ಭವಿಷ್ಯ ರೂಪಿಸುವ ಕೋರ್ಸ್ ಆಯ್ಕೆಗೂ ಮುನ್ನ ಎಚ್ಚರವಿರಲಿ

Posted By:

ಇಂದು ಶಿಕ್ಷಣ ಎಂದರೆ ಕೇವಲ ಉದ್ಯೋಗಕ್ಕಾಗಿ ಎನ್ನುವಂತಾಗಿದೆ, ಶಿಕ್ಷಣ ಮುಗಿದ ನಂತರ ಉದ್ಯೋಗದ ಚಿಂತೆ ಕಾಡಬಾರದೆಂದು ಇಂದು ಬಹುತೇಕ ಮಂದಿ ಉದ್ಯೋಗಾವಕಾಶ ಇರುವ ಶಿಕ್ಷಣಕ್ಕೆ ಮುಂದಾಗಿದ್ದಾರೆ.

ಬದಲಾಗಲಿದೆ ಶಿಕ್ಷಣ ವ್ಯವಸ್ಥೆ: ಇನ್ನು ಮುಂದೆ ಓದುವುದು, ಬರೆಯುವುದು ಎಲ್ಲವು ಆನ್ಲೈನ್

ಓದಿದ ತಕ್ಷಣ ಕೆಲಸ ಸಿಗಬೇಕೆಂಬುದೇ ಬಹುತೇಕ ಮಂದಿಯ ಆಸೆ, ಆದರೆ ಆ ರೀತಿ ಯೋಚನೆ ಮಾಡುವವರು ತಮ್ಮ ಭವಿ‍ಷ್ಯದ ಬಗ್ಗೆ ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕಾಗುತ್ತದೆ.

ಕೆರಿಯರ್ ಟ್ರೆಂಡ್ಸ್ 2018: ಅನಿಮೇಷನ್ ಮಾಯಾಲೋಕದಲ್ಲಿ ಕೈತುಂಬಾ ಕೆಲಸ ಮತ್ತು ಹಣ

ಯಾವ ಕೋರ್ಸ್ ಗಳಿಗೆ ಹೆಚ್ಚು ಬೇಡಿಕೆ ಇದೆ. ಎಲ್ಲೆಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಎನ್ನುವುದರ ಪರಿಕಲ್ಪನೆ ಇರಬೇಕಾಗುತ್ತದೆ.

ಕೋರ್ಸ್ ಆಯ್ಕೆಗೂ ಮುನ್ನ ಎಚ್ಚರವಿರಲಿ

ಎಷ್ಟೋ ಮಂದಿಗೆ ಯಾವ ಯಾವ ಕೋರ್ಸ್ ಗಳಿವೆ ಎನ್ನುವುದೇ ತಿಳಿದಿರುವುದಿಲ್ಲ. ಇನ್ನು ಆ ಕೋರ್ಸ್ ಮುಗಿಸಿ ಮುಂದೇನು ಮಾಡಬೇಕು ಎನ್ನುವುದು ತಿಳಿದಿರುವುದಿಲ್ಲ. ಯಾವುದೋ ಒಂದು ಪದವಿ ಪಡೆದರೆ ಸಾಕು, ಯಾವುದಾದರು ಒಂದು ಕೆಲಸ ಸಿಗುತ್ತದೆ ಎನ್ನುವ ಕಲ್ಪನೆಯಲ್ಲಿ ಶಿಕ್ಷಣ ಮುಗಿಸಿ ನಂತರ ಕೆಲಸ ಸಿಗದೆ ಪರದಾಡುತ್ತಾರೆ. ತಾವು ಪಡೆದ ಶಿಕ್ಷಣಕ್ಕೂ, ಮಾಡುವ ಕೆಲಸಕ್ಕೂ ಸಂಬಂಧವೇ ಇಲ್ಲದಂತೆ ದುಡಿಯುತ್ತ ಜೀವನ ಕಳೆಯುತ್ತಾರೆ. ಆದ್ದರಿಂದ ನಿಮ್ಮ ಭವಿಷ್ಯ ರೂಪಿಸುವ ಶಿಕ್ಷಣ ಪಡೆಯುವುದು ಉತ್ತಮ

ಇನ್ನು ಕೆಲವರ ಕನಸು ಸರ್ಕಾರಿ ನೌಕರಿ ಪಡೆಯುವುದಾಗಿರುತ್ತದೆ. ಪದವಿ ಪೂರೈಸಿದ ನಂತರ ಸರ್ಕಾರಿ ನೌಕರಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತ, ಯಾವುದು ಕೈ ಹಿಡಿಯುವುದೋ ಅದರಲ್ಲಿ ಉದ್ಯೋಗ ಗಿಟ್ಟಿಸುವ ಗುರಿ ಹೊಂದಿರುತ್ತಾರೆ.

ನಮ್ಮಲ್ಲಿ ಬಹುತೇಕ ಮಂದಿ ಡಬ್ಬಲ್ ಡಿಗ್ರಿ ಪಡೆದರು ಯಾವ ಕೆಲಸ ಮಾಡಬೇಕು ಎನ್ನುವುದನ್ನೇ ತಿಳಿದಿರುವುದಿಲ್ಲ. ಆದರೆ ಸರಿಯಾದ ಯೋಜನೆ ಇದ್ದರೆ ನಮ್ಮ ಶಿಕ್ಷಣದ ಆಯ್ಕೆ ಮೂಲಕವೇ ನಮ್ಮ ಭವಿಷ್ಯ ಕಟ್ಟಿಕೊಳ್ಳಬಹುದು.

ಉದಾಹರಣೆಗೆ ನೀವು ಬ್ಯಾಂಕ್ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕೆಂದರೆ ನೀವು ಕಾಮರ್ಸ್ ಆಯ್ಕೆ ಮಾಡಿಕೊಳ್ಳಬೇಕು.
ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯಬೇಕೆಂದರೆ ಉನ್ನತ ಶಿಕ್ಷಣದ ಮೊರೆ ಹೋಗಬೇಕು, ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಪದವಿಗಳನ್ನು ನಿಮ್ಮದಾಗಿಸಿಕೊಳ್ಳಬೇಕು.

ಹೊಸ ಕೋರ್ಸ್ ಗಳ ಮಾಹಿತಿ ಪಡೆಯುವುದು ಹೇಗೆ?

ಜಗತ್ತು ಅಪ್ಡೇಟ್ ಆದಂತೆ ನಾವು ಕೂಡ ಅಪ್ಡೇಟ್ ಆಗಬೇಕು. ಆದ್ದರಿಂದ ಯಾವ ಕೋರ್ಸ್ ಗೆ ಹೆಚ್ಚು ಬೇಡಿಕೆ ಇದೆ ಎನ್ನುವುದರ ಮಾಹಿತಿ ಕಲೆಹಾಕಬೇಕು. ನಿಮ್ಮ ಹಿರಿಯ ಸಹಪಾಠಿಗಳಿಂದ, ಪೋಷಕರಿಂದ, ನಿತ್ಯ ಪತ್ರಿಕೆ ಓದುವುದು, ಇಂಟರ್ನೆಟ್ ನಲ್ಲಿ ನಿರಂತರ ಶಿಕ್ಷಣಕ್ಕೆ ಸಂಬಂಧಿಸಿದ ಲೇಖನಗಳನ್ನು ಓದುವುದನ್ನು ಅಭ್ಯಾಸ ಮಾಡಬೇಕು.

ನಿಮ್ಮ ಇಷ್ಟದ ಕ್ಷೇತ್ರಕ್ಕೆ ಯಾವ ಕೋರ್ಸುಗಳು ಪೂರಕವಾಗಿವೆ. ಅವುಗಳಿಗೆ ಎಲ್ಲಿ ಮತ್ತು ಯಾವಾಗ ಪ್ರವೇಶಾತಿ ಪ್ರಾರಂಭವಾಗುತ್ತದೆ ಎನ್ನುವುದರ ಮಾಹಿತಿ ಪಡೆಯುವುದು ಕೂಡ ಮುಖ್ಯವಾಗುತ್ತದೆ.

ಶಿಕ್ಷಣದ ಜೊತೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಉದ್ಯೋಗ ಪಡೆಯುವುದರ ಸುಲಭ ಮಾರ್ಗ. ಇಲ್ಲವಾದಲ್ಲಿ ಶಿಕ್ಷಣದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆಂದೇ ಕೆಲವು ತಿಂಗಳುಗಳನ್ನು ಮೀಸಲಿಡಬೇಕಾಗುತ್ತದೆ.

ಹೊಸ ಕೋರ್ಸ್ ಆಯ್ಕೆ ಮುನ್ನ ಎಚ್ಚರವಿರಲಿ

ಯಾವುದಾದರು ಹೊಸ ಕೋರ್ಸ್ ತಲೆ ಎತ್ತಿದೆ ಎಂದರೆ, ಅದರ ಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದು ಉತ್ತಮ . ಆ ಕೋರ್ಸ್ ಗೆ ಎಲ್ಲೆ ಆದ್ಯತೆ ಇದೆ, ಯುಜಿಸಿ ಯಿಂದ ಆ ಕೋರ್ಸ್ ಗೆ ಮಾನ್ಯತೆ ಲಭಿಸಿದೆಯೇ ಎನ್ನುವುದನ್ನು ತಿಳಿದು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

English summary
Choosing a course is one of the most important decisions you will ever make. It’s really important to think about what you are interested in, and what course you want to study.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia