಹಾರ ಸೇವಿಸಿದ್ರೆ ನಿಮ್ಮ ಬಾಡಿಗೂ ಹಾಗೂ ಮೈಂಡ್‌ಗೂ ರಿಲಾಕ್ಸ್ ಆಗುವುದು. ಡೆಸ್ಕ್ ನಲ್ಲೇ ಆತುರ ಆತುರವಾಗಿ ತಿಂದರೆ ಇನ್ನಷ್ಟು ಸ್ಟ್ರೆಸ್ ಹೆಚ್ಚಾಗುವುದು.

ವರ್ಕೌಟ್ ಮಾಡಿ:

ವರ್ಕೌಟ್ ನಿಂದ ಮೈಂಡ್ ಹಾಗೂ ಬಾಡಿ ಹೆಚ್ಚು ಪ್ರೊಡಕ್ಟಿವ್ ಹಾಗೂ ಎನರ್ಜಿಟಿಕ್ ಆಗುವುದು. ಯಾವಾಗ ಕಂಟಿನ್ಯೂಸ್ ವರ್ಕಿಂಗ್ ಶೆಡ್ಯುಲ್ ಇರುತ್ತೋ ಆವಾಗ ವರ್ಕೌಟ್ ಮಾಡುವುದು ಬೆಸ್ಟ್. ವರ್ಕ್ ಮುಗಿದ ಬಳಿಕ 15 ರಿಂದ 30 ನಿಮಿಷ ಸೈಕಲಿಂಗ್, ಸ್ವಿಮ್ಮಿಂಗ್, ಟೆನ್ನೀಸ್ ಸೇರಿದಂತೆ ಏನಾದ್ರೂ ವರ್ಕೌಟ್ ಮಾಡಿ. 15 ನಿಮಿಷ ನೀವು ಬೆವರು ಇಳಿಸುವುದರಿಂದ ಕಂಪ್ಲೀಟ್ ರಿಲಾಕ್ಸ್ ಆಗುತ್ತೀರಿ. ಇದರಿಂದ ನೆಕ್ಸ್ಟ್ ದಿನ ನೀವು ಲವಲವಿಕೆಯಿಂದ ಆಫೀಸ್‌ಗೆ ತೆರಳುವಿರಿ.

ಬೆಳಗ್ಗೆ ಬೇಗನೇ ಎದ್ದೇಳಿ ಹಾಗೆಯೇ ರಾತ್ರಿ ಬೇಗನೇ ಮಲಗಿ:

ನೀವು ಎಷ್ಟು ಹೊತ್ತು ಕೆಲಸ ಮಾಡುತ್ತಿರಾ ಎಂಬುವುದು ಇಂಪೋರ್ಟೆಂಟ್ ಅಲ್ಲ. ಬದಲಿಗೆ ಬೇಗ ಮಲಗಿ ಬೇಗೆ ಎದ್ದೇಳುವುದು ಇಂಪೋರ್ಟೆಂಟ್. ಯಾಕೆ ಅಂತ ಕಾರಣ ಕೇಳಿ? ಮುಂಜಾನೆಯ ಸಮಯ ಪ್ರೊಡಕ್ಟಿವ್ ಸಮಯ. ಈ ಸಮಯವನ್ನ ನೀವು ಚೆನ್ನಾಗಿ ಬಳಸಿಕೊಳ್ಳಿಲ್ಲ ಎಂದಾದ್ರೆ, ಕೆಲಸದಲ್ಲಿ ಣಿವು ಸ್ಟಕ್ ಆಗುವ ಸಂಭವವಿರುತ್ತದೆ. ಇನ್ನೂ ಸಂಜೆ ವೇಳೆ ಸ್ನೇಹಿತರ ಜತೆ ಕಾಲಕಳೆಯುದು ರಿಲಾಕ್ಸ್ ಆಗಿ ಬೇಗ ಮಲಗಿ. ಇದರಿಂದ ನಿಮ್ಮ ನೆಕ್ಸ್ಟ್ ಡೇ ಮತ್ತಷ್ಟೂ ಫ್ರೆಶ್ ಆಗಿರುತ್ತದೆ.

ವಿಭಿನ್ನ ವಾತಾವರಣದಲ್ಲಿ ಕೆಲಸ ಮಾಡಿ:

12 ರಿಂದ 14 ಗಂಟೆಗಳ ಕಾಲ ಕಂಟಿನ್ಯೂಸ್ ಆಗಿ ನೀವು ಕೆಲಸ ಮಾಡಿದ್ರೆ, ನಿಮಗೆ ಸ್ಟ್ರೆಸ್ ಜತೆಗೆ ಆ ಕೆಲಸ ಬೋರಿಂಗ್ ಎಂದು ಕೂಡಾ ಅನಿಸಬಹುದು. ಹಾಗಾಗಿ ವರ್ಕ್ ಮಧ್ಯೆ ಆಫೀಸ್ ಕಾಫಿ ಶಾಪ್, ಕ್ಯಾಂಟೀನ್, ಆಫೀಸ್ ಪಾರ್ಕ್ ಹೀಗೆ ವಿಭಿನ್ನ ಪರಿಸರದಲ್ಲಿ ನಿಮ್ಮ ಲ್ಯಾಪ್‌ಟಾಪ್ ಹಿಡಿದುಕೊಂಡು ಕೆಲಸ ಮಾಡಿ. ಇದರಿಂದ ನಿಮ್ಮ ಮೈಂಡ್‌ ಗೂ ರಿಲಾಕ್ಸ್ ಸಿಗುವುದು. ಹಾಗೂ ಮತ್ತಷ್ಟು ಕ್ರಿಯೇಟಿವಿಟಿ ಆಗಿ ನೀವು ಕೆಲಸ ಮಾಡಬಹುದು.

ಆಫೀಸ್ ವರ್ಕ್ ಹಾಗೂ ಪರ್ಸನಲ್ ವರ್ಕ್ ಬೇರೆ ಬೇರೆನೆ ಇದ್ದರೆ ಬೆಸ್ಟ್:

ನೀವು ಕಂಟಿನ್ಯೂಸ್ ಆಗಿ 12 ರಿಂದ 14 ಗಂಟೆ ದುಡಿಯುತ್ತಿದ್ದರೆ, ಈ ಟೈಂ ಮಧ್ಯೆ ಶಾಪಿಂಗ್, ತರಕಾರಿ ಖರೀದಿ, ಬ್ಯಾಂಕ್ ಕೆಲಸ ಸೇರಿದಂತೆ ಮನೆಯ ಯಾವ ಕೆಲಸವೂ ಬೇಡ. ಆಫೀಸ್ ವರ್ಕ್ ಮಾಡುವಾಗ ನಿಮ್ಮ ದೈನಂದಿನ ವರ್ಕ್ ಲಿಸ್ಟ್ ಪ್ರಕಾರ ಪರ್ಸನಲ್ ವರ್ಕ್ ಎಲ್ಲವನ್ನ ಕಟ್ ಮಾಡಿಕೊಳ್ಳಿ. ನಿಮ್ಮ ಮನೆಯ ಕೆಲಸವನ್ನ ವೀಕೆಂಡ್ ಗೆ ಇಟ್ಟು ಕೊಳ್ಳುವುದು ಬೆಸ್ಟ್.

For Quick Alerts
ALLOW NOTIFICATIONS  
For Daily Alerts

English summary
For those who are entangled in the web of long working hours, out of choice or as a stipulation, here are a some workable tips to help you manage the 1 - 14 hours work day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X