ಡಿಸಂಬರ್‌ನಲ್ಲಿ ನಡೆಯಲಿರುವ ಈ ವರ್ಷದ ಕೊನೆಯ ಯುಜಿಸಿ ನೆಟ್ ಪರೀಕ್ಷೆಯ ಪ್ರಮುಖ ಮಾಹಿತಿ!

ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಯುಜಿಸಿ ನೆಟ್ ಪರೀಕ್ಷೆಯ ದಿನಾಂಕ ಪ್ರಕಟಿಸಿದ್ದು, ಜತೆಗೆ ಈಗಾಗಲೇ ಸೆಪ್ಟಂಬರ್ ೧ ರಿಂದ ರಿಜಿಸ್ಟ್ರೇಶನ್ ಪ್ರಕ್ರಿಯೆ ಕೂಡಾ ಪ್ರಾರಂಭವಾಗಿದೆ

ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಯುಜಿಸಿ ನೆಟ್ ಪರೀಕ್ಷೆಯ ದಿನಾಂಕ ಪ್ರಕಟಿಸಿದ್ದು, ಜತೆಗೆ ಈಗಾಗಲೇ ಸೆಪ್ಟಂಬರ್ 1 ರಿಂದ ರಿಜಿಸ್ಟ್ರೇಶನ್ ಪ್ರಕ್ರಿಯೆ ಕೂಡಾ ಪ್ರಾರಂಭವಾಗಿದೆ. ಇನ್ನು ಈ ಪರೀಕ್ಷೆಯನ್ನ ಭಾರತದ ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ ಹುದ್ದೆಗಾಗಿ ನಡೆಸುವ ಪರೀಕ್ಷೆಯಾಗಿದೆ. ವರ್ಷಕ್ಕೆ ಎರಡು ಬಾರಿ ನಡೆಯುವ ಈ ಪರೀಕ್ಷೆಯು ದೇಶದ 91 ನಗರಗಳಲ್ಲಿ 84 ಸಬ್‌ಜೆಕ್ಟ್ ಗಳಲ್ಲಿ ನಡೆಯುತ್ತದೆ.

ಡಿಸಂಬರ್‌ನಲ್ಲಿ ನಡೆಯಲಿರುವ ಈ ವರ್ಷದ ಕೊನೆಯ ಯುಜಿಸಿ ನೆಟ್ ಪರೀಕ್ಷೆಯ ಪ್ರಮುಖ ಮಾಹಿತಿ!

ರಾಷ್ಟ್ರೀಯ ಮಟ್ಟದ ಈ ಪರೀಕ್ಷೆಯು ಕಂಪ್ಯೂಟರ್ ಮಾದರಿಯ ಪರೀಕ್ಷೆಯಾಗಿದೆ. ಈಗಾಗಲೇ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆ ಮುನ್ನ ಅಭ್ಯರ್ಥಿಗಳು ಈ ಪರೀಕ್ಷೆ ಬಗ್ಗೆ ತಿಳಿಯಲೇ ಬೇಕಾದಂತಹ ಪ್ರಮುಖ ಮಾಹಿತಿಯನ್ನ ಇದೀಗ ಕೆರಿಯರ್ ಇಂಡಿಯಾ ನೀಡುತ್ತಿದೆ ಮುಂದಕ್ಕೆ ಓದಿ.

also read: ಗೇಟ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಇದು ಬೆಸ್ಟ್ ಪುಸ್ತಕ!also read: ಗೇಟ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಇದು ಬೆಸ್ಟ್ ಪುಸ್ತಕ!

ಯುಜಿಸಿ ನೆಟ್ ಬರೆಯಬೇಕಾದ್ರೆ ಕನಿಷ್ಟ್ ಅಂಕ:

ಯುಜಿಸಿ ನೆಟ್ ಬರೆಯಬೇಕಾದ್ರೆ ಕನಿಷ್ಟ್ ಅಂಕ:

ಹೌದು ಯಾರು ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕ ಗಳಿಸಿರುತ್ತೀರೋ ಅವರು ಯುಜಿಸಿ ನೆಟ್ ಪರೀಕ್ಷೆ ಬರೆಯಲು ಅರ್ಹರು. ಇನ್ನು ಸ್ನಾತಕೋತ್ತರ ಪರೀಕ್ಷೆಯಲ್ಲಿ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಶೇ.50 ಅಂಕ ಗಳಿಸಿದ್ದರೆ ಸಾಕು ಯುಜಿಸಿ ನೆಟ್ ಪರೀಕ್ಷೆ ಬರೆಯಲು ಅರ್ಹತೆ ಪಡೆದುಕೊಳ್ಳುತ್ತಾರೆ.

ಯುಜಿಸಿ ನೆಟ್ ಪರೀಕ್ಷಾ ಮಾದರಿ ಹೀಗಿದೆ:

ಯುಜಿಸಿ ನೆಟ್ ಪರೀಕ್ಷಾ ಮಾದರಿ ಹೀಗಿದೆ:

ಎರಡು ಆಬ್ ಜೆಕ್ಟೀವ್ ಟೈಪ್ ಪ್ರಶ್ನಾ ಪತ್ರಿಕೆ ಇಲ್ಲಿ ನೀಡಲಾಗಿರುತ್ತದೆ. ಪ್ರತಿಯೊಂದು ಪ್ರಶ್ನೆಗೂ ಎರಡು ಅಂಕಗಳಿರುತ್ತದೆ.ಪೇಪರ್ 1 ರ ಅವಧಿ ಒಂದು ಗಂಟೆ. ಇಲ್ಲಿ ಸಾಮಾನ್ಯ ಜ್ಞಾನ ಹಾಗೂ ಪ್ರಚಲಿತ ವಿದ್ಯಾಮಾನಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನ ಕೇಳಲಾಗಿರುತ್ತದೆ. ಇನ್ನು ಎರಡನೇ ಪೇಪರ್ ನಲ್ಲಿ ಆಯ್ಕೆ ಮಾಡಿಕೊಂಡಿದ್ದ ಸಬ್‌ಜೆಕ್ಟ್ ಮೇರೆಗೆ ಪ್ರಶ್ನೆಗಳನ್ನ ಕೇಳಲಾಗಿರುತ್ತದೆ. ಒಟ್ಟು 300 ಅಂಕದ ಪರೀಕ್ಷೆ ಇದಾಗಿರುತ್ತದೆ.

ಯುಜಿಸಿ ನೆಟ್ ವಯೋಮಿತಿ ಹೀಗಿರಲಿ:
 

ಯುಜಿಸಿ ನೆಟ್ ವಯೋಮಿತಿ ಹೀಗಿರಲಿ:

ಜೆಆರ್ಎಫ್ ಗೆ ಕನಿಷ್ಟ 30 ವರ್ಷ ನಿಗಧಿಯಾಗಿರುತ್ತದೆ. ಇನ್ನು ಎಸ್‌ಸಿ,ಎಸ್ಟಿ/ವಿಕಲಚೇತನ/ತೃತೀಯ ಲಿಂಗಿಗಳಿಗೆ 5 ವರ್ಷದ ವಿನಾಯಿತಿ ನೀಡಲಾಗಿದೆ. ಇನ್ನು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗ ನಡೆಯುವ ಪರೀಕ್ಷೆಗೆ ಯಾವುದೇ ಗರಿಷ್ಟ ವಯೋಮಿತಿಯ ನಿರ್ಬಂಧನೆ ಇಲ್ಲ.

ಯುಜಿಸಿ ನೆಟ್ ಪರೀಕ್ಷೆಯ ಅರ್ಜಿ ಶುಲ್ಕ:

ಯುಜಿಸಿ ನೆಟ್ ಪರೀಕ್ಷೆಯ ಅರ್ಜಿ ಶುಲ್ಕ:

ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ 800 ಶುಲ್ಕ ಪಾವತಿಸಬೇಕಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ 400 ರೂ ಹಾಗೂ ಎಸ್‌ಸಿ/ಎಸ್‌ಟಿ/ವಿಕಲಚೇತನ/ತೃತೀಯ ಲಿಂಗಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ 200 ಅರ್ಜಿ ಶುಲ್ಕ ನಿಗಧಿಗೊಳಿಸಲಾಗಿದ್ದು, ಇದರಲ್ಲಿ ಜಿಎಸ್ ಟಿ ಕೂಡಾ ಸೇರಿಕೊಂಡಿದೆ.

ಟೆಸ್ಟ್ ಪ್ರ್ಯಾಕ್ಟಿಸ್ ಸೆಂಟರ್ :

ಟೆಸ್ಟ್ ಪ್ರ್ಯಾಕ್ಟಿಸ್ ಸೆಂಟರ್ :

ಭಾರತದಾದ್ಯಂತ ಟೆಸ್ಟ್ ಪ್ರ್ಯಾಕ್ಟಿಸ್ ಸೆಂಟರ್ ಗಳನ್ನ ಇದೀಗ ಹೆಚ್‌ಆರ್‌ಡಿ ಮತ್ತು ಎನ್‌ಟಿಎ ಸ್ಥಾಪಿಸಿದೆ. ಸ್ಪೇಶಲ್ ಆಗಿ ಗ್ರಾಮೀಣ ನಗರಗಳಲ್ಲಿ ಈ ಕೇಂದ್ರಗಳನ್ನ ತೆರೆಯಲಾಗಿದ್ದು, ಇಲ್ಲಿ ಉಚಿತವಾಗಿ ಕೋಚಿಂಗ್ ನೀಡಲಾಗುತ್ತದೆ. ನವಂಬರ್ ತಿಂಗಳಿನಿಂದ ಈ ಕೇಂದ್ರದಲ್ಲಿ ಕೋಚಿಂಗ್ ಪ್ರಾರಂಭವಾಗಲಿದ್ದು, ಅಭ್ಯರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಯುಜಿಸಿ ನೆಟ್ ಪರೀಕ್ಷೆ ಕುರಿತ್ತಂತೆ ಪ್ರಮುಖ ದಿನಾಂಕಗಳು:

ಯುಜಿಸಿ ನೆಟ್ ಪರೀಕ್ಷೆ ಕುರಿತ್ತಂತೆ ಪ್ರಮುಖ ದಿನಾಂಕಗಳು:

  • ರಿಜಿಸ್ಟ್ರೇಶನ್ ದಿನಾಂಕ: ಸೆಪ್ಟಂಬರ್ 1 ರಿಂದ 30, 2018
    • ಪ್ರವೇಶ ಪತ್ರ ಡೌನ್‌ಲೋಡ್ : ನವಂಬರ್ 19, 2018
      • ಪರೀಕ್ಷೆ ದಿನಾಂಕ: ಡಿಸಂಬರ್ 9 ರಿಂದ 23, 2018
        • ಫಲಿತಾಂಶ ದಿನಾಂಕ: ಜನವರಿ 10, 2019

<strong>also read: ಇಂಜಿನೀಯರಿಂಗ್ ಕನಸು ಕಾಣುವ ವಿದ್ಯಾರ್ಥಿಗಳಿಗೆ... ಮುಂದಿನ ವರ್ಷದ ಎಂಟ್ರೇಂಸ್ ಎಕ್ಸಾಂ ಡೀಟೆಲ್ಸ್!</strong>also read: ಇಂಜಿನೀಯರಿಂಗ್ ಕನಸು ಕಾಣುವ ವಿದ್ಯಾರ್ಥಿಗಳಿಗೆ... ಮುಂದಿನ ವರ್ಷದ ಎಂಟ್ರೇಂಸ್ ಎಕ್ಸಾಂ ಡೀಟೆಲ್ಸ್!

For Quick Alerts
ALLOW NOTIFICATIONS  
For Daily Alerts

English summary
The National Testing Agency (NTA) has released the UGC NET December 2018 exam dates and started the registration process on September 1. The National Eligibility Test (NET), which is conducted for determining the eligibility for Assistant Professor and Junior Research Fellowship (JRF) posts in Indian universities and colleges, is held twice a year. NET is conducted for 84 subjects in 91 cities across the country.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X