SBI Mains Preparation Tips: ಎಸ್‌ಬಿಐ ಪ್ರಮುಖ ಪರೀಕ್ಷೆಗೆ ತಯಾರಿ ಹೇಗೆ?

By Kavya

ಬಹು ನಿರೀಕ್ಷೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಕ್ಲರ್ಕ್ ಹುದ್ದೆಗಳ ಪ್ರಿಲಿಮಿನರಿ ಪರೀಕ್ಷೆಯ ಫಲಿತಾಂಶ ನಿನ್ನೆ ಪ್ರಕಟಗೊಂಡಿದೆ. ಒಟ್ಟು 8000 ಹುದ್ದೆಗಳ ನೇಮಕಾತಿಗಾಗಿ ಪ್ರಿಲಿಮಿನರಿ ಪರೀಕ್ಷೆಯನ್ನು ನಡೆಸಲಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರಮುಖ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ.

ಎಸ್‌ಬಿಐ ಪ್ರಮುಖ ಪರೀಕ್ಷೆಗೆ ತಯಾರಿ ಹೇಗೆ?

ಎಸ್‌ಬಿಐ ಕ್ಲರ್ಕ್ ಹುದ್ದೆಗಳ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಇದೀಗ ರೆಕ್ಕೆ ಕಟ್ಟಿ ಹಾರಾಡುತ್ತಿದ್ದಾರೆ. ಅಷ್ಟೇ ಅಲ್ಲ ಎಸ್‌ಬಿಐ ಪ್ರಮುಖ ಪರೀಕ್ಷೆಯತ್ತ ಇದೀಗ ಅವರು ಗಮನಕೊಡುತ್ತಿದ್ದಾರೆ. ಇನ್ನು ಪ್ರಿಲಿಮಿನರಿ ಹಾಗೂ ಪ್ರಮುಖ ಪರೀಕ್ಷೆಯ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ.

<strong>ಎಸ್‌ಬಿಐ ಪ್ರೊಬಷನರಿ ಆಫೀಸರ್ ಪ್ರೆಲಿಮನರಿ ಪರೀಕ್ಷೆ ರಿಸಲ್ಟ್ ಔಟ್... ರಿಸಲ್ಟ್ ಚೆಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ</strong>ಎಸ್‌ಬಿಐ ಪ್ರೊಬಷನರಿ ಆಫೀಸರ್ ಪ್ರೆಲಿಮನರಿ ಪರೀಕ್ಷೆ ರಿಸಲ್ಟ್ ಔಟ್... ರಿಸಲ್ಟ್ ಚೆಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಸ್‌ಬಿಐ ಯು ಪ್ರಮುಖ ಪರೀಕ್ಷೆಯನ್ನ ಅಕ್ಟೋಬರ್ 31ರಂದು ಆಯೋಜಿಸಿದೆ. ಈ ಪರೀಕ್ಷೆಯನ್ನ ಹೇಗೆ ಪಾಸು ಮಾಡುವುದು ಎಂದು ನಿಮಗೆ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ.

ಪ್ರೆಲಿಮಿನರಿ ಹಾಗೂ ಪ್ರಮುಖ ಪರೀಕ್ಷೆಯ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ:

ವಿದ್ಯಾರ್ಥಿಗಳು ಎಸ್‌ಬಿಐ ಪ್ರೆಲಿಮಿನರಿ ಹಾಗೂ ಪ್ರಮುಖ ಪರೀಕ್ಷೆಗೆ ಒಂದೇ ರೀತಿಯ ಅಭ್ಯಾಸದ ವಿಧಾನವನ್ನ ಅನುಸರಿಸುತ್ತಾರೆ. ಪ್ರಮುಖ ಪರೀಕ್ಷೆಯ ಪತ್ರಿಕೆಯು ವಿವರಣಾತ್ಮಕ ಉತ್ತರಗಳ ಪ್ರಶ್ನೆಗಳನ್ನ ಒಳಗೊಂಡಿರುತ್ತದೆ. ಸಾಮಾನ್ಯ ಜ್ಞಾನ/ ಎಕಾನಾಮಿ/ ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಇಲ್ಲಿ ಪ್ರಶ್ನೆಗಳನ್ನ ಕೇಳಲಾಗಿರುತ್ತದೆ.

<strong>ಕರ್ನಾಟಕ ಹೈ ಕೋರ್ಟ್ ನೇಮಕಾತಿ... 834 ಹುದ್ದೆಗಳಿಗೆ ಅರ್ಜಿ ಆಹ್ವಾನ</strong>ಕರ್ನಾಟಕ ಹೈ ಕೋರ್ಟ್ ನೇಮಕಾತಿ... 834 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರೆಲಿಮಿನರಿ ಪರೀಕ್ಷೆಗೆ ಹೋಲಿಸಿದ್ರೆ ಪ್ರಮುಖ ಪರೀಕ್ಷೆಯ ಪ್ರಶ್ನಾಪತ್ರಿಕೆ ತುಂಬಾ ವ್ಯತ್ಯಾಸ ಒಳಗೊಂಡಿದೆ. ಅಷ್ಟೇ ಅಲ್ಲ ಇಲ್ಲಿ ಪರೀಕ್ಷೆ ಲೆವೆಲ್ ಕೂಡಾ ತುಂಬಾ ಮೇಲ್ಮಟ್ಟದಲ್ಲಿ ಇರುತ್ತದೆ. ಆದ್ರೆ ಎರಡೂ ಪರೀಕ್ಷೆಯ ಸಿಲೇಬಸ್ ಹೆಚ್ಚು ಕಡಿಮೆ ಒಂದೇ ಥರಹ ಇರುತ್ತದೆ.

ತಯಾರಿ ಹೇಗೆ:

ಎಸ್‌ಬಿಯ ಪ್ರಮುಖ ಪರೀಕ್ಷೆಗೆ ಇದೀಗ ಕೇವಲ ಎರಡು ವಾರಗಳು ಮಾತ್ರ ಬಾಕಿ ಇವೆ. ಈಗಾಗಲೇ ಪ್ರೆಲಿಮರಿ ಪರೀಕ್ಷೆಗೆ ನೀವು ಸ್ಟಡಿ ಶೆಡ್ಯುಲ್ ತಯಾರು ಮಾಡಿಕೊಂಡಿರಬಹುದು ಆದ್ರೆ ಪ್ರಮುಖ ಪರೀಕ್ಷೆಗೆ ಅದೇ ಸ್ಟಡಿ ಶೆಡ್ಯುಲ್ ಫಾಲೋ ಮಾಡಬೇಡಿ ಬದಲಿಗೆ ಹೊಸ ಶೆಡ್ಯುಲ್ ರಚಿಸಿ. ಈ ಶೆಡ್ಯುಲ್ ವೀಕ್ ಹಾಗೂ ಸ್ಟ್ರಾಂಗ್ ಏರಿಯಾಗಳನ್ನ ಗಮನದಲ್ಲಿಟ್ಟುಕೊಂಡು ರಚಿಸಿ. ಬಾಕಿ ಉಳಿದಿರುವ ಈ ಎರಡು ವಾರದಲ್ಲಿ ಕಡಿಮೆ ಅಂದ್ರೂ 5 ಬಾರಿ ಮೌಖಿಕ ಪರೀಕ್ಷೆ ಮಾಡಿಕೊಳ್ಳಿ.

ಪ್ರೆಲಿಮಿನರಿ ಸ್ಟ್ರಾಟಜಿ ಅಪ್ಲೈ ಮಾಡಿ:

ಮೇಲೆ ಹೇಳಿದಂತೆ ಪ್ರೆಲಿಮಿನರಿ ಹಾಗೂ ಪ್ರಮುಖ ಪರೀಕ್ಷೆಯ ಸಿಲೇಬಸ್ ಒಂದೇ ರೀತಿಯದಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಪ್ರಮುಖ ಪರೀಕ್ಷೆಯಲ್ಲೂ ಇದೇ ಸ್ಟ್ರಾಟಜಿ ಬಳಸಬಹುದು. ಅಷ್ಟೇ ಅಲ್ಲ ಎಸ್‌ಬಿಐ ಪ್ರೆಲಿಮಿನರಿ ಪರೀಕ್ಷೆಯಲ್ಲಿ ಬಳಸಿರುವಂತಹ ಶಾರ್ಟ್ ಕಟ್ ರೂಟನ್ನ ಇಲ್ಲೂ ಟ್ರೈ ಮಾಡಬಹುದು.

ಸಾಮಾನ್ಯ ಜ್ಞಾನ/ ಎಕಾನಾಮಿ/ಬ್ಯಾಂಕಿಂಗ್ ವಿಷಯಗಳತ್ತ ಗಮನ:

<strong>ಯುಪಿಎಸ್ ಸಿ ನೇಮಕಾತಿ... ಇಂಜಿನೀಯರ್ ಮತ್ತು ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ</strong>ಯುಪಿಎಸ್ ಸಿ ನೇಮಕಾತಿ... ಇಂಜಿನೀಯರ್ ಮತ್ತು ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್‌ಬಿಐ ಪ್ರೆಲಿಮಿನರಿ ಪರೀಕ್ಷೆಯಲ್ಲಿ ಇಲ್ಲದ ಹೆಚ್ಚುವರಿ ಸಬ್‌ಜೆಕ್ಟ್ ಇದು. ಈ ಸೆಕ್ಷನ್ ನಿಂದ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಸ್ಕೋರ್ ಮಾಡಬಹುದು ಹಾಗೆಯೇ ಕಡಿಮೆ ಸಮಯದಲ್ಲಿ ಈ ಪರೀಕ್ಷೆ ಬರೆದು ಮುಗಿಸಬಹುದು. ಯಾಕೆಂದ್ರೆ ಪ್ರತೀ ಪ್ರಶ್ನೆಗೆ ಉತ್ತರಿಸಲು ಬೇಕಾಗಿರುವುದು ಬರೀ 30 ಸೆಕೆಂಡ್ ಅಷ್ಟೆ.

ವಿರಣಾತ್ಮಕ ಪತ್ರಿಕೆಗೆ ಹೆಚ್ಚಿನ ಸಮಯ:

ಹೌದು ಎಸ್‌ಬಿಐ ಪ್ರಮುಖ ಪರೀಕ್ಷೆ ಪತ್ರಿಕೆಯಲ್ಲಿ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಹೆಚ್ಚು ಅಂಕ ಗಳಿಸಬಹುದು. ನಿಮ್ಮ ಇಂಗ್ಲೀಷ್ ಜ್ಞಾನವನ್ನ ಇಲ್ಲಿ ಟೆಸ್ಟ್ ಮಾಡಲಾಗುವುದು. ಗ್ರಾಮರ್ ನತ್ತ ಹೆಚ್ಚು ಗಮನಕೊಡಿ.

<strong>ಕರ್ನಾಟಕ ಹೈ ಕೋರ್ಟ್ ನೇಮಕಾತಿ... 834 ಹುದ್ದೆಗಳಿಗೆ ಅರ್ಜಿ ಆಹ್ವಾನ</strong>ಕರ್ನಾಟಕ ಹೈ ಕೋರ್ಟ್ ನೇಮಕಾತಿ... 834 ಹುದ್ದೆಗಳಿಗೆ ಅರ್ಜಿ ಆಹ್ವಾನ

For Quick Alerts
ALLOW NOTIFICATIONS  
For Daily Alerts

English summary
State Bank of India (SBI) has ended the long wait for the clerk preliminary result . The preliminary result was released for the recruitment of 8,000 vacancies. Candidates who have appeared for the online preliminary examination can visit the official website to check their results.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X