ನಾಳೆ ಪರೀಕ್ಷೆ ಎಂದಾದ್ರೆ ಇಂದು ರಾತ್ರಿ ವಿದ್ಯಾರ್ಥಿಗಳು ತಪ್ಪದೇ ಫಾಲೋ ಮಾಡಬೇಕಾದ ಟಿಪ್ಸ್‌ಗಳಿವು

Written By: Nishmitha B

ನಾಳೆ ಪರೀಕ್ಷೆ ಎಂದಾದ್ರೆ ಇಂದು ರಾತ್ರಿ ವಿದ್ಯಾರ್ಥಿಗಳು ತಪ್ಪದೇ ಫಾಲೋ ಮಾಡಬೇಕಾದ ಟಿಪ್ಸ್‌ಗಳಿವು ಬೋರ್ಡ್ ಎಕ್ಸಾಮ್ಸ್ ನಮ್ಮ ಜೀವನದ ಪ್ರಮುಖ ಘಟ್ಟ ಎಂಥಲೇ ಹೇಳಬಹುದು. ನಮ್ಮ ಕೆರಿಯರ್ ಲೈಫ್ ನ್ನು ಈ ಘಟ್ಡ ನಿರ್ಧರಿಸುತ್ತದೆ. ಹಾಗಾಗಿ ಈ ಹಂತದಲ್ಲಿ ಎಲ್ಲೂ ಎಡವದೇ ದೃಢವಾಗಿರಬೇಕು. ಸ್ವಲ್ಪ ಜಾಗರೂಕರಾಗಿರಬೇಕು

10 ನೇ ತರಗತಿ ಎಕ್ಸಾಂ ಬಂತೆಂದ್ರೆ ಸಾಕು ಸ್ಟ್ರೆಸ್ ಅಷ್ಟೇ ಅಲ್ಲ ಇಡೀ ದಿನ ಟೆನ್ಶನ್ ನಿಂದಲೇ ತಲೆ ಹಾಳು ಮಾಡಿಕೊಳ್ಳುತ್ತಾರೆ ವಿದ್ಯಾರ್ಥಿಗಳು. ಒಂದು ತಿಂಗಳು ಮೊದಲಿನಿಂದಲೇ ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಾರೆ. ಅಲ್ಲದೇ ಕೊನೆಯ ಪರೀಕ್ಷೆ ವರೆಗೂ ಸ್ಟ್ರೆಸ್ ಮಾಡಿಕೊಂಡು ಮಾನಸಿಕವಾಗಿ ಬಳಲುತ್ತಾರೆ. ಹಾಗಾಗಿ ಬೋರ್ಡ್ ಎಕ್ಸಾಂ ಯಾರೆಲ್ಲಾ ಬರೆಯುತ್ತಿದ್ದೀರೋ ಇಲ್ಲಿದೆ ನಿಮಗೆ ಕೆಲವೊಂದು ಟಿಪ್ಸ್. ನಾಳೆ ಫರೀಕ್ಷೆ ಅಂದ್ರೆ ಈ ರಾತ್ರಿ ಮುಖ್ಯವಾಗಿ ಏನು ಮಾಡಬೇಕು ಏನು ಮಾಡಬಾರದು ಎಂಬುವುದು ನಾವು ನಿಮಗೆ ಹೇಳುತ್ತೇವೆ ನೋಡಿ

ಮೊದಲಿಗೆ ಬ್ಯಾಗ್‌ ರೆಡಿಮಾಡಿಟ್ಟುಕೊಳ್ಳಿ

ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಲು ಇದು ಬೆಸ್ಟ್ ವಿಧಾನ. ಬೆಳಗ್ಗೆ ಪರೀಕ್ಷೆ ಇದ್ದಾಗ ರಾತ್ರಿಯೇ ಬ್ಯಾಗ್ ಸಿದ್ಧತೆ ಮಾಡಿಕೊಳ್ಳಿ.ಅಷ್ಟೇ ಅಲ್ಲ ಪರೀಕ್ಷೆಗೆ ಬೇಕಾಗಿರುವಂತಹ ಎಲ್ಲಾ ಸಾಮಾಗ್ರಿಗಳು ಇವೆಯೇ ಎಂದು ಮತ್ತೊಮ್ಮೆ ಪರೀಕ್ಷಿಸಿಕೊಳ್ಳಿ. ಪರೀಕ್ಷೆ ಪ್ರವೇಶ ಪತ್ರ ನೆನಪಲ್ಲಿ ತೆಗೆದಿಟ್ಟುಕೊಳ್ಳಿ. ಇನ್ನು ಪೆನ್ಸಿಲ್‌ ಶಾರ್ಪ್ ಆಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಅಷ್ಟೇ ಅಲ್ಲ ಕಡಿಮೆ ಅಂದ್ರೂ 4 ಪೆನ್‌ ಇಟ್ಟುಕೊಂಡಿರಿ. ಅಷ್ಟೇ ಅಲ್ಲದೇ ಪರೀಕ್ಷೆಗೆ ಬೇಕಾಗಿರುವಂತಹ ಇನ್ನಿತ್ತರ ಅಗತ್ಯ ವಸ್ತುಗಳು ಇವೆಯೇ ಎಂದು ಮತ್ತೊಮ್ಮೆ ಚೆಕ್‌ ಮಾಡಿಕೊಳ್ಳಿ

ಕ್ಯಾಲ್ಕುಲೇಟರ್ ನ್ನು ಮತ್ತೊಮ್ಮೆ ಚೆಕ್‌ ಮಾಡಿಕೊಳ್ಳಿ

ಇನ್ನು ನಿಮಗೆ ಪರೀಕ್ಷೆಗೆ ಕ್ಯಾಲ್ಕುಲೇಟರ್ ತೆಗೆದುಕೊಂಡು ಹೋಗಲು ಅವಕಾಶ ಇದೆ ಎಂದಾದ್ರೆ ಕ್ಯಾಲ್ಕುಲೇಟರ್ ಒಮ್ಮೆ ಚೆಕ್‌ ಮಾಡಿಕೊಳ್ಳಿ. ಈ ಹಿಂದೆ ಕ್ಯಾಲ್ಕುಲೇಟರ್‌ ನಲ್ಲಿ ಅಭ್ಯಾಸ ಮಾಡಿರುತ್ತೀರಿ ಹಾಗಾಗಿ ಅದರಲ್ಲಿ ಏನೇ ಡಾಟಾ ಸೇವ್ ಆಗಿದ್ದರೂ ಅದನ್ನು ಡಿಲೀಟ್ ಮಾಡಿ. ಯಾಕೆಂದ್ರೆ ನೀವು ಡಿಲೀಟ್ ಮಾಡದೇ ಎಕ್ಸಾಂ ಹಾಲ್‌ಗೆ ತೆಗೆದುಕೊಂಡು ಹೋದಲ್ಲಿ ನೀವು ಸಿಕ್ಕಿಬಿದ್ದು ಪರೀಕ್ಷೆ ಬರೆಯದಂತಹ ಪರಿಸ್ಥಿತಿ ಉಂಟಾಗಬಹುದು. ಇದರಿಂದ ನಿಮ್ಮ ಶೈಕ್ಷಣಿಕ ಜೀವನವೇ ಹಾಳಾಗಬಹುದು

ಸ್ನೇಹಿತರ ಜತೆ ಚಿಟ್ ಚಾಟ್‌ ಬೇಡ

ನಾಳೆ ಪರೀಕ್ಷೆ ಅಂದ್ರೆ ಇಂದು ರಾತ್ರಿ ಸ್ನೇಹಿತರ ಜತೆ ಚಾಟಿಂಗ್ ಬೇಡ. ಯಾಕೆಂದ್ರೆ ಈ ಟೈಂನಲ್ಲಿ ನಿಮ್ಮ ಸ್ನೇಹಿತರು ಕೂಡಾ ಸ್ಟ್ರೆಸ್ ನಲ್ಲಿರುತ್ತಾರೆ. ಹಾಗಾಗಿ ನೀವು ಈ ವೇಳೆ ಅವರ ಜತೆ ಚಿಟ್ ಚಾಟ್ ಮಾಡಿದ್ರೆ ಇದರಿಂದ ನಿಮ್ಮ ಟೆನ್ಶನ್ ಮತ್ತೂ ಹೆಚ್ಚಾಗುತ್ತದೆ. ಆದ್ರೂ ನಿಮಗೆ ಯಾರ ಜತೆನಾದ್ರೂ ಮಾತನಾಡಬೇಕು ಅಂತಿದ್ರೆ ಬೆಸ್ಟ್ ಐಡಿಯಾ ನೀವು ನಿಮ್ಮ ಸಹೋದರಿ ಇಲ್ಲ ಸೀನಿಯರ್ ಜತೆ ಮಾತನಾಡಿ. ಇದರಿಂದ ನಿಮ್ಮ ಮನಸ್ಸು ಕೂಡಾ ಹಗುರವಾಗುವುದು

ಎಕ್ಸಾಂಗೆ ಹೋಗುವ ಟೈಂ ಹಾಗೂ ರಸ್ತೆ ಬಗ್ಗೆ ರಾತ್ರಿಯೇ ಪ್ಲ್ಯಾನ್ ಮಾಡಿ

ಬೋರ್ಡ್ ಎಕ್ಸಾಮ್ ಗಳು ನೀವು ಕಲಿತ ಶಾಲೆಯಲ್ಲಿಯೇ ಇರುವುದಿಲ್ಲ. ಅಂದ್ರೆ ಪರೀಕ್ಷೆ ಕೇಂದ್ರಗಳು ನಿಮ್ಮ ಶಾಲೆಯಾಗಿರದೇ ಬೇರೆ ಬೇರೆ ಶಾಲೆಯಾಗಿರುತ್ತದೆ. ಅವು ಹತ್ತಿರ ಇರಬಹುದು ಇಲ್ಲ ತುಂಬಾನೇ ದೂರ ಕೂಡಾ ಇರಬಹುದು. ಹಾಗಾಗಿ ಮಲಗೋ ಮುನ್ನ ಈ ಬಗ್ಗೆ ಮನೆಯ ಹಿರಿಯರಲ್ಲಿ ಚರ್ಚಿಸಿ, ಪರೀಕ್ಷೆಗೆ ಹೋಗಲು ಬೇಕಾದ ಎಲ್ಲಾ ವ್ಯವಸ್ಥೆ ಅಂದೇ ಮಾಡಿಕೊಳ್ಳಿ. ಇನ್ನು ಈ ಪ್ಲ್ಯಾನ್ ಮಾಡಿಕೊಳ್ಳುವಾಗ ಟ್ರಾಫಿಕ್‌ ಬಗ್ಗೆಯೂ ಗಮನವಿರಲಿ. ಎಕ್ಸಾಂ ಪ್ರಾರಂಭವಾಗುವುದಕ್ಕಿಂತ 1 ಗಂಟೆ ಮೊದಲೇ ಅಲ್ಲಿ ತಲುಪುವುದು ಉತ್ತಮ

ಬೇಗ ಮಲಗಿ

ಈ ಟಿಪ್ಸ್ ನಿಮಗೆ ಆಶ್ಚರ್ಯವಾಗಬಹುದು. ಹೌದು ಈ ಟಿಪ್ಸ್ ವರ್ಕೌಟ್ ಆಗುವಂತದ್ದೆ. ಎಕ್ಸಾಂ ಟೈಂನಲ್ಲಿ ಬೇಗ ಮಲಗಿದ್ರೆನೇ ಒಳ್ಳೆಯದು. ಇದರಿಂದ ಎಕ್ಸಾಂ ದಿನ ನಿಮ್ಮ ಬ್ರೈನ್ ನಾರ್ಮಲ್ ಆಗಿ ಕೆಲಸ ಮಾಡುತ್ತದೆ. ಕಡಿಮೆ ಅಂದ್ರೂ 8 ಗಂಟೆ ನಿದ್ರೆ ಮಾಡಿ.ಸುಮಧುರವಾದ ಸಂಗೀತ ಆಲಿಸಿ ನಿದ್ರಿಸಿ. ಇದರಿಂದ ನಿಮ್ಮ ನಿದ್ರೆ ಚೆನ್ನಾಗಿ ಆಗುವುದು ಮಾತ್ರವಲ್ಲದೇ ಮರುದಿನ ನೀವು ಫ್ರೆಶ್ ಫೀಲ್ ಆಗಿರುವುದು ಮಾತ್ರವಲ್ಲದೇ ಎನರ್ಜಿಟಿಕ್ ಕೂಡಾ ಆಗಿರುತ್ತೀರಿ. ಫ್ರೆಶ್ ಮೂಡ್ ಇದ್ರೆ ನೀವು ಎಕ್ಸಾಂ ಕೂಡಾ ಚೆನ್ನಾಗಿಯೇ ಮಾಡುತ್ತೀರಿ

ಸಾಧ್ಯವಾದುದನ್ನೇ ಯೋಚಿಸಿ

ನಾಳೆ ಪರೀಕ್ಷೆಗೆ ಹೋಗೋ ಮುನ್ನ ಅಷ್ಟು ಓದಿ ಆಗಬೇಕು, ಇಷ್ಟು ಓದಿ ಆಗಬೇಕು ಎಂದು ರಾತ್ರಿಯೇ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಯಾಕೆಂದ್ರೆ ಬೆಳಗ್ಗೆ ನೀವು ಅಂದುಕೊಂಡಷ್ಟು ಓದಲು ಸಾಧ್ಯವಾಗದೇ ಇರಬಹುದು. ಹಾಗಾಗಿ ರಿಯಾಲಿಸ್ಟಿಕ್ ಆಗಿರುವುದು ಮಾತ್ರ ಯೋಚಿಸಿ

ಹಾರ್ಡ್‌ ವರ್ಕ್ ಹಾಗೂ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ

ಈ ಮೇಲೆ ಹೇಳಿರುವಂತಹ ಕೆಲವೊಂದು ಟಿಪ್ಸ್ ನಿಮಗೆ ಫಾಲೋ ಮಾಡಲು ಸಾಧ್ಯವಾಗದೇ ಇದ್ರೆ ಅದಕ್ಕೆ ಚಿಂತಿಸಬೇಡಿ. ಇದುವರೆಗೆ ನೀವು ಅನುಸರಿಸಿಕೊಂಡು ಬಂದಿರುವ ನಿಮ್ಮದೇ ವಿಧಾನವನ್ನ ನೀವು ಅನುಸರಿಸಿ. ನಿಮ್ಮ ಹಾರ್ಡ್ ವರ್ಕ್ ಹಾಗೂ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ತಿಂಗಳುಗಟ್ಟಲೆ ನೀವು ಓದಿದ್ದಲ್ಲಿ, ಉತ್ತಮ ಫಲಿತಾಂಶ ನಿಮ್ಮದಾಗುವುದರಲ್ಲಿ ಸಂದೇಹವಿಲ್ಲ

English summary
Most people who will be writing their board exams are too young to come up with ways and means to deal with this type of stress, here is a list of tips that will help them sail through their examinations with ease

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia