ವಿದ್ಯಾರ್ಥಿಗಳಿಗಾಗಿ ಸೂರ್ಯ ನಮಸ್ಕಾರ, ಪ್ರಾಣಾಯಾಮ ಮತ್ತು ಶೀರ್ಷಾಸನ

Posted By:

ಇಂದು ವಿಶ್ವಾದ್ಯಂತ ಯೋಗ ದಿನವನ್ನು ಉತ್ಸಾಹದಿಂದ ಆಚರಿಸಲಾಗುತ್ತಿದೆ. ಯೋಗಾಭ್ಯಾಸಕ್ಕೆ ವಯಸ್ಸಿನ ಮಿತಿ ಇಲ್ಲ. ಸದೃಢ ಮೈಕಟ್ಟು ಮತ್ತು ಮಾನಸಿಕ ನೆಮ್ಮದಿಗೆ ಯೋಗ ಅತಿ ಉಪಯುಕ್ತ. ಅದರಲ್ಲೂ ವಿದ್ಯಾರ್ಥಿಗಳಿಗೆ ಯೋಗವು ಹಲವು ರೀತಿಯಲ್ಲಿ ಉಪಯುಕ್ತವಾಗಿದೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ನೆನಪಿನ ಶಕ್ತಿಯ ಕೊರತೆಯನ್ನು ಹೆಚ್ಚು ಅನುಭವಿಸುತ್ತಾರೆ. ಮಕ್ಕಳ ಬಗ್ಗೆ ಬಹುತೇಕ ಪೋಷಕರ ದೂರು ಕೂಡ ನೆನಪಿನ ಶಕ್ತಿಯೇ ಆಗಿರುತ್ತದೆ. ನೆನಪಿನ ಶಕ್ತಿ ವೃದ್ಧಿಸಲು ಯೋಗದಲ್ಲಿ ಸುಲಭ ಪರಿಹಾರಗಳಿವೆ. ಯೋಗದಲ್ಲಿನ ಅನೇಕ ಆಸನಗಳು ವಿದ್ಯಾರ್ಥಿಗಳಿಗೆ ತಮ್ಮ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ.

ದೇಹ ಮತ್ತು ಮನಸ್ಸು ಎರಡನ್ನೂ ಒಂದು ಎಂದು ಪರಿಗಣಿಸಿ ಯೋಗದ ವಿವಿಧ ಆಸನಗಳು ರೂಪಿಸಲಾಗಿದೆ. ಯೋಗಾಭ್ಯಾಸದಿಂದ ಮನೋಬಲ ವೃದ್ಧಿಯಾಗುತ್ತದೆ. ಬುದ್ಧಿಮತ್ತೆ ಮತ್ತು ಭಾವನಾತ್ಮಕತೆ (IQ ಮತ್ತು EQ) ಮೇಲೆ ಯೋಗ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ನಿವಾರಣೆ ಮತ್ತು ಸಮಚಿತ್ತ ಕಾಯ್ದುಕೊಳ್ಳಲು ಯೋಗ ಮದ್ದು.

ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಯೋಗಾಸನ

ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ, ಪ್ರಾಣಾಯಾಮ ಮತ್ತು ಶೀರ್ಷಾಸನ ಉತ್ತಮವಾಗಿವೆ. ಪ್ರಾಣಾಯಾಮ ಏಕಾಗ್ರತೆ ಹೆಚ್ಚಿಸಿದರೆ ಶೀರ್ಷಾಸನ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಪ್ರಾಣಾಯಾಮ

ಉಸಿರಾಟದ ಮೇಲೆ ನಿಯಂತ್ರಣ ಕಂಡುಕೊಳ್ಳುವ ಪ್ರಾಣಾಯಾಮವು ಏಕಾಗ್ರತೆ ಹೆಚ್ಚಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಪ್ರಾಣಾಯಾಮದ ಅಭ್ಯಾಸದಿಂದ ವಿದ್ಯಾರ್ಥಿಗಳು ತಾವು ಓದಿದ್ದನ್ನು ಬಹು ಬೇಗ ಗ್ರಹಿಸಿಕೊಳ್ಳಬಹುದಾಗಿದೆ.

ಶೀರ್ಷಾಸನ

ತಲೆಕೆಳಗಾಗಿ ಕಾಲು ಮೇಲೆ ಮಾಡುವ ಶೀರ್ಷಾಸನವು ನೆನಪಿನ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಸದಾ ಕಾಡುವ ತಲೆನೋವಿನಿಂದಲೂ ಬಿಡುಗಡೆ ನೀಡುತ್ತದೆ. ಪರೀಕ್ಷಾ ಸಮಯದಲ್ಲಿ ಬಹುತೇಕ ವಿದ್ಯಾರ್ಥಿಗಳು ತಲೆನೋವಿನ ಸಮಸ್ಯೆಯಿಂದ ಬಳಲುತ್ತಾರೆ, ಅಂತಹವರಿಗೆ ಈ ಆಸನದಿಂದ ಸಾಕಷ್ಟು ಪ್ರಯೋಜನಗಳಿವೆ.

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರವು ಅನೇಕ ಆಸನಗಳಿಂದ ಕೂಡಿದ್ದು ಇದು ಎಲ್ಲಾ ವಿಧದಲ್ಲೂ ಉಪಯುಕ್ತವಾಗುವ ಅಭ್ಯಾಸವಾಗಿದೆ.

ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಯೋಗಾಸನ

ಸೂರ್ಯ ನಮಸ್ಕಾರ ಅಭ್ಯಾಸ

  • ಸೂರ್ಯ ನಮಸ್ಕಾರ, ಹೆಚ್ಚಿನ ಯೋಗಾಸನದ ಹಾಗೆ ಕೇವಲ ಖಾಲಿ ಹೊಟ್ಟೆಯಲ್ಲಿ ನಿರ್ವಹಿಸಬೇಕು. ಆದ್ದರಿಂದ ಆಹಾರ ನಂತರ ನಮಸ್ಕಾರದ ಮೊದಲು ಕನಿಷ್ಠ ಎರಡು ಗಂಟೆಗಳ ಅಂತರ ಇರಬೇಕು. ಸಾಮಾನ್ಯವಾಗಿ ಬೆಳಗಿನಜಾವ ಅಥವಾ ಸಂಜೆ ಆಚರಿಸಲಾಗುತ್ತದೆ.
  • ಸೂರ್ಯ ನಮಸ್ಕಾರಗಳನ್ನು ಒಂದು ಚಾಪೆ ಅಥವಾ ವಸ್ತ್ರದ ಮೇಲೆ ನಡೆಸಲಾಗುತ್ತದೆ, ನೆಲದ ಮೇಲೆ ನಡೆಸಬಾರದು
  • ಕೆಲವು ಸಂಪ್ರದಾಯಗಳಲ್ಲಿ, 12 ಸೂರ್ಯ ನಮಸ್ಕಾರಗಳನ್ನು ಒಂದು ಅಭ್ಯಾಸದಲ್ಲಿ ನಡೆಸಲಾಗುತ್ತದೆ. ಮೊದಲ ಬಾರಿಗೆ ಅಭ್ಯಾಸವು ಪ್ರಾರಂಭವಾಗಿದ್ದರೆ, ಅದು ಸಾಮಾನ್ಯವಾಗಿ ದಿನಕ್ಕೆ (3 ರಿಂದ 6) ಕಡಿಮೆ ನಮಸ್ಕಾರಗಳನ್ನು ಪ್ರಾರಂಭಿಸಬೇಕು, ತದನಂತರ ಕ್ರಮೇಣ ಒಂದು ವಾರದ ಮೇಲೆ ಪ್ರತಿ ಸಲ 12 ನಮಸ್ಕಾರಗಳಿಗೆ ಹೆಚ್ಚಿಸಬಹುದು
  • ಶವಾಸನವನ್ನು ಅಭ್ಯಾಸದ ಕೊನೆಯಲ್ಲಿ ಆಚರಿಸಬೇಕು
  • ಸೂರ್ಯ ನಮಸ್ಕಾರದ ಜೊತೆಗೆ ಪ್ರಾಣಾಯಾಮಗಳು ಕೂಡ ಸೇರಿವೆ, ಹಾಗಾಗಿ ಇದು ಅನೇಕ ವಿಧಗಳಲ್ಲಿ ಉಪಯುಕ್ತವಾಗಿದೆ.
  • ಪ್ರತಿ ಸೂರ್ಯ ನಮಸ್ಕಾರ ಆರಂಭದಲ್ಲಿ ಮಂತ್ರಗಳನ್ನುಉಚ್ಚರಿಸಲಾಗುತ್ತದೆ.
  • ಸೂರ್ಯ ನಮಸ್ಕಾರದಲ್ಲಿ ಒಟ್ಟು 8 ವಿವಿಧ ಭಂಗಿಗಳು, ಸರಣಿಯಲ್ಲಿ 12 ನಿಲುವು ಬದಲಾವಣೆಗಳು ಇವೆ.
  • ಸಾಂಪ್ರದಾಯಿಕವಾಗಿ ಹಿಂದೂ ಧರ್ಮದಲ್ಲಿ ಸೂರ್ಯ ನಮಸ್ಕಾರವನ್ನು ಯಾವಾಗಲೂ ಸೂರ್ಯೋದಯ (ಪೂರ್ವ) ಅಥವಾ ಸೂರ್ಯಾಸ್ತದ (ಪಶ್ಚಿಮ) ದಿಕ್ಕಿನಲ್ಲಿ ಮುಖಮಾಡಿ ನಡೆಸಲಾಗುತ್ತದೆ.

ಉಪಯೋಗಗಳು

ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಿಂದ ಒತ್ತಡವನ್ನು ಸುಲಭವಾಗಿ ಕಡಿಮೆ ಮಾಡಬಹುದು ಮತ್ತು ನಿಮ್ಮ ಏಕಾಗ್ರತೆ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಮನಸ್ಸಿಗೆ ಶಾಂತಿ ನೀಡುತ್ತದೆ.

ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಮೊದಲು ಅತವಾ ಸೂರ್ಯನೊಂದಿಗಾದರೂ ಏಳುವುದು ಅತ್ಯಂತ ಶ್ರೆಯಷ್ಕರ. ಮುಂಜಾನೆ ಬೇಗ ಏಳುವುದು ಆರೋಗ್ಯದ ದೃಷ್ಟಿಯಿಂದ ಹಿತಕಾರಿ ಅನ್ನುವುದಕ್ಕೆ ಸಾಕಷ್ಟು ವಿಜ್ಞಾನಿಕ ಕಾರಣಗಳಿದ್ದರೂ ಅದಕ್ಕೂ ಮಿಗಿಲಾಗಿ ಮುಂಜಾನೆಯ ಪ್ರಶಾಂತ ಹಾಗೂ ಸುಂದರ ವಾತಾವರಣವನ್ನು ಅನುಭವಿಸುತ್ತ ಆ ಸಂದರ್ಭದಲ್ಲಿ  ಸೂರ್ಯ ನಮಸ್ಕಾರ, ಧ್ಯಾನ, ಜಪ ತಪಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯದ ದೃಷ್ಟಿಯಿಂದ ಗರಿಷ್ಟ ಲಾಭವಿದೆ.

English summary
Yoga is a good practice if one does in daily life. It helps to live healthy life style and better life forever. We should let our kids know about the benefits of yoga as well as practice yoga in daily routine.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia