ರೆಸ್ಯೂಮ್ ನಲ್ಲಿ ಈ ಮಾಹಿತಿ ಇದ್ರೆ ಇಂದೇ ತೆಗೆದುಬಿಡಿ, ಕೆಲಸ ಸಿಗದೇ ಇರಲು ಇದು ಕೂಡಾ ಕಾರಣ ಇರುತ್ತೆ

By Nishmitha Bekal

ಯಾವುದೇ ನೇಮಕಾತಿ ಪ್ರಕ್ರಿಯೆಯಾದ್ರೂ ಸರಿ ಮೊದಲು ಕೆಲಸ ಮಾಡುವುದು ರೆಸ್ಯೂಮ್. ಎಜ್ಯುಕೇಶನ್ ಎಲ್ಲಾ ಕಂಪ್ಲೀಟ್ ಆದ ಮೇಲೆ ನಾವು ಮೊದಲು ಮಾಡುವ ಕೆಲಸ ಒಂದು ಬೆಸ್ಟ್ ರೆಸ್ಯೂಮ್ ತಯಾರಿಸುವುದು. ನಮ್ಮ ರೆಸ್ಯೂಮ್ ಹೇಗಿರಬೇಕು ಎಂದ್ರೆ ನೋಡಿದೊಡನೇ ನಮ್ಮನ್ನ ಸಂದರ್ಶನಕ್ಕೆ ಆಯ್ಕೆ ಮಾಡಿಕೊಳ್ಳುವಂತೆ ಇರಬೇಕು ವಿನ್ಹಾ ಅವರು ಡಸ್ಟ್ ಬಿನ್ ಗೆ ಎಸೆಯುವಂತೆ ಇರಬಾರದು.

 

ರೆಸ್ಯೂಮ್ ಹೇಗೆ ತಯಾರಿಸಿದ್ರೆ ಚೆನ್ನ ಎಂದು ಈ ಮೊದಲೇ ನಾವು ನಿಮಗೆ ತಿಳಿಸಿರುತ್ತೇವೆ, ಇದೀಗ ಯಾವೆಲ್ಲಾ ವಿಚಾರಗಳು ನಿಮ್ಮ ರೆಸ್ಯೂಮ್ ನಲ್ಲಿ ಇರಬಾರದು ಎಂದು ಸಲಹೆ ನೀಡುತ್ತೇವೆ ಮುಂದಕ್ಕೆ ಓದಿ:

Most Read: ಈ 6 ಟಿಪ್ಸ್ ನಿಂದ ಯುಪಿಎಸ್ ಸಿ ಪರೀಕ್ಷೆಯನ್ನ ಮೊದಲ ಪ್ರಯತ್ನದಲ್ಲೇ ಪಾಸು ಮಾಡಬಹುದು

ಸಂಬಂಧವಿಲ್ಲದ ಕೆಲಸದ ಅನುಭವ

ನೀವು ಈ ಮೊದಲು ಯಾವುದಾದ್ರೂ ಸಂಘ ಸಂಸ್ಥೆಗಳಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿರಬಹುದು ಅಥವಾ ಕಾಲೇಜು ಫೆಸ್ಟ್ ಗಳಲ್ಲಿ ವಾಲೆಂಟೀಯರ್ ಆಗಿ ವರ್ಕ್ ಮಾಡಿರಬಹುದು. ಹಾಗಂತ ಈ ವಿಚಾರವನ್ನೆಲ್ಲಾ ನೀವು ರೆಸ್ಯೂಮ್ ನಲ್ಲಿ ಬರೆದ್ರೆ ನಿಮ್ಮ ರೆಸ್ಯೂಮ್ ಪ್ರಾಮುಖ್ಯತೆ ಕಳೆದುಕೊಳ್ಳುತ್ತದೆ. ಅಗತ್ಯವಿಲ್ಲದ ವಿಚಾರಗಳನ್ನ ರೆಸ್ಯೂಮ್ ನಲ್ಲಿ ಬರೆದ್ರೆ ಇದರಿಂದ ನಿಮ್ಮ ರೆಸ್ಯೂಮ್ ನಲ್ಲಿ ಇರುವ ಪ್ರಮುಖ ವಿಚಾರ ಪ್ರಾಮುಖ್ಯತೆ ಕಳೆದುಕೊಳ್ಳುತ್ತದೆ. ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರೋ ಆ ಹುದ್ದೆಗೆ ಸಂಬಂಧಪಟ್ಟ ಮಾಹಿತಿ ಇದ್ದರೆ ಮಾತ್ರ ನಿಮ್ಮ ರೆಸ್ಯೂಮ್ ನಲ್ಲಿ ಬರೆಯಿರಿ.

ಅತೀ ಹೆಚ್ಚು ವೈಯಕ್ತಿಕ ವಿಚಾರ

ನೀವು ತಯಾರಿಸುವ ರೆಸ್ಯೂಮ್ ಹುದ್ದೆ ನೇಮಕಾತಿ ಪ್ರಕ್ರಿಯೆಗೆ ಎಂದು ಮೊದಲು ತಿಳಿದುಕೊಳ್ಳಿ ವಿನಾಃ ಯಾವುದೇ ವಿವಾಹ ಸಂಬಂಧಕ್ಕಲ್ಲ. ನಿಮ್ಮನ್ನ ಸಂದರ್ಶನ ಮಾಡುವ ಸಂದರ್ಶನಕಾರರಿಗೆ ನಿಮ್ಮ ಎತ್ತರ, ತೂಕ, ನಿಮ್ಮ ಹೆತ್ತರವರ ಡೀಟೆಲ್ಸ್, ರಕ್ತ ಗುಂಪು ಹಾಗೂ ಧರ್ಮ ಸೇರಿದಂತೆ ಇನ್ನಿತ್ತರ ಯಾವುದೇ ಮಾಹಿತಿ ಬೇಕಿರುವುದಿಲ್ಲ. ಈ ಎಲ್ಲಾ ವಿಚಾರಗಳನ್ನ ನೀವು ಹುದ್ದೆಗೆ ಸೆಲೆಕ್ಟ್ ಆದ ಮೇಲೆ ಬೇಕಾದ್ರೆ ಅವರು ಕೇಳಬಹುದು ಆದ್ರೆ ಸಂದರ್ಶನಕ್ಕೆ ಕರೆಯುವ ಮುನ್ನ ಅವರಿಗೆ ನಿಮ್ಮ ವೈಯಕ್ತಿ ವಿಚಾರದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವುದಿಲ್ಲ.

ಶಾಲಾ-ಶಿಕ್ಷಣ ಮಾಹಿತಿ

ಪದವಿ ಅಂಕದಷ್ಟೇ 10ನೇ ಹಾಗೂ 12ನೇ ತರಗತಿಯ ಶೇಕಡಾ ಅಂಕ ಅಷ್ಟೆ ಪ್ರಮುಖ. ಆದ್ರೆ ಪ್ರತೀ ತರಗತಿಯಲ್ಲಿ ಎಷ್ಟು ಅಂಕ ಗಳಿಸಿದ್ದೀರಾ ಎಂಬುವುದು ರೆಸ್ಯೂಮ್ ನಲ್ಲಿ ಬರೆಯುವುದು ಪ್ರಮುಖವಲ್ಲ. ನೀವು ಪದವಿ ಕಂಪ್ಲೀಟ್ ಮಾಡಿದ್ದೀರಿ ಎಂದಾದ್ರೆ, ಶಾಲೆಯ ಪ್ರತೀ ಹಂತದ ಶಿಕ್ಷಣದ ಬಗ್ಗೆ ಮಾಹಿತಿ ನೀಡುವ ಅಗತ್ಯವಿಲ್ಲ. ಉದಾಹರಣೆಗೆ ನೀವು ಪ್ರೈಮರಿ ಹಾಗೂ ಸೆಕಂಡರಿ ಸೆಕ್ಷನ್ ವೇಳೆ ಶಾಲೆಗಳನ್ನ ಚೇಂಜ್ ಮಾಡಿರುತ್ತೀರಿ ಅಂದುಕೊಳ್ಳಿ ಹಾಗಂತ ಆ ಬಗ್ಗೆ ಎಲ್ಲಾ ರೆಸ್ಯೂಮ್ ನಲ್ಲಿ ಮಾಹಿತಿಯನ್ನ ತುರುಕಬೇಡಿ.

ಸಂಬಂಧವಿಲ್ಲದ ಹವ್ಯಾಸಗಳು:

ಹೌದು ಹೆಚ್ಚಿನ ಸಂದರ್ಶನಕಾರರಿಗೆ ನಿಮ್ಮ ಹವ್ಯಾಸದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುತ್ತದೆ. ನಿಮ್ಮ ಹವ್ಯಾಸಗಳೇ ಅವರಲ್ಲಿ ಉತ್ತಮ ಇಂಪ್ರೇಶನ್ ಮೂಡಿಸಬಹುದು. ಇನ್ನು ಕೆಲವರು ರೆಸ್ಯೂಮ್ ನ್ನ ಇಂಟರ್ ನೆಟ್ ನಿಂದ ಕಾಪಿ ಮಾಡುತ್ತಾರೆ. ಈ ವೇಳೆ ಅವರು ಹವ್ಯಾಸಗಳಲ್ಲಿ ಯಾವುದೇ ಚೇಂಜಸ್ ಮಾಡಲು ಹೋಗುವುದಿಲ್ಲ. ಇದರಿಂದ ನೇಮಕಾತಿ ಮಾಡುವವರಿಗೆ ನಿಮ್ಮ ಮೇಲೆ ಕೆಟ್ಟ ಅಭಿಪ್ರಾಯ ಮೂಡಬಹುದು. ಉದಾಹರಣೆಗೆ ನೀವು ಸ್ಪೋರ್ಟ್ಸ್ ಫೀಲ್ಡ್ ಗೆ ಸಂಬಂಧಪಟ್ಟಂತೆ ಹುದ್ದೆಗೆ ಅಪ್ಲೈ ಮಾಡಿರುತ್ತೀರಾ. ಆಗ ನಿಮ್ಮ ರೆಸ್ಯೂಮ್ ನಲ್ಲಿ ನಿಮ್ಮ ನೆಚ್ಚಿನ ಸ್ಪೋರ್ಟ್ಸ್ ಬಗ್ಗೆಗಿನ ಹವ್ಯಾಸ ಕುರಿತು ತಿಳಿಸಿ ವಿನಾಃ ಸಂಬಂಧಪಡದ ಗೀಟರ್ ಬಾರಿಸುವುದು, ಸಿಂಗಿಂಗ್, ನೃತ್ಯ ಎಂದೆಲ್ಲಾ ನೀವು ಅರ್ಜಿ ಸಲ್ಲಿಸಿರುವ ಹುದ್ದೆಗೆ ಸಂಬಂಧವಿಲ್ಲದ ಹವ್ಯಾಸದ ಬಗ್ಗೆ ತಿಳಿಸಬೇಡಿ.

ಹಳೆಯ ಕಂಪನಿ ವೇತನ

ನೇಮಕಾತಿ ಪ್ರಕ್ರಿಯೆಯಲ್ಲಿ ವೇತನ ಕೊನೆಯದಾಗಿ ಬರುವ ಟಾಪಿಕ್ ಆಗಿದೆ. ಹಾಗೂ ಸಂದರ್ಶನ ವೇಳೆ ವೇತನ ಬಗ್ಗೆ ನೀವು ಸಂದರ್ಶನಕಾರರ ಜತೆ ಮಾತುಕತೆ ನಡೆಸಬಹುದು. ಇನ್ನು ನೀವು ರೆಸ್ಯೂಮ್ ತಯಾರಿಸುವಾಗ ಎಷ್ಟು ವೇತನ ನಿರೀಕ್ಷಿಸುತ್ತಿದ್ದೀರಿ ಹಿಂದಿನ ಕಂಪನಿಯಲ್ಲಿ ಎಷ್ಟು ವೇತನ ಪಡೆಯುತ್ತಿದ್ದೀರಿ ಎಂಬುವುದರ ಬಗ್ಗೆ ಅನಗತ್ಯ ಮಾಹಿತಿ ಬರೆಯಬೇಡಿ.

ಫೋಟೋಗ್ರಾಫ್

ಹಚ್ಚಿನ ಕಂಪನಿಗಳು ರೆಸ್ಯೂಮ್ ಜತೆ ನಿಮ್ಮ ಫೋಟೋಗ್ರಾಫ್ ಬೇಕೆಂದು ಬಯಸುವುದಿಲ್ಲ. ಕಾರಣ ಸಮಾನತೆಯಿಂದ ಇಂಟರ್ವ್ಯೂ ನಡೆಯಬೇಕೆಂಬ ಉದ್ದೇಶದಿಂದ. ಒಂದು ವೇಳೆ ನೀವು ನಟರಾಗಲು ಇಲ್ಲ ಮಾಡೆಲ್ ಆಗಲು ರೆಸ್ಯೂಮ್ ಕಳುಹಿಸುತ್ತೀರಿ ಎಂದಾದ್ರೆ ನಿಮ್ಮ ಫೋಟೋದ ಅಗತ್ಯವಿರುತ್ತದೆ ವಿನಾಃ ಇನ್ನಿತ್ತರ ಹುದ್ದೆಗಳಿಗೆ ನಿಮ್ಮ ಫೋಟೋಗ್ರಾಫ್ ಅಟ್ಯಾಚ್ ಮಾಡುವ ಅಗತ್ಯವಿರುವುದಿಲ್ಲ.

Most Read: ಯಶಸ್ವೀ ವ್ಯಕ್ತಿಗಳ 8 ಯಶಸ್ಸಿನ ಮಂತ್ರ: ಫಾಲೋ ಮಾಡಿದ್ರೆ ಖಂಡಿತಾ ಅವರಂತೆಯೇ ಸಕ್ಸಸ್ ಆಗ್ತೀರಾ

For Quick Alerts
ALLOW NOTIFICATIONS  
For Daily Alerts

  English summary
  If you are an experienced working professional or a fresher looking for a job, you would surely know the importance of a good curriculum vitae or a resume. A good CV or resume must convey every relevant detail about the candidate to the interviewer. For instance, the educational qualifications, on-the-job or internship experiences, achievements or awards, contact details, personal information and so on.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more