ಈ 5 ವಿಷಯ ರೆಡಿ ಇದ್ರೆ ಮಾತ್ರ ಹೊಸ ಬ್ಯುಸಿನೆಸ್ ಗೆ ಕೈ ಹಾಕಿ

Posted By:

ನೀವು ಯಾವುದಾದ್ರೂ ಬ್ಯುಸಿನೆಸ್ ಸ್ಟಾರ್ಟ್ ಮಾಡಬೇಕು ಅಂತಿದ್ದೀರಾ... ಹಾಗಿದ್ರೆ ಮೊದಲು ಐಡಿಯಾ ಹುಡುಕಿ. ಬಳಿಕ ಆ ಐಡಿಯಾವನ್ನ ಕಾರ್ಯ ರೂಪಕ್ಕೆ ತನ್ನಿ. ಕೊನೆಗೆ ಬ್ಯುಸಿನೆಸ್ ಲಾಂಚ್ ಮಾಡಿ.

ಬ್ಯುಸಿನೆಸ್ ಸ್ಟಾರ್ಟ್ ಮಾಡುವ ಮುನ್ನ ಸ್ಮಾರ್ಟ್ ಆಗಿ ಪ್ಲ್ಯಾನ್ ಮಾಡುವುದು ಮುಖ್ಯ. ಅದಕ್ಕಾಗಿ ಒಂದು ಬೆಸ್ಟ್ ಸ್ಟ್ರಾಟಜಿ ತಯಾರು ಮಾಡಿಕೊಳ್ಳಿ. ನೀವು ಸಕ್ಸಸ್ ಫುಲ್ ಆಗಿ ಸ್ಟಾರ್ಟ್ ಮಾಡಿದ್ರೆ ಮಾತ್ರ ನಿಮ್ಮ ಬ್ಯುಸಿನೆಸ್ ಸಕ್ಸಸ್ ಫುಲ್ ಆಗುತ್ತದೆ. ಹಾಗಿದ್ರೆ ಬ್ಯುಸಿನೆಸ್ ಪ್ರಾರಂಭಿಸುವ ಮುನ್ನ 5 ವಿಷಯಗಳನ್ನ ನೆನಪಿನಲ್ಲಿಟ್ಟುಕೊಳ್ಳಿ. ಆ ೫ ವಿಷಯಗಳು ಯಾವುವು ಎಂಬ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಜ್ಞಾನ:

ಹೌದು ಬ್ಯುಸಿನೆಸ್ ನೀವು ಸ್ಟಾರ್ಟ್ ಮಾಡುವುದಾದ್ರೆ ನಿಮ್ಮ ಬಳಿ ನಿಜವಾಗಲೂ ಒಳ್ಳೆಯ ಐಡಿಯಾ ಇರಲೇಬೇಕು. ನೀವು ಬ್ಯುಸಿನೆಸ್ ಪ್ರಾರಂಭಿಸುವ ಮುನ್ನ ನೀವೇ ನಿಮ್ಮ ಬಳಿ ಪ್ರಶ್ನೆಗಳನ್ನ ಕೇಳಿ. ಈ ಬ್ಯುಸಿನೆಸ್ ವರ್ಕೌಟ್ ಆಗುತ್ತಾ ಎಂದು. ನೀವು ಇನ್ನೂ ಸರಿಯಾದ ತಯಾರಿ ಮಾಡಿಲ್ಲ ಎಂದಾದ್ರೆ ನೀವು ಮೊದಲು ಏನು ಮಾಡಬೇಕು ಎಂದು ಯೋಚಿಸಿ. ಇನ್ನು ಬ್ಯುಸಿನೆಸ್ ಪ್ರಾರಂಭಿಸುವ ಮುನ್ನ ಇಂಡಸ್ಟ್ರಿ ಬಗ್ಗೆ ತಿಳಿದುಕೊಳ್ಳಿ. ಬ್ಯುಸಿನೆಸ್ ಪ್ರಾರಂಭಿಸಲು ಬೇಕಾಗಿರುವ ಎಲ್ಲಾ ಅಗತ್ಯತೆ ಬಗ್ಗೆ ತಿಳಿದುಕೊಳ್ಳಿ.

ಯೋಜನೆ:

ನಿಮಗೆ ಬ್ಯುಸಿನೆಸ್ ನಲ್ಲಿ ಯಾರಾದ್ರೂ ಪಾಟ್ನರ್ ಇದ್ದಾರೆ ಎಂದಾದ್ರೆ ನೀವು ಪ್ರತಿಯೊಂದು ಚಿಕ್ಕ ವಿಷಯದ ಬಗ್ಗೆಯೂ ಪ್ಲ್ಯಾನ್ ಮಾಡಿಕೊಳ್ಳಬೇಕು. ಅಂದ್ರೆ ಮೂಲಗಳು, ಸ್ಥಳ, ನಿಧಿ, ಖರ್ಚು ವೆಚ್ಚ ಹಾಗೂ ಕಾರ್ಮಿಕರ ಬಗ್ಗೆ ಸೇರಿದಂತೆ ಪ್ರತಿಯೊಂದು ವಿಚಾರದ ಬಗ್ಗೆ ಮೊದಲೇ ಪ್ಲ್ಯಾನ್ ಮಾಡಿಕೊಳ್ಳಬೇಕು.

ಗುರಿ:

ಇನ್ನು ನಿಮ್ಮ ಗುರಿ ಬಗ್ಗೆ ನೀವು ಕ್ಲಿಯರ್ ಆಗಿರಬೇಕು. ಒಂದು ಬಾರಿ ನೀವು ಉದ್ಯಮ ಸ್ಟಾರ್ಟ್ ಮಾಡಿದ್ರೆ ಅದು ಮೇಲೆ ಬರಲು ತುಂಬಾ ಟೈಂ ತೆಗೆದುಕೊಳ್ಳುತ್ತದೆ. ಹಾಗಾಗಿ ನೀವು ನಿಮ್ಮ ಗುರಿ ಬಗ್ಗೆ ನಿರ್ದಿಷ್ಟರಾಗಿರಬೇಕು.ಕಂಪನಿಯಲ್ಲಿ ಟಾರ್ಗೆಟ್ ಸೆಟ್ ಮಾಡಿಕೊಳ್ಳಿ. ಸದ್ಯ ನಿಮ್ಮ ಬ್ಯುಸಿನೆಸ್ ಯಾವ ಹಂತದಲ್ಲಿ ಇದೆ ಎಂಬುವುದರ ಬಗ್ಗೆ ನೀವು ತಿಳಿದುಕೊಂಡಿರಬೇಕು. ಮುಂದಿನ ವರ್ಷದಲ್ಲಿ ಬ್ಯುಸಿನೆಸ್ ಯಾವ ಮಟ್ಟಕ್ಕೆ ತರಬೇಕು ಎಂದು ಮೊದಲೇ ಯೋಚಿಸಿ ನಿರ್ಧರಿಸಿಕೊಂಡಿರಿ.

ಕೆಲಸಗಾರರ ನೇಮಕ:

ಕಷ್ಟದ ಸಯದಲ್ಲಿ, ನಿಮ್ಮ ಜತೆ ಯಾರು ಕೆಲಸ ಮಾಡಲು ಸಿದ್ದನಿರುತ್ತಾರೋ ಅಂತಹ ಕೆಲಸಗಾರರನ್ನು ನೀವು ಆಯ್ಕೆ ಮಾಡಿಕೊಳ್ಳಿ. ನೀವು ಬ್ಯುಸಿನೆಸ್ ಪ್ರಾರಂಭಿಸುವಾಗ ನಿಮ್ಮ ಬ್ಯುಸಿನೆಸ್ ಹಂತ ಪ್ರಮುಖವಲ್ಲ. ಆದ್ರೆ ಬ್ಯುಸಿನೆಸ್ ಗೆ ನೀವು ಎಷ್ಟು ಖರ್ಚು ಮಾಡುತ್ತಿದ್ದಿರಾ ಎಂಬುದು ತಿಳಿದುಕೊಳ್ಳಿ. ಕಡಿಮೆ ಸಂಖ್ಯೆ ಹಾಗೂ ಹೆಚ್ಚು ಟ್ಯಾಲೆಂಟ್ ಇರುವ ಉದ್ಯೋಗಿಗಳನ್ನ ಆಯ್ಕೆ ಮಾಡಿಕೊಳ್ಳಿ

ಮ್ಯಾಕ್ಸಿಮಂ ಔಟ್‌ಪುಟ್:

ನಿಮ್ಮ ಬಳಿ ಐಡಿಯಾ ಇದ್ರೆ ನೀವು ಬ್ಯುಸಿನೆಸ್ ಪ್ರಾರಂಭಿಸುತ್ತೀರಾ. ಆದ್ರೆ ನೀವು ಗಮನಕೊಟ್ಟಾಗ ಮಾತ್ರ ನಿಮ್ಮ ಬ್ಯುಸಿನೆಸ್ ಮೇಲೆ ಬರಲು ಸಾಧ್ಯ. ಸದ್ಯದ ಟ್ರೆಂಡಿಂಗ್ ಏನು, ಗ್ರಾಹಕ ನಿಮ್ಮಿಂದ ಏನು ಬಯಸುತ್ತಾನೆ. ಜನರಿಗೆ ಏನು ಬೇಕೋ ಅದನ್ನ ನೀವು ಆಫರ್ ಮಾಡಿ. ಕೇವಲ ಮಾರಾಟ ಮಾಡಬೇಕು ಎಂಬ ದೃಷ್ಟಿಯಿಂದ ಬ್ಯುಸಿನೆಸ್ ಸ್ಟಾರ್ಟ್ ಮಾಡಬೇಡಿ.

English summary
Things to know to statrt the business. first you conceive the idea. then comes a bit of follow through. there's much more to successful business than these petty things, most important being, a successfull start

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia