ಇಂಟರ್ ನ್ಯಾಷನಲ್ ಮಟ್ಟದಲ್ಲಿ ಕೆರಿಯರ್ ರೂಪಿಸಿಕೊಳ್ಳಬೇಕಾದ್ರೆ 5 ಭಾಷೆ ನಿಮಗೆ ತಿಳಿದಿರಲಿ!

By Kavya

ನೀವು ಯೋಚಿಸುವುದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಜಗತ್ತು ಬದಲಾಗುತ್ತಿದೆ. ಉದ್ಯೋಗದ ವಿಷಯ ಬಂದಾಗಿ ಇದೀಗ ಎಲ್ಲರ ಬಾಯಲ್ಲಿ ಭಾರತ ಹೆಸರು ಕೇಳಬಹುದು. ಮುಂದೆ ಬಂದಿರುವ ದೇಶ ಭಾರತ ಮಾತ್ರವಲ್ಲದೇ ಇನ್ನೂ ಕೆಲವು ದೇಶಗಳನ್ನ ಕಡೆಗಣಿಸುವಂತಿಲ್ಲ. ನಿಮಗೆ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹೊರ ದೇಶಗಳಲ್ಲಿ ಕೆಲಸ ಮಾಡಬೇಕೆಂದಿದ್ರೆ, ನೀವು ಈ ಐದು ಪ್ರಮುಖ ಭಾಷೆಗಳನ್ನ ಕಲಿಯಬೇಕು. ಆ ಐದು ಪ್ರಮುಖ ಭಾಷೆಗಳು ಯಾವುವುವೆಂದ್ರೆ ಈ ಕೆಳಗಿನಂತಿದೆ.

 
ಈ 5 ಭಾಷೆ ನಿಮಗೆ ತಿಳಿದಿದ್ದರೆ ಯಾವ ದೇಶದಲ್ಲೂ ನೀವು ದುಡಿಯಬಹುದು!

ಇಂಗ್ಲೀಷ್:

ನಿಜವಾಗಿಯೂ ಅಂತ ನೀವು ಹೇಳಬಹುದು. ಆದ್ರೆ ನೀವು ಏನು ತಿಳಿದುಕೊಳ್ಳಬೇಕು ಅಂದ್ರೆ ಬರೀ ಇಂಗ್ಲೀಷ್ ಓದಲು ಹಾಗೂ ಬರೆಯಲು ತಿಳಿದಿದ್ದರೆ ಮಾತ್ರ ಸಾಲದು. ನಿಮಗೆ ಇಂಗ್ಲೀಷ್‌ನಲ್ಲಿ ಮಾತನಾಡಲು ಅಥವಾ ಇತರರ ಜತೆ ಸಂವಹನಮಾಡಲು ತಿಳಿಯದೇ ಇದ್ದರೆ ನಿಮಗೆ ಇಂಗ್ಲೀಷ್ ಅಲ್ಪಸ್ವಲ್ಪ ಜ್ಞಾನ ಇದ್ದರೂ ಏನೂ ಪ್ರಯೋಜನವಿಲ್ಲ. ಪಕ್ಕಾ ಇಂಗ್ಲೀಷ್ ಮಾತನಾಡಲು ತಿಳಿದಿರಬೇಕು ಎಂದೇನಿಲ್ಲ ಬದಲಿಗೆ, ಅಮೆರಿಕನ್ ಹಾಗೂ ಬ್ರಿಟಿಷರಿಗೆ ಯಾವುದೇ ಕಂಫ್ಯೂಷನ್ ಇಲ್ಲದೇ ನಮ್ಮ ಭಾಷೆ ಅರ್ಥವಾದ್ರೆ ಸಾಕು.

ಸ್ಪ್ಯಾನೀಶ್:

ಅಮೇರಿಕಾದಲ್ಲಿ ಅತೀ ಹೆಚ್ಚು ಮಾತನಾಡುವ ಎರಡನೇ ಭಾಷೆ ಅಂದ್ರೆ ಸ್ಪ್ಯಾನೀಶ್. ಅಷ್ಟೇ ಅಲ್ಲ ಅಲ್ಲಿನ ಉದ್ಯಮದಲ್ಲಿ ಹೆಚ್ಚಾಗಿ ಬಳಸುವ ಭಾಷೆಯೆಂದ್ರೆ ಸ್ಪ್ಯಾನೀಶ್. ಸ್ಪ್ಯಾನೀಶ್ ಕಸ್ಟಮರ್ ಜತೆ ವ್ಯವಹರಿಸಲು ನಿಮಗೆ ಈ ಭಾಷೆ ತಿಳಿದಿದ್ದರೆ ಸಾಕು. ಇನ್ನು ಈ ಭಾಷೆ ಗೊತ್ತಿದ್ದರೆ ಅಲ್ಲಿಯ ಜನರ ಜತೆ ಮಾತ್ರವಲ್ಲ ಅಲ್ಲಿಯ ಕಲ್ಚರ್ ಕೂಡಾ ಎಂಜಾಯ್ ಮಾಡಬಹುದು

ಮಾಂಡರಿನ್:

ಇದು ನಿಜಕ್ಕೂ ಜಗತ್ತಿನ ಅತೀ ಕಷ್ಟಕರವಾದ ಭಾಷೆಯಾಗಿದೆ. ಚೀನಾ ಇದೀಗ ಅತೀ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಅಷ್ಟೇ ಅಲ್ಲ ಭಾರತದ ಅತೀ ಹೆಚ್ಚು ಹೆಚ್ಚು ಕಂಪನಿಗಳು ಈ ದೇಶದಲ್ಲಿ ತೆರೆಲ್ಪಟ್ಟಿವೆ. ನೀವು ಚೀನಾದಲ್ಲಿ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದರೆ ಮಾಂಡರಿನ್ ಭಾಷೆ ಕಲಿಯಲೇ ಬೇಕು.

ಜರ್ಮನ್:

ಜರ್ಮನ್ ಯೂರೋಪ್‌ನ ಮೋಸ್ಟ್ ಸ್ಟೇಬಲ್, ಅಭಿವೃದ್ಧಿ ಹೊಂದಿರುವ ಹಾಗೂ ಎಕಾನಾಮಿಕಲಿ ಪವರ್ ಹೊಂದಿರುವ ದೇಶವಾಗಿದೆ. ಇಲ್ಲಿ ಅತೀ ಹೆಚ್ಚಿನ ಪ್ರತಿಷ್ಟಿತ ಕಂಪನಿಗಳನ್ನ ನೀವು ನೋಡಬಹುದು. ಜರ್ಮನ್ ಭಾಷೆ ಮಾತನಾಡಲು ನೀವು ಕಲಿತುಕೊಂಡು, ಇಲ್ಲಿನ ಕಂಪನಿಗಳಲ್ಲಿ ಜಾಬ್ ನಿಮ್ಮದಾಗಿಸಿಕೊಳ್ಳಬಹುದು.

 

ಫ್ರೆಂಚ್:

ಫ್ರಾನ್ಸ್ ದೇಶದವು ಪ್ರಪಂಚದ ಅತೀ ದೊಡ್ಡ ಎಕಾನಾಮಿ ದೇಶವಾಗಿದೆ. ಇದು ಜಗತ್ತಿನ ಫ್ಯಾಶನ್ ರಾಜಧಾನಿಯಾಗಿದೆ. ಇಲ್ಲಿ ಮಿಲಿಯನ್ ಲೆಕ್ಕದಲ್ಲಿ ಉದ್ಯೋಗವಕಾಶಗಳಿವೆ. ಫ್ರೆಂಚ್ ಕಂಪನಿಗಳು ಭಾರತದಲ್ಲಿ ಕೂಡಾ ಉದ್ಯೋಗವಕಾಶವನ್ನು ಕಲ್ಪಿಸಲು ಯೋಜನೆ ಹಾಕಿಕೊಂಡಿವೆ. ಇಂತಹ ಕಂಪನಿಗಳಲ್ಲಿ ನೀವು ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದ್ರೆ ನೀವು ಖಂಡಿತಾ ಫ್ರೆಂಚ್ ಭಾಷೆಯ ಬಗ್ಗೆ ಜ್ಞಾನ ಹೊಂದಿರಬೇಕು.

For Quick Alerts
ALLOW NOTIFICATIONS  
For Daily Alerts

English summary
Everyone is Talking about India becoming the next powerhouse. the importance of other bigger and global giants can't be discounted. that i why there ia a need to learn new languages to get used to these countries and make them home to not only make your career.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X